ಮೈಕ್ರೋಸಾಫ್ಟಿಂದ ‘ಗೇಟ್‌’ಪಾಸ್‌ಗೆ ಬಿಲ್‌ ಅಕ್ರಮ ಸಂಬಂಧ ಕಾರಣ!

By Kannadaprabha NewsFirst Published May 18, 2021, 9:10 AM IST
Highlights

* ಮೈಕ್ರೋಸಾಫ್ಟಿಂದ ‘ಗೇಟ್‌’ಪಾಸ್‌ಗೆ ಬಿಲ್‌ ಅಕ್ರಮ ಸಂಬಂಧ ಕಾರಣ

* 2019ರಲ್ಲಿ ಗೇಟ್ಸ್‌ ವಿರುದ್ಧ ಬಂದಿತ್ತು ದೂರು

* ತನಿಖಾ ಹಂತದಲ್ಲೇ ರಾಜೀನಾಮೆ: ತನಿಖೆ ಅಪೂರ್ಣ

ವಾಷಿಂಗ್ಟನ್‌(ಮೇ.18): ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌ ಅವರು 20 ವರ್ಷದ ಹಿಂದೆ ಅವರ ಸಹೋದ್ಯೋಗಿಯ ಜತೆ ಹೊಂದಿದ್ದರು ಎನ್ನಲಾದ ಅಕ್ರಮ ಸಂಬಂಧದ ಬಗ್ಗೆ 2019ರಲ್ಲಿ ಮೈಕ್ರೋಸಾಫ್ಟ್‌ ಆಡಳಿತ ಮಂಡಳಿಗೆ ದೂರು ಬಂದಿತ್ತು. ಈ ವೇಳೆ ಮಂಡಳಿ ತನಿಖೆ ಆರಂಭಿಸಿದಾಗ, ಆಡಳಿತ ಮಂಡಳಿಗೆ ಗೇಟ್ಸ್‌ ಅವರು ರಾಜೀನಾಮೆ ನೀಡಿದರು ಎಂದು ತಿಳಿದುಬಂದಿದೆ.

ತನಿಖಾ ಹಂತದಲ್ಲೇ ಅವರು ರಾಜೀನಾಮೆ ನೀಡಿದ್ದರಿಂದ ಆಡಳಿತ ಮಂಡಳಿಗೆ ಮುಂದಿನ ತನಿಖೆ ನಡೆಸಲಾಗಲಿಲ್ಲ. ಹೀಗಾಗಿ ತನಿಖೆ ತಾರ್ಕಿಕ ಅಂತ್ಯ ಕಾಣಲಿಲ್ಲ ಎಂದು ಗೊತ್ತಾಗಿದೆ.

ತೌಕ್ಟೆಯಿಂದ ಪಾರಾದ ಕರಾವಳಿ : ಮಾಯವಾಯ್ತು ಬಿರುಗಾಳಿ

‘2000ನೇ ಇಸವಿಯಲ್ಲಿ ಗೇಟ್ಸ್‌ ಅವರು ಕಂಪನಿ ಉದ್ಯೋಗಿಯ ಜತೆ ಸಂಂಧ ಹೊಂದಿದ್ದರು ಎಂಬುದು 2019ರಲ್ಲಿ ಬಂದ ದೂರಿನ ತಿರುಳಾಗಿತ್ತು. ಕಾನೂನು ಕಂಪನಿಯೊಂದರ ಸಹಾಯ ಪಡೆದು ತನಿಖೆ ನಡೆಸಲಾಗಿತ್ತು. ದೂರು ನೀಡಿದ ಉದ್ಯೋಗಿಗೆ ರಕ್ಷಣೆ ನೀಡಲಾಗಿತ್ತು’ ಎಂದು ಮೈಕ್ರೋಸಾಫ್ಟ್‌ ತಿಳಿಸಿದೆ.

ಆದರೆ ತನಿಖೆಗೂ ಬಿಲ್‌ ಗೇಟ್ಸ್‌ ರಾಜೀನಾಮೆ ನೀಡಿದ್ದಕ್ಕೂ ಸಂಬಂಧವಿಲ್ಲ ಎಂದು ಮೈಕ್ರೋಸಾಫ್ಟ್‌ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಗೇಟ್ಸ್‌ ಹಾಗೂ ಅವರ ಪತ್ನಿ ಮೆಲಿಂಡಾ ವಿಚ್ಛೇದನಕ್ಕೆ ನಿರ್ಧರಿಸಿದ್ದರು. ಇದಕ್ಕೆ ಈ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿತ್ತು.

click me!