Rupee vs Dollar: 16 ತಿಂಗಳಲ್ಲೇ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ, ಇದಕ್ಕೇನು ಕಾರಣ?

By Suvarna News  |  First Published Dec 10, 2021, 7:31 PM IST

*ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಕುಸಿತ ಕಂಡ ರೂಪಾಯಿ ಮೌಲ್ಯ
*ಹೆಚ್ಚಿದ ವಿದೇಶಿ ಬಂಡವಾಳದ ಹೊರಹರಿವು
*ಅಮೆರಿಕದಲ್ಲಿ ಹೆಚ್ಚುತ್ತಿರೋ ಚಿಲ್ಲರೆ ಹಣದುಬ್ಬರ 


ಡಾಲರ್ (Dollar)ಎದುರು  ರೂಪಾಯಿ (Rupee)ಮೌಲ್ಯ ಇಂದು (ಡಿ.10) ಕುಸಿತ ದಾಖಲಿಸೋ ಮೂಲಕ ಷೇರುಮಾರುಕಟ್ಟೆಯಲ್ಲಿ(Stock Market) ತಲ್ಲಣ ಸೃಷ್ಟಿಸಿದೆ.  ಗುರುವಾರ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ (ಡಿ.10)  ಕೂಡ ಅದೇ ಟ್ರೆಂಡ್‌ ಮುಂದುವರಿಸಿತು.  ಶುಕ್ರವಾರ ಬೆಳಗ್ಗಿನ ಅವಧಿಯಲ್ಲೇ ರೂಪಾಯಿ ಮೌಲ್ಯ 75.78ಕ್ಕೆ ಕುಸಿತ ಕಂಡಿದೆ. ಇದು ಕಳೆದ 16 ತಿಂಗಳಲ್ಲಿ ರೂಪಾಯಿ ಮೌಲ್ಯದಲ್ಲಾದ ಅತ್ಯಂತ ದೊಡ್ಡ ಕುಸಿತ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ (Inter Bank Foreign Exchange Market) ಡಿ.9ರಂದು 75.60 ಕುಸಿದಿದ್ದ ರೂಪಾಯಿ ಮೌಲ್ಯ, ಡಿ.10ರಂದು ಇನ್ನೂ 18 ಪೈಸೆಗಳಷ್ಟು ಕುಸಿತ ದಾಖಲಿಸಿ 75.78 ತಲುಪಿತ್ತು.  

ರೂಪಾಯಿ ಮೌಲ್ಯ ಕುಸಿಯಲು ಕಾರಣಗಳೇನು?
ಷೇರುಮಾರುಕಟ್ಟೆಯಲ್ಲಿ (Stock Market) ಕುಸಿತ
ಕೆಲವು ದಿನಗಳಿಂದ ವಿದೇಶಿ ಹಣದ(Foreign currency) ಹೊರಹರಿವು ಹೆಚ್ಚಿದ್ದು,ಇದು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಭಾರತದ ವಿದೇಶಿ ವಿನಿಮಯ ಸಂಗ್ರಹ(Foreign Exchange Reserve) ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತದೆ. ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ವಿದೇಶಿ ವಿನಿಮಯ ಸಂಗ್ರಹ ಹೊಂದಿರೋ ರಾಷ್ಟ್ರವಾಗಿದ್ದರೂ ಕೂಡ ಭಾರತದ ಆಮದು(Import) ಪ್ರಮಾಣ ಹಾಗೂ ಸಾಲಗಳನ್ನು (Debt)) ಗಮನಿಸಿದ್ರೆ ಇದು ಕಡಿಮೇನೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ಅಭಿಪ್ರಾಯ ಪಟ್ಟಿದೆ. ಭಾರತದ ಷೇರುಮಾರುಕಟ್ಟೆ ಕಳೆದ ವಾರ ಸಾಕಷ್ಟು ಹಿಂಜರಿತ ಕಂಡಿತ್ತು. ಆದ್ರೆ ಈ ವಾರದ ಮಧ್ಯ ಭಾಗದಲ್ಲಿ ಚೇತರಿಕೆ ದಾಖಲಿಸಿತ್ತು. ಆದ್ರೆ ಶುಕ್ರವಾರ ಮತ್ತೆ ಸೆನ್ಸೆಕ್ಸ್  ಇಳಿಕೆ ದಾಖಲಿಸಿತ್ತು. ಈ ಬೆಳವಣಿಗೆಗಳು ವಿದೇಶಿ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದೆ. ಷೇರುಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದ ವಿದೇಶಿ ಹೂಡಿಕೆದಾರರು(Foreign Investors) ಹೂಡಿಕೆ ಹಿಂತೆಗೆಯುತ್ತಿದ್ದಾರೆ. ವಿದೇಶಿ ವಿನಿಮಯದ ದಾಖಲೆಗಳ ಪ್ರಕಾರ ಡಿ.9ರಂದು ಭಾರತೀಯ ಷೇರುಗಳ ಮೇಲಿನ 1,585.55 ಕೋಟಿ ರೂ. ಹೂಡಿಕೆಯನ್ನು ವಿದೇಶಿ ಹೂಡಿಕೆದಾರರು ಹಿಂಪಡೆದಿದ್ದಾರೆ. 

Tap to resize

Latest Videos

undefined

Foreign Exchange Reserves:ಅತೀಹೆಚ್ಚು ಫೋರೆಕ್ಸ್ ಸಂಗ್ರಹ ಹೊಂದಿರೋ ಜಗತ್ತಿನ ನಾಲ್ಕನೇ ರಾಷ್ಟ್ರ ನಮ್ಮದು: ಸಚಿವ ಚೌಧರಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude oil)ಬೆಲೆಯಲ್ಲಿ ಶೇ.10ರಷ್ಟು ಏರಿಕೆ ಕಂಡುಬಂದಿದೆ. ಇದು ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿರೋ ಸಾಧ್ಯತೆಯಿದೆ.

ಅಮೆರಿಕದಲ್ಲಿನ ಹಣದುಬ್ಬರ (Inflation)
ಅಮೆರಿಕದಲ್ಲಿ ಕಳೆದ ಕೆಲವು ತಿಂಗಳಿಂದ ಚಿಲ್ಲರೆ ಹಣದುಬ್ಬರ (retail inflation) ದರ ಹೆಚ್ಚುತ್ತಿದೆ. ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.2ಕ್ಕೆ ಏರಿಕೆ ಕಂಡಿತ್ತು. ಇದು ಕಳೆದ 31 ವರ್ಷಗಳಲ್ಲಿ ಅತ್ಯಧಿಕ ಏರಿಕೆಯಾಗಿದೆ. ಹಣದುಬ್ಬರ ಹೆಚ್ಚಿದ ತಕ್ಷಣ ಆರ್ಥಿಕ ನೀತಿಗಳನ್ನು ಬಿಗಿಗೊಳಿಸೋದು ಸಹಜ. ಅಮೆರಿಕದ ಫೆಡರಲ್ ಬ್ಯಾಂಕ್ ಕೂಡ ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರದಲ್ಲಿ ಹೆಚ್ಚಳ ಮಾಡಿದೆ. 

ಒಮಿಕ್ರಾನ್(Omicron) ಭೀತಿ
ಒಮಿಕ್ರಾನ್(Omicron) ಭೀತಿ ಕೂಡ ಜಾಗತಿಕ ಹಾಗೂ ಭಾರತೀಯ ಷೇರುಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಕೊರೋನಾ ಡೆಲ್ಟಾ ರೂಪಾಂತರಿ ಸೃಷ್ಟಿಸಿದ ಭೀತಿಯನ್ನು ಒಮಿಕ್ರಾನ್ ಕೂಡ ಸೃಷ್ಟಿಸುತ್ತದೆಯೇ ಎಂಬ ಅನುಮಾನ ಮೂಡುತ್ತಿದೆ. ಒಮಿಕ್ರಾನ್ ವೈರಸ್ ಷೇರು ಮಾರುಕಟ್ಟೆ ಮೇಲೆ ಡೆಲ್ಟಾ ವೈರಸ್ ನಷ್ಟು ಪ್ರಭಾವ ಬೀರೋದಿಲ್ಲ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದರೂ ಒಂದೆರಡು ದಿನಗಳ ಬೆಳವಣಿಗೆಗಳು ಈ ನಂಬಿಕೆಯನ್ನು ಹುಸಿಯಾಗಿಸಿವೆ. 

ಒಮಿಕ್ರಾನ್ ಭೀತಿಯಿಂದ ಹೊರಬಂದ ಷೇರುಮಾರುಕಟ್ಟೆ, ಮತ್ತೆ ಪುಟಿದ್ದೆದ್ದ ಸೆನ್ಸೆಕ್ಸ್

ಪಾಕಿಸ್ತಾನದ ಆರ್ಥಿಕತೆಯಲ್ಲಿ ಕುಸಿತ 
ಪಾಕಿಸ್ತಾನದ ಆರ್ಥಿಕತೆಯಲ್ಲಿ (Pakistan Economy) ಐತಿಹಾಸಿಕ ಕುಸಿತ ಕಂಡುಬಂದಿದೆ. ಪಾಕಿಸ್ತಾನದ ರೂಪಾಯಿ (Pakistani Rupees) ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ. ಪಾಕಿಸ್ತಾನದ ಕರೆನ್ಸಿಯು ಆಗಸ್ಟ್ 2018 ರಲ್ಲಿ ಡಾಲರ್‌ಗೆ, 123 ರೂಪಾಯಿಯಿಂದ ಡಿಸೆಂಬರ್ 2021 ರ ವೇಳೆಗೆ ಡಾಲರ್‌ಗೆ 177 ರೂಪಾಯಿಗೆ ಕುಸಿದಿದೆ. ಇದು ದೇಶದ ಇತಿಹಾಸದಲ್ಲಿಯೇ ಅತ್ಯಧಿಕ ಅಪಮೌಲ್ಯೀಕರಣವಾಗಿದೆ (Devaluation). 

click me!