Asianet Suvarna News Asianet Suvarna News

ಹಾರ್ಲೆ ಡೇವಿಡ್ಸನ್ ಬೈಕ್ ಮಾರಿ ಬುಡಕಟ್ಟು ಮಹಿಳೆಯರಿಗೆ ಆಸರೆಯಾದಳೀಕೆ!

ನಾವು ಮಾತ್ರವಲ್ಲ ನಮ್ಮ ಜೊತೆ ಇನ್ನೊಂದಿಷ್ಟು ಮಂದಿ ಬೆಳೆಯಬೇಕು ಎನ್ನುವ ಬಯಕೆ ಬೆರಳೆಣಿಕೆಯಷ್ಟು ಜನರಿಗೆ ಇರುತ್ತೆ. ಬುಡಕಟ್ಟು ಮಹಿಳೆಯರ ಕಲೆ ಗುರುತಿಸಿ ಅವರನ್ನು ಸ್ವಾವಲಂಭಿಯಾಗಿಸಲು ಪರಿಶ್ರಮ, ಪ್ರಯತ್ನ ಅಗತ್ಯ. ಅದನ್ನು ಈ ಮಹಿಳೆ ಮಾಡಿತೋರಿಸಿದ್ದಾಳೆ. 
 

Success Story Indore Woman Started Work By Selling Harley Bike Now Supports Hundreds roo
Author
First Published Feb 19, 2024, 1:14 PM IST

ಮಹಿಳೆ ಪ್ರತಿಭಾವಂತೆ. ಇದು ಪ್ರತಿಯೊಬ್ಬ ಮಹಿಳೆಗೂ ಅನ್ವಯವಾಗುತ್ತದೆ. ಒಬ್ಬರು ಮನೆ ಕೆಲಸದಲ್ಲಿ ಚುರುಕಾಗಿದ್ದರೆ ಇನ್ನೊಬ್ಬರು ಕಚೇರಿ ಕೆಲಸ, ಕಲೆಯಲ್ಲಿ ಒಂದು ಕೈ ಮೇಲಿರುತ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ಎಲ್ಲ ಕಡೆ ಮಹಿಳೆಯ ಪ್ರತಿಭೆಯನ್ನು ಗುರುತಿಸುವಲ್ಲಿ ಕೊರತೆ ಆಗ್ತಿದೆ. ಅವರ ಅರ್ಹತೆಗೆ ತಕ್ಕಂತೆ ಮಹಿಳೆಗೆ ಸರಿಯಾದ ಸ್ಥಾನ ಸಿಗ್ತಿಲ್ಲ. ಮನೆಯಲ್ಲೇ ಇದ್ದರೂ ಸಾಕಷ್ಟು ಜ್ಞಾನ, ಕಲೆ ಹೊಂದಿರುವ ಮಹಿಳೆಯರ ಸಂಖ್ಯೆ ನಮ್ಮಲ್ಲಿ ಸಾಕಷ್ಟಿದೆ. ಆದ್ರೆ ಅವರಿಗೆ ಕೆಲಸ ನೀಡುವ ಸೂಕ್ತ ಸಂಸ್ಥೆ ಇಲ್ಲ. ಅವರನ್ನು ಆರ್ಥಿಕವಾಗಿ ಸ್ವಾವಲಂಭಿ ಮಾಡಲು ಕೆಲವೇ ಕೆಲವು ಕಂಪನಿ ಪಣತೊಟ್ಟಿದೆ. ಅದ್ರಲ್ಲಿ ಭಾರತ್ ಕಿ ಬೇಟಿ ಫೌಂಡೇಶನ್‌ನ ಸುರಭಿ ಮನೋಚಾ ಚೌಧರಿ ಕೂಡ ಒಬ್ಬರು. ಹಳ್ಳಿಯಲ್ಲಿರುವ ಮಹಿಳೆಯರ ಕಲೆಯನ್ನು ಗುರುತಿಸಿ, ಅದನ್ನು ಪ್ರಪಂಚಕ್ಕೆ ಪರಿಚಯಿಸುವ ಕೆಲಸವನ್ನು ಸುರಭಿ ಮಾಡುತ್ತಿದ್ದಾರೆ. ಹಳ್ಳಿಯ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಜೊತೆಗೆ ತಾವೂ ಯಶಸ್ವಿ ಉದ್ಯಮಿ ಎನ್ನಿಸಿಕೊಂಡಿದ್ದಾರೆ. ಸುರಭಿ ಮನೋಚಾ ಚೌಧರಿ ಸಂಸ್ಥೆ ಈಗ ಅನೇಕಾನೇಕ ವಸ್ತುಗಳನ್ನು ಸಿದ್ಧಪಡಿಸಿ, ಮಾರಾಟ ಮಾಡ್ತಿದೆ.

ಸುರಭಿ ಮನೋಚಾ ಚೌಧರಿ ಇಂದೋರ್‌ (Indore)ನವರು. ಅವರು ಇಂದೋರ್ ನ ಯಶವಂತ್ ಕ್ಲಬ್‌ ನ ಚುನಾವಣೆಗೆ ಸ್ಪರ್ಧಿಸಿದ ಮೊದಲ ಮಹಿಳೆಯಾಗಿದ್ದ ಸುರಭಿ, ಮಹಿಳೆಯರಿಗೆ ಏನಾದ್ರೂ ಮಾಡ್ಬೇಕು ಎನ್ನುವ ಗುರಿ ಹೊಂದಿದ್ದರು. ಹಳ್ಳಿ (Village) ಗಳಿಗೆ ಭೇಟಿ ನೀಡಿದ್ದ ಸಮಯದಲ್ಲಿ ಬಹುತೇಕ ಬುಡಕಟ್ಟು ಮಹಿಳೆಯರು ಅವಿದ್ಯಾವಂತರಾಗಿರುವುದನ್ನು ಸುರಭಿ ಗಮನಿಸಿದ್ದರು. ಆದ್ರೆ ಈ ಮಹಿಳೆಯರು ಕಲೆಯಲ್ಲಿ ಒಂದು ಕೈ ಮುಂದಿದ್ದಾರೆ ಎಂಬುದು ಅವರ ಅರಿವಿಗೆ ಬಂದಿತ್ತು. ಆದ್ರೆ ಕೊರೊನಾ ಲಾಕ್ ಡೌನ್ ವಿಧಿಸಿದ್ದ ಸಮಯದಲ್ಲಿ ಜನರಿಗೆ ಪರಿಸರ ರಕ್ಷಣೆ ಬಗ್ಗೆಯೂ ಮಾಹಿತಿ ನೀಡುವ ನಿರ್ಧಾರಕ್ಕೆ ಸುರಭಿ ಬಂದಿದ್ದರು.

ಲಕ್ಷಾಂತರ ಮದುವೆ ಮಾಡಿಸಿ 2500 ಕೋಟಿ ರೂ.ಆದಾಯ ಗಳಿಸಿರೋ ವ್ಯಕ್ತಿ ಇವರು!

ಕಂಪನಿ (Company)  ಶುರು ಮಾಡಲು ಅಥವಾ ಹಳ್ಳಿ ಮಹಿಳೆಯರ ಕಲೆಯನ್ನು ಹೊರ ಪ್ರಪಂಚಕ್ಕೆ ತಿಳಿಸಲು ಹಣದ ಅಗತ್ಯವಿತ್ತು. ಸುರಭಿ ತಾವು ದುಡಿದಿದ್ದ ಹಣದಿಂದ ಖರೀದಿ ಮಾಡಿದ್ದ ಹಾರ್ಲೆ ಡೇವಿಡ್ಸನ್ ಬೈಕ್ ಮಾರಾಟ ಮಾಡಿದ್ರು. ಅದ್ರಿಂದ ಬಂದ ಹಣದಲ್ಲಿ ಸಸ್ಟೈನಬಲ್ ಸ್ಟುಡಿಯೋ ಇಕೋ ಶುರು ಮಾಡಿದ್ರು.

ಪ್ಲಾಸ್ಟಿಕ್ ನಿಷೇಧ ಹಾಗೂ ಕರಕುಶಲ ಮಹಿಳೆಯರಿಗೆ ಉದ್ಯೋಗ ಈ ಎರಡು ಗುರಿಯೊಂದಿಗೆ ಇವರ ಕಂಪನಿ ಮುನ್ನಡೆದುಕೊಂಡು ಬರ್ತಿದೆ. ಸುರಭಿ, ಗ್ರಾಮದ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಅವರ ಮಳಿಗೆಯಲ್ಲಿ ಮನೆಯ ಅಲಂಕಾರಿಕ ವಸ್ತುಗಳು, ಯೋಗ ಮ್ಯಾಟ್‌ಗಳು,  ತಾಳೆ ಎಲೆಗಳಿಂದ ಮಾಡಿದ ವಸ್ತುಗಳು, ಬಿದಿರು, ಅನೇಕ ರೀತಿಯ ಹುಲ್ಲುಗಳಿಂದ ತಯಾರಿಸಿದ ಉತ್ಪನ್ನಗಳಿವೆ. ಜೊತೆಗೆ ಖಾದಿ ಮತ್ತು ಉಣ್ಣೆಯ ಬಟ್ಟೆಗಳೂ ಇಲ್ಲಿ ಲಬ್ಯವಿದೆ. ಈ ಕರಕುಶಲ ಉತ್ಪನ್ನಗಳು ಆಧುನಿಕ ಫ್ಯಾಷನ್, ಜೀವನಶೈಲಿಗೆ ಹೊಂದಿಕೆಯಾಗುವಂತಿವೆ. 

ಭಾರತದ ಬಾಳೆಹಣ್ಣಿಗೆ ಹೆಚ್ಚಿದ ಅಂತಾರಾಷ್ಟ್ರೀಯ ಬೇಡಿಕೆ, ರಷ್ಯಾಕ್ಕೆ ರಫ್ತು ಪ್ರಾರಂಭಿಸಿದ ಸರ್ಕಾರ

ಇಂದು ಸುರಭಿ 400 ಬುಡಕಟ್ಟು ಕರಕುಶಲ ಕಲಾವಿದರನ್ನು (Tribal Artisans) ಗುರುತಿಸಿ ಅವರಿಗೆ ಉದ್ಯೋಗ (Employment) ನೀಡಿದ್ದಾರೆ. ಮರದ ಕೆತ್ತನೆಗಳು, ಸೆಣಬಿನಿಂದ ಮಾಡಿದ ಚೀಲಗಳು ಮತ್ತು ಬೆಲ್ಟ್‌ಗಳು (Belt), ಕಸೂತಿ ಬಟ್ಟೆಗಳನ್ನು (Handicrafted Cloths) ಮಹಿಳೆಯರು ಸಿದ್ಧಪಡಿಸುತ್ತಿದ್ದಾರೆ. ಪ್ಲಾಸ್ಟಿಕ್ ಮುಕ್ತ ದೇಶ (Plastic Free Nation) ಮಾಡುವುದು ಸುರಭಿಯವರ ಗುರಿ. ಹಿಂದೆ ಜನರು ಪ್ಲಾಸ್ಟಿಕ್ ಇಲ್ಲದೆ ಜೀವನ ನಡೆಸುತ್ತಿದ್ದರು. ಸೆಣಬೆ, ಬಿದಿರು (Bamboo), ಬಟ್ಟೆ ವಸ್ತುಗಳನ್ನೇ ಬಳಸುತ್ತಿದ್ದರು. ಆದ್ರೆ ಈಗ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಅದಿಲ್ಲದೆ ಬದುಕುವುದು ಕಷ್ಟವಾಗಿದೆ. ಆದ್ರೆ ನಮ್ಮ ಪರಿಸರವನ್ನು ತಾಜಾ ಆಗಿಡಲು ಪ್ಲಾಸ್ಟಿಕ್ ಮುಕ್ತ ಜೀವನ ಅನಿವಾರ್ಯ. ಪ್ಲಾಸ್ಟಿಕ್ ಇಲ್ಲದೆ ಬದುಕುವುದನ್ನು ಜನರು ಕಲಿಯಬೇಕು ಎಂದು ಸುರಭಿ ಹೇಳ್ತಾರೆ. 
 

Follow Us:
Download App:
  • android
  • ios