
ಬೆಂಗಳೂರು(ಜೂ.17): ವಿದ್ಯುತ್ ದರ ಹೆಚ್ಚಳದಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಭಾರೀ ತೊಂದರೆ ಆಗಲಿದೆ. ಸರ್ಕಾರವು ಸಣ್ಣ ಕೈಗಾರಿಕೆಗಳ ನೆರವಿಗೆ ಧಾವಿಸಬೇಕೆಂದು ಕರ್ನಾಟಕ ಸಣ್ಣ ಕೈಗಾರಿಕಗಳ ಸಂಘದ ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ತೀವ್ರ ಪೈಪೋಟಿಯಿಂದ ಸೂಕ್ಷ್ಮಮತ್ತು ಸಣ್ಣ ಕೈಗಾರಿಕೆಗಳ ಲಾಭ ಕಡಿಮೆಯಾಗುತ್ತಿದೆ. ಇದೀಗ ವಿದ್ಯುತ್ ದರ ಹೆಚ್ಚಳ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿವೆ. ಇದರಿಂದಾಗಿ ಮಾಲಿಕ ತನ್ನ ಕಾರ್ಮಿಕನ ವೆಚ್ಚ ಕಡಿಮೆ ಮಾಡಲು ನಿರ್ಧರಿಸುವ ಸಾಧ್ಯಗಳಿವೆ. ಇದರ ಪರಿಣಾಮವಾಗಿ ಗಣನೀಯ ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳಲು ಕಾರಣವಾಗಬಹುದು. ಹೀಗಾಗಿ, ಸರ್ಕಾರ ಸಣ್ಣ ಕೈಗಾರಿಕೆಗಳ ನೆರವಿಗೆ ಧಾವಿಸಬೇಕು. ಇಲ್ಲವಾದರೆ, ಜೂನ್ ಅಂತ್ಯಕ್ಕೆ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜನರಿಗೆ ಕರೆಂಟ್ ಶಾಕ್ ಕೊಟ್ಟಕಾಂಗ್ರೆಸ್ ಸರ್ಕಾರ: ಬಿಜೆಪಿ ಮುಖಂಡ ಆಕ್ರೋಶ
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸುವ ಸಮ್ಮತಿ ಶುಲ್ಕವನ್ನೂ ಸಹ ಕಡಿಮೆ ಮಾಡಲು ಕಾಸಿಯ ಸರ್ಕಾರಕ್ಕೆ ಮನವಿ ಮಾಡಿದೆ. ತರ್ಕಬದ್ಧತೆ ಇಲ್ಲದೆ ಸ್ಥಳೀಯ ಪಂಚಾಯಿತಿಗಳು ವಿಧಿಸುವ ಅನಿಯಂತ್ರಿತ ತೆರಿಗೆಗಳು ದೀರ್ಘಕಾಲದಿಂದ ಬಾಕಿ ಉಳಿದಿರುವುದು ಮತ್ತೊಮ್ಮೆ ಸಮಸ್ಯೆಯಾಗಿದೆ ಎಂದರು. ಕಾಸಿಯಾದ ವೆಂಕಟೇಶ್, ಶಶಿಧರ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.