
Business Desk:ಭಾರತದ ಶ್ರೀಮಂತ ಉದ್ಯಮಿಗಳ ಮಕ್ಕಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಕುಟುಂಬ ಉದ್ಯಮದ ಜವಾಬ್ದಾರಿಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಂಥವರಲ್ಲಿ ಸುದರ್ಶನ್ ವೇಣು ಕೂಡ ಒಬ್ಬರು. ಸುದರ್ಶನ್ ಟಿವಿಎಸ್ ಮೋಟಾರ್ಸ್ ಮುಖ್ಯಸ್ಥ ವೇಣು ಶ್ರೀನಿವಾಸನ್ ಅವರ ಮಗ. ಇವರು ಕುಟುಂಬದ ನಾಲ್ಕನೇ ತಲೆಮಾರಿನ ಉದ್ಯಮಿಯಾಗಿದ್ದಾರೆ. ಸುದರ್ಶನ್ ಪ್ರಸ್ತುತ ಟಿವಿಎಸ್ ಮೋಟಾರ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ (ಎಂಡಿ). ಟಿವಿಎಸ್ ಭಾರತದ ಮೂರನೇ ಅತೀದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿದೆ. ಇನ್ನು ಸುದರ್ಶನ್ ಅವರ ಸಹೋದರಿ ಲಕ್ಷ್ಮೀ ವೇಣು ಸುಂದರಂ ಕ್ಲೇಟನ್ ಲಿಮಿಟೆಡ್ (ಎಸ್ ಸಿಎಲ್) ಜಂಟಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆ ಟಿವಿಎಸ್ ಮೋಟಾರ್ ಗ್ರೂಪ್ ಅಂಗಸಂಸ್ಥೆಯಾಗಿದೆ.
ಟಿವಿಎಸ್ ಮೋಟಾರ್ ಕಂಪನಿಯ ಮಾರುಕಟ್ಟೆ ಬಂಡವಾಳ ಡಿಸೆಂಬರ್ 21ಕ್ಕೆ ಅನ್ವಯಿಸುವಂತೆ 92,357 ಕೋಟಿ ರೂ. ಇದೆ. ಇನ್ನು ಕಂಪನಿಯ ಷೇರಿನ ಬೆಲೆ ಎನ್ ಎಸ್ ಇಯಲ್ಲಿ 1,945ರೂ. ಇದೆ. ಸುದರ್ಶನ್ ನೇತೃತ್ವದಲ್ಲಿ ಕಂಪನಿ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಈ ಮೂಲಕ ಸುದರ್ಶನ ಕೂಡ ಉದ್ಯಮ ರಂಗದಲ್ಲಿ ಪ್ರಭಾವಿ ಉದ್ಯಮಿಯಾಗಿ ಬೆಳೆಯುತ್ತಿದ್ದಾರೆ.
ಕುಟುಂಬ ಉದ್ಯಮ ಬಿಟ್ಟು ಸ್ವಂತ ಕಂಪನಿ ಸ್ಥಾಪಿಸಿದ ಈತ ಇಂದು 13,000 ಕೋಟಿ ರೂ. ಒಡೆಯ
ಸುದರ್ಶನ್ ವೇಣು ಅಮೆರಿಕದ ಪೆನ್ ಸ್ಲೇವನಿಯಾ ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್ ಹಾಗೂ ಟೆಕ್ನಾಲಜಿಯಲ್ಲಿ ಜೆರೋಮಿ ಫಿಶರ್ ಪ್ರೊಗ್ರಾಂನಲ್ಲಿ ಪದವಿ ಪಡೆದಿದ್ದಾರೆ. ಸುದರ್ಶನ್ ಅವರ ಕುಟುಂಬ ಅನೇಕ ತಲೆಮಾರುಗಳಿಂದ ಮೋಟಾರ್ ವಾಹನಗಳ ತಯಾರಿಕೆಯಲ್ಲಿ ತೊಡಗಿದ್ದ ಕಾರಣ ಸಹಜವಾಗಿ ಅವರಿಗೆ ಈ ಕ್ಷೇತ್ರದ ಮೇಲೆ ಒಲವು ಬೆಳೆದಿತ್ತು. ವಾಹನಗಳ ಕುರಿತು ಬಾಲ್ಯದಿಂದಲೂ ಆಸಕ್ತಿ ಹಾಗೂ ಕುತೂಹಲವಿತ್ತು. ಹೀಗಾಗಿ ಈ ವಿಷಯದಲ್ಲೇ ಅವರು ಪದವಿ ಕೂಡ ಪಡೆದರು.
ಸುದರ್ಶನ್ ಅವರ ನಾಯಕತ್ವದಲ್ಲಿ ಟಿವಿಎಸ್ ಮೋಟಾರ್ ಮಾರುಕಟ್ಟೆ ಷೇರಿನಲ್ಲಿ ಏರಿಕೆಯಾಗಿದೆ ಕೂಡ. ಇನ್ನು ಇವರ ತಂದೆ ವೇಣು ಶ್ರೀನಿವಾಸನ್ ಅವರು ಭಾರತದ ಶತಕೋಟಿ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಅವರ ನಿವ್ವಳ ಸಂಪತ್ತು ಡಿಸೆಂಬರ್ 21ಕ್ಕೆ ಅನ್ವಯಿಸುವಂತೆ 27,470 ಕೋಟಿ ರೂ. ಇದೆ.
ಆಫ್ರಿಕಾ, ಏಷಿಯನ್ ಹಾಗೂ ಲ್ಯಾಟೀನ್ ಅಮೆರಿಕದಲ್ಲಿ ಟಿವಿಎಸ್ ಮೋಟಾರ್ ಕಂಪನಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುವಲ್ಲಿ ಸುದರ್ಶನ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ನಿಂದ ಬಿ.ಎಸ್. ಪದವಿ ಪಡೆದಿದ್ದಾರೆ. ಹಾಗೆಯೇ ವಾರ್ಟನ್ ಸ್ಕೂಲ್ ನಿಂದ ಇಕಾನಾಮಿಕ್ಸ್ ನಲ್ಲಿ ಬಿ.ಎಸ್. ಪದವಿ ಪಡೆದಿದ್ದಾರೆ.
ಕಾಲೇಜ್ ಡ್ರಾಪ್ ಔಟ್ ವಿದ್ಯಾರ್ಥಿ ಈಗ ಕೋಟ್ಯಂತರ ರೂ. ಬೆಲೆಬಾಳೋ ಕಂಪನಿ ಒಡೆಯ;ತೆರೆ ಮೇಲೆ ಬರಲಿದೆ ಈತನ ಕಥೆ
ಇಂಗ್ಲೆಂಡ್ ವಾರ್ ವಿಕ್ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಿರುವ ವಾರ್ ವಿಕ್ ಮ್ಯಾನುಫ್ಯಾಕ್ಚರಿಂಗ್ ಗ್ರೂಪ್ ನಿಂದ ಅಂತಾರಾಷ್ಟ್ರೀಯ ಟೆಕ್ನಾಲಜಿ ಮ್ಯಾನೇಜ್ಮೆಂಟ್ ನಲ್ಲಿ ವೇಣು ಎಂ.ಎಸ್ಸಿ ಪೂರ್ಣಗೊಳಿಸಿದ್ದಾರೆ. ಇನ್ನು ಅವರು ಟಿವಿಎಸ್ ಹೋಲ್ಡಿಂಗ್ ಲಿಮಿಟೆಡ್ ಎಂಡಿಯಾಗಿ ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಸಂಸ್ಥೆಯ ಎನ್ ಬಿಎಫ್ಸಿ ವಿಭಾಗವಾಗಿರುವ ಟಿವಿಎಸ್ ಕ್ರೆಡಿಟ್ ಸರ್ವೀಸ್ ಮುಖ್ಯಸ್ಥರಾಗಿ ಕೂಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖ ವ್ಯಾಪಾರ ನಿಯತಕಾಲಿಕೆಯಾದ ಫೋರ್ಬ್ಸ್ ಇಂಡಿಯಾದಿಂದ ಅವರು ಇಂಡಿಯಾ ಇಂಕ್‌ನ GenNext ನಾಯಕರಾಗಿ ಗುರುತಿಸಲ್ಪಟ್ಟಿದ್ದಾರೆ ಕೂಡ. ಇನ್ನು ಸುದರ್ಶನ್ ವೇಣು ಅವರು ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಟ್ರಸ್ಟ್ ಬೋರ್ಡ್‌ನ ಸದಸ್ಯ-ಟ್ರಸ್ಟಿಯಾಗಿ ಕೂಡ ನೇಮಕಗೊಂಡಿದ್ದಾರೆ. ಈ ಮೂಲಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೂಡ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಟಿವಿಎಸ್ ಎಲೆಕ್ಟ್ರಿಕ್ ಬೈಕ್ ಗಳ ತಯಾರಿಯಲ್ಲಿ ಕೂಡ ಸುದರ್ಶನ ಪ್ರಮುಖ ಪಾತ್ರ ವಹಿಸಿದ್ದಾರೆ. ಅವುಗಳ ವಿನ್ಯಾಸ, ಮಾರುಕಟ್ಟೆ ಅನ್ವೇಷಣೆ ಮುಂತಾದ ವಲಯಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೂಡ ಸುದರ್ಶನ ಅವರಿಗೆ ಸಾಕಷ್ಟು ಆಸಕ್ತಿಯಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.