ಎಂಆರ್‌ಪಿಎಲ್ 4ನೇ ತ್ರೈಮಾಸಿಕದಲ್ಲಿ 119 ಕೋಟಿ ರು. ನಿವ್ವಳ ಲಾಭಾಂಶ- ಕಳೆದ ವರ್ಷ 85 ಚಿಲ್ಲರೆ ಮಾರಾಟದ ಸ್ಟೇಷನ್‌ ಆರಂಭ

Published : Apr 27, 2026, 08:49 AM IST
MRPL

ಸಾರಾಂಶ

ಕೇಂದ್ರ ಸರ್ಕಾರಿ ಸ್ವಾಮ್ಯದ ಎಂಆರ್‌ಪಿಎಲ್ ಕಂಪನಿಯು ತನ್ನ 4ನೇ ತ್ರೈಮಾಸಿಕದಲ್ಲಿ ₹119 ಕೋಟಿ ನಿವ್ವಳ ಲಾಭವನ್ನು ಪ್ರಕಟಿಸಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ, ನಿವ್ವಳ ಆದಾಯವು ₹1,931 ಕೋಟಿಗೆ ಏರಿಕೆಯಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ 85 ಹೊಸ ಚಿಲ್ಲರೆ ಮಾರಾಟ ಕೇಂದ್ರಗಳನ್ನು ಆರಂಭಿಸಲಾಗಿದೆ.

ಮಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಎಂಆ‌ರ್‌ಪಿಎಲ್ ಕಂಪನಿಯು ನಾಲ್ಕನೇ ತ್ರೈಮಾಸಿಕದಲ್ಲಿ ₹119 ಕೋಟಿ ನಿವ್ವಳ ಲಾಭ ಗಳಿಸಿದೆ. ಶುಕ್ರವಾರ ನಡೆದ ಕಂಪನಿಯ 274ನೇ ಸಭೆಯಲ್ಲಿ ನಾಲ್ಕನೇ ತ್ರೈಮಾಸಿಕ ಹಾಗೂ 2025-26 ನೇ ಸಾಲಿನ ವಾರ್ಷಿಕ ಫಲಿತಾಂಶಗಳನ್ನು ಅನುಮೋದಿಸಲಾಯಿತು.

₹1,235 ಕೋಟಿ ಏರಿಕೆ

ಹಿಂದಿನ ಅವಧಿಯಲ್ಲಿ ₹363 ಕೋಟಿ ಗಳಿಸಿತ್ತು. ಒಟ್ಟು ಲಾಭವು ಹಿಂದಿನ ಸಾಲಿನ ₹584 ಕೋಟಿಗೆ ಹೋಲಿಸಿದರೆ ಈ ಬಾರಿ ₹1,235 ಕೋಟಿ ಏರಿಕೆಯಾಗಿದೆ. ನಿರ್ವಹಣಾ ಆದಾಯ ₹27,602 ಕೋಟಿ ಇದ್ದದ್ದು ₹28,493 ಕೋಟಿಗೆ ಏರಿಕೆಯಾಗಿದೆ.

ವಾರ್ಷಿಕ ಲೆಕ್ಕಾಚಾರದಲ್ಲಿ ₹1,09,280 ಕೋಟಿಯಿಂದ ಆದಾಯ ₹1,05,155 ಕೋಟಿಗೆ ಇಳಿಕೆ ಕಂಡಿದೆ. ಒಟ್ಟು ನಿವ್ವಳ ಆದಾಯ ಹಿಂದಿನ ಸಾಲಿನಲ್ಲಿ ₹51 ಕೋಟಿ ಇದ್ದರೆ ಈ ಬಾರಿ ₹1,931 ಕೋಟಿಗೆ ಏರಿಕೆಯಾಗಿದೆ. ಒಟ್ಟು ಲಾಭ ಹಿಂದಿನ ಸಾಲಿನ ₹113 ಕೋಟಿಯಿಂದ ₹4,022 ಕೋಟಿಗೆ ಏರಿಕೆಯಾಗಿದೆ.

85 ಹೊಸ ಚಿಲ್ಲರೆ ಮಾರಾಟದ ಸ್ಟೇಷನ್‌

ಕಂಪನಿಯ ದೇವಂಗೊಂತಿ ಮಾರ್ಕೆಟಿಂಗ್ ಟರ್ಮಿನಲ್ ಪೂರ್ಣವಾಗಿ ಕಾರ್ಯಾಚರಣೆ ಆರಂಭಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು ಒಟ್ಟು 85 ಹೊಸ ಚಿಲ್ಲರೆ ಮಾರಾಟದ ಸ್ಟೇಷನ್‌ಗಳನ್ನು ಆರಂಭಿಸಿರುವುದಾಗಿ ಪ್ರಕಟಣೆ ತಿಳಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Liquor Price Hike: ಕರ್ನಾಟಕದಲ್ಲಿ ಮೇ 1 ರಿಂದ ಮದ್ಯದ ದರ ಏರಿಕೆ: ಯಾವ ಬ್ರ್ಯಾಂಡ್‌ಗೆ ಎಷ್ಟು?
ಮಗಳು ಜನಿಸಿದಾಗ ಕೇವಲ 2 ದಿನ ರಜೆ ಪಡೆದು ತಪ್ಪು ಮಾಡಿದೆ, ಕಣ್ಣೀರಿಟ್ಟ ಕಂಪನಿ ಸಿಇಒ