
ಬೆಂಗಳೂರು (ಏ.24) ನಿಖಿಲ್ ಕಾಮತ್ ಹಾಗೂ ನಿತಿನ್ ಕಾಮತ್ ಸಹೋದರರು ಆರಂಭಿಸಿದ ಝಿರೋಧಾ ಭಾರತದ ಅತೀ ದೊಡ್ಡ ಬ್ರೊಕರೇಜ್ ಕಂಪನಿಯಾಗಿ ಬೆಳೆದು ನಿಂತಿದೆ. ಷೇರುಮಾರುಕಟ್ಟೆ ವಹಿವಾಟವನ್ನು ಜನಸಾಮಾನ್ಯರ ಕೈಬೆರಳಿಗೆ ತಂದು ಸುಲಭ ಮಾಡಿದ ಕೀರ್ತಿ ಕಾಮತ್ ಬ್ರದರ್ಸ್‌ಗೆ ಸಲ್ಲಲಿದೆ. ಇದೀಗ ಕಾಮತ್ ಬ್ರದರ್ಸ್ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಝಿರೋಧ ಯಶಸ್ಸಿನ ಬೆನ್ನಲ್ಲೇ ಕಂಟೆಂಟ್ ಕ್ರಿಯೇಟರ್ಸ್‌ಗೆ ಆರಂಭಿಸಿದ ಇನ್‌ಕ್ಯೂಬೇಟರ್ ಪ್ರೊಗ್ರಾಂ ಝಿರೋ (Zero1 ) ಸ್ಥಗಿತಗೊಳಿಸಿದೆ. ಕಂಟೆಂಟ್ ಕ್ರಿಯೇಟರ್ ಲೋಕದಲ್ಲಿನ ಸಾಮರ್ಥ್ಯ, ಅವಕಾಶ ಹಾಗೂ ಉದ್ಯಮವನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಲಾಟ್‌ಫಾರ್ಮ್ ಆರಂಭಿಸಲಾಗಿತ್ತು. ಇದೀಗ ಈ ಝಿರೋ1 ಸ್ಥಗಿತಗೊಂಡಿದೆ.
ಝೀರೋ 1 ಅರ್ಹ ಹಾಗೂ ಕೌಶಲ್ಯಭರಿತ ಕಂಟೆಂಟ್ ಕ್ರಿಯೇಟರ್ಸ್‌ಗೆ ಹಣಕಾಸು ನೆರವು, ತಾಂತ್ರಿಕ ನೆರವು, ತರಬೇತಿ ನೀಡಿ ಉತ್ತಮ ಕಂಟೆಂಡ್ ಮಾಡಲು ಪ್ರೇರೇಪಿಸುತ್ತದೆ. ಪ್ರಮುಖವಾಗಿ ಹಣಕಾಸು, ಹೂಡಿಕೆ ಕ್ಷೇತ್ರಗಳ ನಿಖರ ಹಾಗೂ ಸ್ಪಷ್ಟ ಮಾಹಿತಿಯನ್ನು ಜನರಿಗೆ ತಿಳಿಸುತ್ತಾ ಮಾಹಿತಿ ಹಾಗೂ ಶಿಕ್ಷಣ ನೀಡುವ ಉದ್ದೇಶದಿಂದ ಈ ಪ್ಲಾಟ್‌ಫಾರ್ಮ್ ಆರಂಭಿಸಲಾಗಿತ್ತು. ಕಂಟೆಂಟ್ ಕ್ರಿಯೇಟರ್ಸ್ ಹಣಕಾಸು ಕುರಿತು ಉತ್ತಮ ವಿಡಿಯೋಗಳನ್ನು ಕ್ರಿಯೇಟ್ ಮಾಡುತ್ತಾ ಜನರಿಗೆ ಶಿಕ್ಷಣ ನೀಡುವ ಮೂಲಕ ಕಂಪನಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮಹತ್ ಯೋಜನೆ ಆರಂಭಿಸಲಾಗಿತ್ತು.
ಝೀರೋ1 ಆರಂಭಿಸಿದ ಕೆಲವೇ ಅವಧಿಯಲ್ಲಿ ಕಂಪನಿ ಸ್ಥಗಿತಗೊಳ್ಳುತ್ತಿದೆ. ಕ್ರಿಯೇಟರ್ಸ್ ಲೋಕದಲ್ಲಿ ಅಧಿಪತ್ಯ ಸಾಧಿಸಲು ಮುಂದಾಗಿದ್ದ ಝಿರೋ1 ತನ್ನ ಎಲ್ಲಾ ಪ್ಲಾನ್ ಬದಿಗಿಟ್ಟು ಕಂಪನಿಗೆ ಬೀಗ ಜಡಿದಿದೆ. ಪ್ರಮುಖವಾಗಿ ಕ್ರಿಯೇಟರ್ಸ್ ವಿಶೇಷ ಶೈಲಿ, ಭಾಷೆ, ವಿಡಿಯೋ ಪ್ರೆಸೆಂಟೇಶನ್, ಕಾರ್ಪೋರೇಟ್ ಚೌಕಟ್ಟಿನಲ್ಲಿ ಸಮಸ್ಯೆ ಎದುರಿಸಿದೆ. ಪ್ರಮುಖವಾಗಿ ಕಾರ್ಪೋರೇಟ್ ಶೈಲಿಯಲ್ಲಿ ವಿಡಿಯೋ ಕ್ರಿಯೇಟರ್ ಮಾಡಲು ಬಹುತೇಕ ಕಂಟೆಂಟ್ ಕ್ರಿಯೇಟರ್ಸ್ ನಿರಾಕರಿಸುತ್ತಿದ್ದರು. ಆದಾಯದ ವಿಚಾರದಲ್ಲಿ ಗೊಂದಲ ಮಾತ್ರವಲ್ಲ ಕ್ರಿಯೇಟರ್ಸ್ ಹಾಗೂ ಕಂಪನಿಗೆ ಲಾಭದಾಯಕವಾಗಿರಲಿಲ್ಲ.
ಪ್ರಮುಖಾಗಿ ಕ್ರಿಯೇಟರ್ಸ್ ತಮ್ಮ ಆದಾಯಕ್ಕಾಗಿ ಕೆಲ ಬ್ರಾಂಡ್ ಪ್ರಮೋಶನ್ ಮಾಡುತ್ತಾರೆ. ಇದೇ ಕ್ರಿಯೇಟರ್ಸ್ ಹಣಕಾಸು ಹಾಗೂ ಹೂಡಿಕೆಗಳ ಕುರಿತು ಶೈಕ್ಷಣಿಕ ವಿಡಿಯೋ ಮಾಡಿದಾಗ ವೀಕ್ಷಕರಲ್ಲಿ ನಿಷ್ಪಕ್ಷಪಾತ ಧೋರಣೆ ಗೊಂದಲ ಎದುರಾಗುತ್ತದೆ.
ದೈತ್ಯ ಝಿರೋಧ ಕಂಪನಿ ತನ್ನ ಕಂಟೆಂಟ್ ಕ್ರಿಯೇಟರ್ಸ್ ಪ್ಲಾಟ್‌ಫಾರ್ಮ್ ಮುಚ್ಚಿದೆ. ಇದು ಇತರ ಸ್ಟಾರ್ಟ್ ಅಪ್ ಸೇರಿದಂತೆ ಕೆಲ ಕಾರ್ಪೋರೇಟ್ ಕಂಪನಿಗಳಿಗೂ ಎಚ್ಚರಿಕೆಯ ಕರೆಗಂಟೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.