Koppal News: ಮುನ್ಸಿಪಾಲಿಟಿ ಬಿಲ್‌ ಪಾಸ್‌, ಗರಿಗೆದರಿದ ರಿಯಲ್‌ಎಸ್ಟೇಟ್‌

By Kannadaprabha News  |  First Published Sep 24, 2022, 10:20 AM IST
  • ಮುನ್ಸಿಪಾಲಿಟಿ ಬಿಲ್‌ ಪಾಸ್‌, ಗರಿಗೆದರಿದ ರಿಯಲ್‌ಎಸ್ಟೇಟ್‌
  • 5 ವರ್ಷಗಳಿಂದ ಕುಂದಿದ್ದ ವ್ಯಾಪಾರ ಮತ್ತೆ ಕುದುರಿತು
  • ಪ್ರಾಧಿಕಾರದಿಂದ ಅನುಮತಿ ಪಡೆಯದ ಲೇಔಟ್‌ಗಳಿಗೆ ಡಿಮ್ಯಾಂಡ್‌

ಸೋಮರಡ್ಡಿ ಅಳವಂಡಿ

 ಕೊಪ್ಪಳ (ಸೆ.24) : ಸುಮಾರು 5 ವರ್ಷ ರಿಯಲ್‌ ಎಸ್ಟೇಟ್‌ ದಂಧೆ ಮಂಕಾಗಿಸಿದ್ದ ಸರ್ಕಾರ ಸುತ್ತೋಲೆ ತೆಗೆದುಹಾಕುವ ದಿಸೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಮುನ್ಸಿಪಾಲಿಟಿ ತಿದ್ದುಪಡಿ ಬಿಲ್‌- 2022 ಎರಡು ಸದನದಲ್ಲಿ ಪಾಸಾಗುತ್ತಿದ್ದಂತೆ ರಿಯಲ್‌ ಎಸ್ಟೇಟ್‌ ವ್ಯಾಪಾರ ಮತ್ತೆ ಕುದುರುವ ಲಕ್ಷಣಗಳಿವೆ. ಸುಮಾರು 5 ವರ್ಷಗಳಿಂದ ನಡೆಯದಿದ್ದ ವ್ಯಾಪಾರಕ್ಕೆ ಜೀವ ಬಂದಂತಾಗಿದ್ದು, ಅತ್ತ ಬಿಲ್‌ ಪಾಸ್‌ ಆಗುತ್ತಿದ್ದಂತೆ ಇತ್ತ ವ್ಯಾಪಾರದ ಕುರಿತು ಮಾತುಕತೆ ಪ್ರಾರಂಭವಾಗಿವೆ. ಬಿಲ್‌ ಪಾಸ್‌ ಮಾಡಿರುವ ರಾಜ್ಯ ಸರ್ಕಾರ ಇನ್ನು ಸರ್ಕಾರ ಆದೇಶ ಹೊರಡಿಸಿ ಗೊಂದಲ ನಿವಾರಿಸಬೇಕಿದೆ. ಆದರೂ ಈಗಾಗಲೇ ಆಸಕ್ತರು ಮತ್ತು ಲೇಔಟ್‌ಗಳ ಮಾಲಿಕರ ನಡುವೆ ಚರ್ಚೆ ನಡೆದಿದ್ದು ವ್ಯಾಪಾರ ಜೋರಾಗಲು ಶುರು ಮಾಡಿದೆ.

Tap to resize

Latest Videos

undefined

ರಿಯಲ್ ಎಸ್ಟೇಟ್ ವ್ಯಾಪಾರಿ ಕೊಲೆಗೆ ರೋಚಕ ಟ್ವಿಸ್ಟ್: ಅಪ್ರಾಪ್ತ ಮಗನಿಂದಲೇ ಹತ್ಯೆ

ಏನಿದು ಸಮಸ್ಯೆ?: ರಾಜ್ಯ ಸರ್ಕಾರ 2017ರ ಡಿಸೆಂಬರ್‌ನಲ್ಲಿ ಸುತ್ತೋಲೆ ಹೊರಡಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಇಲ್ಲದ ಲೇಔಟ್‌ ಮಾನ್ಯತೆ ರದ್ದುಗೊಳಿಸಿ ಆದೇಶ ಹೊರಡಿಸಿತು. ಇದರಿಂದ ಇವುಗಳಿಗೆ ಇ-ಸ್ವತ್ತು ಮತ್ತು ಗ್ರಾಮೀಣ ಪ್ರದೇಶದಲ್ಲಿ 11ಇ ನೀಡುವುದನ್ನು ನಿಲ್ಲಿಸಲಾಯಿತು. ಇದರಿಂದ ಲೇಔಟ್‌ಗಳ ಆಸ್ತಿ ವರ್ಗಾವಣೆ, ಬ್ಯಾಂಕ್‌ ಲೋನ್‌, ಆಸ್ತಿ ಮಾರಾಟ ಸೇರಿದಂತೆ ಯಾವುದೇ ಪ್ರಕ್ರಿಯೆ ನಡೆಯದಂತಾಯಿತು ಹೀಗಾಗಿ ರಿಯಲ್‌ ಎಸ್ಟೇಟ್‌ ಸಂಪೂರ್ಣ ಸ್ತಬ್ಧವಾಯಿತು. ಕೇವಲ ಅನುಮತಿ ಇರುವ ಲೇಔಟ್‌ಗಳಲ್ಲಿ ನಿವೇಶನ ದರ ಆಕಾಶದೆತ್ತರಕ್ಕೆ ಹೋಗಿತ್ತು.

ಕೊಪ್ಪಳದಂತಹ ನಗರಗಳಲ್ಲಿಯೂ ಕೇವಲ 30್ಡ40 ಅಳತೆಯ ಸೈಟ್‌ಗಳು .10- 12 ಲಕ್ಷದಿಂದ .20-25 ಲಕ್ಷಕ್ಕೆ ಮಾರಾಟವಾಗಲಾರಂಭಿಸಿದವು. ಆದರೆ, ಈಗ ಸರ್ಕಾರ ಮುನ್ಸಿಪಾಲಿಟಿಗಳ ತಿದ್ದುಪಡಿ ವಿಧೇಯಕ ಮಂಡನೆ ಮಾಡುವ ಮೂಲಕ ನಗರಾಭಿವೃದ್ಧಿ ಕಾಯ್ದೆ ಮ್ತತು ಟೌನ್‌ ಆ್ಯಂಡ್‌ ಕಂಟ್ರಿ ಪ್ಲ್ಯಾನ್‌ ವಿನಾಯಿತಿ ನೀಡಿದೆ. ಆದರೆ, ತಿದ್ದುಪಡಿ ವಿಧೇಯಕದಲ್ಲಿ ಈ ಕುರಿತು ಸ್ಪಷ್ಟತೆ ಇಲ್ಲ. ಸರ್ಕಾರ ಆದೇಶ ಹೊರಡಿಸಿದ ಮೇಲೆ ಇದನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎನ್ನುತ್ತಾರೆ ತಜ್ಞರು. ಸರ್ಕಾರ ಬಿಲ್‌ ಪಾಸ್‌ ಮಾಡಿದ್ದರೂ ಸರ್ಕಾರದ ಆದೇಶ ಬರುವವರೆಗೂ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕುದುರಿದ ವ್ಯಾಪಾರ: ಮುನ್ಸಿಪಾಲಿಟಿ ತಿದ್ದುಪಡಿ ವಿಧೇಯಕ- 2022 ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಪಾಸಾಗುತ್ತಿದ್ದಂತೆ ಇತ್ತ ಈ ವ್ಯಾಪ್ತಿಯ ಲೇಔಟ್‌ಗಳಲ್ಲಿ ಇರುವ ನಿವೇಶನಗಳ ವ್ಯಾಪಾರದ ಮಾತುಕತೆ ಕುದುರಲಾರಂಭಿಸಿದೆ. ಈಗಾಗಾಲೇ ಖರೀದಿ ಮಾಡಿದ್ದರೂ ವರ್ಗಾವಣೆ ಮಾಡಿಕೊಳ್ಳಲು ಸಮಸ್ಯೆಯಾಗಿ ನನೆಗುದಿಗೆ ಬಿದ್ದಿದ್ದ ಮಾತುಕತೆಯೂ ಜೋರಾಗಿ ನಡೆಯುತ್ತಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ ಮತ್ತು ರೇರಾ ಕಾಯ್ದೆ ಅನುಸಾರ ನಿರ್ಮಾಣವಾಗಿದ್ದ ಲೇಔಟ್‌ಗಳಿಗೆ ಇಷ್ಟುದಿನಗಳ ಕಾಲ ಭಾರಿ ಬೇಡಿಕೆ ಇತ್ತು. ಕಾರಣ ಈ ಮೊದಲು ನಿರ್ಮಾಣವಾಗಿದ್ದ ಲೇಔಟ್‌ಗಳ ಮಾನ್ಯತೆ ರದ್ದು ಮಾಡಿದ್ದರಿಂದ. ಆದರೆ, ಪುನಃ ಇವುಗಳಿಗೆ ಮಾನ್ಯತೆ ದೊರೆಯುವುದರಿಂದ ನೂತನ ಲೇಔಟ್‌ ಬದಲಾಗಿ ಈಗಾಗಲೇ ನಗರ ಮತ್ತು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿರುವ ಲೇಔಟ್‌ಗಳ ನಿವೇಶನಕ್ಕೆ ಭಾರಿ ಬೇಡಿಕೆ ಶುರುವಾಗಿದೆ. .10- 12 ಲಕ್ಷಕ್ಕೆ ಮಾರಾಟವಾಗುತ್ತಿದ್ದ ಸೈಟ್‌ಗಳು ನಿಧಾನಕ್ಕೆ .16-18 ಲಕ್ಷದವರೆಗೆ ಮಾರಾಟವಾಗಲು ಶುರುವಾಗಿವೆ.

ನಿವೇಶನ ದರ ಕೊಂಚ ಇಳಿಕೆ: ಅಕ್ರಮ ಲೇಔಟ್‌ ಎಂದು ಜರಿಯುತ್ತಿರುವ ಲೇಔಟ್‌ಗಳನ್ನೇ ಮಾನ್ಯ ಮಾಡುವುದರಿಂದ ಇವುಗಳ ದರ ಏರಿಕೆಯಾದರೂ ಇಡಿಯಾಗಿ ನಿವೇಶನಗಳ ದರ ಕೊಂಚ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ. ರೇರಾ ಕಾಯ್ದೆ ಮತ್ತು ನಗರಾಭಿವೃದ್ಧಿ ನಿಯಮಾನುಸಾರ ನಿರ್ಮಾಣ ಮಾಡಿರುವ ಲೇಔಟ್‌ಗಳಲ್ಲಿ ನಿವೇಶನ ದರಕ್ಕೆ ಆಕಾಶದೆತ್ತರಕ್ಕೆ ಹೋಗಿದ್ದು, ಈಗ ಪಾತಾಳಕ್ಕೆ ಇಳಿಯದಿದ್ದರೂ ಅಲ್ಪಮಟ್ಟಿಗಿನ ಇಳಿಕೆಯಾಗಲಿದೆ ಎಂದೇ ವಿಶ್ಲೇಷಣೆಯಾಗುತ್ತಿದೆ.

ಏಷ್ಯಾದ ಶ್ರೀಮಂತ ಮಹಿಳೆಗೆ ಹೊಡೆತ ನೀಡಿದ ಚೀನಾದ ರಿಯಲ್ ಎಸ್ಟೇಟ್ ಬಿಕ್ಕಟ್ಟು; ಕರಗಿತು ಅರ್ಧಕ್ಕಿಂತಲೂ ಹೆಚ್ಚಿನ ಸಂಪತ್ತು

ಮಾನ್ಯತೆ ಇಲ್ಲದಿದ್ದ ಲೇಔಟ್‌ಗಳಲ್ಲಿನ ಸೈಟ್‌ಗಳ ಮಾರಾಟಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಸಮಸ್ಯೆಯಾಗಿತ್ತು. ಈಗ ಸರ್ಕಾರ ಇವುಗಳಿಗೆ ಮಾನ್ಯತೆ ನೀಡಿರುವುದರಿಂದ ಇವುಗಳ ದರ ಏರಿಕೆಯಾದರೂ ಒಟ್ಟಾರೆ ನಿವೇಶನ ದರ ಇಳಿಕೆಯಾಗುವುದರಲ್ಲಿ ಅನುಮಾನವಿಲ್ಲ.

ಜಗದೀಶ, ಭಾಗ್ಯನಗರ ರಿಯಲ್‌ಎಸ್ಟೇಟ್‌ ಉದ್ಯಮಿ

ಸರ್ಕಾರ ಈಗಷ್ಟೇ ಬಿಲ್‌ ಪಾಸ್‌ ಮಾಡಿದೆ. ಈ ಕುರಿತು ಸರ್ಕಾರದ ಆದೇಶ ಬಂದ ಮೇಲೆಯೇ ಸ್ಪಷ್ಟತೆ ದೊರೆಯತ್ತದೆ. ಏನೇ ಆದರೂ ಬಹುದೊಡ್ಡ ಸಮಸ್ಯೆ ಇತ್ಯರ್ಥವಾಗಲಿದೆ.

ಮಹಾಂತೇಶ ಪಾಟೀಲ್‌ ಮೈನಳ್ಳಿ, ಅಧ್ಯಕ್ಷರು ಕೊಪ್ಪಳ ನಗಾರಾಭಿವೃದ್ಧಿ ಪ್ರಾಧಿಕಾರ

click me!