ಇನ್ನೆರಡು ದಿನಗಳ ಬಳಿಕ ಶಾಶ್ವತವಾಗಿ ಬಂದ್‌ ಆಗಲಿದೆ ಈ ಬ್ಯಾಂಕ್‌, ಹಣ ಮರಳಿ ಪಡೆಯಿರಿ ಎಂದ ಆರ್‌ಬಿಐ!

By Santosh NaikFirst Published Sep 20, 2022, 7:42 PM IST
Highlights

ಆಗಸ್ಟ್‌ನಲ್ಲಿ, ಪುಣೆ ಮೂಲದ ರುಪೀ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಪರವಾನಗಿಯನ್ನು ರದ್ದುಗೊಳಿಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿತ್ತು. ಬ್ಯಾಂಕ್ ತನ್ನ ವ್ಯವಹಾರವನ್ನು ಸೆಪ್ಟೆಂಬರ್ 22 ರಂದು ಶಾಶ್ವತವಾಗಿ ಮುಚ್ಚಲಿದೆ. ಆದ್ದರಿಂದ, ಗ್ರಾಹಕರಿಗೆ ಖಾತೆಯಿಂದ ಹಣ ಹಿಂಪಡೆಯಲು ಕೇವಲ ಎರಡು ದಿನಗಳು ಮಾತ್ರ ಉಳಿದಿವೆ.

ನವದೆಹಲಿ (ಸೆ. 20): ಇನ್ನೆರಡು ದಿನಗಳಲ್ಲಿ ದೇಶದ ಮತ್ತೊಂದು ಸಹಕಾರಿ ಬ್ಯಾಂಕ್‌ಗೆ ಶಾಶ್ವತವಾಗಿ ಬೀಗ ಬೀಳಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪುಣೆಯ ರುಪೀ ಸಹಕಾರಿ ಬ್ಯಾಂಕ್ ಲಿಮಿಟೆಡ್ ಅನ್ನು ಮುಚ್ಚಲು ಆದೇಶ ನೀಡಿದೆ.  ಈ ಬ್ಯಾಂಕಿನ ಬ್ಯಾಂಕಿಂಗ್ ಸೇವೆಗಳನ್ನು ಸೆಪ್ಟೆಂಬರ್ 22 ರಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಹಾಗೇನಾದರೂ ಈ ಬ್ಯಾಂಕ್‌ನಲ್ಲಿ ನೀವು ಖಾತೆಯನ್ನು ಹೊಂದಿದ್ದು, ಅದರಲ್ಲಿ ಹಣವನ್ನು ಠೇವಣಿ ಇರಿಸಿದ್ದಲ್ಲಿ ಅದನ್ನು ತಕ್ಷಣವೇ ಹಿಂಪಡೆಯುವಂತೆ ಆರ್‌ಬಿಐ ಆದೇಶ ನೀಡಿದೆ. ಯಾಕೆಂದರೆ, ಸೆಪ್ಟೆಂಬರ್‌ 22 ರ ನಂತರ ಈ ಖಾತೆಯಿಂದ ಹಣವನ್ನು ಹಿಂಪಡೆಯಲು ಯಾರಿಗೂ ಸಾಧ್ಯವಾಗೋದಿಲ್ಲ.ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ, ರೂಪಾಯಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ಗೆ ಬೀಗ ಬೀಳಲಿದೆ. ಕಳೆದ ಆಗಸ್ಟ್‌ನಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪುಣೆ ಮೂಲದ ರುಪೀ ಸಹಕಾರಿ ಬ್ಯಾಂಕ್‌ ಲಿಮಿಟೆಡ್‌ನ ಲೈಸೆನ್ಸ್‌ಅನ್ನು ರದ್ದು ಪಡಿಸಲು ನಿರ್ಧಾರ ಮಾಡಿತ್ತು. ಅದರಂತೆ ಸೆ. 22 ರಂದು ಬ್ಯಾಂಕ್‌ ಶಾಶ್ವತವಾಗಿ ತನ್ನ ವ್ಯವಹಾರಗಳನ್ನು ಕೊನೆ ಮಾಡಲಿದೆ. ಇದರಿಂದಾಗಿ ಈ ಬ್ಯಾಂಕ್‌ನಲ್ಲಿ ಹಣವನ್ನು ಠೇವಣಿ ಇರಿಸಿರುವ ವ್ಯಕ್ತಿಗಳಿಗೆ ಹಣವನ್ನು ಹಿಂಪಡೆಯಲು ಸದ್ಯ ಕೇವಲ 2 ದಿನಗಳ ಕಾಲಾವಕಾಶ ಮಾತ್ರವೇ ಇದೆ. 

ಸೆ. 22ರ ಬಳಿಕ  ಗ್ರಾಹಕರು ತಮ್ಮ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಆರ್‌ಬಿಐ ಪ್ರಕಾರ, ರೂಪಾಯಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿದೆ ಮತ್ತು ಬ್ಯಾಂಕ್‌ನಲ್ಲಿ ಯಾವುದೇ ಬಂಡವಾಳ ಉಳಿದಿಲ್ಲ. ಈ ಕಾರಣದಿಂದಾಗಿ, ಕೇಂದ್ರ ಬ್ಯಾಂಕ್ ತನ್ನ ಬ್ಯಾಂಕಿಂಗ್ ಪರವಾನಗಿಯನ್ನು (Bank license cancellation) ರದ್ದುಗೊಳಿಸಿತು. ಬ್ಯಾಂಕಿಂಗ್ ನಿಯಮಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ರುಪೀ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮೇಲೆ ಪ್ರಮುಖ ಕ್ರಮ ಕೈಗೊಂಡಿದೆ. ಬ್ಯಾಂಕ್ ಸಾಕಷ್ಟು ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯವನ್ನು ಹೊಂದಿಲ್ಲದ ಕಾರಣ ರೂಪಾಯಿ ಸಹಕಾರಿ ಬ್ಯಾಂಕಿನ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಗಸ್ಟ್ ತಿಂಗಳಲ್ಲೇ ಗ್ರಾಹಕರಿಗೆ ಮಾಹಿತಿ ನೀಡಿತ್ತು.

ಈ ಕುರಿತು ಆಗಸ್ಟ್ 10ರಂದೇ ಪತ್ರಿಕಾ ಪ್ರಕಟಣೆ ಹೊರಡಿಸಿ ರಿಸರ್ವ್ ಬ್ಯಾಂಕ್ (Reserve Bank of India ) ಮಾಹಿತಿ ನೀಡಿತ್ತು. ಇದರಲ್ಲಿ ರುಪೀ ಸಹಕಾರಿ ಬ್ಯಾಂಕ್ (Rupee Co operative Bank Ltd) ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು 6 ವಾರಗಳ ನಂತರ ರದ್ದುಗೊಳಿಸಲಾಗುವುದು ಎಂದು ತಿಳಿಸಿತ್ತು. ಇದಾದ ನಂತರ ಬ್ಯಾಂಕ್‌ನ ಎಲ್ಲಾ ಶಾಖೆಗಳನ್ನು ಮುಚ್ಚಲಾಗುವುದು ಮತ್ತು ಗ್ರಾಹಕರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಇದೀಗ ಸೆಪ್ಟೆಂಬರ್ 22ರಿಂದ ರಿಸರ್ವ್ ಬ್ಯಾಂಕ್ ನ ಆದೇಶಗಳು ಜಾರಿಯಾಗಲಿದ್ದು, ರುಪೀ ಸಹಕಾರಿ ಬ್ಯಾಂಕ್ (RBI) ತನ್ನ ಕೆಲಸವನ್ನು ಸ್ಥಗಿತಗೊಳಿಸಲಿದೆ.

GDP Growth Rate: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 13.5 ವೇಗವಾಗಿ ಬೆಳೆದ ಭಾರತದ ಜಿಡಿಪಿ: ಚೀನಾದ್ದು 0.4 ಅಷ್ಟೇ..!

ರುಪೀ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನಲ್ಲಿ ಹಣವನ್ನು ಠೇವಣಿ (Deposit) ಮಾಡಿದ ಗ್ರಾಹಕರು ರೂ 5 ಲಕ್ಷದವರೆಗಿನ ಠೇವಣಿಗಳ ಮೇಲೆ ವಿಮಾ ರಕ್ಷಣೆಯ ಪ್ರಯೋಜನವನ್ನು ಪಡೆಯುತ್ತಾರೆ. ಈ ವಿಮೆಯನ್ನು ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ನಿಂದ ಪಡೆಯಲಾಗುತ್ತಿದೆ. ಡಿಐಸಿಜಿಸಿ ಕೂಡ ರಿಸರ್ವ್ ಬ್ಯಾಂಕ್‌ನ (DICGC) ಅಂಗಸಂಸ್ಥೆಯಾಗಿದೆ. ಈ ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಈಗ ಸಹಕಾರಿ ಬ್ಯಾಂಕ್‌ನಲ್ಲಿ ಐದು ಲಕ್ಷ ರೂಪಾಯಿಗಳವರೆಗೆ ಹಣವನ್ನು ಠೇವಣಿ ಮಾಡಿದರೆ, ಅವರು ಡಿಐಸಿಜಿಸಿಯಿಂದ ಸಂಪೂರ್ಣ ಹಕ್ಕು ಪಡೆಯುತ್ತಾರೆ.

ಇನ್ಮುಂದೆ UPI ಪಾವತಿಗೆ ಶುಲ್ಕ? ಮಧ್ಯಸ್ಥಗಾರರ ಸಲಹೆ ಕೇಳಿದ ಆರ್‌ಬಿಐ

ಈಗ ಸಹಕಾರಿ ಬ್ಯಾಂಕ್‌ನಲ್ಲಿ ಐದು ಲಕ್ಷ ರೂಪಾಯಿಗಳವರೆಗೆ ಹಣವನ್ನು ಠೇವಣಿ ಮಾಡಿದರೆ, ಅವರು ಡಿಐಸಿಜಿಸಿಯಿಂದ ಸಂಪೂರ್ಣ ಹಕ್ಕು ಪಡೆಯುತ್ತಾರೆ. 5 ಲಕ್ಷಕ್ಕಿಂತ ಹೆಚ್ಚು ಠೇವಣಿ ಹೊಂದಿರುವ ಗ್ರಾಹಕರು ಪೂರ್ಣ ಮೊತ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಡಿಐಸಿಜಿಸಿ 5 ಲಕ್ಷದವರೆಗೆ ಮಾತ್ರ ಪರಿಹಾರವನ್ನು ನೀಡುತ್ತದೆ. ಆದರೆ, ಇವರ 5 ಲಕ್ಷದವರೆಗಿನ ಮೊತ್ತ ವಾಪಾಸ್‌ ಸಿಗುತ್ತದೆ.

click me!