Karnataka Budget 2023: ಆರ್ಥಿಕ ಅಭಿವೃದ್ಧಿಗೆ ಇಂಧನ ಕ್ಷೇತ್ರಕ್ಕೆ ಭರಫೂರ ಕೊಡುಗೆ!

By Santosh Naik  |  First Published Feb 17, 2023, 5:21 PM IST

ಇಂಧನ ಕ್ಷೇತ್ರಕ್ಕೂ ಬಜೆಟ್‌ನಲ್ಲಿ ಬಸವರಾಜ್‌ ಬೊಮ್ಮಾಯಿ ಬಂಪರ್‌ ಕೊಡುಗೆ ನೀಡಿದ್ದಾರೆ. 7394 ಕೋಟಿ ರೂಪಾಯಿ ವೆಚ್ಚದಲ್ಲಿ ಶರಾವತಿ ಪಂಪ್ಡ್‌ ಸ್ಟೋರೇಜ್‌ ಪವರ್‌ ಪ್ಲಾಂಟ್‌ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಇಂಧನ ಕ್ಷೇತ್ರದ ಆಧುನೀಕರಣಕ್ಕೂ ಹೆಚ್ಚಿನ ಗನ ಮೀಸಲಿರಿಸಿದ್ದಾರೆ.
 


ಬೆಂಗಳೂರು (ಫೆ.17): ಸಾಕಷ್ಟು ಹೊಸ ಹೊಸ ಯೋಜನೆಗಳ ಮೂಲಕ ಇಂಧನ ಕ್ಷೇತ್ರಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಬಂಪರ್‌ ಕೊಡುಗೆ ನೀಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಶರಾವತಿ ಪಂಪ್ಡ್‌ಸ್ಟೋರೇಜ್‌ ಪವರ್‌ ಪ್ಲ್ಯಾಂಟ್‌ (ಪಿಎಸ್‌ಪಿ) ವಿಸ್ತ್ರತ ಯೋಜನಾ ವರದಿಯನ್ನು ತಯಾರಿಸಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 7394 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಅದರೊಂದಿಗೆ 1 ಸಾವಿರ ಕಿಲೋವ್ಯಾಟ್‌ ಸಾಮರ್ಥ್ಯದ ಹೊಸ ಪಂಪ್ಡ್‌ ಸ್ಟೋರೇಜ್‌ ಘಟಕವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಅದರೊಂದಿಗೆ ಕೇಂದ್ರ ಬಜೆಟ್‌ನಲ್ಲಿ  4 ಸಾವಿರ ಮೆಗಾ ವ್ಯಾಟ್‌ ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್‌ ಸಿಸ್ಟಮ್‌ಅನ್ನು ವಯಾಬಿಲಿಟಿ ಗ್ಯಾಪ್‌ ಫಂಡಿಂಗ್‌ ಮೂಲಕ ಉತ್ತೇಜಿಸುವುದಾಗಿ ಘೋಷಣೆ ಮಾಡಲಾಗಿದೆ. ಈ ಯೋಜನೆಯ ನೆರವಿನೊಂದಿಗೆ ಪಾವಗಡದ ಸೋಲಾರ್‌ ಪಾರ್ಕ್‌ನಲ್ಲಿ 48 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ಯಾಟರಿ ಶೇಖರಣಾ ವ್ಯವಸ್ಥೆಯನ್ನು ಹೊಂದಿದ 2 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಘಟಕವನ್ನು ಕೆಆರ್‌ಇಡಿಎಲ್‌ ವತಿಯಿಂದ ಸ್ಥಾಪನೆ ಮಾಡಲಾಗುತ್ತದೆ.

ಈ ವರ್ಷ 50 ಹೊಸ ಉಪಕೇಂದ್ರ, 1060 ಸರ್ಕ್ಯೂಟ್‌ ಪ್ರಸರಣ ಮಾರ್ಗಗಳನ್ನು ಮತ್ತು 100 ಹಾಲಿ ಇರುವ ಉಪ ಕೇಂದ್ರಗಳ ಸಾಮರ್ಥ್ಯವನ್ನು ಮೇಲ್ದರ್ಗೇರಿಸುವ ಕಾಮಗಾರಿಗಳು ಸೇರಿದಂತೆ ಈ ವರ್ಷದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ವತಿಯಿಂದ 3 ಸಾವಿರ ಕೋಟಿಯನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಕರ್ನಾಟಕ ವಿದ್ಯುತ್‌ ನಿಗಮದ ಜನರೇಷನ್‌ ಸ್ವಿಚ್‌ಯಾರ್ಡ್‌ ಉಪಕರಣಗಳು ಹಾಗೂ ಸಂರಕ್ಷಣಾ ವ್ಯವಸ್ಥೆಗಳ ಆಧುನೀಕರಣವನ್ನು ಕೇಂದ್ರದ ಪವರ್‌ ಸಿಸ್ಟಂ ಡೆವಲಪ್‌ಮೆಂಟ್‌ ಫಂಡ್‌ ಫೇಸ್‌-3 ಅಡಿಯಲ್ಲಿ 102 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

ಹಲವಾರು ವರ್ಷಗಳಿಂದ ಸಂಕಷ್ಟದಲ್ಲಿರುವ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಕಳೆದೆರಡು ಸಾಲಿನಲ್ಲಿ31,869 ಕೋಟಿ ರೂಪಾಯಿಗಳ ಅನುದಾನ ಒದಗಿಸುವ ಮೂಲಕ ಸರ್ಕಾರ ಕಾಯಕಲ್ಪ ನೀಡಿದೆ. ಇದರಲ್ಲಿ 22, 445 ಕೋಟಿ ರೂಪಾಯಿಗಳನ್ನು ಉಚಿತ ವಿದ್ಯುತ್‌ ಯೋಜನೆಗಳಾದ ರೈತರ ಪಂಪ್‌ಸೆಟ್‌ ಯೋಜನೆ, ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳಿಗೆ ನೀಡಲಾಗಿದೆ. 924 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ಮಾಡಲಾಗಿದೆ. ಇದರ ಜೊತೆ 5500 ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ನೆರವು ಹಾಗೂ 2564 ಕೋಟಿ ರೂಪಾಯಿಗಳ ಹಿಂದಿನ ಸಾಲವನ್ನು ಹೊಂದಾಣಿಕೆ ಮೂಲಕ ಕೈಬಿಡಲಾಗಿದೆ.

Latest Videos

undefined

 

Karnataka Budget 2023:ಮುಧೋಳ ಶ್ವಾನ ತಳಿ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ

2023-23ರ ಆರ್ಥಿಕ ವರ್ಷದಲ್ಲಿ ವಿದ್ಯುತ್‌ ಉತ್ಪಾದನಾ ಕಂಪನಿಗಳ ಹಿಂಬಾಕಿ ಪಾವತಿಗಾಗಿ ರಾಜ್ಯ ಸರ್ಕಾರವು ಸುಮಾರು 13,709 ಕೋಟಿ ರೂಪಾಯಿಗಳ ಸಾಲಕ್ಕೆ ಖಾತರಿಯನ್ನು ನೀಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಇಂಧನ ಕಂಪನಿಗಳಿಗೆ 13, 743 ಕೋಟಿ ರೂಪಾಯಿ ಅನುನಾದ ನೀಡಲಾಗುವುದು ಎಂದು ಘೋಷಿಸಿದ್ದಾರೆ.  

 

Karnataka Budget 2023: ಕ್ಯಾನ್ಸರ್‌ ಪತ್ತೆಗೆ 'ಜೀವಸುಧೆ' ಶಿಬಿರ, ಉತ್ತರ ಕನ್ನಡಕ್ಕೆ 'ಸೂಪರ್‌ ಸ್ಪೆಷಾಲಿಟಿ' ಮೊಣಕೈಗೆ ತುಪ್ಪ!     

ರಾಜ್ಯದಲ್ಲಿ 10 ಗಿಗಾ ವ್ಯಾಟ್‌ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯೊಂದಿಗೆ ಕರ್ನಾಟಕ ನವೀಕರಿಸಬಹುದಾದ ಇಂಧನ ನೀಡಿ 2022-27 ಅನ್ನು ಜಾರಿಗೊಳಿಸಿದೆ. ಕಳೆದ ವರ್ಷ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಗ್ರೀನ್‌ ಹೈಡ್ರೋಜನ್‌ ಒಳಗೊಂಡಂತೆ ನವೀಕರಿಸಬಹುದಾದ ಇಂಧನಗಳ ಹೂಡಿಕೆಗೆ ಸುಮಾರು 1.68 ಲಕ್ಷ ಕೋಟಿ ರೂಪಾಯಿಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

click me!