ಕುಟುಂಬ ಉದ್ಯಮ ಬಿಟ್ಟು ಸ್ವಂತ ಕಂಪನಿ ಸ್ಥಾಪಿಸಿದ ಈತ ಇಂದು 13,000 ಕೋಟಿ ರೂ. ಒಡೆಯ

ಕುಟುಂಬ ಉದ್ಯಮ ತೊರೆದು ಸ್ವಂತ ಕಂಪನಿ ಸ್ಥಾಪಿಸಿದ ಶಿವ್ ರತನ್ ಅಗರ್ವಾಲ್ ಅದರಲ್ಲಿ ಯಶಸ್ಸು ಕಂಡಿದ್ದಾರೆ.ಅವರ 'ಬಿಕಾಜಿ ಫುಡ್ಸ್' ಇಂದು ದೇಶಾದ್ಯಂತ ಜನಪ್ರಿಯತೆ ಗಳಿಸಿದೆ.  

Meet Shivratan Agarwal Man Who Left Haldirams and Founded A Rs 13000Cr Firm anu

Business Desk:ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡ ಅನೇಕರ ಕಥೆಗಳನ್ನು ನಾವು ಕೇಳಿದ್ದೇವೆ. ಹಾಗೆಯೇ ಕುಟುಂಬದ ಉದ್ಯಮವಿದ್ದರೂ ಅದನ್ನು ಬಿಟ್ಟು ಸ್ವಂತ ಉದ್ಯಮ ಪ್ರಾರಂಭಿಸಿ ಯಶಸ್ಸು ಕಂಡ ಕೆಲವು ಉದ್ಯಮಿಗಳು ಕೂಡ ಇದ್ದಾರೆ. ಅಂಥವರಲ್ಲಿ ಬಿಕಾಜಿ ಫುಡ್ಸ್ ಸ್ಥಾಪಕ ಶಿವ್ ರತನ್ ಅಗರ್ವಾಲ್ ಕೂಡ ಒಬ್ಬರು. ಬಿಕಾಜಿ ಫುಡ್ಸ್ ಭಾರತದ ಜನಪ್ರಿಯ ಕಂಪನಿಯಾಗಿದ್ದು, ಅನೇಕ ವಿಧದ ಸಿಹಿ ತಿಂಡಿಗಳು ಹಾಗೂ ಇತರ ತಿನಿಸುಗಳನ್ನು ದೇಶಾದ್ಯಂತ ಮಾರಾಟ ಮಾಡುತ್ತಿದೆ. ಈ ಕಂಪನಿ ಮುಖ್ಯಸ್ಥೆ ಶಿವ್ ರತನ್ ಅಗರ್ವಾಲ್ ಒಂದು ಕಾಲದಲ್ಲಿ ಹಲ್ದಿರಾಮ್ಸ್ ತ್ಯಜಿಸಿ ಬರಿಗೈಯಲ್ಲಿ ತಮ್ಮದೇ ಕಂಪನಿ ಪ್ರಾರಂಭಿಸಿದವರು. ಇಂದು ಇವರ ಕಂಪನಿ ಮಾರುಕಟ್ಟೆ ಬಂಡವಾಳ 13,000 ಕೋಟಿ ರೂ.ಗಿಂತಲೂ ಅಧಿಕ. 

ಕುಟುಂಬ ಉದ್ಯಮ ತ್ಯಜಿಸಿದ ಶಿವ್ ರತನ್ ಅಗರ್ವಾಲ್
ಶಿವ್ ರತನ್ ಅಗರ್ವಾಲ್ 'ಹಲ್ದಿರಾಮ್' ಸ್ಥಾಪಕ ಗಂಗಾಭಿಷಣ್ ಹಲ್ದಿರಾಮ್ ಭುಜಿವಾಲಾ ಅವರ ಮೊಮ್ಮಗ. ಪ್ರಾರಂಭದಲ್ಲಿ ಶಿವ್ ರತನ್ ಕೂಡ ಕುಟುಂಬದ ಉದ್ಯಮದಲ್ಲಿ ತೊಡಗಿಕೊಂಡರು. ಆದರೆ, ಈ ಕಂಪನಿ ತನ್ನ ಮೂಲಸ್ಥಾನವಾದ ರಾಜಸ್ಥಾನದ ಬಿಕನೇರ್ ನಲ್ಲಿ ಜನಪ್ರಿಯತೆ ಗಳಿಸುವಲ್ಲಿ ಎಡವಿತ್ತು. ಇನ್ನು ಕುಟುಂಬದ ಉದ್ಯಮವಾಗಿರುವ ಕಾರಣ ಇದರಲ್ಲಿ ಒಬ್ಬರ ಮಾತು ನಡೆಯಲ್ಲ. ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಶಿವ್ ರತನ್ ಹಲ್ದಿರಾಮ್ ಬಿಟ್ಟು ತನ್ನದೇ ಹೊಸ ಉದ್ಯಮ ಪ್ರಾರಂಭಿಸುವ ಯೋಚನೆ ಮಾಡಿದರು.

ಕಾಲೇಜ್ ಡ್ರಾಪ್ ಔಟ್ ವಿದ್ಯಾರ್ಥಿ ಈಗ ಕೋಟ್ಯಂತರ ರೂ. ಬೆಲೆಬಾಳೋ ಕಂಪನಿ ಒಡೆಯ;ತೆರೆ ಮೇಲೆ ಬರಲಿದೆ ಈತನ ಕಥೆ

ಹಲ್ದಿರಾಮ್ ಗೆ ಪೈಪೋಟಿ ನೀಡಲು ಸಜ್ಜು
ಸ್ವಂತ ಉದ್ಯಮ ಪ್ರಾರಂಭಿಸಲು ಯೋಚಿಸುತ್ತಿದ್ದ ಶಿವ್ ರತನ್ ಅಗರ್ವಾಲ್ ಅವರಿಗೆ 'ಬಿಕನೇರ್ ಭುಜಿಯಾ' ತಯಾರಿಸುವ ಯೋಚನೆ ಹೊಳೆಯಿತು. ಇದು ಕಡಲೆ ಹಿಟ್ಟಿನಿಂದ ಸಿದ್ಧಪಡಿಸುವ ವಿಶೇಷವಾದ ತಿನಿಸಾಗಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಈಗಾಗಲೇ ಈ ಕ್ಷೇತ್ರದಲ್ಲಿ ಹಲ್ದಿರಾಮ್ ಸಾಕಷ್ಟು ಬೆಳೆದಿತ್ತು. ಆದರೂ ಶಿವ್ ರತನ್ ಅಂಜಲಿಲ್ಲ. ಹಲ್ದಿರಾಮ್ ಗೆ ಪೈಪೋಟಿ ನೀಡಲು ಸಿದ್ಧರಾದರು. 1980ರಲ್ಲಿ 'ಬಿಕಾಜಿ' ಬ್ರ್ಯಾಂಡ್ ಅನ್ನು ಅವರು ಪ್ರಾರಂಭಿಸಿದರು. 

ಜಗತ್ತಿನಾದ್ಯಂತ ತಿರುಗಾಟ
ಅಂತಿಮವಾಗಿ  1993ರಲ್ಲಿ  ಶಿವ್ ರತನ್ ಅಗರ್ವಾಲ್ 'ಬಿಕಾಜಿ' ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದರು. ಈ ಸಮಯದಲ್ಲಿ ಹಲ್ದಿರಾಮ್ ದೊಡ್ಡ ಪ್ರಮಾಣದಲ್ಲಿ ಭುಜಿಯಾ ತಯಾರಿಸುತ್ತಿತ್ತು. ಬಿಕನೇರ್ ನಲ್ಲಿ ಅಗರ್ವಾಲ್ ಮೊದಲ ಫ್ಯಾಕ್ಟರಿ ಪ್ರಾರಂಭಿಸಿದರು. ಈ ಸಮಯದಲ್ಲಿ ಅಗರ್ವಾಲ್ ಭಾರತದಲ್ಲಿ ಭುಜಿಯಾ ಉತ್ಪಾದಿಸಲು ಅತ್ಯುತ್ತಮವಾದ ತಂತ್ರಜ್ಞಾನವನ್ನು ಹುಡುಕಲು ಜಗತ್ತಿನಾದ್ಯಂತ ತಿರುಗಾಡಿದರು. ಏಕೆಂದರೆ ಆ ಸಮಯದಲ್ಲಿ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಭುಜಿಯಾ ಸಿದ್ಧಪಡಿಸಲು ಯಾವುದೇ ತಂತ್ರಜ್ಞಾನ ಇರಲಿಲ್ಲ.

ಸಾಲ ನೀಡಲು ಹಿಂದೇಟು ಹಾಕಿದ ಬ್ಯಾಂಕುಗಳು
ಆ ಸಮಯದಲ್ಲಿ ಅಗರ್ವಾಲ್ ಅವರ ಫ್ಯಾಕ್ಟರಿಗೆ ಸಾಲ ನೀಡಲು ಯಾವ ಬ್ಯಾಂಕುಗಳು ಕೂಡ ಸಿದ್ಧವಿರಲಿಲ್ಲ. ಹೀಗಾಗಿ ಅವರು ಮೂರು ವಿದೇಶಿ ಸಮೂಹ ಸಂಸ್ಥೆಗಳ ನೆರವು ಪಡೆದು ಕಂಪನಿ ಸ್ಥಾಪಿಸಿದರು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳನ್ನು ಫ್ಯಾಕ್ಟರಿಯಲ್ಲಿ ಅಳವಡಿಸಿದರು. ಹೀಗೆ ಆಧುನಿಕ ತಂತ್ರಜ್ಞಾನ ಹೊಂದಿರುವ ಯಂತ್ರಗಳಿಂದ ಸಿದ್ಧಗೊಂಡ ಭುಜಿಯಾವನ್ನು ಯುಎಇ ಹಾಗೂ ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲು ಪ್ರಾರಂಭಿಸಿದರು.

10ನೇ ವಯಸ್ಸಿನಲ್ಲಿ ಉದ್ಯಮಿಯಾದ ಸ್ಟಾರ್‌ ಕಿಡ್‌, ಅಮ್ಮ ಬಾಲಿವುಡ್ ನಟಿ ಅಪ್ಪನ ಆಸ್ತಿ 3000 ಕೋಟಿ ರೂ!

ಯಶಸ್ಸು ಕಂಡ ಉದ್ಯಮ
ಕೆಲವೇ ಸಮಯದಲ್ಲಿ ಅಗರ್ವಾಲ್ ಅವರ ಉದ್ಯಮದಲ್ಲಿ ಯಶಸ್ಸು ಸಿಗಲು ಪ್ರಾರಂಭವಾಯಿತು. ಅವರ ಉದ್ಯಮದ ಯಶಸ್ಸು ಕಂಡು ಬ್ಯಾಂಕುಗಳು ಕೂಡ ಒಂದರ ಹಿಂದೆ ಒಂದರಂತೆ ಸಾಲ ನೀಡಲು ಮುಂದೆ ಬಂದವು. ಹೀಗಾಗಿ ಅಗರ್ವಾಲ್ ಪಾಲುದಾರಿಕೆ ಉದ್ಯಮವನ್ನು ನಿಲ್ಲಿಸಿ ಅದನ್ನು ಪಬ್ಲಿಕ್ ಲಿಮಿಟೆಡ್ ಕಂಪನಿಯನ್ನಾಗಿ ಮಾಡಿದರು. 

ಉದ್ಯಮ ವಿಸ್ತರಣೆ
2006ರಲ್ಲಿ ಬಿಕಾಜಿ ಗ್ರೂಪ್ ಇತರ ಮೂರು ಗ್ರೂಪ್ ಗಳೊಂದಿಗೆ ಸಹಭಾಗಿತ್ವ ಹೊಂದಿತು. ಆ ಬಳಿಕ ಅವರು ಮುಂಬೈನಲ್ಲಿ 'ಬಿಕಾಜಿ ಫುಡ್ ಜಂಕ್ಷನ್' ಎಂಬ ಮಳಿಗೆ ತೆರೆದರು. ಈ ಯೋಜನೆ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಕಂಪನಿ 100 ಕೋಟಿ ರೂ. ಆದಾಯ ಪಡೆಯಲು ಪ್ರಾರಂಭಿಸಿತು. ಆ ಬಳಿಕ ಈ ಸಂಸ್ಥೆ ಹ್ಪಳ, ನಮಕಿನ್ ಹಾಗೂ ಪ್ಯಾಕೇಜ್ ಸ್ವೀಟ್ ಗಳನ್ನು ಕೂಡ ಮಾರಾಟ ಮಾಡಲು ಪ್ರಾರಂಭಿಸಿತು. 

Latest Videos
Follow Us:
Download App:
  • android
  • ios