Income Tax Rule Change:ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 3 ತೆರಿಗೆ ಲಾಭ; ಯಾರಿಗೆಲ್ಲ ಸಿಗುತ್ತೆ ಈ ಪ್ರಯೋಜನ?

Suvarna News   | Asianet News
Published : Mar 03, 2022, 05:48 PM IST
Income Tax Rule Change:ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ 3 ತೆರಿಗೆ ಲಾಭ; ಯಾರಿಗೆಲ್ಲ ಸಿಗುತ್ತೆ ಈ ಪ್ರಯೋಜನ?

ಸಾರಾಂಶ

*ಎನ್ ಪಿಎಸ್ ನಲ್ಲಿ ಉದ್ಯೋಗದಾತರ ಕೊಡುಗೆ ಮೇಲೆ ರಾಜ್ಯ ಸರ್ಕಾರಿ ನೌಕರರಿಗೆ ಶೇ.14ರಷ್ಟು ತೆರಿಗೆ ವಿನಾಯ್ತಿ  *2021-22ನೇ ಆರ್ಥಿಕ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಘೋಷಿಸಿದ ವಿತ್ತ ಸಚಿವೆ *ಈ ಹಿಂದೆ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಎನ್ ಪಿಎಸ್ ಕೊಡುಗೆ ಮೇಲೆ ಶೇ.14ರಷ್ಟು ತೆರಿಗೆ ವಿನಾಯ್ತಿ 

Business Desk:2022-23ನೇ ಆರ್ಥಿಕ ಸಾಲಿನಿಂದ (Financial Year) ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ (Invest) ಮಾಡಿದ ಹಣಕ್ಕೆ ರಾಜ್ಯ ಸರ್ಕಾರಿ (State Gvernment) ನೌಕರರು (Employees)ಶೇ.14ರಷ್ಟು ತೆರಿಗೆ ವಿನಾಯ್ತಿ (Tax exemption) ಪಡೆಯಬಹುದು ಎಂದು ಹಣಕಾಸು (Finance) ಸಚಿವೆ (Minister) ನಿರ್ಮಲಾ ಸೀತಾರಾಮನ್  (Nirmala Sitharaman) ಬಜೆಟ್ (Budget) ಮಂಡನೆ ಸಂದರ್ಭದಲ್ಲಿ ತಿಳಿಸಿದ್ದರು. ಹಾಗಾದ್ರೆ ಎನ್ ಪಿಎಸ್ (NPS)ಹೂಡಿಕೆ ಮೇಲೆ ತೆರಿಗೆ ಲಾಭ ಪಡೆಯೋದು ಹೇಗೆ? ಹೊಸ ನಿಯಮ ಏನ್ ಹೇಳುತ್ತೆ? ಇಲ್ಲಿದೆ ಮಾಹಿತಿ.

ಪ್ರಸ್ತುತ ಕೇಂದ್ರ ಸರ್ಕಾರದ (Central Government) ನೌಕರರಿಗಷ್ಟೇ ಕೇಂದ್ರ ಸರ್ಕಾರ (Central Government) ಅಥವಾ ಉದ್ಯೋಗದಾತ ಸಂಸ್ಥೆ ಎನ್ ಪಿಎಸ್ ಖಾತೆಗೆ ನೀಡೋ ಕೊಡುಗೆಯಲ್ಲಿ (Contribution) ಶೇ.14ರಷ್ಟು ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ. ಆದ್ರೆ ಈ ಆರ್ಥಿಕ ಸಾಲಿನಿಂದ ರಾಜ್ಯ ಸರ್ಕಾರಿ (State Government) ನೌಕರರಿಗೂ (employees) ಈ ಅವಕಾಶ ಸಿಗಲಿದೆ.

GST Collection: ಶೇ. 18 ರಷ್ಟು ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ

ರಾಜ್ಯ ಸರ್ಕಾರಿ ನೌಕರರು ಗಮನಿಸಬೇಕಾದ ಸಂಗತಿಗಳು
1. ರಾಷ್ಟ್ರೀಯ ಪಿಂಚಣಿ ಯೋಜನೆಗೆ (NPS) ನೀವು ಹಾಗೂ ನಿಮ್ಮ ಉದ್ಯೋಗದಾತರು ನೀಡೋ ಕೊಡುಗೆಗಳ ಮೇಲೆ ಆದಾಯ ತೆರಿಗೆ ಕಾಯ್ದೆ (Income Tax Act) 1961ರ ವಿವಿಧ ಸೆಕ್ಷನ್ ಗಳಡಿಯಲ್ಲಿ ನೀವು ತೆರಿಗೆ ಪ್ರಯೋಜನ ಪಡೆಯಬಹುದು. ಸೆಕ್ಷನ್ 80CCD(1) ಅಡಿಯಲ್ಲಿ ಎನ್ ಪಿಎಸ್ ನಿಧಿಗೆ ನೀಡಿರೋ ಕೊಡುಗೆ ಮೇಲೆ ರಾಜ್ಯ ಸರ್ಕಾರಿ ಉದ್ಯೋಗಿಗಳು 1.5 ಲಕ್ಷ ರೂ. ತನಕ ತೆರಿಗೆ ವಿನಾಯ್ತಿ (Tax exemption) ಪಡೆಯಬಹುದಾಗಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಎನ್ ಪಿಎಸ್ ಮೇಲಿನ ಕೊಡುಗೆ ಮೇಲೆ ಶೇ.10ರಷ್ಟು ಮಾತ್ರ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.

2.ಸೆಕ್ಷನ್ 80CCD (1b) ಅಡಿಯಲ್ಲಿ ಎನ್ ಪಿಎಸ್ ಕೊಡುಗೆ ಮೇಲೆ ನೌಕರರು 50 ಸಾವಿರ ರೂ. ತನಕ ಹೆಚ್ಚುವರಿ ಕಡಿತ ಕ್ಲೇಮ್ ಮಾಡಬಹುದು. ಆದ್ರೆ ಟೈರ್ 1 ಎನ್ ಪಿಎಸ್ ಖಾತೆಗಳಲ್ಲಿ ಹೂಡಿಕೆ ಮಾಡೋರು ಮಾತ್ರ 50 ಸಾವಿರ ರೂ. ತನಕ ಹೆಚ್ಚುವರಿ ಕಡಿತ ಕ್ಲೇಮ್ ಮಾಡಬಹುದಾಗಿದೆ. ಟೈರ್ 2 ಎನ್ ಪಿಎಸ್ ನಿಧಿಯಲ್ಲಿ ಹೂಡಿಕೆ ಮಾಡೋರಿಗೆ ಯಾವುದೇ ತೆರಿಗೆ ಪ್ರಯೋಜನಗಳು ಸಿಗೋದಿಲ್ಲ. ಒಟ್ಟಾರೆ ತೆರಿಗೆ ಪಾವತಿದಾರರು ಎನ್ ಪಿಎಸ್ ನಲ್ಲಿ ಹೂಡಿಕೆ ಮಾಡೋ ಮೂಲಕ  ಆ ಹಣಕಾಸು ಸಾಲಿನಲ್ಲಿ 2 ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು. ಆದ್ರೆ ನೆನಪಿಡಿ,  ಹಳೆಯ ಆದಾಯ ತೆರಿಗೆ ಪದ್ಧತಿ ಪ್ರಕಾರ ಆದಾಯ ತೆರಿಗೆ ಪಾವತಿಸೋರಿಗೆ ಮಾತ್ರ ಈ ತೆರಿಗೆ ವಿನಾಯ್ತಿ ಪ್ರಯೋಜನ ಸಿಗಲಿದೆ. 

Credit Card Use: ಕ್ರೆಡಿಟ್ ಕಾರ್ಡ್ ಬಳಸೋವಾಗ ಈ 6 ಸ್ಮಾರ್ಟ್ ವಿಧಾನ ಬಳಸಿ, ಬಡ್ಡಿ ಚಿಂತೆ ಬಿಟ್ಹಾಕಿ!

3.ಆದಾಯ ತೆರಿಗೆ ಕಾಯ್ದೆ ಸೆಕ್ಷನ್  80CCD (2) ಅಡಿಯಲ್ಲಿ ಈಗ ವೇತನ ಪಡೆಯೋ ಉದ್ಯೋಗಿಗಳು ಉದ್ಯೋಗದಾತರು ಎನ್ ಪಿಎಸ್ ಖಾತೆಗೆ ನೀಡಿರೋ ಕೊಡುಗೆ ಮೇಲೆ ಕೂಡ ತೆರಿಗೆ ವಿನಾಯ್ತಿ ಪಡೆಯಲು ಅರ್ಹತೆ ಗಳಿಸಿದ್ದಾರೆ. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗಿಗಳು ಉದ್ಯೋಗದಾತರು ಎನ್ ಪಿಎಸ್ ಗೆ ನೀಡಿರೋ ಕೊಡುಗೆ ಮೇಲೆ ಶೇ.14ರಷ್ಟು ತೆರಿಗೆ ಪ್ರಯೋಜನ ಕ್ಲೈಮ್ ಮಾಡಲು ಅರ್ಹರಾಗಿದ್ದಾರೆ. ಇನ್ನೊಂದು ವಿಷಯವನ್ನು ನೆನಪಿಡಬೇಕು. ಒಂದು ವೇಳೆ ಉದ್ಯೋಗಿಯ ಎನ್ ಪಿಎಸ್ ಖಾತೆ, ಇಪಿಎಫ್  ಇತ್ಯಾದಿಗೆ ಉದ್ಯೋಗದಾತ ಸಂಸ್ಥೆಯ ಕೊಡುಗೆ ಒಂದು ಆರ್ಥಿಕ ಸಾಲಿನಲ್ಲಿ 7.5ಲಕ್ಷ ರೂ. ಮೀರಿದ್ದರೆ ಆಗ ಅಂಥ ಎನ್ ಪಿಎಸ್ ಖಾತೆಗೆ ತೆರಿಗೆ ವಿಧಿಸಲಾಗುತ್ತದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ