
ನವದೆಹಲಿ[ಜು.25]: ಹೂಡಿಕೆದಾರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಕಂಪನಿ ಆಮ್ರಪಾಲಿ ಗ್ರೂಪ್‌ನ ನೋಂದಣಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ, ಅಮ್ರಪಾಲಿ ಗ್ರೂಪ್ ಮನೆ ಖರೀದಿದಾರರ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹಾಗೂ ಪತ್ನಿ ಸಾಕ್ಷಿ ಒಡೆತನದ ಕಂಪನಿಗಳನ್ನು ಬಳಸಿಕೊಂಡಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಧೋನಿ ಒಡೆತನದ ಅಮ್ರಪಾಲಿ ಮಾಹಿ ಡೆವೆಲಪರ್ಸ್ಸ್ ಹಾಗೂ ರಿತಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಗಳಿಗೆ ಅಕ್ರಮವಾಗಿ ಹಣವನ್ನು ವರ್ಗಾವಣೆ ಆಗಿದೆ. ಇದೊಂದು ಶಾಮ್ ಡೀಲ್ (ನಕಲಿ ಒಪ್ಪಂದ) ಆಗಿದ್ದು, ಈ ಹಣವನ್ನು ವಶಪಡಿಸಿಕೊಳ್ಳಬೇಕು ಎಂದು ವಿಧಿವಿಜ್ಞಾನ ಲೆಕ್ಕ ಪರಿಶೋಧಕರು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಅಮ್ರಪಾಲಿ ಗ್ರೂಪ್ 2009ರಿಂದ 2015ರ ಅವಧಿಯಲ್ಲಿ ರಿತಿ ಸ್ಪೋಟ್ಸ್‌ರ್ ಮ್ಯಾನೆಜ್‌ಮೆಂಟ್ ಕಂಪನಿಗೆ 42.22 ಕೋಟಿ ರು.ಗಳನ್ನು ವರ್ಗಾಯಿಸಿದೆ. ಈ ಹಣದಲ್ಲಿ 6.52 ಕೋಟಿ ರು. ಮೊತ್ತವನ್ನು ಅಮ್ರಪಾಲಿ ಶಫೈರ್ ಡೆವೆಲಪರ್ರ್ಸ್ ಪಾವತಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಧೋನಿ ಪತ್ನಿ ಸಾಕ್ಷಿ ಅಮ್ರಪಾಲಿ ಮಾಹಿ ಡೆವೆಲಪರ್ಸ್ನ ನಿರ್ದೇಶಕಿಯಾಗಿದ್ದಾರೆ. ರಿತಿ ಸ್ಫೋಟ್ಸ್‌ರ್‍ನಲ್ಲಿ ಧೋನಿ ಪ್ರಮುಖ ಪಾಲುದಾರರಾಗಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.