544 ಕೋಟಿ ರೂ. ಬೋನಸ್ ಪಡೆದಿದ್ದ ಯೂಟ್ಯೂಬ್ ನೂತನ ಸಿಇಒ ನೀಲ್‌ ಮೋಹನ್‌ ಮೊದಲ ವೇತನ ಎಷ್ಟಿತ್ತು ಗೊತ್ತಾ?

Published : Feb 17, 2023, 05:31 PM IST
544 ಕೋಟಿ ರೂ. ಬೋನಸ್ ಪಡೆದಿದ್ದ ಯೂಟ್ಯೂಬ್ ನೂತನ ಸಿಇಒ ನೀಲ್‌ ಮೋಹನ್‌ ಮೊದಲ ವೇತನ ಎಷ್ಟಿತ್ತು ಗೊತ್ತಾ?

ಸಾರಾಂಶ

ಭಾರತೀಯ ಮೂಲದ ನೀಲ್‌ ಮೋಹನ್‌ ಯೂಟ್ಯೂಬ್‌ನ ನೂತನ ಸಿಇಒ ಆಗಿ ನೇಮಕಗೊಂಡಿದ್ದಾರೆ. 2013ರಲ್ಲಿ ಮೋಹನ್ ಯೂಟ್ಯೂಬ್‌ ನಿಂದ 544 ಕೋಟಿ ರೂ. ಬೋನಸ್ ಪಡೆದಿದ್ದರು. ಆದರೆ, ಅವರು ವೃತ್ತಿಜೀವನ ಪ್ರಾರಂಭಿಸಿದ ಸಮಯದಲ್ಲಿ ಅವರ ವೇತನ ಎಷ್ಟಿತ್ತು ಗೊತ್ತಾ?   

Business Desk:ವಿಡಿಯೋ ಶೇರಿಂಗ್‌ ಸಾಮಾಜಿಕ ಜಾಲ ತಾಣ ಯೂಟ್ಯೂಬ್‌ನ ಸಿಇಒ ಆಗಿ ಭಾರತೀಯ ಮೂಲದ ಅಮೆರಿಕನ್‌ ನೀಲ್‌ ಮೋಹನ್‌ ನೇಮಕಕೊಂಡಿದ್ದಾರೆ. ಅವರು ಮುಖ್ಯ ಉತ್ಪನ್ನ ಅಧಿಕಾರಿಯಿಂದ ಈ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ಈ ಹಿಂದೆ ಯೂಟ್ಯೂಬ್‌ ಸಿಇಒ ಆಗಿದ್ದ ಸುಸಾನ್ ವೊಜ್ಸಿಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ  ನೀಲ್‌ ಮೋಹನ್‌ ಆಯ್ಕೆಯಾಗಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಮಹಿಳೆಯರಲ್ಲಿ ಸುಸಾನ್ ವೊಜ್ಸಿಕಿ ಕೂಡ ಒಬ್ಬರು. 54 ವರ್ಷದ ವೊಜ್ಸಿಕಿ ಕುಟುಂಬ, ಆರೋಗ್ಯ ಹಾಗೂ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಹುದ್ದೆ ತ್ಯಜಿಸಿದ್ದಾರೆ. ವೊಜ್ಸಿಕಿ 2014ರಿಂದ ಯೂಟ್ಯೂಬ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನೀಲ್ ಕೂಡ ಹಲವು ವರ್ಷಗಳಿಂದ ವೊಜ್ಸಿಕಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಶಾರ್ಟ್ಸ್, ಸ್ಟ್ರೀಮಿಂಗ್ ಹಾಗೂ ಸಬ್ ಸ್ಕ್ರಿಪ್ಷನ್ ಸೇವೆಗಳನ್ನು ಪರಿಚಯಿಸುವಲ್ಲಿ ಮೋಹನ್ ಅತೀದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಸುಸಾನ್ ತಿಳಿಸಿದ್ದಾರೆ. ಅಷ್ಟೇ ಅಲ್ಲ,  ಮೋಹನ್ ನೇತೃತ್ವದಲ್ಲಿ ಕಂಪನಿಗೆ ಮುಂದೆ ಒಳ್ಳೆಯ ದಿನಗಳು ಕಾದಿವೆ ಎಂದು ಸುಸಾನ್ ಅಭಿಪ್ರಾಯ ಪಟ್ಟಿದ್ದಾರೆ. ನೀಲ್ ಮೋಹನ್  ಯೂಟ್ಯೂಬ್‌ ನಿಂದ 544 ಕೋಟಿ ರೂ. ಬೋನಸ್ ಪಡೆದಿರಬಹುದು, ಆದರೆ ಅವರ ಮೊದಲ ವೇತನ ಕೇಳಿದ್ರೆ ನಿಮಗೆ ಶಾಕ್ ಆಗುತ್ತದೆ. ಮೋಹನ್ ಅಮೆರಿಕದಲ್ಲಿ ಮಾಸಿಕ 2.15ಲಕ್ಷ ರೂ. ವೇತನದೊಂದಿಗೆ ವೃತ್ತಿ ಪ್ರಾರಂಭಿಸಿದರು. 

ಸ್ಟ್ಯಾನ್ ಫೋರ್ಡ್ ಪದವೀಧರರಾಗಿರುವ ನೀಲ್ ಮೋಹನ್, ಗ್ಲೋರಿಫೈಡ್ ಟೆಕ್ನಿಕಲ್ ಸರ್ಪೋರ್ಟ್ ನಲ್ಲಿ ತಿಂಗಳಿಗೆ 2.15ಲಕ್ಷ ರೂ. ವೇತನದೊಂದಿಗೆ ವೃತ್ತಿಜೀವನ ಆರಂಭಿಸಿದರು. ಆಕ್ಸೆಂಜರ್ ನಲ್ಲಿ ( Accenture) ಕೂಡ ಅವರು ಸೀನಿಯರ್ ಅನಾಲಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.  ಆ ಬಳಿಕ ಡಬಲ್ ಕ್ಲಿಕ್ ಇಂಕ್ ಎಂಬ ಹೆಸರಿನ ಕಂಪನಿಯಲ್ಲಿ ಕಾರ್ಯನಿರ್ವಹಿಸಿದರು. ಈ ಸಂಸ್ಥೆಯಲ್ಲಿ ಅವರ ವೃತ್ತಿಜೀವನ ಸಾಕಷ್ಟು ಬೆಳವಣಿಗೆ ದಾಖಲಿಸಿತು. ಕೇವಲ ಮೂರು ವರ್ಷ ಐದು ತಿಂಗಳಲ್ಲಿ ಗ್ಲೋಬಲ್ ಕ್ಲೆಂಟ್ ಸರ್ವೀಸ್ ನಲ್ಲಿ ಅವರು ನಿರ್ದೇಶಕರಾಗಿ ನೇಮಕಗೊಂಡರು. ಆ ಬಳಿಕ  2008ರಲ್ಲಿ ಗೂಗಲ್ ಾ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. ಹಿರಿಯ ಉಪಾಧ್ಯಕ್ಷರಾಗಿ ಗೂಗಲ್ ಸೇರಿದರು. ಡಿಸ್ ಪ್ಲೇ ಹಾಗೂ ವಿಡಿಯೋ ಜಾಹೀರಾತುಗಳನ್ನು ನಿರ್ವಹಿಸುತ್ತಿದ್ದರು.  

ಭಾರತ ಮೂಲದ ನೀಲ್‌ ಮೋಹನ್‌ ಯೂಟ್ಯೂಬ್‌ ಸಿಇಒ ಆಗಿ ನೇಮಕ

2015ರಲ್ಲಿ ಮೋಹನ್ ಯೂಟ್ಯೂಬ್  ಮುಖ್ಯ ಉತ್ಪನ್ನ ಅಧಿಕಾರಿಯಾಗಿ ನೇಮಕಗೊಂಡರು. ಆ ಬಳಿಕ ಅವರನ್ನು ಯೂಟ್ಯೂಬ್ ಮುಂದಿನ ಸಿಇಒ ಎಂದೇ ಬಿಂಬಿಸುತ್ತ ಬರಲಾಗಿತ್ತು. ಇನ್ನು 2013ರಲ್ಲಿ ಮೋಹನ್ ಅವರಿಗೆ ಯೂಟ್ಯೂಬ್ 544 ಕೋಟಿ ರೂ. ಬೋನಸ್ ನೀಡಿತ್ತು. ಆ ಬಳಿಕ ಅವರು ಕಂಪನಿಯ ಸ್ಟಾರ್ ಪರ್ಫಾರ್ಮರ್ ಎಂದೇ ಗುರುತಿಸಿಕೊಂಡಿದ್ದಾರೆ. 

ಬ್ಯುಸಿನೆಸ್ ಗಂಧಗಾಳಿ ತಿಳಿಯದ ಮಹಿಳೆಗೆ ರತನ್ ಟಾಟಾ ಬೆಂಬಲ, ಈಗ ಆಕೆ 180 ಕೋಟಿ ಮೌಲ್ಯದ ಕಂಪನಿ ಒಡತಿ!

ವಿಶ್ವದ ಅತೀದೊಡ್ಡ ಐಟಿ ಕಂಪನಿಗಳನ್ನು ಭಾರತೀಯ ಮೂಲದ ಸಿಇಒಗಳು ಮುನ್ನಡೆಸುತ್ತಿದ್ದಾರೆ. ಆ ಸಾಲಿಗೆ ಈಗ ನೀಲ್ ಮೋಹನ್ ಕೂಡ ಸೇರ್ಪಡೆಗೊಂಡಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲಾ, ಅಡೋಬ್ ಸಿಇಒ ಶಂತನು ನಾರಾಯಣ್ ಹಾಗೂ ಅಲ್ಪಾಬೆಟ್ ಸಿಇಒ ಸುಂದರ್ ಪಿಚೈ ಭಾರತೀಯ ಮೂಲದವರಾಗಿದ್ದಾರೆ. ಇನ್ನು ಐಟಿ ಕಂಪನಿಗಳಲ್ಲದೆ ಅಮೆರಿಕ ಮೂಲದ ಇತರ ಕೆಲವು ಜನಪ್ರಿಯ ಕಂಪನಿಗಳನ್ನು ಕೂಡ ಭಾರತೀಯ ಮೂಲದ ಸಿಇಒಗಳು ಮುನ್ನಡೆಸುತ್ತಿದ್ಧಾರೆ. ಕಾಫಿ ಶಾಪ್ ಸ್ಟಾರ್ ಬಕ್ಸ್ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು ಜಗತ್ತಿನ ಅತೀದೊಡ್ಡ ಸಾರಿಗೆ ಸೇವಾ ಕಂಪನಿ ಫೆಡೆಕ್ಸ್ ಸಿಇಒ ಆಗಿ ರಾಜ್ ಸುಬ್ರಹ್ಮಣ್ಯಂ ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಭಾರತೀಯ ಮೂಲದ ವ್ಯಕ್ತಿಗಳಿಗೆ ಅಮೆರಿಕದ ಪ್ರಸಿದ್ಧ ಕಂಪನಿಗಳು ಮಣೆ ಹಾಕುತ್ತಿವೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!