Russia Ukraine Crisis:ಭಾರತಕ್ಕೆ S-400 ಕ್ಷಿಪಣಿ ಪೂರೈಕೆ ಮೇಲೆ ನಿರ್ಬಂಧ ಪರಿಣಾಮ ಬೀರದು: ರಷ್ಯಾ ರಾಯಭಾರಿ

By Suvarna News  |  First Published Mar 3, 2022, 1:40 PM IST

*ರಷ್ಯಾದ ಮೇಲೆ  ನಿರ್ಬಂಧ ವಿಧಿಸಿರೋ ಪಾಶ್ಚಿಮಾತ್ಯ ರಾಷ್ಟ್ರಗಳು 
*ಭಾರತ-ರಷ್ಯಾ ನಡುವೆ 2018ರಲ್ಲಿ ಎಸ್-400 ಕ್ಷಿಪಣಿ ಒಪ್ಪಂದ
*ಈಗಾಗಲೇ ಭಾರತಕ್ಕೆ ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ ಪ್ರಾರಂಭಿಸಿರೋ ರಷ್ಯಾ


ನವದೆಹಲಿ (ಮಾ.3): ತನ್ನ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರೋ ನಿರ್ಬಂಧ ಭಾರತಕ್ಕೆ(India)ಎಸ್-400 ಕ್ಷಿಪಣಿ ( S-400 missile) ವ್ಯವಸ್ಥೆಗಳ ಪೂರೈಕೆ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ರಷ್ಯಾ (Russia) ಬುಧವಾರ ಸ್ಪಷ್ಟಪಡಿಸಿದೆ.
ರಷ್ಯಾದ ನಿಯೋಜಿತ ರಾಯಭಾರಿ (Ambassador) ಡೆನಿಸ್ ಅಲೀಪೊವ್ (Denis Alipov) ಮಾಧ್ಯಮ ಹೇಳಿಕೆಯಲ್ಲಿ  ಈ ಬಗ್ಗೆ ಮಾಹಿತಿ ನೀಡಿರೋ ಜೊತೆ ರಾಷ್ಟ್ರೀಯ ಕರೆನ್ಸಿಯಲ್ಲಿ ವ್ಯಾಪಾರ ನಡೆಸೋ  ದ್ವಿಪಕ್ಷೀಯ ವ್ಯವಸ್ಥೆಯ ಬಗ್ಗೆಯೂ ಈ ಸಂದರ್ಭದಲ್ಲಿ  ಪ್ರಸ್ತಾಪಿಸಿದರು. 

'ರಷ್ಯಾದ ಮೇಲಿನ ನಿರ್ಬಂಧ ಎಸ್-400 ಕ್ಷಿಪಣಿ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಈ ಬಗ್ಗೆ ಶೇ.100ರಷ್ಟು ಭರವಸೆ ನೀಡಬಹುದು. ಇನ್ನು ಸಮಗ್ರ ವ್ಯಾಪಾರ ಹಾಗೂ ಆರ್ಥಿಕ ಸಹಭಾಗಿತ್ವದ ಮೇಲೆ ವಿಧಿಸಿರೋ ಗಂಭೀರ ನಿರ್ಬಂಧಗಳು ಹೇಗೆ ಪರಿಣಾಮ ಬೀರಬಲ್ಲವು ಎಂಬುದನ್ನು ನಾವು ಪರಿಶೀಲಿಸುತ್ತೇವೆ' ಎಂದು  ಅಲೀಪೊವ್  ಹೇಳಿದ್ದಾರೆ.

Tap to resize

Latest Videos

Russia Ukraine Crisis: ಕಚ್ಚಾತೈಲ ಆಮದು ಕಡಿತಕ್ಕೆ ಇಂಡಿಯನ್‌ ಆಯಿಲ್‌ ನಿರ್ಣಯ: SBI ವ್ಯವಹಾರ ಕಟ್‌?

ಉಕ್ರೇನ್ ಮೇಲಿನ ಮಿಲಿಟರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಪಶ್ಚಿಮ ರಾಷ್ಟ್ರಗಳು ಕಳೆದ ಕೆಲವು ದಿನಗಳಿಂದ ರಷ್ಯಾದ ವಿರುದ್ಧ ಗಂಭೀರ ನಿರ್ಬಂಧಗಳನ್ನು ವಿಧಿಸಿವೆ. ಇದು ರಷ್ಯಾದೊಂದಿಗೆ ವ್ಯಾಪಾರ ವಹಿವಾಟು ಹೊಂದಿರೋ ರಾಷ್ಟ್ರಗಳ ಮೇಲೆ ಕೂಡ ಪರಿಣಾಮ ಬೀರಲಿದೆ.
2018ರ ಅಕ್ಟೋಬರ್ ನಲ್ಲಿ ಭಾರತ  5 ಎಸ್-400  ವಾಯುರಕ್ಷಣಾ ಕ್ಷಿಪಣಿ ( S-400 missile) ವ್ಯವಸ್ಥೆಗಳ ಖರೀದಿಗೆ   5 ಬಿಲಿಯನ್ ಅಮೆರಿಕನ್ ಡಾಲರ್ ಒಪ್ಪಂದಕ್ಕೆ ರಷ್ಯಾದ ಜೊತೆಗೆ ಸಹಿ ಮಾಡಿತ್ತು. ಈ ಒಪ್ಪಂದಕ್ಕೆ ಸಹಿ ಮಾಡದಂತೆ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಭಾರತಕ್ಕೆ ನಿರ್ಬಂಧದ ಬೆದರಿಕೆ ಕೂಡ ಒಡ್ಡಿತ್ತು. ಆದ್ರೆ ಭಾರತ ಮಾತ್ರ ಇದ್ಯಾವುದಕ್ಕೂ ಜಗ್ಗದೆ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ರಷ್ಯಾ ಈಗಾಗಲೇ ಭಾರತಕ್ಕೆ ಕ್ಷಿಪಣಿ ವ್ಯವಸ್ಥೆಗಳ ಪೂರೈಕೆಯನ್ನು ಕೂಡ ಪ್ರಾರಂಭಿಸಿದೆ. 

ರಷ್ಯಾದ ಮೇಲೆ ಪಶ್ಚಿಮ ರಾಷ್ಟ್ರಗಳು ವಿಧಿಸಿರೋ ನಿರ್ಬಂಧಗಳು ಭಾರತ ಹಾಗೂ ರಷ್ಯಾದ ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಲೀಪೊವ್, ಇದು ಭಾರತ ಒಪ್ಪಂದಗಳನ್ನು ಮುಂದುವರಿಸಲು ಎಷ್ಟು ಸಿದ್ಧವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

ಇಡೀ ಜಗತ್ತನ್ನೇ ರಷ್ಯಾದ ವಿರುದ್ಧ ಸಂಘಟಿಸಲು ಬ್ರಿಟನ್ ಯತ್ನ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರೋ ದಾಳಿಯನ್ನು ಖಂಡಿಸಿರೋ ಬ್ರಿಟನ್ ರಷ್ಯಾದ ವಿರುದ್ಧ ಜಗತ್ತಿನ ಎಲ್ಲ ರಾಷ್ಟ್ರಗಳು ಸರ್ವರೀತಿಯಲ್ಲೂ ವ್ಯಾಪಕ ದಿಗ್ಬಂಧನ ವಿಧಿಸುವಂತೆ ಮಾಡಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಭಾರತವನ್ನು ಕೂಡ ಜೊತೆಯಾಗಿಸಿಕೊಳ್ಳಲು ಬಯಸಿದೆ. ಈ ಸಂಬಂಧ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಕ್ತಾರರು  ನೀಡಿರೋ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸೋ ಸಾಧ್ಯತೆಯಿದೆ. ಇದೇ ರೀತಿ ರಷ್ಯಾದ ವಿರುದ್ಧ 'ಸರ್ವವ್ಯಾಪಿ ದಿಗ್ಬಂಧನ ಹೇರಲು ಜಗತ್ತಿನ ಎಲ್ಲ ನಾಯಕರನ್ನು ಬ್ರಿಟನ್ ಪ್ರಧಾನಿ ಸಂಪರ್ಕಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Russia Ukraine Crisis: ಉದ್ಯಮ ವಲಯಕ್ಕೆ ಆಘಾತ; ರಷ್ಯಾ, ಉಕ್ರೇನ್ ಗೆ ಕಾರ್ಗೋ ಬುಕ್ಕಿಂಗ್ ನಿಲ್ಲಿಸಿದ ಶಿಪ್ಪಿಂಗ್ ಸಂಸ್ಥೆಗಳು!

ರಷ್ಯಾದ ವಿರುದ್ಧ ಮತ ಚಲಾಯಿಸದ ಭಾರತ
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ(UNGA) ಉಕ್ರೇನ್ ವಿರುದ್ಧದ ರಷ್ಯಾದ ದಾಳಿಯನ್ನು ಖಂಡಿಸುವ ಹಾಗೂ ಉಕ್ರೇನ್ ನಿಂದ ರಷ್ಯಾ ಸೇನೆಯನ್ನು ಹಿಂತೆಗೆಯುವ ಪ್ರಸ್ತಾವನೆ ಪರ 141 ರಾಷ್ಟ್ರಗಳು ಮತ ಚಲಾಯಿಸಿವೆ. ರಷ್ಯಾವನ್ನು ಬೆಂಬಲಿಸಿ 5 ರಾಷ್ಟ್ರಗಳು ಮತ ಚಲಾಯಿಸಿವೆ. ಇನ್ನು ಭಾರತ ಸೇರಿದಂತೆ 35 ರಾಷ್ಟ್ರಗಳು ಮತದಾನದಲ್ಲಿ ಪಾಲ್ಗೊಳ್ಳದೆ ತಟಸ್ಥ ನಿಲುವು ತಾಳಿವೆ. 

click me!