11 ವರ್ಷದಲ್ಲಿ 0 ದಿಂದ 5 ಕೋಟಿಯ ಒಡೆಯ ಆಗಿದ್ದು ಹೇಗೆ? ಆಕ್ಸೆಂಚರ್ ಉದ್ಯೋಗಿ ಬಿಚ್ಚಿಟ್ಟ ರಹಸ್ಯ ವೈರಲ್

Published : Feb 05, 2025, 06:45 PM ISTUpdated : Feb 06, 2025, 10:51 AM IST
11 ವರ್ಷದಲ್ಲಿ 0 ದಿಂದ 5 ಕೋಟಿಯ ಒಡೆಯ ಆಗಿದ್ದು ಹೇಗೆ? ಆಕ್ಸೆಂಚರ್ ಉದ್ಯೋಗಿ ಬಿಚ್ಚಿಟ್ಟ ರಹಸ್ಯ ವೈರಲ್

ಸಾರಾಂಶ

ಆಕ್ಸೆಂಚರ್‌ನ ಉದ್ಯೋಗಿಯೊಬ್ಬರು ಕೇವಲ 11 ವರ್ಷಗಳಲ್ಲಿ 5 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೇಗೆ ಗಳಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹೆಚ್ಚಿನ ಸಂಬಳದ ವೃತ್ತಿ, ಶಿಸ್ತುಬದ್ಧ ಉಳಿತಾಯ ಮತ್ತು ಕಾರ್ಯತಂತ್ರದ ಹೂಡಿಕೆಗಳ ಮೂಲಕ ಇದು ಸಾಧ್ಯವಾಯಿತು.

ಶ್ರೀಮಂತರಾಗಬೇಕು ಎಂಬುದು ಬಹುತೇಕರ ಆಸೆ, ಅದಕ್ಕಾಗಿ ಏನೇನೋ ಸಾಹಸಗಳನ್ನು ಮಾಡುತ್ತಾರೆ. ಕಷ್ಟಪಟ್ಟು ದುಡಿಯುತ್ತಾರೆ. ಹೊಸ ಹೊಸ ಉದ್ಯಮಗಳನ್ನು ಆರಂಭಿಸುತ್ತಾರೆ. ಆದರೆ ಯಶಸ್ಸು ಕೆಲವರ ಕೈಯನ್ನು ಮಾತ್ರ ಹಿಡಿಯುತ್ತದೆ. ಹಾಗೂ ಲಕ್ಷ್ಮಿ ಕೆಲವರಿಗೆ ಮಾತ್ರ ಒಲಿಯುತ್ತಾಳೆ. ಹೀಗಿರುವಾಗ ಐಟಿ ಸಂಸ್ಥೆ ಆಕ್ಸೆಂಚರ್‌ನ ಉದ್ಯೋಗಿಯೊಬ್ಬರು ಕೇವಲ 11 ವರ್ಷದಲ್ಲಿ ಶೂನ್ಯದಿಂದ 5 ಕೋಟಿಯ ಒಡೆಯನಾಗಿದ್ದು ಹೇಗೆ ಎಂಬ ರಹಸ್ಯವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದು, ಇವರ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಜೊತೆಗೆ ಚರ್ಚೆಯ ವಿಚಾರವಾಗಿದೆ. 

ಗುರುಗ್ರಾಮ್ ಮೂಲದ ಆಕ್ಸೆಂಚರ್ ಉದ್ಯೋಗಿ ಗುರ್ಜೋತ್ ಅಹ್ಲುವಾಲಿಯಾ ಅವರು ತಮ್ಮ ಗಮನಾರ್ಹ ಆರ್ಥಿಕ ಪ್ರಗತಿಯ ಪ್ರಯಾಣವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೇವಲ 11 ವರ್ಷಗಳಲ್ಲಿ  ತಾನು  5 ಕೋಟಿ ರೂ.ನೆಟ್‌ವರ್ತನ್ನು ನಿರ್ಮಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.  2025 ರಲ್ಲಿ ಆರ್ಥಿಕವಾಗಿ ಸ್ವತಂತ್ರರಾಗುವ ಗುರಿಯನ್ನು ಹೊಂದಿದ್ದ ಅಹ್ಲುವಾಲಿಯಾ ಅವರು ತಮ್ಮ ಮೈಲಿಗಲ್ಲನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಅಲ್ಲದೇ 2024 ರ ಅವರ ಅತಿದೊಡ್ಡ ಸಾಧನೆ ಎಂದು ಹೇಳಿದ್ದಾರೆ.  ತಮ್ಮ ಹಣಕಾಸು ಟ್ರ್ಯಾಕಿಂಗ್ ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಪೋಸ್ಟ್ ಮಾಡಿದ್ದು, ಇದು ಕೇವಲ 2.7 ಲಕ್ಷ ರೂ. ಸಾಲ ಹೊಂದಿರುವ ಅವರು 5 ಕೋಟಿ ರೂ. ನಿವ್ವಳ ಮೌಲ್ಯ ಹೊಂದಿರುವುದನ್ನು ತೋರಿಸುತ್ತದೆ. 

ಅಹ್ಲುವಾಲಿಯಾ ಅವರು ತಮ್ಮ ಈ ಯಶಸ್ಸನ್ನು ತಾವೇ ತಮ್ಮ ಗುರಿಗಾಗಿ ಹಾಕಿಕೊಂಡ ತಮ್ಮ ಮೂರು ಅಂಶಗಳ ಮಾರ್ಗಸೂಚಿಗೆ ನೀಡಿದ್ದಾರೆ. ಹೆಚ್ಚು ಗಳಿಸುವ ವೃತ್ತಿಯತ್ತ ಪ್ರಗತಿ, ತಡವಾದ ಸಮಾಧಾನದ ಜೊತೆ ಶಿಸ್ತುಬದ್ಧವಾದ ಉಳಿತಾಯ, ಕಾರ್ಯತಂತ್ರದ ಷೇರು ಹೂಡಿಕೆಗಳು ಈ ಮೂರು ಕಾರ್ಯಗಳು ಅವರನ್ನು ಕೇವಲ 11 ವರ್ಷದಲ್ಲಿ 5 ಕೋಟಿಯ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಯನ್ನಾಗಿಸಿದೆಯಂತೆ.

ಹಾಗಂತ ಇವರ ಸಾಧನೆ ಸಾಮಾನ್ಯದ್ದೇನಲ್ಲ, ಏಕೆಂದರೆ ಅವರ ಪ್ರಯಾಣ ಓರ್ವ ತಿಂಗಳ ಸಂಬಳ ಪಡೆಯುವ ಮಧ್ಯಮವರ್ಗದ ವ್ಯಕ್ತಿಯಾಗಿ ಅರಂಭವಾಗಿತ್ತು. ತಿಂಗಳಾಂತ್ಯಕ್ಕೆ ಸಂಬಳ ಪಡೆಯುವಲ್ಲಿಂದ  5 ಕೋಟಿ ರೂ.ನ ನಿವ್ವಳ ಮೌಲ್ಯವಿರುವಂತಹ ವ್ಯಕ್ತಿಯಾಗುವುದಕ್ಕೆ ಎರಡು ಪ್ರಮುಖ ಅಂಶಗಳು ಕಾರಣ ಎಂದು ಅವರು ಹೇಳಿದ್ದಾರೆ. ಮೊದಲನೇಯದಾಗಿ ಅವರು ಯಾವುದೇ ಸಾಲವನ್ನು ಹೊಂದಿರಲಿಲ್ಲ, ಜೊತೆಗೆ ಅವರ ಪೋಷಕರು ಅವರ ಶಿಕ್ಷಣಕ್ಕೆ ಹಣಕಾಸು ನೆರವು ಒದಗಿಸಿದ್ದರು, ಜೊತೆಗೆ ಪೋಷಕರೊಂದಿಗೆ ವಾಸ ಮಾಡುತ್ತಿದ್ದಿದ್ದರಿಂದ ಅವರು ಬಾಡಿಗೆ ಪಾವತಿಸುವ ಅಗತ್ಯವಿರಲಿಲ್ಲ. ಆದರೆ ಇತ್ತೀಚಿನ ಮಾರುಕಟ್ಟೆ ಬದಲಾವಣೆಗಳು ಅವರ ನಿವ್ವಳ ಮೌಲ್ಯದಲ್ಲಿ 8 ರಿಂದ 10% ಕುಸಿತಕ್ಕೆ ಕಾರಣವಾಗಿವೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಭಾರತೀಯ ಷೇರು ಮಾರುಕಟ್ಟೆ ಮಾನದಂಡ ಸೂಚ್ಯಂಕ ನಿಫ್ಟಿ ಕಳೆದ ವರ್ಷದ ಗರಿಷ್ಠ ಮಟ್ಟದ 10% ಕ್ಕಿಂತ ಹೆಚ್ಚು ಕುಸಿದಿದೆ. ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಷೇರುಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳಾಗಿವೆ. 

ಇವರ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ನೆಟ್ಟಿಗರೊಬ್ಬರು ಅವರ ಹೊಣೆಗಾರಿಕೆಗಳ (liabilities) ಬಗ್ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗುರ್ಜೋತ್ ಅಹ್ಲುವಾಲಿಯಾ ಆ ಸಮಯದಲ್ಲಿ ತಾನು ದುಬೈಗೆ ಪ್ರಯಾಣಿಸುತ್ತಿದ್ದರೂ ಕೂಡ ತಮ್ಮ ಹೊಣೆಗಾರಿಕೆಗಳನ್ನು 1 ಲಕ್ಷ ರೂ.ಗಿಂತ ಕಡಿಮೆ ಇಡಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ.  ಆನ್‌ಲೈನ್‌ನಲ್ಲಿ ಅವರು ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ ಅವರು ತಮ್ಮ ಸ್ವಂತ ಅನುಭವದ ಬಗ್ಗೆ ಹೇಳಿದ್ದು,ಮಾರುಕಟ್ಟೆಯಲ್ಲಿ ಸಮಯ ನಿಗದಿ ಪಡಿಸುವುದು ಮಾರುಕಟ್ಟೆಯ ಸಮಯ ನಿಗದಿ' ಗಿಂತ ಹೆಚ್ಚು ಮುಖ್ಯ(time in the market" matters more than "timing the market,)  ಎಂಬ ಕಾಲಾತೀತ ಹೂಡಿಕೆ ತತ್ವದ ಬಗ್ಗೆ ಹೇಳಿದ್ದಾರೆ. ಇವರ ಈ ಯಶಸ್ಸಿನ ಪಯಣದ ಬಗ್ಗೆ ಅನೇಕರು ಶುಭ ಹಾರೈಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ
ತುರ್ತಾಗಿ ನಿಮ್ಮ ಸಹಾಯಕ್ಕೆ ಬರಬಹುದಾದ ಸರ್ಕಾರಿ ಹೆಲ್ಪ್‌ಲೈನ್‌ ನಂಬರ್‌ಗಳು!