ದುಡ್ಡು ಮಾಡೋದು ಹೇಗೆ? : 10 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ 50 ಸಾವಿರ ಗಳಿಸೋ ಬ್ಯುಸಿನೆಸ್ ಇದು

Published : Jul 21, 2023, 02:58 PM IST
ದುಡ್ಡು ಮಾಡೋದು ಹೇಗೆ? : 10 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ 50 ಸಾವಿರ ಗಳಿಸೋ ಬ್ಯುಸಿನೆಸ್ ಇದು

ಸಾರಾಂಶ

ವಿದ್ಯೆಗೆ ತಕ್ಕ ಉದ್ಯೋಗ ಸಿಗ್ತಿಲ್ಲ ಎಂದು ಕೊರಗುವ ಬದಲು ನಿಮ್ಮದೇ ವ್ಯವಹಾರ ಶುರು ಮಾಡಿ. ನಮ್ಮ ಸುತ್ತಮುತ್ತ ವ್ಯಾಪಾರಕ್ಕೆ ಸಾಕಷ್ಟು ಅವಕಾಶವಿದೆ. ಸರಿಯಾದ ಕಡೆ ಹಣ ಹೂಡಿದರೆ ಲಾಭ ನಿಶ್ಚಿತವಾಗಿ ಬರುತ್ತೆ.  

ಕಡಿಮೆ ಬಂಡವಾಳ ಹೂಡಿಕೆ ಮಾಡಿ ಹೆಚ್ಚಿಗೆ ಲಾಭ ಗಳಿಸಬೇಕು ಅನ್ನೋದು ಪ್ರತಿಯೊಬ್ಬ ವ್ಯಾಪಾರಸ್ಥರ ಆಲೋಚನೆ. ನಮ್ಮ ದೇಶದಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಗಳಿಸಬಹುದಾದ ಅನೇಕ ವ್ಯವಹಾರಗಳಿವೆ. ಕಂಪನಿ ಕೆಲಸ ಇಷ್ಟವಿಲ್ಲ ಎನ್ನುವವರು ಸುಲಭವಾಗಿ ಈ ವ್ಯಾಪಾರವನ್ನು ಶುರು ಮಾಡಿ, ಹೆಚ್ಚೆಚ್ಚು ಸಂಪಾದನೆ ಮಾಡ್ಬಹುದು. 

ಈಗ ನಾವು ಹೇಳಲು ಹೊರಟಿರುವ ವ್ಯಾಪಾರ (Business) ವನ್ನು ನೀವು ಮನೆಯ ಒಂದು ಕೋಣೆಯಲ್ಲಿ ಶುರು ಮಾಡ್ಬಹುದು. ಅದು ಮತ್ತ್ಯಾವುದೂ ಅಲ್ಲ ಬಿಂದಿ ಬ್ಯುಸಿನೆಸ್. ಒಂದೇ ಒಂದು ಸಣ್ಣ ಮಶಿನ್ ಇಟ್ಕೊಂಡು ನೀವು ಬಿಂದಿ ಬ್ಯುಸಿನೆಸ್ ಶುರು ಮಾಡ್ಬಹುದು. ಇದಕ್ಕಾಗಿ ನೀವು ಆಫೀಸ್, ಪ್ಯಾಕ್ಟರಿ ತೆರೆಯುವ ಅಗತ್ಯವಿರೋದಿಲ್ಲ. 

ಪಿಜ್ಜಾ ಪ್ರೇಮಿಗಳಿಗೆ GOOD NEWS..! 49 ರೂ.ಗೆ ಸಿಗ್ತಿದೆ ಪಿಜ್ಜಾ

ಬಿಂದಿ (Bindi) ಶೃಂಗಾರದ ವಸ್ತು. ಪ್ರತಿಯೊಬ್ಬ ಮಹಿಳೆ ಬಿಂದಿಯನ್ನು ಇಡಲು ಇಷ್ಟಪಡ್ತಾಳೆ. ಒಬ್ಬ ಮಹಿಳೆ ಬಳಿ ಒಂದೇ ಬಿಂದಿ ಪ್ಯಾಕೆಟ್ (Packet ) ಇರಲು ಸಾಧ್ಯವೇ ಇಲ್ಲ. ಆಯಾ ಡ್ರೆಸ್ ಗೆ ತಕ್ಕಂತೆ ಬಿಂದಿಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರು ಅನೇಕ ಬಿಂದಿ ಪ್ಯಾಕೆಟ್ ಖರೀದಿ ಮಾಡ್ತಾರೆ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ಬಿಂದಿಗಳಿವೆ. ಎಂದೂ ಬೇಡಿಕೆ ಕಡಿಮೆಯಾಗದ ವ್ಯವಹಾರದಲ್ಲಿ ಬಿಂದಿ ವ್ಯವಹಾರ ಕೂಡ ಒಂದು.  

ಬಿಂದಿ ವ್ಯಾಪಾರವನ್ನು ನೀವು ನಗರ ಪ್ರದೇಶದಲ್ಲೇ ಶುರು ಮಾಡ್ಬೇಕಾಗಿಲ್ಲ. ಸಣ್ಣ ಪಟ್ಟಣ, ಹಳ್ಳಿಗಳಲ್ಲೂ ಬಿಂದಿಗೆ ಹೆಚ್ಚು ಬೇಡಿಕೆಯಿದೆ. ಬಿಂದಿ ಮಾರುಕಟ್ಟೆ ಈಗಿನ ದಿನಗಳಲ್ಲಿ ಸಾಕಷ್ಟು ವಿಸ್ತಾರಗೊಂಡಿದೆ. ಮಾಹಿತಿಗಳ ಪ್ರಕಾರ, ಒಂದು ವರ್ಷದಲ್ಲಿ ಒಬ್ಬ ಮಹಿಳೆ 12ರಿಂದ 14 ಪ್ಯಾಕೆಟ್ ಬಿಂದಿಯನ್ನು ಬಳಸ್ತಾಳೆ. 

ಬಿಂದಿ ವ್ಯಾಪಾರಕ್ಕೆ ಎಷ್ಟು ಬಂಡವಾಳ ಬೇಕು? : ನೀವು ಈ ಬಿಂದಿ ವ್ಯಾಪಾರವನ್ನು ಕೇವಲ 10 ಸಾವಿರ ಹೂಡಿಕೆ ಮಾಡಿ ಶುರು ಮಾಡಬಹುದು. ಇದಕ್ಕೆ ಕಚ್ಚಾ ವಸ್ತುವಿನ ಅವಶ್ಯಕತೆ ಇರುತ್ತದೆ. ವೆಲ್ವೆಟ್ ಫ್ಯಾಬ್ರಿಕ್, ಅಂಟು, ಕ್ರಿಸ್ಟಲ್, ಮಣಿ ಸೇರಿದಂತೆ ಬಿಂದಿ ತಯಾರಿಸಲು ಅಗತ್ಯವಿರುವ ವಸ್ತುಗಳು ಬೇಕಾಗುತ್ತದೆ. ಈ ಎಲ್ಲ ವಸ್ತುಗಳನ್ನು ನೀವು ಮಾರುಕಟ್ಟೆಯಲ್ಲಿ ಆರಾಮವಾಗಿ ಖರೀದಿ ಮಾಡ್ಬಹುದು. ಸಣ್ಣ ಪ್ರಮಾಣದ ವ್ಯಾಪಾರವನ್ನು ಪ್ರಾರಂಭಿಸಲು ಯಾವುದೇ ಪರವಾನಗಿ ಮತ್ತು ನೋಂದಣಿ ಅಗತ್ಯವಿಲ್ಲ. ನೀವು ಬಯಸಿದ್ರೆ ನೀವು ಹೆಸರನ್ನು ನೋಂದಣಿ ಮಾಡಬಹುದು. ಬಿಲ್ಲಿಂಗ್ ಗಾಗಿ ನೀವು ಜಿಎಸ್ಟಿ ನೋಂದಣಿ ಕೂಡ ಮಾಡಬಹುದು. 

Personal Finance :20 ರೂ. ಹೂಡಿಕೆ ಮಾಡಿ ಕೋಟ್ಯಾಧಿಪತಿಯಾಗಿ

ಬಿಂದಿ ತಯಾರಿಸೋದು ಹೇಗೆ? : ನೀವು ಆರಂಭದಲ್ಲಿ ಬಿಂದಿ ಪ್ರಿಂಟಿಂಗ್ ಮಶಿನ್, ಬಿಂದಿ ಕಟ್ಟಿಂಗ್ ಮಶಿನ್ ಹಾಗೂ ಬಿಂದಿ ಗಮ್ಮಿಂಗ್ ಮಶಿನ್ ಖರೀದಿ ಮಾಡ್ಬೇಕಾಗುತ್ತದೆ. ಇದಲ್ಲದೆ ಇಲೆಕ್ಟ್ರಿಕ್ ಮೋಟರ್ ಹಾಗೂ ಹ್ಯಾಂಡ್ ಟೂಲ್ ಅಗತ್ಯವಿರುತ್ತದೆ. ನೀವು ಆರಂಭದಲ್ಲಿ ಹೆಚ್ಚು ಬಂಡವಾಳ ಹಾಕಲು ಸಿದ್ಧವಿಲ್ಲ ಎಂದ್ರೆ ಮ್ಯಾನ್ಯುವಲ್ ಮಶಿನ್ ಬಳಕೆ ಮಾಡಿ. ವ್ಯವಹಾರದಲ್ಲಿ ವಿಸ್ತರಣೆಯಾಗ್ತಿದ್ದಂತೆ ನೀವು ಉಳಿದ ಮಶಿನ್ ಖರೀದಿ ಮಾಡಬಹುದು. 

ಬಿಂದಿ ವ್ಯವಹಾರದಿಂದ ಲಾಭ ಎಷ್ಟು? : ಬಿಂದಿ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಿದೆ. ಶೇಕಡಾ 50ರಷ್ಟು ಲಾಭವನ್ನು ನೀವು ಆರಾಮವಾಗಿ ಪಡೆಯಬಹುದು. ನಿಮ್ಮ ಉತ್ಪನ್ನವನ್ನು ನೀವು ಮಾರಾಟ ಮಾಡಲು ಯಶಸ್ವಿಯಾದ್ರೆ ತಿಂಗಳಿಗೆ 50 ಸಾವಿರ ರೂಪಾಯಿಯನ್ನು ಆರಾಮವಾಗಿ ಗಳಿಸಬಹುದು. ಈ ವ್ಯವಹಾರದಲ್ಲಿ ಮಾರ್ಕೆಟಿಂಗ್ ಬಹಳ ಮುಖ್ಯ. ನೀವು ನಗರ ಪ್ರದೇಶಗಳು ಸೇರಿದಂತೆ ಪಟ್ಟಣಗಳಲ್ಲಿರುವ ಕಾಸ್ಮೆಟಿಕ್ ಅಂಗಡಿಗಳಿಗೆ ನೀವು ತಯಾರಿಸಿದ ಬಿಂದಿಯನ್ನು ಮಾರಾಟ ಮಾಡಬೇಕು. ಜನರಲ್ ಸ್ಟೋರ್ಸ್, ಮಾಲ್, ಸೂಪರ್ ಪಾರ್ಕೆಟ್, ದೇವಸ್ಥಾನದ ಆಸುಪಾಸಿರುವ ಸಣ್ಣ ಸಣ್ಣ ಅಂಗಡಿಗಳಿಗೂ ನೀವು ಬಿಂದಿಯನ್ನು ಸಪ್ಲೈ ಮಾಡ್ಬೇಕು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!