Brand Finance List: ಜಗತ್ತಿನ ನಂ.1 ಸಿಇಒ ಸತ್ಯ ನಾದೆಳ್ಲಾ; ಎನ್. ಚಂದ್ರಶೇಖರ್, ಆನಂದ್ ಮಹೀಂದ್ರಾ, ಮುಖೇಶ್ ಅಂಬಾನಿಗೂ ಸ್ಥಾನ

By Suvarna News  |  First Published Jan 27, 2022, 10:00 PM IST

*ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ 5ನೇ ಸ್ಥಾನ
*ಅಡೋಬ್  ಸಿಇಒ ಶಾಂತನು ನಾರಾಯಣ್ 6ನೇ ಸ್ಥಾನ
*ಟಾಟಾ ಕಂಪನಿಯ ಎನ್. ಚಂದ್ರಶೇಖರ್ 25ನೇ ಸ್ಥಾನ
 


ನ್ಯೂಯಾರ್ಕ್ (ಜ.27): ಬ್ರ್ಯಾಂಡ್ ಫೈನಾನ್ಸ್  (Brand Finance) ಬ್ರ್ಯಾಂಡ್ ಗಾರ್ಡಿಯನ್ಶಿಪ್ (Brand Guardianship) ಸೂಚ್ಯಂಕದಲ್ಲಿ (Index) ಮೈಕ್ರೋಸಾಫ್ಟ್ ಸಂಸ್ಥೆ ಮುಖ್ಯಕಾರ್ಯನಿರ್ವಹಕಾಧಿಕಾರಿ (CEO) ಸತ್ಯ ನಾದೆಳ್ಲಾ (Satya Nadella) ವಿಶ್ವದ ನಂಬರ್ 1 ಸಿಇಒ (CEO) ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. 

ಸತ್ಯ ನಾದೆಳ್ಲಾ ಮೈಕ್ರೋಸಾಫ್ಟ್ (Microsoft)ಕಂಪನಿಯ ಅಭಿವೃದ್ಧಿಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ. ಕಂಪನಿಯ ಟೀಂ ವರ್ಕ್, ಆವಿಷ್ಕಾರ, ಪ್ರಗತಿಯ ಕುರಿತ ಮುಂದಾಲೋಚನೆ ಮುಂತಾದ ವಿಭಾಗಗಳಲ್ಲಿ ಬದಲಾವಣೆ ತರೋ ಮೂಲಕ ಮೈಕ್ರೋಸಾಫ್ಟ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನಾದೆಳ್ಲಾ ಅವರೊಂದಿಗೆ ಭಾರತೀಯ ಮೂಲದ ಇನ್ನೂ ಕೆಲವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಬ್ರ್ಯಾಂಡ್ ಗಾರ್ಡಿಯನ್ಶಿಪ್ ಸೂಚ್ಯಂಕದಲ್ಲಿ 5ನೇ ಸ್ಥಾನ ಗಳಿಸಿದ್ದಾರೆ. ಅಡೋಬ್  ಸಿಇಒ ಶಾಂತನು ನಾರಾಯಣ್ (Shantanu Narayan) 6ನೇ ಸ್ಥಾನದಲ್ಲಿದ್ದರೆ, ಡೆಲೊಟ್ಟಾ ಸಿಇಒ  ಪುನೀತ್ ರೆಂಜನ್ 14ನೇ ಸ್ಥಾನದಲ್ಲಿದ್ದಾರೆ.

Latest Videos

ಏರ್‌ ಇಂಡಿಯಾ ಇಂದು ಟಾಟಾಗೆ ಅಧಿಕೃತ ಹಸ್ತಾಂತರ

ಭಾರತೀಯ ಕಂಪನಿಗಳಿಗೂ ಸ್ಥಾನ
ಭಾರತೀಯ ಕಂಪನಿಗಳ ಮುಖ್ಯಸ್ಥರು ಕೂಡ ಬ್ರ್ಯಾಂಡ್ ಗಾರ್ಡಿಯನ್ಶಿಪ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಾಟಾ ಕಂಪನಿಯ ಎನ್. ಚಂದ್ರಶೇಖರ್ (N. Chandrasekhar) 25ನೇ ಸ್ಥಾನದಲ್ಲಿದ್ದಾರೆ. ಮಹೀಂದ್ರಾ & ಮಹೀಂದ್ರಾದ ಆನಂದ್ ಮಹೀಂದ್ರಾ (Anand Mahindra) 41 ಹಾಗೂ ರಿಲಾಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ (Mukesh Ambani) 42ನೇ ಸ್ಥಾನಗಳಲ್ಲಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಿನೇಶ್ ಕುಮಾರ್ ಖಾರ (Dinesh Kumar Khara) 46ನೇ ಸ್ಥಾನದಲ್ಲಿದ್ದಾರೆ. 

undefined

ಬ್ರ್ಯಾಂಡ್ ಫೈನಾನ್ಸ್ ಟಾಪ್ 10 ಸ್ಥಾನಗಳಲ್ಲಿ ಟೆಕ್ ಹಾಗೂ ಮಾಧ್ಯಮ  ವಲಯಗಳಿಗೆ ಸಂಬಂಧಿಸಿದ ಸಿಇಒಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ.ಬ್ರ್ಯಾಂಡ್ ಗಾರ್ಡಿಯನ್ಶಿಪ್ ಪಟ್ಟಿಯಲ್ಲಿ ಟಿಮ್ ಕುಕ್ (Tim Cook)  ದ್ವಿತೀಯ ಸ್ಥಾನದಲ್ಲಿದ್ದಾರೆ. ಆಪಲ್ (Apple) ಕಂಪನಿ 3 ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ಮುಟ್ಟಿರೋದು ಕುಕ್ ಎರಡನೇ ಸ್ಥಾನಕ್ಕೇರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಟೆನ್ಸೆಂಟ್ಸ್ ಹುಟೆಂಗ್ ಮಾ 4ನೇ ಸ್ಥಾನ, ಪಿಚೈ 5ನೇ ಸ್ಥಾನ ಹಾಗೂ ನೆಟ್ ಫ್ಲಿಕ್ಸ್ ನ ರೀಡ್ ಹಾಸ್ಟಿಂಗ್ಸ್ 7ನೇ ಸ್ಥಾನದಲ್ಲಿದ್ದಾರೆ. 

ಟಾಪ್ 10ರಲ್ಲಿ ಮಹಿಳಾ ಸಿಇಒ
ಈ ಬಾರಿ ಬ್ರ್ಯಾಂಡ್ ಗಾರ್ಡಿಯನ್ಶಿಪ್ ಪಟ್ಟಿಯ ಟಾಪ್ 10ರಲ್ಲಿ ಮಹಿಳಾ ಸಿಇಒ ಒಬ್ಬರ ಹೆಸರಿದೆ. ಅವರೇ ಎಎಂಡಿ ಸಿಇಒ ಲೀಸಾ ಸು (Lisa Su) ಇವರು 10ನೇ ಸ್ಥಾನದಲ್ಲಿದ್ದು, ಮಹಿಳಾ ಸಿಇಒಗಳಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಎಎಂಡಿ ಕಂಪನಿ ಇತ್ತೀಚಿನ ವರ್ಷಗಳಲ್ಲಿ ತನ್ನ ಬ್ರ್ಯಾಂಡ್ ವ್ಯಾಲ್ಯೂ ಅನ್ನು ಶೇ.122ರಷ್ಟು ಹೆಚ್ಚಿಸಿಕೊಂಡಿದೆ. 

Bank Holidays: ಫೆಬ್ರವರಿಯಲ್ಲಿ 12 ದಿನ ಬ್ಯಾಂಕ್ ಕ್ಲೋಸ್; ಹೀಗಿದೆ ನೋಡಿ ರಜಾಪಟ್ಟಿ

ಅಮೆರಿಕ ಹಾಗೂ ಚೀನಾದ್ದೇ ಸಿಂಹಪಾಲು
ಬ್ರ್ಯಾಂಡ್ ಗಾರ್ಡಿಯನ್ಶಿಪ್ ಪಟ್ಟಿಯಲ್ಲಿ ಅಮೆರಿಕ ಹಾಗೂ ಚೀನಾ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. 500 ಮಂದಿಯ ಪಟ್ಟಿಯಲ್ಲಿ 101 ಸಿಇಒಗಳು ಅಮೆರಿಕದವರು, ಅಂದ್ರೆ ಶೇ.40. ಇನ್ನು ಚೀನಾದ ಸಿಇಒಗಳು 47 ಅಂದ್ರೆ ಶೇ.19.

ಆಪಲ್ ಅತ್ಯಂತ ಬೆಲೆಬಾಳೋ ಬ್ರ್ಯಾಂಡ್
ಜಗತ್ತಿನ ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಪಟ್ಟವನ್ನು ಆಪಲ (Apple) ಉಳಿಸಿಕೊಂಡಿದೆ. ಬ್ರ್ಯಾಂಡ್ ಫೈನಾನ್ಸ್ ಜಾಗತಿಕ 500 ರಾಂಕಿಂಗ್ ನಲ್ಲಿ ಶೇ.35ರಷ್ಟು ಹೆಚ್ಚಳ ದಾಖಲಿಸೋ ಮೂಲಕ 355.1 ಬಿಲಿಯನ್ ಡಾಲರ್ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ. ಬ್ರ್ಯಾಂಡ್ ಫೈನಾನ್ಸ್ ಜಾಗತಿಕ ರಾಂಕಿಂಗ್ ನಲ್ಲಿ ಇದು ಸರ್ವಕಾಲಿಕ ದಾಖಲೆಯೂ ಆಗಿದೆ.

ಟಿಕ್ ಟಾಕ್ (Tik-tok) ಮೌಲ್ಯ ಮೂರುಪಟ್ಟು ಹೆಚ್ಚಳ
ಕಳೆದ ವರ್ಷದಿಂದ ಟಿಕ್-ಟಾಕ್ ಬ್ರ್ಯಾಂಡ್ ಮೌಲ್ಯದಲ್ಲಿ ಮೂರುಪಟ್ಟು ಹೆಚ್ಚಳ ಕಂಡುಬಂದಿದೆ. ಟಿಕ್ -ಟಾಕ್ ಜಗತ್ತಿನ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿರೋ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಬ್ರ್ಯಾಂಡ್ ಫೈನಾನ್ಸ್ ಸ್ವತಂತ್ರವಾದ ಬ್ರ್ಯಾಂಡ್ ಮೌಲ್ಯಮಾಪನ ಹಾಗೂ ತಂತ್ರ ಸಲಹಾ ಸಂಸ್ಥೆಯಾಗಿದ್ದು, ಲಂಡನ್ ನಲ್ಲಿ ಮುಖ್ಯಕಚೇರಿ ಹೊಂದಿದೆ. 

click me!