ಮಹಿಳೆ ಅಥವಾ ಪುರುಷ; ಆನ್ಲೈನ್ ಶಾಪಿಂಗಲ್ಲಿ ಹೆಚ್ಚು ಹಣ ಖರ್ಚು ಮಾಡ್ತಿರೋರು ಯಾರು?

By Suvarna News  |  First Published Feb 20, 2024, 5:20 PM IST

ಈಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಸಾಮಾನ್ಯವಾಗಿದೆ. ದಿನಕ್ಕೊಂದು ಪಾರ್ಸಲ್ ಮನೆಗೆ ಬರ್ತಿರುತ್ತೆ. ಇದಕ್ಕೆ ಹೆಚ್ಚು ಹಣ ಖರ್ಚು ಮಾಡೋರು ಯಾರು ಎಂಬ ಬಗ್ಗೆ ನಡೆದ ಸಮೀಕ್ಷೆ ಅಚ್ಚರಿ ಹುಟ್ಟಿಸಿದೆ. 


ಶಾಪಿಂಗ್ ವಿಷ್ಯ ಬಂದಾಗ ಮಹಿಳೆಯರ ಮೇಲೆ ಬೊಟ್ಟು ಮಾಡೋರೇ ಹೆಚ್ಚು. ಮಹಿಳೆಯರು ಹೆಚ್ಚೆಚ್ಚು ಶಾಪಿಂಗ್ ಮಾಡ್ತಾರೆ ಎನ್ನುವ ಮಾತೂ ಇದೆ. ಸೌಂದರ್ಯ ವರ್ಧಕ, ಬಟ್ಟೆ, ಚಪ್ಪಲಿ ಹೀಗೆ ನಾನಾ ವಸ್ತುಗಳನ್ನು ಮಹಿಳೆಯರು ಹೆಚ್ಚು ಖರೀದಿ ಮಾಡ್ತಾರೆ. ಒಂದು ಟೀ ಶರ್ಟ್, ಒಂದು ಪ್ಯಾಂಟ್ ನಲ್ಲಿ ನಾಲ್ಕೈದು ದಿನವಾದ್ರೂ ಪುರುಷರು ಕಳಿಬಹುದು. ಆದ್ರೆ ಮಹಿಳೆಯರಿಗೆ ಇದು ಸಾಧ್ಯವಿಲ್ಲ. ಮ್ಯಾಚಿಂಗ್ ಐಟಂ, ಲಿಪ್ಸ್ಟಿಕ್ ಇಲ್ಲದೆ ಅವರು ಮನೆಯಿಂದ ಹೊರಗೆ ಬೀಳೋದಿಲ್ಲ. ಮನೆಯಲ್ಲಿ ನಮ್ಮಗಿಂತ ಪತ್ನಿ, ಹೆಣ್ಣು ಮಕ್ಕಳ ಬಟ್ಟೆಯ ರಾಶಿ ಹೆಚ್ಚಿದೆ ಎನ್ನುವ ಪುರುಷರಿದ್ದಾರೆ. ಶಾಪಿಂಗ್ ನಲ್ಲಿ ಮಹಿಳೆಯರೇ ಹೆಚ್ಚು ಎನ್ನುವ ಜನರಿಗೆ ಶಾಕಿಂಗ್ ವರದಿಯೊಂದು ಇಲ್ಲಿದೆ. ಇದ್ರಲ್ಲಿ ನಮ್ಮ ನಂಬಿಕೆ ಸುಳ್ಳಾಗಿದೆ. 

ಇದು ಆನ್ಲೈನ್ (Online) ಯುಗ. ಮನೆಯಿಂದ ಹೊರಗೆ ಹೋಗಿ, ಬಿಸಿಲು – ಮಳೆಯಲ್ಲಿ ಶಾಪಿಂಗ್ (Shopping) ಮಾಡೋರ ಸಂಖ್ಯೆ ಬಹಳ ಕಡಿಮೆ. ಅದ್ರಲ್ಲೂ ಪುರುಷರು ಶಾಪಿಂಗ್ ಮಾಡೋಕೆ ಅಂಗಡಿಗೆ ಹೋಗಲು ಮನಸ್ಸು ಮಾಡೋದಿಲ್ಲ. ಹಬ್ಬ, ನ್ಯೂ ಇಯರ್ ಅದು ಇದು ಅಂತ ಇ – ಕಾಮರ್ಸ್ ( E commerce) ಕಂಪನಿಗಳು ನೀಡುವ ಆಫರ್ ಗಳಿಗೆ ಜನರು ರಣಹದ್ದಿನಂತೆ ಕಾಯ್ತಾ ಕುಳಿತಿರ್ತಾರೆ. ಈ ಆನ್ಲೈನ್ ಶಾಪಿಂಗ್ ನಲ್ಲಿ ಪುರುಷರ ಕೈ ಮೇಲಿದೆ. ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಈ ಬಗ್ಗೆ ಸಂಶೋಧನೆ ನಡೆದಿದೆ. ಡಿಜಿಟಲ್ ರಿಟೇಲ್ ಚಾನೆಲ್‌ಗಳು ಮತ್ತು ಗ್ರಾಹಕರು: ಭಾರತೀಯ ದೃಷ್ಟಿಕೋನ ಎಂಬ ಶೀರ್ಷಿಕೆ ಅಡಿಯಲ್ಲಿ ಅದು ವರದಿ ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ಆನ್ಲೈನ್ ಶಾಪಿಂಗ್ ಮಾಡುವವರಲ್ಲಿ ಪುರುಷರೇ ಮುಂದಿದ್ದಾರೆ ಎಂಬುದು ಗೊತ್ತಾಗಿದೆ. 

Tap to resize

Latest Videos

ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳುವ ಭೀತಿಯಿಲ್ಲ,ಕೂತಲ್ಲೇ ತಿಂಗಳಿಗೆ 10 ಸಾವಿರ ಆದಾಯ ಗಳಿಸ್ಬಹುದು!

ವರದಿ ಪ್ರಕಾರ ಶೇಕಡಾ 23ರಷ್ಟು ಪುರುಷರು ಮತ್ತು ಶೇಕಡಾ 16ರಷ್ಟು ಮಹಿಳೆಯರು ಎಲೆಕ್ಟ್ರಾನಿಕ್ ಸಾಧನಗಳನ್ನು ಶಾಪಿಂಗ್ ಮಾಡುತ್ತಾರೆ. ಇನ್ನು ಶೇಕಡಾ 47ರಷ್ಟು ಪುರುಷರು ಮತ್ತು ಶೇಕಡಾ 58ರಷ್ಟು ಮಹಿಳೆಯರು ಫ್ಯಾಷನ್‌ವೇರ್ ಶಾಪಿಂಗ್ ಮಾಡುತ್ತಾರೆ ಎಂಬುದು ವರದಿಯಿಂದ ಬಹಿರಂಗವಾಗಿದೆ.

ಶ್ರೇಣಿ-1 ನಗರಗಳಾದ ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಿಗೆ ಹೋಲಿಕೆ ಮಾಡಿದ್ರೆ ಟೈರ್ 2 ನಗರಗಳಾದ ಜೈಪುರ, ಲಕ್ನೋ, ನಾಗ್ಪುರ ಮತ್ತು ಕೊಚ್ಚಿಯ ಗ್ರಾಹಕರು ಫ್ಯಾಷನ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗಾಗಿ ಹೆಚ್ಚು ಖರ್ಚು ಮಾಡ್ತಾರೆ ಎಂಬುದು ವರದಿಯಿಂದ ಬಹಿರಂಗವಾಗಿದೆ. 

ಹಾರ್ಲೆ ಡೇವಿಡ್ಸನ್ ಬೈಕ್ ಮಾರಿ ಬುಡಕಟ್ಟು ಮಹಿಳೆಯರಿಗೆ ಆಸರೆಯಾದಳೀಕೆ!

ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವ ಪುರುಷರ ಖರ್ಚು ಕೂಡ ಮಹಿಳೆಯರಿಗಿಂತ ಹೆಚ್ಚು. ಮಹಿಳೆಯರು ಆನ್ಲೈನ್ ಶಾಪಿಂಗ್ ಗೆ 1830 ರೂಪಾಯಿ ಖರ್ಚು ಮಾಡಿದ್ರೆ ಪುರುಷರು 2,484 ರೂಪಾಯಿ ವ್ಯಯಿಸುತ್ತಾರೆ. ಅಂದ್ರೆ ಮಹಿಳೆಯರಿಗಿಂತ ಪುರುಷರು ಶೇಕಡಾ 36ರಷ್ಟು ಹೆಚ್ಚು ಹಣವನ್ನು ಖರ್ಚು ಮಾಡ್ತಿದ್ದಾರೆ. ಆದ್ರೆ ಪುರುಷರು ಹೆಚ್ಚು ಖರ್ಚು ಮಾಡಿದ್ರೂ ಸಮಯ ಉಳಿಸ್ತಿದ್ದಾರೆ. ಮಹಿಲೆಯರು, ಪುರುಷರಿಗಿಂತ ಕಡಿಮೆ ಖರ್ಚು ಮಾಡಿದ್ರೂ, ಆನ್ಲೈನ್ ಶಾಪಿಂಗ್ ಗೆ ಹೆಚ್ಚು ಸಮಯವನ್ನು ತೆಗೆದುಕೊಳ್ತಿದ್ದಾರೆ ಎಂಬುದು ಸಮೀಕ್ಷೆಯಿಂದ ಬಹಿರಂಗವಾಗಿದೆ. 

ಟೈರ್-1 ನಗರದ ಗ್ರಾಹಕರಿಗಿಂತ ಟೈರ್2, ಟೈರ್-3 ಮತ್ತು ಟೈರ್-4 ನಗರದ ಗ್ರಾಹಕರ ಖರ್ಚು ಹೆಚ್ಚಿದೆ. ಆನ್ಲೈನ್ ಖರೀದಿಗೆ ಟೈರ್-1 ನಗರಗಳಲ್ಲಿನ ಗ್ರಾಹಕರು 1,119 ರೂಪಾಯಿ ಖರ್ಚು ಮಾಡುತ್ತಿದ್ದರೆ ಟೈರ್ - 2, ಟೈರ್-3 ಮತ್ತು ಟೈರ್-4 ಗ್ರಾಹಕರು ಕ್ರಮವಾಗಿ 1,870 ರೂಪಾಯಿ, 1,448 ರೂಪಾಯಿ ಮತ್ತು  2,034 ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಕೊರೊನಾ ನಂತ್ರ ಈ ಆನ್ಲೈನ್ ಶಾಪಿಂಗ್ ಹೆಚ್ಚಾಗಿದ್ದು, ವರದಿ ಪ್ರಕಾರ, ಕ್ಯಾಶ್ ಆನ್ ಡಿಲೆವರಿ ಮಾಡುವವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. 

click me!