
ನವದೆಹಲಿ(ಅ.10): ಸತತ 14 ವರ್ಷಗಳಿಂದ ಭಾರತದ ನಂ.1 ಶ್ರೀಮಂತ, 4 ವರ್ಷಗಳಿಂದ ಏಷ್ಯಾದ(Asia) ನಂ.1 ಸಿರಿವಂತ ಎಂಬ ಹಿರಿಮೆ ಹೊಂದಿರುವ ರಿಲಯನ್ಸ್ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ(Mukesh Ambani) ಇದೀಗ 100 ಶತಕೋಟಿ ಡಾಲರ್ (7.50 ಲಕ್ಷ ಕೋಟಿ) ಆಸ್ತಿ ಹೊಂದಿರುವ ವಿಶ್ವದ 11 ಭಾರೀ ಶ್ರೀಮಂತರ ಪಟ್ಟಿಸೇರಿದ್ದಾರೆ.
ಶುಕ್ರವಾರ ರಿಲಯನ್ ಇಂಡಸ್ಟ್ರೀಸ್(Reliance Industries) ಷೇರು ಮೌಲ್ಯಗಳು ಭಾರೀ ಏರಿಕೆ ಕಂಡ ಬೆನ್ನಲ್ಲೇ ಅಂಬಾನಿ ಆಸ್ತಿ 100.6 ಶತಕೋಟಿ ಡಾಲರ್ (7.54 ಲಕ್ಷ ಕೋಟಿ ರು.) ದಾಟಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಮುಕೇಶ್ ವಿಶ್ವದ ಆಗರ್ಭ ಸಿರಿವಂತರ ಪಟ್ಟಿಸೇರಿದ್ದಾರೆ ಎಂದು ‘ಬ್ಲೂಂಬರ್ಗ್ ಬಿಲಿಯನೇರ್ ಇಂಡೆಕ್ಸ್’(Bloomberg Billionaires Index) ವರದಿ ಮಾಡಿದೆ.
ಇದುವರೆಗೆ 10 ಶ್ರೀಮಂತರು ಮಾತ್ರವೇ 100 ಶತಕೋಟಿ ಡಾಲರ್ ಪಟ್ಟಿಯಲ್ಲಿದ್ದರು. ಅವರೆಂದರೆ ಟೆಸ್ಲಾದ ಎಲಾನ್ ಮಸ್ಕ್, ಅಮೆಜಾನ್‌ನ ಜೆಫ್ ಬೆಜೋಸ್, ಲೂಯಿಸ್ ವ್ಯೂಟನ್‌ನ ಬೆರ್ನಾರ್ಡ್ ಅರ್ನಾಲ್ಟ್, ಮೈಕ್ರೋಸಾಫ್ಟ್‌ನ ಬಿಲ್‌ಗೇಟ್ಸ್, ಗೂಗಲ್‌ನ ಲ್ಯಾರಿಪೇಜ್, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್, ಗೂಗಲ್‌ನ ಸೆರ್ಗೆಯ್ ಬ್ರಿನ್, ಒರಾಕಲ್‌ನ ಲ್ಯಾರಿ ಎಲ್ಲಿಸನ್, ಹೂಡಿಕೆದಾರ ಸ್ಟೀವ್ ಬಲ್ಮಾರ್, ಹೂಡಿಕೆದಾರ ವಾರನ್ ಬಫೆಟ್.
ಬಿಲಿಯನೇರ್ ಕ್ಲಬ್
ಎಲಾನ್ ಮಸ್ಕ್ 16.65 ಲಕ್ಷ ಕೋಟಿ ರು.
ಜೆಫ್ ಬೆಜೋಸ್ 14.32 ಲಕ್ಷ ಕೋಟಿ ರು.
ಬೆರ್ನಾರ್ಡ್ ಅರ್ನಾಲ್ಟ್ 11.70 ಲಕ್ಷ ಕೋಟಿ ರು.
ಬಿಲ್‌ಗೇಟ್ಸ್ 9.60 ಲಕ್ಷ ಕೋಟಿ ರು.
ಲ್ಯಾರಿಪೇಜ್ 9.37 ಲಕ್ಷ ಕೋಟಿ ರು.
ಮಾರ್ಕ್ ಜುಕರ್‌ಬರ್ಗ್ 9.22 ಲಕ್ಷ ಕೋಟಿ ರು.
ಸೆರ್ಗೆಯ್ ಬ್ರಿನ್ 9.00 ಲಕ್ಷ ಕೋಟಿ ರು.
ಲ್ಯಾರಿ ಎಲ್ಲಿಸನ್ 8.10 ಲಕ್ಷ ಕೋಟಿ ರು.
ಸ್ಟೀವ್ ಬಲ್ಮಾರ್ 7.95 ಲಕ್ಷ ಕೋಟಿ ರು.
ವಾರನ್ ಬಫೆಟ್ 7.72 ಲಕ್ಷ ಕೋಟಿ ರು.
ಮುಕೇಶ್ ಅಂಬಾನಿ 7.54 ಲಕ್ಷ ಕೋಟಿ ರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.