ವೇಟರ್ ಆಗಿದ್ದ ಮಹಿಳೆ ಇಂದು 105 ಕೋಟಿ ರೂ. ಸಂಪಾದಿಸುವ ಬ್ಲಾಗರ್!

Published : Feb 17, 2023, 06:48 PM IST
ವೇಟರ್ ಆಗಿದ್ದ ಮಹಿಳೆ ಇಂದು 105 ಕೋಟಿ ರೂ. ಸಂಪಾದಿಸುವ ಬ್ಲಾಗರ್!

ಸಾರಾಂಶ

ಸಾಧನೆಗೆ ದೃಢಸಂಕಲ್ಪ, ಕಠಿಣ ಪರಿಶ್ರಮವಿದ್ದರೆ ಸಾಕು. ಅದೆಷ್ಟೇ ಕಠಿಣ ಹಾದಿಯಾದರೂ ಅಲ್ಲೊಂದು ಪಡಿಯಚ್ಚು ಮೂಡಿಸಬಹುದು. ಅಮೆರಿಕದ ಬ್ಲಾಗರ್ ಕರ ಪೆರೆಜ್ ಕೂಡ ಕಠಿಣ ಹಾದಿಯಲ್ಲೇ ಸಾಧನೆಯ ಛಾಪು ಮೂಡಿಸಿದವರು. ವೇಟರ್ ಕೆಲಸ ಮಾಡುತ್ತಿದ್ದ ಹುಡುಗಿ ವರ್ಷಕ್ಕೆ  105 ಕೋಟಿ ರೂ. ಸಂಪಾದಿಸುವ ಬ್ಲಾಗರ್ ಆದ ಕಥೆ ನಿಜಕ್ಕೂ ಸ್ಫೂರ್ತಿದಾಯಕ.   

Business Desk:ಒಂದೇ ಒಂದು ನಿರ್ಧಾರ ಕೆಲವರ ಬದುಕಿನ ಗತಿಯನ್ನೇ ಬದಲಾಯಿಸಿ ಬಿಡಬಲ್ಲದು. ಬರೀ ಕಷ್ಟವನ್ನೇ ಉಂಡವರು ಇಂಥ ಒಂದು ನಿರ್ಧಾರದಿಂದ ತಮ್ಮ ಹಣೆಬರಹವನ್ನೇ ಬದಲಾಯಿಸಿದ ಅನೇಕ ಕಥೆಗಳನ್ನು ನಾವು ಕೇಳಿರುತ್ತೇವೆ. ಇಂಥ ಯಶೋಗಾಥೆಗಳು ನಮಗೆ ಸ್ಫೂರ್ತಿ ನೀಡುತ್ತವೆ ಕೂಡ. ಇಂಥದ್ದೇ ಒಂದು ಕಥೆ ಕರ ಪೆರೆಜ್ ಅವರದ್ದು. ಅಮೆರಿಕದ ಬ್ಲಾಗರ್ ಕರ ಪೆರೆಜ್ ಅವರ ಕಥೆ ಕೇಳಿದ್ರೆ ಎಂಥವರ ಮನಸ್ಸಿನಲ್ಲೂ ಭರವಸೆಯ ಅಲೆಯೊಂದು ಮೂಡುತ್ತದೆ. ಅಮೆರಿಕದ ಆಸ್ಟಿನ್ ನಲ್ಲಿ ಪೆರೆಜ್ ವೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ವಾರ್ಷಿಕ ವೇತನ ಭಾರತದ ರೂಪಾಯಿಗೆ ಪರಿವರ್ತಿಸಿದರೆ ಕೇವಲ 15ಲಕ್ಷ ರೂ. ಹೀಗಿರುವಾಗ ಅವರ ಮೇಲೆ 24 ಲಕ್ಷ ರೂ. ಮೊತ್ತದ ಶೈಕ್ಷಣಿಕ ಸಾಲದ ಮರುಪಾವತಿ ಜವಾಬ್ದಾರಿ ಕೂಡ ಇತ್ತು. ಹೀಗಾಗಿ ಕರ ಪೆರೆಜ್ ಖರ್ಚು ಮಾಡುವಾಗ ಪ್ರತಿ ಪೈಸೆಯನ್ನು ಲೆಕ್ಕಯಿಡಬೇಕಾಗಿತ್ತು. ಅದರೆ, ಬದುಕು ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಅನಿರೀಕ್ಷಿತ ತಿರುವು ಪಡೆದುಕೊಂಡು ಬಿಡುತ್ತದೆ. ಪೆರೆಜ್ ಬದುಕಿನಲ್ಲೂ ಹಾಗೇ ಆಯಿತು. ಇಂದು ಪೆರೆಜ್ ವಾರ್ಷಿಕ 1.5  ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ಸ್ವಂತ ಬ್ಲಾಗ್ಸ್  ನಡೆಸುತ್ತಿರುವ ಹಾಗೂ ಕಂಪನಿಯನ್ನು ಸ್ಥಾಪಿಸಿರುವ ಕರ ಪೆರೆಜ್, ಆರ್ಥಿಕವಾಗಿ ಸದೃಢಗೊಂಡಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುತ್ತಿದ್ದಾರೆ. 

ಕರ ಪೆರೆಜ್ ಪ್ರಸ್ತುತ ಬ್ರೆವೆಲಿ ಗೊ (Bravely Go) ಎಂಬ ಹಣಕಾಸು ಶಿಕ್ಷಣ ನೀಡುವ ಸಂಸ್ಥೆಯ ಸಂಸ್ಥಾಪಕಿ. ಇದನ್ನು ಪ್ರಾರಂಭದಲ್ಲಿ ಬ್ಲಾಗ್ ರೂಪದಲ್ಲಿ ಪ್ರಾರಂಭಿಸಿದ ಕರ ಪೆರೆಜ್ ಆ ಬಳಿಕ ಅದನ್ನೇ ಒಂದು ಆಂದೋಲನವನ್ನಾಗಿ ಪರಿವರ್ತಿಸಿದರು. ಶೈಕ್ಷಣಿಕ ಸಾಲವನ್ನು ತನ್ನ ಸ್ವಂತ ದುಡಿಮೆಯಿಂದಲೇ ತೀರಿಸಿದ ಕರ, ಆ ಬಳಿಕ ಸಂಸ್ಥೆ ಪ್ರಾರಂಭಿಸಿದರು. ಕರ ಪೆರೆಜ್ ತನ್ನ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ತನ್ನನ್ನು ಹಣಕಾಸು ತಜ್ಞೆ, ವಕ್ತಾರೆ ಹಾಗೂ ಸ್ತ್ರೀವಾದಿ ಹಣಕಾಸು ಶಿಕ್ಷಣ ಸಂಸ್ಥೆ ಸ್ಥಾಪಕಿ ಎಂದು ಪರಿಚಯಿಸಿಕೊಂಡಿದ್ದಾರೆ. 

ಬ್ಯುಸಿನೆಸ್ ಗಂಧಗಾಳಿ ತಿಳಿಯದ ಮಹಿಳೆಗೆ ರತನ್ ಟಾಟಾ ಬೆಂಬಲ, ಈಗ ಆಕೆ 180 ಕೋಟಿ ಮೌಲ್ಯದ ಕಂಪನಿ ಒಡತಿ!

2011ರಲ್ಲಿ ಪದವಿ ಪಡೆದ ಕರ ಪೆರೆಜ್, ಕೆಲವೇ ಸಮಯದಲ್ಲೇ ಸಾಲ ಹಾಗೂ ಕಡಿಮೆ ಆದಾಯದ ವರ್ತುಲದಿಂದ ಹೊರಬರುವ ಅಗತ್ಯವನ್ನು ಮನಗಂಡರು. ತನ್ನ ಸಂಪಾದನೆ ಹಣದಲ್ಲೇ ಉಳಿತಾಯ ಮಾಡಿ ಶೈಕ್ಷಣಿಕ ಸಾಲವನ್ನು ಮರುಪಾವತಿ ಮಾಡುವ ಕರ, ಆ ಬಳಿಕ ಬ್ರೆವೆಲಿ ಗೊ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ವರ್ಕ್ ಶಾಪ್ ಗಳು, ಕೋರ್ಸ್ ಗಳು ಹಾಗೂ ಭಾಷಣಗಳ ಮೂಲಕ ಮಹಿಳೆಯರಲ್ಲಿ ಉತ್ತಮ ಹಣಕಾಸಿನ ಅಭ್ಯಾಸಗಳನ್ನು ಬೆಳೆಸೋದು ಕರ ಅವರ ಗುರಿಯಾಗಿತ್ತು.

ಈಗ  34 ವರ್ಷ ವಯಸ್ಸಿನ ಕರ ಮಾರಾಟದ ಮೂಲಕ 100,000 ಡಾಲರ್ ಮತ್ತು ಇತರೆ ಕಾರ್ಯದಿಂದ 27,000 ಡಾಲರ್ ಸಂಪಾದಿಸುತ್ತಿದ್ದಾರೆ. ಕಂಪನಿಯ ಹೊರತಾಗಿ ಕರ ಸೋಷಿಯಲ್ ಮೀಡಿಯಾ ಮ್ಯಾನೇಜರ್ ಆಗಿ ಕೂಡ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದಾರೆ. ಇದರ ಜೊತೆಗೆ ಹೈಸ್ಕೂಲ್ ಕೋಚ್ ಹಾಗೂ ಫ್ರೀಲ್ಯಾನ್ಸ್ ಬರಹಗಾರರು ಕೂಡ ಆಗಿದ್ದಾರೆ. ಅವರು ದಿನಕ್ಕೆ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಈ ಮೂಲಕ ಗಳಿಸಿದ ಹಣದಿಂದಲೇ ಸಾಲ ಮರುಪಾವತಿ ಮಾಡಿದ್ದರು ಕೂಡ. 2017ರಲ್ಲಿ ಪ್ರಾಯೋಜಕತ್ವದ ಮೂಲಕ ಹಣ ಗಳಿಸಲು ಅವರು ಪ್ರಾರಂಭಿಸಿದರು. ಅದಷ್ಟೇ ಹಣ ಗಳಿಸಿದರೂ ಅದನ್ನು ವ್ಯಯಿಸುವಾಗ ಕರ ಸಾಕಷ್ಟು ಎಚ್ಚರ ವಹಿಸುತ್ತಿದ್ದರು. ಎಲ್ಲೂ ದುಂದುವೆಚ್ಚ ಮಾಡುತ್ತಿರಲಿಲ್ಲ.

Gautam Adani: ಗೌತಮ್‌ ಅದಾನಿ ಪತ್ನಿ ಯಾರು? ಮದುವೆಗೂ ಮುನ್ನ ಅವ್ರೇನ್‌ ಮಾಡ್ತಿದ್ರು?

ಪ್ಲ್ಯಾಟ್ ಫಾರ್ಮ್ ಮೂಲಕ ಜನರಿಗೆ ಆರ್ಥಿಕ ಶಿಕ್ಷಣ ನೀಡುವ ಕಾರ್ಯವನ್ನು ಕರ ಮಾಡುತ್ತಿದ್ದಾರೆ. ಜನರಿಗೆ ತಮ್ಮ ಬಜೆಟ್ ಪ್ಲ್ಯಾನ್ ಮಾಡಲು ಕರ ನೆರವು ನೀಡುತ್ತಿದ್ದಾರೆ ಕೂಡ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!