
ನವದೆಹಲಿ(ಫೆ.05) ರಿಲಯನ್ಸ್ ಗ್ರೂಪ್ ಚೇರ್ಮೆನ್ ಮುಕೇಶ್ ಅಂಬಾನಿ ಉದ್ಯಮ ವಿಸ್ತರಿಸುತ್ತಿದ್ದಾರೆ. ಇದೀಗ ಬರೋಬ್ಬರಿ 50,000 ಕೋಟಿ ರೂಪಾಯಿ ಹೂಡಿಕೆ ಮೂಲಕ ಉದ್ಯಮ ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಅಂಬಾನಿ ಉದ್ಯಮ ವಿಸ್ತರಣೆಯಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಅಂಬಾನಿಯ ಹೊಸ ಉದ್ಯಮ ಪಶ್ಚಿಮ ಬಂಗಾಳದಲ್ಲಿ ಆರಂಭಗೊಳ್ಳುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಎರಡು ದಿನಗಳ ಸಮ್ಮೇಳನದಲ್ಲಿ ಅಂಬಾನಿ ಘೋಷಿಸಿದ್ದಾರೆ.
ಬಂಗಾಳದ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿ ಅವರು ಒಟ್ಟು ಐದು ಪ್ರಮುಖ ಘೋಷಣೆಗಳನ್ನು ಮಾಡಿದರು. ಜಿಯೋ ಬಗ್ಗೆ ಮಾತನಾಡಿದ ಅವರು, ಕೋಲ್ಕತ್ತಾದಲ್ಲಿನ ಡೇಟಾ ಕೇಂದ್ರವನ್ನು ಅತ್ಯಾಧುನಿಕ ಎಐ-ಸಿದ್ಧ ಡೇಟಾ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದೆ ಮತ್ತು ಇದು ಮುಂದಿನ ಒಂಬತ್ತು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಹೇಳಿದರು. ಈ ದತ್ತಾಂಶ ಕೇಂದ್ರವು ಬಂಗಾಳಕ್ಕೆ ಅರ್ಟಿಫೀಶಿಯಲ್ ಇಂಟಲಿಜೆನ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತಹ ತಂತ್ರಜ್ಞಾನಗಳನ್ನು ಒದಗಿಸುತ್ತದೆ ಎಂದಿದ್ದಾರೆ.
ಅಂಬಾನಿ ಜಿಯೋ ಘೋಷಣೆಗೆ ಹಲವರು ಶಾಕ್, ದಿನ 2ಜಿಬಿ ಡೇಟಾ, ಫ್ರಿ ಚಾನೆಲ್ ಸೇರಿ ಹಲವು ಆಫರ್
ಈ ಎರಡು ದಿನಗಳ ಸಮ್ಮೇಳನದಲ್ಲಿ 40 ದೇಶಗಳ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಈ ಪ್ರಮುಖ ವೇದಿಕೆಯಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಬಂಗಾಳಕ್ಕೆ ಹೂಡಿಕೆಯ ದೊಡ್ಡ ಸಿಹಿ ಸುದ್ದಿಯನ್ನು ನೀಡಿದ್ದಾರೆ. ವಿಶ್ವ ಬಂಗಾಳ ವಾಣಿಜ್ಯ ಸಮ್ಮೇಳನದಲ್ಲಿ ಮುಕೇಶ್ ಅಂಬಾನಿ ತಮ್ಮ ಕಂಪನಿ ರಿಲಯನ್ಸ್ ಬಂಗಾಳದಲ್ಲಿ ತಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸುವುದಾಗಿ ಘೋಷಿಸಿದರು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಬಂಗಾಳದಲ್ಲಿ ₹50,000 ಕೋಟಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದರು. ಈ ಬೃಹತ್ ಹೂಡಿಕೆಯು ರಾಜ್ಯದ ಆರ್ಥಿಕತೆಗೆ ಹೊಸ ಚೈತನ್ಯ ತರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮುಕೇಶ್ ಅಂಬಾನಿ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಂಗಾಳದ ಜನತೆಯನ್ನು ಮುಕ್ತಕಂಠದಿಂದ ಹೊಗಳಿದರು. ಅವರು ಕಾಳಿ ಮಾತೆ, ರವೀಂದ್ರನಾಥ ಟಾಗೋರ್, ಕಾಜಿ ನಜ್ರುಲ್ ಇಸ್ಲಾಂ, ಸುಭಾಷ್ ಚಂದ್ರ ಬೋಸ್, ಹೇಮಂತ್ ಮುಖರ್ಜಿ ಮತ್ತು ಸತ್ಯಜಿತ್ ರೇ ಅವರನ್ನು ಉಲ್ಲೇಖಿಸಿ, "ಬಂಗಾಳದ ಭೂಮಿಯಿಂದಲೇ ಹಲವು ಬಾರಿ ನವೋದಯದ ಕರೆ ಬಂದಿದೆ" ಎಂದು ಹೇಳಿದರು. "ವಿಶ್ವದ ಯಾವುದೇ ಶಕ್ತಿಯೂ ಬಂಗಾಳದ ಪುನರುತ್ಥಾನವನ್ನು ತಡೆಯಲು ಸಾಧ್ಯವಿಲ್ಲ" ಎಂದೂ ಹೇಳಿದರು.
ಈ ದಿನ ಈ ಉದ್ಯಮಿ ಬಂಗಾಳದಲ್ಲಿ ದ್ವಿಗುಣ ಹೂಡಿಕೆಯ ಘೋಷಣೆ ಮಾಡಿ ಜಿಯೋ ಮೊಬೈಲ್ ನೆಟ್‌ವರ್ಕ್, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಗಮನ ಕೇಂದ್ರೀಕರಿಸುವುದಾಗಿ ಹೇಳಿದರು. ಇಲ್ಲಿಯೇ ಎಐ ಡೇಟಾ ಸೆಂಟರ್ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಅದೇ ರೀತಿ ಕಾಳಿಘಾಟ್ ದೇವಸ್ಥಾನದ ನವೀಕರಣಕ್ಕೆ ಆರ್ಥಿಕ ನೆರವು ನೀಡುವುದಾಗಿಯೂ ಹೇಳಿದರು.
ಮುಕೇಶ್ ಅಂಬಾನಿ ಜಿಯೋ ತನ್ನ ಪಯಣವನ್ನು ಬಂಗಾಳದಿಂದಲೇ ಆರಂಭಿಸಿದೆ ಎಂದು ಒಪ್ಪಿಕೊಂಡರು. ಇದು ಈಗ ದೇಶದಲ್ಲೇ ನಂಬರ್ ಒನ್ ಎಂದು ಹೇಳಿದರು. ಬಂಗಾಳದಲ್ಲಿ 13000 ಜಿಯೋ ಸ್ಟೋರ್‌ಗಳಿವೆ. ಮುಂದಿನ ವರ್ಷ ಇನ್ನೂ 400 ಸ್ಟೋರ್‌ಗಳು ಬರುತ್ತವೆ ಎಂದು ರಿಲಯನ್ಸ್ ಮುಖ್ಯಸ್ಥರು ಭರವಸೆ ನೀಡಿದರು. ಇದರ ಜೊತೆಗೆ ಎಐ ರೆಡಿ ಡೇಟಾ ಸೆಂಟರ್ ಕೂಡ ಬರುತ್ತದೆ. ದಿಘಾದಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ನಿರ್ಮಾಣವಾಗುತ್ತದೆ.
ಉತ್ಪಾದನಾ ಉದ್ಯಮದಲ್ಲಿ ಬಂಗಾಳದಲ್ಲಿ ಉತ್ಸಾಹ ತರಲು ಸೌರಶಕ್ತಿ ಉತ್ಪಾದನೆಗೆ ಒತ್ತು ನೀಡುವ ಸಂದೇಶವನ್ನು ನೀಡಿದರು. ಸ್ವರ್ಣ ಬಂಗಾಳಕ್ಕಾಗಿ ಸೋಲಾರ್ ಬಂಗಾಳ ನಿರ್ಮಾಣ ರಿಲಯನ್ಸ್‌ನ ಗುರಿ ಎಂದು ಹೇಳಿದರು. ಈ ಸಮ್ಮೇಳನದ ಮೂಲಕ ಬಂಗಾಳ ಹೂಡಿಕೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಕೇಶ್ ಅಂಬಾನಿ ಅವರ ಈ ಘೋಷಣೆಯು ರಾಜ್ಯದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಒಟ್ಟಾರೆಯಾಗಿ ಬಂಗಾಳದ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗುತ್ತದೆ.
ಅಂಬಾನಿ ರಿಲಯನ್ಸ್ ಗ್ರೂಪ್‌ನಲ್ಲಿ ಈ ಸುಂದರಿಗೆ ಪ್ರಮುಖ ಹುದ್ದೆ, ಯಾರು ಈ ಗಾಯತ್ರಿ ವಾಸುದೇವ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.