Discussion on GST: ICAI ವತಿಯಿಂದ ಬೆಂಗಳೂರಿನಲ್ಲಿ GST ರಾಷ್ಟ್ರೀಯ ಸಮಾವೇಶ

Suvarna News   | Asianet News
Published : Dec 10, 2021, 08:50 PM IST
Discussion on GST: ICAI ವತಿಯಿಂದ ಬೆಂಗಳೂರಿನಲ್ಲಿ GST ರಾಷ್ಟ್ರೀಯ ಸಮಾವೇಶ

ಸಾರಾಂಶ

*GST ಕುರಿತ ಚರ್ಚೆಯಲ್ಲಿ ಲೆಕ್ಕಪರಿಶೋಧಕರು ಭಾಗಿ *ಸಮಾವೇಶಕ್ಕೆ ಇಂದು (ಡಿ.10) ಚಾಲನೆ *ಡಿ.10,11 ಎರಡು ದಿನ ನಡೆಯಲಿರೋ ಸಮಾವೇಶ

ಬೆಂಗಳೂರು (ಡಿ.10): ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆಯ (Institute of Chartered Accountants of India ) ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು(Bangalore)ಶಾಖೆಯು ಆಯೋಜಿಸಿದ್ದ ಎರಡು ದಿನಗಳ ಸರಕು ಸೇವಾ ತೆರಿಗೆ (GST))ಕುರಿತ ರಾಷ್ಟ್ರೀಯ ಸಮಾವೇಶಕ್ಕೆ ಶುಕ್ರವಾರ(ಡಿ.10) ಚಾಲನೆ ನೀಡಲಾಯಿತು. ನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್ ಕೆಸಿಸಿಐ ಸಭಾಂಗಣದಲ್ಲಿ ಸಮಾವೇಶ ಆಯೋಜಿಸಲಾಗಿತ್ತು.  ಜಿಎಸ್ ಟಿಯಲ್ಲಿ ಇತ್ತೀಚಿನ ತಿದ್ದುಪಡಿಗಳು ಹಾಗೂ ನಿರ್ಣಾಯಿಕ ಪ್ರಾಯೋಗಿಕ ಸಮಸ್ಯೆಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ. ಬೆಂಗಳೂರು ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ (Bangalore Institute of Charted Accountant)ಈ ಸಮಾವೇಶಕ್ಕೆ ಸಹಭಾಗಿತ್ವ ನೀಡಿದೆ.

ಕೇಂದ್ರ ಸರ್ಕಾರವು 2017ರ ಜುಲೈ 1ರಂದು 'ಒಂದು ರಾಷ್ಟ್ರ ಒಂದು ತೆರಿಗೆ ಪದ್ಧತಿಯನ್ನು' ಪರಿಚಯಿಸಿತು. ಈ ಮೊದಲು ಬೇರೆ ಬೇರೆ ರೀತಿಯ ತೆರಿಗೆ ನೀತಿಗಳು ಜಾರಿಯಲ್ಲಿದ್ದವು. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆ ನೀತಿ ಜಾರಿಯಲ್ಲಿತ್ತು. ಇದರಿಂದ ಗ್ರಾಹಕರಿಗೆ (Customer)ತೆರಿಗೆ(Tax)ಪಾವತಿಸಲು ಕೂಡ ಸಮಸ್ಯೆಯಾಗುತ್ತಿತ್ತು. ಇದೀಗ ಆ ಸಮಸ್ಯೆಯಿಲ್ಲ. ಇದರಿಂದ ಸರ್ಕಾರಕ್ಕೆ ಉತ್ತಮ ಆದಾಯ ಬರುತ್ತಿದೆ ಎಂದು ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆ ತಿಳಿಸಿದೆ. 

Bank Holiday:ಮುಂದಿನ ವಾರ ಸತತ ನಾಲ್ಕು ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ, ಯಾಕೆ ಗೊತ್ತಾ?

ಇದೀಗ ಲೆಕ್ಕಪರಿಶೋಧಕರು ಒಟ್ಟುಗೂಡಿ ಇದರಲ್ಲಿ ಮತ್ತಷ್ಟು ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ವ್ಯಾಪಾರ ವಹಿವಾಟಿಗೆ  ಅನುಕೂಲಕರವಾದ ಅಂಶಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಸಂಸ್ಥೆ ಮಾಹಿತಿ ನೀಡಿದೆ.  ಕೋವಿಡ್ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ಭೌತಿಕವಾಗಿ ಭಾಗವಹಿಸುತ್ತಿರುವವರ ಸಂಖ್ಯೆ ಕಡಿಮೆಯಾದರೂ ಆನ್ಲೈನ್ ಮೂಲಕ ಸಾಕಷ್ಟು ಮಂದಿ ಲೆಕ್ಕ ಪರಿಶೋಧಕರು ಭಾಗವಹಿಸಿ ಚರ್ಚಿಸಲಿದ್ದಾರೆ.  
ಹೊಸದಿಲ್ಲಿಯ ಐಸಿಎಐ ಅಧ್ಯಕ್ಷ ನಿಹಾರ್ ಅಂಡ್ ಜಂಬು ಸಾರಿಯಾ ಅವರು ಆನ್ಲೈನ್ ಮೂಲಕ ಸಂದೇಶ ನೀಡಿದ್ದಾರೆ. ಮಾಜಿ ಅಧ್ಯಕ್ಷರಾದ ಕೆ.ರಘು ಸಮಾವೇಶದಲ್ಲಿ ಭೌತಿಕವಾಗಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಜಿಎಸ್ಟಿ ಕುರಿತಾದ ಎಂಟು ತಾಂತ್ರಿಕ ಗೋಷ್ಟಿಗಳು ನಡೆಯಲಿವೆ ಎಂದು ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ICAI) ಮಾಹಿತಿ ನೀಡಿದೆ. 

₹1.3 ಲಕ್ಷ ಕೋಟಿ ರೂಪಾಯಿ GST ಸಂಗ್ರಹ
ದೇಶದಲ್ಲಿ ಅಕ್ಟೋಬರ್ 2021 ರಲ್ಲಿ ಒಟ್ಟು GST ಆದಾಯವು ₹1.3 ಲಕ್ಷ ಕೋಟಿ ರೂಪಾಯಿ ಮೀರಿದೆ. ಅಕ್ಟೋಬರ್‌ನ  ಆದಾಯವು ಸರಕು ಮತ್ತು ಸೇವಾ ತೆರಿಗೆಯನ್ನು (Goods and Service Tax) ಪರಿಚಯಿಸಿದ ನಂತರದ ಎರಡನೇ ಗರಿಷ್ಠ ಮೊತ್ತವಾಗಿದೆ. ಏಪ್ರಿಲ್ 2021 ರಲ್ಲಿ ಗರಿಷ್ಠ ತೆರಿಗೆ ಸಂಗ್ರಹವಾಗಿತ್ತು. ಅಕ್ಟೋಬರ್ 2021 ರ ಆದಾಯವು ಕಳೆದ ವರ್ಷದ ಇದೇ ತಿಂಗಳ GSTಆದಾಯಕ್ಕಿಂತ 24% ಹೆಚ್ಚಾಗಿದೆ.

Paytm Payments Bank:ಷೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಸ್ಥಾನಮಾನ ಪಡೆದ ಪಿಪಿಬಿಎಲ್

ರಾಜ್ಯಗಳಿಗೆ ಸಮಾನಾಂತರ ಸಾಲ
GST ಪರಿಹಾರಕ್ಕೆ(GST Compensation) ಬದಲಾಗಿ ʻಸಮಾನಾಂತರ ಸಾಲʼ (back-to-back loan) ಸೌಲಭ್ಯದಅಡಿಯಲ್ಲಿ ಶಾಸಕಾಂಗ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ  44,000 ಕೋಟಿ ರೂ.ಗಳನ್ನು ಹಣಕಾಸು ಸಚಿವಾಲಯವು(Ministry of Finance)2021ರ ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡಿದೆ. ಇದರೊಂದಿಗೆ, ಈ ಹಿಂದೆ ಬಿಡುಗಡೆ ಮಾಡಲಾದ 1,15,000 ಕೋಟಿ ರೂ. ಒಳಗೊಂಡಂತೆ (2021ರ ಜುಲೈ 15ರಂದು ಬಿಡುಗಡೆಯಾದ ₹ 75,000 ಕೋಟಿ ಮತ್ತು 2021ರ ಅಕ್ಟೋಬರ್ 07ರಂದು ಬಿಡುಗಡೆಯಾದ ₹ 40,000 ಕೋಟಿ),  ಜಿಎಸ್‌ಟಿ(GST) ಪರಿಹಾರಕ್ಕೆ ಬದಲಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಮಾನಾಂತರ ಸಾಲ ಸೌಲಭ್ಯದ ಅಡಿಯಲ್ಲಿ ಒಟ್ಟು ಒಟ್ಟು 1,59,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಮಾನಾಂತರ ಸಾಲದಡಿ ಕರ್ನಾಟಕಕ್ಕೆ(Karnataka) 5010.90 ಕೋಟಿ ರೂಪಾಯಿ ಕೇಂದ್ರದಿಂದ ಬಂದಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ತುರ್ತಾಗಿ ನಿಮ್ಮ ಸಹಾಯಕ್ಕೆ ಬರಬಹುದಾದ ಸರ್ಕಾರಿ ಹೆಲ್ಪ್‌ಲೈನ್‌ ನಂಬರ್‌ಗಳು!
ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ