ಮೇ 23ಕ್ಕೆ NEFT ಸೇವೆ 14 ತಾಸು ವ್ಯತ್ಯಯ!

Published : May 18, 2021, 03:50 PM ISTUpdated : May 18, 2021, 03:51 PM IST
ಮೇ 23ಕ್ಕೆ NEFT ಸೇವೆ 14 ತಾಸು ವ್ಯತ್ಯಯ!

ಸಾರಾಂಶ

* ಮೇ 23ಕ್ಕೆ ಎನ್‌ಇಎಫ್‌ಟಿಸೇವೆ 14 ತಾಸು ವ್ಯತ್ಯಯ * ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೂ ಲಭ್ಯವಿರುವುದಿಲ್ಲ ಈ ಸೇವೆ * ಎನ್‌ಇಎಫ್‌ಟಿ ಸೇವೆಯಲ್ಲಿ ಆಗುವ ವ್ಯತ್ಯಯವನ್ನು ಬ್ಯಾಂಕುಗಳು ತಮ್ಮ ಗ್ರಾಹಕರ ಗಮನಕ್ಕೆ ತರುವಂತೆ ಸೂಚನೆ

ಮುಂಬೈ(ಮೇ.18): ಆನ್‌ಲೈನ್‌ ಮೂಲಕ ಹಣ ವರ್ಗಾವಣೆಗೆ ಬಳಸಲ್ಪಡುವ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ)ನ ರಾಷ್ಟ್ರೀಯ ಎಲೆಕ್ಟ್ರಾನಿಕ್‌ ಫಂಡ್ಸ್‌ ಟ್ರಾನ್ಸ್‌ಫರ್‌ (ಎನ್‌ಇಎಫ್‌ಟಿ) ಸೇವೆ ಇದೇ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೂ ಲಭ್ಯವಿರುವುದಿಲ್ಲ.

10 ಲಕ್ಷ ವರೆಗಿನ ಸಾಲ, ತುರ್ತು ಆರೋಗ್ಯ ಸೇವೆಗೆ 50,000 ಕೋಟಿ: ಆರ್‌ಬಿಐ!

ವ್ಯವಸ್ಥೆಯನ್ನು ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಬೇಕಿರುವ ಕಾರಣ ಮೇ 22ರ ಮಧ್ಯರಾತ್ರಿ 12.01ರಿಂದ ಮೇ 23ರ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಸೇವೆ ಲಭ್ಯವಿರುವುದಿಲ್ಲ. ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಎಂದಿನಂತೆ ನಡೆಯಲಿದೆ. ಆ ವ್ಯವಸ್ಥೆಯನ್ನು ಏ.18ರಂದೇ ತಾಂತ್ರಿಕವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಎನ್‌ಇಎಫ್‌ಟಿ ಸೇವೆಯಲ್ಲಿ ಆಗುವ ವ್ಯತ್ಯಯವನ್ನು ಬ್ಯಾಂಕುಗಳು ತಮ್ಮ ಗ್ರಾಹಕರ ಗಮನಕ್ಕೆ ತರಬೇಕೆಂದು ಸೂಚಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?