ರಿಲಯನ್ಸ್ ಉದ್ಯೋಗಿಗೆ 1500 ಕೋಟಿ ಮೌಲ್ಯದ ಬಂಗಲೆ ಗಿಫ್ಟ್; ಮುಖೇಶ್ ಅಂಬಾನಿ ಈ ದುಬಾರಿ ಉಡುಗೊರೆ ನೀಡಿದ್ದು ಯಾರಿಗೆ?

By Suvarna News  |  First Published Apr 24, 2023, 5:23 PM IST

ಮುಖೇಶ್ ಅಂಬಾನಿ ರಿಲಯನ್ಸ್ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಮುಂಬೈನಲ್ಲಿ 1500 ಕೋಟಿ ರೂ. ಮೌಲ್ಯದ ಮನೆಯನ್ನು ಉಡುಗೊರೆ ನೀಡಿದ್ದಾರೆ.  22 ಅಂತಸ್ತುಗಳ ಈ ಮನೆ 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಹಾಗಾದ್ರೆ ಮುಖೇಶ್ ಅಂಬಾನಿ ಈ ಮನೆಯನ್ನು ಉಡುಗೊರೆಯಾಗಿ ನೀಡಿದ್ದು ಯಾರಿಗೆ?
 


Business Desk:ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಐಷಾರಾಮಿ ಬಂಗಲೆ ಆಂಟಿಲಿಯಾದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಾಗೆಯೇ ಮುಖೇಶ್ ಅಂಬಾನಿ ಮನೆಯಲ್ಲಿರುವ ಕೆಲಸಗಾರರಿಗೆ ಕೂಡ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ನೀಡಲಾಗುತ್ತಿದೆ ಎಂಬ ವಿಚಾರ ಈಗಾಗಲೇ ವರದಿಯಾಗಿದೆ. ಮುಖೇಶ್ ಅಂಬಾನಿ ರಿಲಯನ್ಸ್ ಸಂಸ್ಥೆಯ ಉದ್ಯೋಗಿಗಳಿಗೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ. ಉದ್ಯೋಗಿಯೊಬ್ಬರಿಗೆ ಮುಖೇಶ್ ಅಂಬಾನಿ ಮುಂಬೈನಲ್ಲಿ ಮನೆಯೊಂದನ್ನು ಇತ್ತೀಚೆಗೆ ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೇ ಈ ಮನೆಯ ಮೌಲ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ!  ಹೌದು, ಮುಖೇಶ್ ಅಂಬಾನಿ ಉಡುಗೊರೆಯಾಗಿ ನೀಡಿರುವ ಮನೆಯ ಮೌಲ್ಯ ಬರೋಬರಿ1500 ಕೋಟಿ ರೂ. ಈ ಮನೆಯನ್ನು ಮುಖೇಶ್ ಅಂಬಾನಿ ಉಡುಗೊರೆಯಾಗಿ ನೀಡಿರೋದು ಮನೋಜ್ ಮೋದಿ ಎಂಬ ಉದ್ಯೋಗಿಗೆ. ಮನೋಜ್ ಮೋದಿ ಅವರನ್ನು ಮುಖೇಶ್ ಅಂಬಾನಿ ಅವರ ಬಲಗೈ ಬಂಟ ಎಂದೇ ಕರೆಯಲಾಗುತ್ತದೆ. ರಿಲಯನ್ಸ್ ಸಂಸ್ಥೆಯಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಮನೋಜ್ ಮೋದಿ ಅಂಬಾನಿ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಧೀರೂಬಾಯಿ ಅಂಬಾನಿ ಅವರ ಕಾಲದಿಂದಲೂ ರಿಲಯನ್ಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮನೋಜ್‌ ಮೋದಿ ಅವರಿಗೆ ಮುಖೇಶ್ ಅಂಬಾನಿ ಉಡುಗೊರೆಯಾಗಿ ನೀಡಿರುವ ಮನೆ 22 ಅಂತಸ್ತುಗಳನ್ನು ಹೊಂದಿದ್ದು, 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ಈ ಮನೆ ಮುಂಬೈ ನೆಪಿಯನ್ ಸೀ ರೋಡ್ ನಲ್ಲಿದೆ. ಮ್ಯಾಜಿಕ್ ಬ್ರಿಕ್ಸ್ ಡಾಟ್ ಕಾಮ್ ಪ್ರಕಾರ ಈ ಮನೆಯ ಮೌಲ್ಯ  1500 ಕೋಟಿ ರೂ.

Tap to resize

Latest Videos

ಕಾಫಿ ಮಾರುಕಟ್ಟೆಗೆ ರಿಲಯನ್ಸ್ ಎಂಟ್ರಿ; ಟಾಟಾ ಸ್ಟಾರ್ ಬಕ್ಸ್ ಗೆ ಹೊಸ ಪ್ರತಿಸ್ಪರ್ಧಿ

ಮುಖೇಶ್‌ ಅಂಬಾನಿ ಮತ್ತು ಮನೋಜ್‌ ಮೋದಿ ಇಬ್ಬರೂ ಒಂದೇ ಸ್ಕೂಲ್‌ನಲ್ಲಿ, ಒಂದೇ ಕ್ಲಾಸ್‌ನಲ್ಲಿ ಓದಿದವರು. ಇಬ್ಬರೂ ಮುಂಬಯಿಯ ಹಿಲ್‌ ಗ್ರೇಂಜ್ ಸ್ಕೂಲ್‌ನ ಸಹಪಾಠಿಗಳು. ಕೆಮಿಕಲ್ ಇಂಜಿನಿಯರಿಂಗ್ ಅನ್ನು ಕೂಡ ಮುಂಬೈ ವಿಶ್ವವಿದ್ಯಾಲಯದಲ್ಲಿ ಜೊತೆಯಾಗಿ ಪೂರ್ಣಗೊಳಿಸಿದ್ದರು. 1980ರಲ್ಲಿ ಮನೋಜ್ ಮೋದಿ ರಿಲಯನ್ಸ್ ಸಂಸ್ಥೆಗೆ ಸೇರುತ್ತಾರೆ. ಆಗ ಧೀರೂಬಾಯಿ ಅಂಬಾನಿ ಅವರು ರಿಲಯನ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಮನೋಜ್ ಮೋದಿ ತಂದೆ ಹರಿಜೀವನ್‌ದಾಸ್‌ ಅವರು ಕೂಡ ಮುಖೇಶ್‌ ತಂದೆ ಧೀರುಭಾಯ್‌ ಜೊತೆ ದುಡಿದವರು .ಈಗ ಮನೋಜ್‌ ಮುಖೇಶ್‌ರೊಂದಿಗೆ ಹಾಗೂ ಅವರ ಮಕ್ಕಳಾದ ಇಶಾ ಮತ್ತು ಆಕಾಶ್‌ರೊಂದಿಗೆ ದುಡಿಯುತ್ತಿದ್ದಾರೆ.

ರಿಲಯನ್ಸ್ ಸಾಮ್ರಾಜ್ಯದ ವಿಸ್ತರಣೆಯಲ್ಲಿ ಮನೋಜ್ ಮೋದಿ ಪ್ರಮುಖ ಪಾತ್ರ ವಹಿಸಿದ್ದರು ಕೂಡ ಪ್ರಚಾರ ಬಯಸಿದವರಲ್ಲ. ಸರಳ ಹಾಗೂ ಮೃದು ವ್ಯಕ್ತಿತ್ವದ ಅವರು ವ್ಯಾಪಾರ, ಒಪ್ಪಂದಗಳ ವಿಷಯದಲ್ಲಿ ಮಾತ್ರ ನಿಪುಣ. ರಿಲಯನ್ಸ್ ಸಂಸ್ಥೆಗೆ ಒಂದು ರೂಪಾಯಿ ಕೂಡ ನಷ್ಟವಾಗದ ರೀತಿಯಲ್ಲಿ ಅನೇಕ ಒಪ್ಪಂದಗಳನ್ನು ಅವರು ಕುದುರಿಸಿದ್ದಾರೆ.

ಮನೋಜ್‌ ಮೋದಿ ಪ್ರಸ್ತುತ ರಿಲಯನ್ಸ್ ರಿಟೇಲ್ ಹಾಗೂ ರಿಲಯನ್ಸ್ ಜಿಯೋ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖೇಶ್ ಅಂಬಾನಿ ಅವರು ಮನೋಜ್ ಮೋದಿಗೆ ಉಡುಗೊರೆಯಾಗಿ ನೀಡಿರುವ ಮನೆಯಲ್ಲಿನ ಪೀಠೋಪಕರಣಗಳನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. 

ಇಂದು ಮುಖೇಶ್ ಅಂಬಾನಿ ಜನ್ಮದಿನ; ರಿಲಯನ್ಸ್ ಮುಖ್ಯಸ್ಥರ ಕುರಿತ 10 ಆಸಕ್ತಿಕರ ಸಂಗತಿಗಳು ಇಲ್ಲಿವೆ

ಮನೋಜ್ ಮೋದಿ ಅವರ 22 ಅಂತಸ್ತಿನ ಮನೆಯ 19 ರಿಂದ 21ನೇ ಅಂತಸ್ತನ್ನು ಪೆಂಟ್ ಹೌಸ್ ಆಗಿ ಪರಿವರ್ತಿಸಲಾಗಿದೆ. ಇದರಲ್ಲಿ ಮನೋಜ್ ಮೋದಿ ಅವರ ಕುಟುಂಬ ಸದಸ್ಯರು ವಾಸಿಸಲಿದ್ದಾರೆ. ಇನ್ನು 16,17 ಹಾಗೂ 18ನೇ ಅಂತಸ್ತುಗಳನ್ನು ಮೋದಿ ಅವರ ಹಿರಿಯ ಪುತ್ರಿ ಖುಷ್ಬೂ ಪೊದ್ದರ್ ಹಾಗೂ ಆಕೆಯ ಕುಟುಂಬಕ್ಕೆ ಮೀಸಲಿಡಲಾಗಿದೆ. ಈ ಮನೆಯಲ್ಲಿ ಖುಷ್ಬೂ ಜೊತೆಗೆ ಅವರ ಪತಿ ಹಾಗೂ ಅತ್ತೆ, ಮಾವ ನೆಲೆಸಲಿದ್ದಾರೆ. ಇನ್ನು 11,12 ಹಾಗೂ 13ನೇ ಅಂತಸ್ತನ್ನು ದ್ವಿತೀಯ ಪುತ್ರಿ ಭಕ್ತಿ ಮೋದಿ ಅವರಿಗೆ ಮೀಸಲಿಡಲಾಗಿದೆ. 

click me!