ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಮತ್ತು ಬೆಂಗಳೂರು ನಡುವೆ ಚುತುಷ್ಪಥ ನಿರ್ಮಿಸಿದ್ದರ ಪರಿಣಾಮವಾಗಿ ಮೈಸೂರಿಗೆ ಇನ್‌ಫೋಸಿಸ್ ಬಂತು.
ಮೈಸೂರು(ಸೆ.21): ಕೈಗಾರಿಕೆಗಳ ಅಭಿವೃದ್ಧಿಗೆ ಆಗತ್ಯವಿರುವ ಮೂಲಭೂತ ಸೌಲಭ್ಯ ಹೆಚ್ಚಿಸುತ್ತಿರುವುದಾಗಿ ಸಂಸದ ಪ್ರತಾಪ ಸಿಂಹ ತಿಳಿಸಿದರು. ನಗರದ ಪ್ರತಿಷ್ಠಿತ ರಾರಯಡಿಸನ್ ಬ್ಲೂ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡಪ್ರಭ ಮತ್ತು ಸುವರ್ಣನ್ಯೂಸ್ ಸುದ್ದಿವಾಹಿನಿ ನೀಡಿದ ಮೈಸೂರು ಬಿಸಿನೆಸ್ ಅವಾರ್ಡ್ ಪ್ರದಾನ ದ ನಂತರ ಅವರು ಮಾತನಾಡಿದರು. 1929ರಲ್ಲಿ ಅಮೆರಿಕದಲ್ಲಿ ಬಡತನ ಉಂಟಾದಾಗ ಸರ್ಕಾರ ಸುಮ್ಮನೆ ಕೂರಿಸಿ ಊಟ ಹಾಕಲಿಲ್ಲ. ಊಟಕ್ಕಾಗಿ ಉದ್ಯೋಗ ಎಂಬ ಘೋಷವಾಕ್ಯದೊಡನೆ ಮೂಲಭೂತ ಸೌಲಭ್ಯ ಹೆಚ್ಚಿಸಿತು. ಈಗ ಅವಲ್ಲಿ ಉದ್ಯೋಗ ಮತ್ತು ಉದ್ಯಮಕ್ಕೆ ವಿಫುಲ ಅವಕಾಶವಿದೆ. ಅಂತೆಯೇ ನಾವು ಮೈಸೂರಿನಲ್ಲಿ ಉದ್ಯಮಕ್ಕೆ ಹೆಚ್ಚಿನ ಅವಕಾಶ ನೀಡಬೇಕಿದ್ದರೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ ಎಂದರು.
ಪ್ರಮುಖವಾಗಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಮತ್ತು ಬೆಂಗಳೂರು ನಡುವೆ ಚುತುಷ್ಪಥ ನಿರ್ಮಿಸಿದ್ದರ ಪರಿಣಾಮವಾಗಿ ಮೈಸೂರಿಗೆ ಇನ್‌ಫೋಸಿಸ್ ಬಂತು. ನಂತರ ವರ್ತುಲ ರಸ್ತೆಯು ಅವರದ್ದೇ ಯೋಜನೆ. ಆ ನಂತರ ಯಾವ ರಾಜಕಾರಣಿಯೂ ಮೈಸೂರಿನ ಬಗ್ಗೆ ದೂರದೃಷ್ಟಿಹೊಂದಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದಶಪಥ ಯೋಜನೆ ನೀಡಿದರು. ನಿಂತುಹೋಗಿದ್ದ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದರು, ಈಗ ರನ್‌ವೇ ವಿಸ್ತರಿಸಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದೇವೆ ಎಂದರು.
ಇನ್ನೆರಡು ದಿನಗಳ ಬಳಿಕ ಶಾಶ್ವತವಾಗಿ ಬಂದ್ ಆಗಲಿದೆ ಈ ಬ್ಯಾಂಕ್, ಹಣ ಮರಳಿ ಪಡೆಯಿರಿ ಎಂದ ಆರ್‌ಬಿಐ!
ಮೈಸೂರಿನಿಂದ ಹಲವು ಪ್ರಮುಖ ರಾಜ್ಯದ ರಾಜಧಾನಿಗೆ ರೈಲು ಸಂಪರ್ಕ ಕಲ್ಪಿಸಿದ್ದೇವೆ. ಅಮೃತ್ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹೀಗೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 3,758 ಸಾಫ್‌್ಟವೇರ್ ಕಂಪನಿಗಳಿವೆ. ದಶಪಥ ಯೋಜನೆಯಿಂದ 40 ಕಂಪನಿ ಮೈಸೂರಿಗೆ ಬಂದರೂ ಇಲ್ಲಿನ 2ರಿಂದ 3 ಲಕ್ಷ ಮಂದಿಗೆ ಉದ್ಯೋಗ ದೊರಕುತ್ತದೆ. ನಮ್ಮ ಮಕ್ಕಳು ಬೆಂಗಳೂರು, ಪೂನಾ, ಕೊಯಮತ್ತೂರಿಗೆ ಹೋಗಿ ಅಲ್ಲಿ ಹೊಗೆ ಕುಡಿದು ಬರುವುದು ಬೇಡ. ಇಲ್ಲಿಯೇ ಉದ್ಯೋಗ ಕಂಡುಕೊಳ್ಳಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ 92 ಬಯೋ ಟೆಕ್ನಾಲಜಿ ಕಂಪನಿ ಇದೆ. ಈ ಪೈಕಿ ಮೈಸೂರಿಗೆ 4 ಬಂದರೂ ಸಾಕು. ಇನ್ನು ಸೆಮಿ ಕಂಡಕ್ಟರ್ ತರಲು ಸಿಎಂ ಕೂಡ ಪ್ರೋತ್ಸಾಹಿಸುತ್ತಿದ್ದಾರೆ. ಅಶ್ವಥ್ ನಾರಾಯಣ್ ಕೊಟ್ಟೇ ಕೊಡುವುದಾಗಿ ಹೇಳಿದ್ದಾರೆ. ಮೈಸೂರು ಬೆಳೆಯುತ್ತದೆ. ಆದರೆ ಅದು ಬೆಂಗಳೂರು ರೀತಿ ಬೆಳೆಯಬಾರದು. ಗ್ರೇಟರ್ ಮೈಸೂರು ಯೋಜನೆಯನ್ನು ಈಗಲೇ ಜಾರಿಗೆ ತಂದು ವರ್ತುಲ ರಸ್ತೆಯಿಂದ ಹೊರಗೆ ಬಹುಮಡಿ ಕಟ್ಟಡಗಳು ಬಂದು, ನಗರದ ಹೃದಯಭಾಗದಲ್ಲಿ ಪಾರಂಪರಿಕತೆ ಕಾಪಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಮೈಸೂರು ಇಷ್ಟುದೊಡ್ಡ ಮಟ್ಟದಲ್ಲಿ ಅಭಿವೃದ್ಧಿಹೊಂದಲು ಮಹಾರಾಜರು ಕಾರಣ. ಇಲ್ಲಿ ವಿದ್ಯುತ್ ತಯಾರಿಸಿದರೂ ಬೆಂಗಳೂರಿಗೆ ಕೊಟ್ಟರು, ಅಣೆಕಟ್ಟೆಇಲ್ಲಿ ಕಟ್ಟಿದರೂ ನೀರು ಬೆಂಗಳೂರಿಗೆ ಹೋಯಿತು. ಅಲ್ಲಿ ಎಲ್ಲಾ ಸೌಲಭ್ಯ ಇದ್ದರಿಂದ ಬೆಂಗಳೂರು ಕೈಗಾರಿಕೆಗಳ ಪ್ರಶಸ್ತ ಸ್ಥಳವಾಯಿತು. ಮೈಸೂರಿನಲ್ಲಿ ಕೆ.ಆರ್. ಮಿಲ್, ಐಡಿಯಲ್ ಜಾವಾ ಕಾರ್ಖಾನೆಗಳನ್ನು ನಿರ್ಮಿಸಿದರು. ಈಗ ಮೈಸೂರು ಎಂದರೆ ಕೇವಲ ಹನುಮಂತು ಪಲಾವ್, ಮೈಲಾರಿ ದೋಸೆ, ತೇಗು ಮೆಸ್ ಎನ್ನುವಂತಾಗಿದೆ. ಅದು ಬದಲಾಗಿ ಇದು ಕೈಗಾರಿಕೆಗಳ ನಗರ ಎನ್ನುವಂತಾಗಬೇಕು ಎಂದರು.
ಮೈಸೂರು ವಿಶ್ವ ಭೂಪಟದಲ್ಲಿ ರಾರಾಜಿಸಿದೆ
ವಿಶ್ವಯೋಗ ದಿನ ಪ್ರಧಾನಿ ನರೇಂದ್ರಮೋದಿ ಅವರು ಬಂದಿದ್ದು ನೆಪ ಅಷ್ಟೇ. ಮೋದಿ ಬರುತ್ತಾರೆ ಎಂದರೆ ಮೈಸೂರನ್ನು ವಿಶ್ವ ಭೂಪಟದಲ್ಲಿ ಪ್ರದರ್ಶಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಈಗ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ಕೂಡ ಬರುತ್ತಿದ್ದಾರೆ ಎಂದರು.
80 ಪೈಲಟ್‌ಗಳನ್ನು 3 ತಿಂಗಳು ವೇತನ ನೀಡದೇ ಮನೆಗೆ ಕಳುಹಿಸಲು SpiceJet ಸಿದ್ಧತೆ
ಎಲೆಕ್ಟ್ರಾನಿಕ್ ಇಂಡಸ್ಟ್ರೀಯಲ್, ಅಡುಗೆ ಎಣ್ಣೆಗೆ ಸಂಬಂಧಿಸಿದæ ಕೈಗಾರಿಕೋದ್ಯಮಿಗಳನ್ನು ಗುರುತಿಸಿ ಗೌರವಿಸಬೇಕು. ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಿದವರನ್ನು ಮುಂದಿನ ದಿನಗಳಲ್ಲಿ ಗುರುತಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಪ್ಯಾರೀಸ್‌ನಂತೆ ಪ್ರವಾಸೋದ್ಯಮ ಆಕರ್ಷಿಸುವ ಶಕ್ತಿ ಇದೆ ಎಂದಿದ್ದರು. ಅದನ್ನೂ ಕೂಡ ಕೆಲವರು ರಾಜಕೀಯಕ್ಕೆ ಬಳಸಿಕೊಂಡಿದ್ದಾಗಿ ಅವರು ತಿಳಿಸಿದರು.
ಕನ್ನಡಪ್ರಭ- ಸುವರ್ಣ ನ್ಯೂಸ್ ಶ್ಲಾಘನೀಯ ಕಾರ್ಯ
ಕನ್ನಡಪ್ರಭ ಮತ್ತು ಸುವರ್ಣ ಸುದ್ದಿ ವಾಹಿನಿಯು ಬೆಂಗಳೂರು, ಹುಬ್ಬಳ್ಳಿ ಭಾಗದಲ್ಲಿ ಶ್ಲಾಘನೀಯ ಕೆಲಸ ಮಾಡಿದೆ. ಅಲ್ಲಿನ ಉದ್ಯಮಿಗಳನ್ನು, ಸಮಾಜದಲ್ಲಿ ಬದಲಾವಣೆ ತರುತ್ತಿರುವವರನ್ನು ಗುರುತಿಸಿ ಸನ್ಮಾನಿಸಿ ಇನ್ನೂ ಹೆಚ್ಚಿನ ಒಳ್ಳೆಯ ಕೆಲಸ ಮಾಡಿ ಎಂದು ಪ್ರೋತ್ಸಾಹಿಸುತ್ತಿದೆ.
ಈಗ ಮೈಸೂರುಗೆ ಬಂದು ಇಲ್ಲಿರುವ ಯೋಗ್ಯ ಉದ್ಯಮಿಗಳನ್ನೇ ಗುರುತಿಸಿ ಸನ್ಮಾನಿಸುತ್ತಿರುವುದಕ್ಕೆ ಸಂಸ್ಥೆಗೆ ಅಭಿನಂದನೆಗಳು. ಇಂದು ಸನ್ಮಾನಿಸಿರುವವರಲ್ಲಿ ಹೆಚ್ಚಿನವರು ಗೊತ್ತಿರುವವರು. ಅಶೋಕ್ ಗೋವಿಂದೇಗೌಡರ ಸಂಪರ್ಕ ಕಡಿಮೆ. ಆದರೆ ಅವರೊಬ್ಬ ಸ್ನೇಹ ಜೀವಿ. ಅಂತಹವರನ್ನು ಗುರುತಿಸಿ ಸನ್ಮಾನಿಸಿರುವುದು ವೈಯಕ್ತಿಕವಾಗಿ ನನಗೆ ಸಂತೋಷವಾಗುತ್ತಿದೆ. ಶ್ರೀನಿವಾಸ್, ಎಸ್‌ಎಂಪಿ ಶಿವಪ್ರಕಾಶ್, ಬಸವರಾಜು, ಮಂಜುನಾಥ್ ಅನೇಕ ಒಳ್ಳೆಯವರನ್ನೇ ಗುರುತಿಸಿದ್ದೀರಿ ಎಂದರು.