ಗೇಮ್ಸ್ ಜೊತೆ ರುಚಿ ರುಚಿ ಆಹಾರ..ಪುಣೆ ಗೂಗಲ್ ಕಚೇರಿ ನೋಡಿದ್ರೆ ದಂಗಾಗ್ತೀರಿ!

By Suvarna News  |  First Published Feb 20, 2024, 5:07 PM IST

ಕೆಲವೊಂದು ಕಚೇರಿಯಲ್ಲಿ ಕೆಲಸ ಪಡೆಯೋಕೆ ಅದೃಷ್ಟ ಇರಬೇಕು. ಈ ಪಟ್ಟಿಯಲ್ಲಿ ಗೂಗಲ್ ಕೂಡ ಸೇರಿದೆ. ಉದ್ಯೋಗಿಗೆ ಅನೇಕಾನೇಕ ಸೌಲಭ್ಯ ನೀಡುವ ಕಂಪನಿ ಸಂಬಳವನ್ನೂ ಕೈಬಿಚ್ಚಿ ಕೊಡುತ್ತೆ. ಪುಣೆಯಲ್ಲಿರುವ ಗೂಗಲ್ ಕಚೇರಿ ಹೇಗಿದೆ ಗೊತ್ತಾ? 


ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಮಹಾನ್ ಕನಸು ಗೂಗಲ್. ಐಟಿ ದಿಗ್ಗಜ ಕಂಪನಿ ಗೂಗಲ್ ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ಅನೇಕರು ಪ್ರಯತ್ನಿಸ್ತಾರೆ. ಆದ್ರೆ ಎಲ್ಲರಿಗೂ ಗೂಗಲ್ ನಲ್ಲಿ ಕೆಲಸ ಸಿಗೋದಿಲ್ಲ. ಕೆಲ ದಿನಗಳ ಹಿಂದೆ ಒಳ್ಳೆ ಸಂಬಳದ ಜೊತೆ ಉಚಿತ ಊಟ ಬೇಕು ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಗೂಗಲ್ ನಲ್ಲಿ ಕೆಲಸ ಪಡೆಯಲು ಪ್ರಯತ್ನಿಸಿರೋದಾಗಿ ಹೇಳಿದ್ದ ಸುದ್ದಿ ವೈರಲ್ ಆಗಿತ್ತು. ಗೂಗಲ್ ತನ್ನ ಉದ್ಯೋಗಿಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ನೀಡೋದು ಮಾತ್ರವಲ್ಲದೆ ಒಂದಿಷ್ಟು ಉಚಿತ ಸೌಲಭ್ಯಗಳನ್ನು ಒದಗಿಸುತ್ತದೆ. ಆರೋಗ್ಯ ಪ್ರಯೋಜನ, ವೈದ್ಯಕೀಯ ವಿಮೆ, ಕೆಲಸ/ ವೈಯಕ್ತಿಕ ಬ್ಯಾಲೆನ್ಸ್ ಗೆ ಸಂಬಂಧಿಸಿದಂತೆ ತರಬೇತಿ, ಪೋಷಕ ರಜೆ,ಸಂಬಳ ಸಹಿತ ರಜೆ, ಉಚಿತ ಆಹಾರ, ಫಿಟ್ನೆಸ್ ಸೌಲಭ್ಯ, ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕೆಲಸದ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯವನ್ನು ನೀಡುತ್ತದೆ. ಆದ್ರೆ ದೀರ್ಘ ಹಾಗೂ ಕಠಿಣ ಪರೀಕ್ಷೆಯಲ್ಲಿ ಪಾಸಾಗೋದು ಸುಲಭವಲ್ಲ. ನೂರರಲ್ಲಿ ಒಬ್ಬರು ಆಯ್ಕೆಯಾಗೋದು ಕಷ್ಟ. ಕೌಶಲ್ಯ ಇಲ್ಲಿ ಮುಖ್ಯವಾಗುತ್ತದೆ. ಅದೇನೇ ಇರಲಿ, ಗೂಗಲ್ ನಲ್ಲಿ ಕೆಲಸ ಮಾಡಬೇಕು ಎಂಬ ಆಸೆಯುಳ್ಳವರಿಗೆ ಗೂಗಲ್ ಆಫೀಸ್ ಹೇಗಿದೆ ಎಂಬುದನ್ನು ತೋರಿಸುವ ಪ್ರಯತ್ನ ನಡೆದಿದೆ. ಇಂಜಿನಿಯರ್ ಒಬ್ಬರು ಇದ್ರ ವಿಡಿಯೋ ಹಂಚಿಕೊಂಡಿದ್ದಾರೆ.

ಪುಣೆ (Pune) ಯಲ್ಲಿರುವ ಗೂಗಲ್ (Google) ಕಚೇರಿಗೆ ಎಲ್ಲರಿಗೂ ಹೋಗಲು ಸಾಧ್ಯವಿಲ್ಲ. ಆದ್ರೆ ಇಷ್ಟೆಲ್ಲ ಸಂಬಳ (Salary), ಸೌಲಭ್ಯ ನೀಡುವ ಕಚೇರಿ ಒಳಗೆ ಏನೆಲ್ಲ ಸೌಲಭ್ಯವಿದೆ ಎಂಬುದನ್ನು ತಿಳಿಯುವ ಆಸೆ ಬಹುತೇಕರಿಗಿದೆ. ಅರ್ಶ್ ಗೋಯಲ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್ (Engineer) ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 

Tap to resize

Latest Videos

ವಿಶ್ವದ ಅತೀ ದುಬಾರಿ ಶರ್ಟ್ ಹೊಂದಿರೋ ವ್ಯಕ್ತಿ, 4.1 ಕೆಜಿ ಚಿನ್ನದಿಂದ ಮಾಡಿರೋ ಅಂಗಿ ಬೆಲೆಯೆಷ್ಟು ಗೊತ್ತಾ?

ಗೂಗಲ್ ಪುಣೆ ಆಫೀಸ್ ಟೂರ್. ಕಚೇರಿಯಲ್ಲಿರುವ ಯಾವ ಸ್ಥಳ ನಿಮಗೆ ಇಷ್ಟವಾಯ್ತು, ಯಾಕೆ ಎಂಬುದನ್ನು ಕಮೆಂಟ್ ನಲ್ಲಿ ತಿಳಿಸಿ ಎಂದು ಅರ್ಶ್ ಗೋಯಲ್ ಶೀರ್ಷಿಕೆ ಹಾಕಿದ್ದಾರೆ. ಅರ್ಶ್ ಈ ವಿಡಿಯೋಕ್ಕೆ ನೂರಾರು ಮಂದಿ ಕಮೆಂಟ್ ಮಾಡಿದ್ದಾರೆ. ಗೂಗಲ್ ಕಚೇರಿ ಸೌಲಭ್ಯ ನೋಡಿ ಬಳಕೆದಾರರು ದಂಗಾಗಿದ್ದಾರೆ.

ಭಾರತದ ಟಾಟಾ ಕಂಪನಿ ಪಾಕಿಸ್ತಾನಕ್ಕಿಂತಲೂ ಶ್ರೀಮಂತ

ಅರ್ಶ್ ವಿಡಿಯೋದ ಆರಂಭದಲ್ಲಿ ಗೂಗಲ್ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ ನೀವು ಕ್ಯಾಂಟಿನ್ ನೋಡಬಹುದು. ಅಲ್ಲಿ ಒಂದಿಷ್ಟು ತರಹೇವಾರು ಆಹಾರಗಳಿವೆ. ಅದ್ರ ನಂತ್ರ ಗೇಮ್ಸ್ ಝೋನ್ ಇದೆ. ನಂತ್ರ ಮನರಂಜನಾ ಕೊಠಡಿಯನ್ನು ನೀವು ನೋಡ್ಬಹುದು. ಗೋಯಲ್, ವಿಡಿಯೋದಲ್ಲಿ ಕೇರಂ ಹಾಗೂ ಟೇಬಲ್ ಟೆನಿಸ್ ಆಡೋದನ್ನು ನೀವು ನೋಡ್ಬಹುದು. ಸ್ಲೀಪಿಂಗ್ ಬೇ ಮತ್ತು ಮಸ್ಸಾಜರ್ ಕೂಡ ನೀವು ಗೂಗಲ್ ಕಚೇರಿಯಲ್ಲಿ ಕಾಣಬಹುದು. 

ಗೋಯಲ್ ಹಾಕಿರುವ ವಿಡಿಯೋಕ್ಕೆ ಇನ್ಸ್ಟಾದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಎರಡೇ ದಿನಕ್ಕೆ 5.6 ಲಕ್ಷಕ್ಕೂ ಅಧಿಕ ಬಾರಿ ವಿಡಿಯೋ ವೀಕ್ಷಣೆ ಮಾಡಲಾಗಿದೆ. ಅನೇಕರು ಇದನ್ನು ಶೇರ್ ಮಾಡಿದ್ರೆ ಮತ್ತೆ ಕೆಲವರು ಕಮೆಂಟ್ ಸೆಕ್ಷನ್ ನಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇದು ನನ್ನ ಕನಸಿನ ಕಚೇರಿ ಎಂದು ಒಬ್ಬರು ಬರೆದ್ರೆ, ಮತ್ತೊಬ್ಬರು ಇಲ್ಲಿ ಊಟ ಉಚಿತವಾಗಿ ಸಿಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇದು ನಮ್ಮ ಮನೆ ಮೇಲೆ ನಿಂತ್ರೆ ಕಾಣುತ್ತೆ ಎಂದಿದ್ದಾರೆ. ಕಚೇರಿಯ ಪ್ರತಿಯೊಂದು ಜಾಗ ಇಷ್ಟವಾಯ್ತು ಎಂದವರ ಸಂಖ್ಯೆ ಕೂಡ ಹೆಚ್ಚಿದೆ. ಕಂಪ್ಯೂಟರ್ ಸೈನ್ಸ್ ನ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು ಇಲ್ಲಿ ಕೆಲಸ ಮಾಡೋದು ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ನಮ್ಮನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಗೋಯಲ್ ಗೆ ರಿಕ್ವೆಸ್ಟ್ ಮಾಡಿದ ಜನರೂ ಇದ್ದಾರೆ. 

 
 
 
 
 
 
 
 
 
 
 
 
 
 
 

A post shared by Arsh Goyal (@arshgoyalyt)

click me!