ಅದ್ಧೂರಿ ಮದುವೆಗೆ ಈಗ ಹೆಚ್ಚಿನ ಆದ್ಯತೆ ಸಿಗ್ತಿದೆ. ಇದಕ್ಕೆ ಹೆಲಿಕಾಪ್ಟರ್ ಸೇರ್ಪಡೆಯಾಗಿದೆ. ಅನೇಕರು ಮದುವೆಗಾಗಿ ಹೆಲಿಕಾಪ್ಟರ್ ಬುಕ್ ಮಾಡ್ತಿದ್ದಾರೆ. ನೀವೂ ಈ ಕನಸು ಹೊಂದಿದ್ರೆ ಹಣ ಹೊಂದಿಸಿಕೊಳ್ಳಿ.
ಜೀವನದಲ್ಲಿ ಒಮ್ಮೆ ಆಗುವ ಮದುವೆ, ಜೀವನ ಪರ್ಯಂತ ನೆನಪಿರಬೇಕು ಎಂದು ಎಲ್ಲರೂ ಬಯಸ್ತಾರೆ. ಇದೇ ಕಾರಣಕ್ಕೆ ಮದುವೆಯನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಮದುವೆಗಿಂತ ಮೊದಲು ಫೋಟೋ ಶೂಟ್, ವಿಡಿಯೋ ಶೂಟ್ ಈಗ ಕಾಮನ್ ಆಗಿದೆ. ಮದುವೆ ದಿನ ಕೂಡ ಅನೇಕ ಹೊಸ ಕಾರ್ಯಕ್ರಮಗಳು ಮದುವೆ ಪದ್ಧತಿಯಲ್ಲಿ ಸೇರಿಕೊಳ್ತಿವೆ. ಮದುವೆ ಮುಗಿದ್ಮೇಲೆ ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ಕೂ ಈಗ ಹೆಚ್ಚಿನ ಆಧ್ಯತೆ ನೀಡಲಾಗ್ತಿದೆ. ಹಿಂದೆ ಎತ್ತಿನ ಗಾಡಿಯಲ್ಲಿ ಹೋಗ್ತಿದ್ದ ನವಜೋಡಿ ಕಾರ್ ನಂತ್ರ ಹೆಲಿಕಾಪ್ಟರ್ ಏರುತ್ತಿದ್ದಾರೆ. ಈಗಿನ ದಿನಗಳಲ್ಲಿ ನವಜೋಡಿ ಹೆಲಿಕಾಪ್ಟರ್ ನಲ್ಲಿ ವರನ ಮನೆ ತಲುಪೋದು ಫ್ಯಾಷನ್ ಆಗ್ತಿದೆ. ನಿಮ್ಮ ಮದುವೆಯಲ್ಲೂ ಪತ್ನಿಯನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆತರಬೇಕೆಂಬ ಪ್ಲಾನ್ ಇದ್ರೆ ಅದ್ರ ಬಗ್ಗೆ ಡಿಟೇಲ್ ತಿಳಿದುಕೊಳ್ಳಿ. ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ, ಅದ್ರ ಬೆಲೆ ಎಷ್ಟು, ಹಾಗೆ ಏನೆಲ್ಲ ದಾಖಲೆ ನೀಡ್ಬೇಕು ಎಂಬ ಮಾಹಿತಿ ಗೊತ್ತಿದ್ರೆ ನೀವು ಅದನ್ನು ಸುಲಭವಾಗಿ ಬುಕ್ ಮಾಡ್ಬಹುದು.
ಹೆಲಿಕಾಪ್ಟರ್ (Helicopter) ಬೆಲೆ ಎಷ್ಟು? : ನೀವು ಯಾವ ಹೆಲಿಕಾಪ್ಟರ್ ಬುಕ್ ಮಾಡ್ತೀರಿ ಎನ್ನುವುದರ ಮೇಲೆ ಬೆಲೆ ನಿರ್ಧಾರವಾಗುತ್ತದೆ. ಆದ್ರೆ ಪ್ರತಿ ಹೆಲಿಕಾಪ್ಟರ್ ಬೆಲೆ ಗಂಟೆ ಆಧಾರದ ಮೇಲಿರುತ್ತದೆ. ಮಾಹಿತಿ ಪ್ರಕಾರ, ಕರ್ನಾಟಕ (Karnataka) ದಲ್ಲಿ ಪ್ರತಿ ಗಂಟೆಗೆ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಹೆಲಿಕಾಪ್ಟರ್ ಚಾರ್ಜ್ ಇದೆ. ಸಾಮಾನ್ಯವಾಗಿ ಎರಡು ಗಂಟೆಗಳ ಕಾಲ ಹೆಲಿಕಾಪ್ಟರ್ ಲಭ್ಯವಿರುತ್ತದೆ. ನೀವು ಎಷ್ಟು ಸೀಟ್ ನ ಹೆಲಿಕಾಪ್ಟರ್ ಬುಕ್ ಮಾಡಿದ್ದೀರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಹೆಚ್ಚು ಸೀಟ್ ನ ಹೆಲಿಕಾಪ್ಟರ್ ಬುಕ್ ಮಾಡಿದ್ರೆ ಹಾಗೂ ಹೆಚ್ಚು ಗಂಟೆಗೆ ಹೆಲಿಕಾಪ್ಟರ್ ಬಳಸಿಕೊಂಡಲ್ಲಿ ಇದ್ರ ಬೆಲೆ ಗಂಟೆ ಲೆಕ್ಕದಲ್ಲಿ ಏರಿಕೆಯಾಗ್ತಾ ಹೋಗುತ್ತದೆ. ಕೆಲವೊಂದು ಕಂಪನಿಗಳು, ಹೆಲಿಕಾಪ್ಟರನ್ನು ಪ್ಯಾಕೇಜ್ ದರದಲ್ಲಿ ಬುಕ್ ಮಾಡುವ ಆಫರ್ ನೀಡ್ತಿವೆ.
ಉದ್ಯಮದಲ್ಲಿ ಅಪ್ಪನನ್ನೇ ಮೀರಿಸ್ತಾಳ ಮಗಳು! ಜರ್ಮನ್ ಬ್ಯೂಟಿ ಬ್ರಾಂಡ್ ಜೊತೆ ಒಪ್ಪಂದ ಮಾಡ್ಕೊಂಡ ಇಶಾ ಅಂಬಾನಿ
ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ? : ನೀವು ಮದುವೆ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಕೆ ಮಾಡ್ತಿದ್ದರೆ ನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಬಹುದು. ವಿವಿಧ ವಲಯಗಳಲ್ಲಿ ವಿಭಿನ್ನ ಹೆಲಿಕಾಪ್ಟರ್ ಆಪರೇಟರ್‌ಗಳಿವೆ. ನೀವು ಆನ್‌ಲೈನ್‌ನಲ್ಲಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಲು ಬಯಸಿದರೆ ಅನೇಕ ಪ್ರಮುಖ ಪ್ರಯಾಣ ತಾಣಗಳು ಈ ಸೌಲಭ್ಯವನ್ನು ಒದಗಿಸುತ್ತವೆ. ಆಫ್ಲೈನ್ ಅಂದ್ರೆ ನೀವು ಕಂಪನಿ ಕಚೇರಿಗೆ ಹೋಗಿ ಮಾತುಕತೆ ನಡೆಸಬೇಕಾಗುತ್ತದೆ.
ಯಾವ ಅನುಮತಿ ಅಗತ್ಯ? : ಹೆಲಿಕಾಪ್ಟರ್ ಲ್ಯಾಂಡಿಂಗ್ ಮತ್ತು ಟೇಕಾಫ್ ಗೆ ಎರಡು ರೀತಿಯ ಅನುಮತಿ ಅಗತ್ಯವಿರುತ್ತದೆ. ಒಂದು ವಾಯುಪಡೆಯಿಂದ ಅನುಮತಿ ಪಡೆಯಬೇಕು. ಇನ್ನೊಂದು ವಿಮಾನ ನಿಲ್ದಾಣ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತದಿಂದ ತೆಗೆದುಕೊಳ್ಳಬೇಕು. ಆದ್ರೆ ಈ ಅನುಮತಿಗಾಗಿ ದಾಖಲೆ ಹಿಡಿದು ನೀವು ಓಡಾಡಬೇಕಾದ ಅಗತ್ಯವಿಲ್ಲ. ಹೆಲಿಕಾಪ್ಟರ್ ಕಂಪನಿ, ಆಪರೇಟರ್ಸ್ ಇದ್ರ ಅನುಮತಿ ಪಡೆಯುತ್ತಾರೆ.
ವಿಶ್ವದ ಐವರು ಶ್ರೀಮಂತರು ದಿನಕ್ಕೆ 8 ಕೋಟಿ ಖರ್ಚು ಮಾಡಿದರೆ ದಿವಾಳಿಯಾಗಲು 476 ವರ್ಷ ಬೇಕಂತೆ!
ಜಾಗದ ವ್ಯವಸ್ಥೆ : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೆಲಿಕಾಪ್ಟರ್ ಹೋಗುವ ಕಾರಣ ಎರಡು ಕಡೆ ಹೆಲಿಕಾಪ್ಟರ್ ಇಳಿಯಲು ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕೆ ಅಗತ್ಯವಿರುವ ಸೂಕ್ತ ಜಾಗವನ್ನು ಪತ್ತೆ ಮಾಡಿ, ಅದನ್ನು ಸಿದ್ಧಪಡಿಸಬೇಕು. ಹೆಚ್ ಪೇಟಿಂಗ್ ಹಾಗೂ ವಿಶೇಷ ಹೊಗೆ ವ್ಯವಸ್ಥೆ ಸೇರಿದಂತೆ ಲ್ಯಾಂಡಿಂಗ್ ಗೆ ಅಗತ್ಯವಿರುವ ಉಳಿದ ವ್ಯವಸ್ಥೆಯನ್ನು ಹೆಲಿಕಾಪ್ಟರ್ ಆಪರೇಟರ್ ಪ್ರತಿನಿಧಿಗಳು ಮಾಡ್ತಾರೆ. ನಿಮ್ಮ ಕೈನಲ್ಲಿ ಇಷ್ಟೊಂದು ಹಣವಿದೆ, ಮದುವೆಗೆ ಹಣ ಉಳಿಸಿದ್ದೀರಿ ಅಂದ್ರೆ ಹೆಲಿಕಾಪ್ಟರ್ ರೈಡ್ ಟ್ರೈ ಮಾಡಬಹುದು.