Karnataka Budget 2023-24: SC/ST, OBCಗೆ ಬೊಮ್ಮಾಯಿ ಕೊಟ್ಟಿದ್ದೇನು?: ಹೊಸ ಯೋಜನೆಗಳ ವಿವರ

By Sathish Kumar KH  |  First Published Feb 17, 2023, 6:17 PM IST

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹಿಂದುಳಿದ ಸಮುದಾಯಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ 3,000 ಕೋಟಿ ರೂ.ಗಳ ಯೋಜನೆಗಳ ಅನುಷ್ಠಾನ ಕೈಗೊಳ್ಳಲಾಗುತ್ತಿದೆ.


ಬೆಂಗಳೂರು (ಫೆ.17): ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಹಿಂದುಳಿದ ಸಮುದಾಯಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ 3,000 ಕೋಟಿ ರೂ.ಗಳ ಯೋಜನೆಗಳ ಅನುಷ್ಠಾನ ಕೈಗೊಳ್ಳಲಾಗುತ್ತಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಬಡ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ ಉಚಿತ ವಿದ್ಯುತ್‌ ಸೌಲಭ್ಯ ಒದಗಿಸಲಾಗುತ್ತಿದೆ. ಬಾಬು ಜಗಜೀವನರಾಂ ಸ್ವಯಂ ಉದ್ಯೋಗ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಎಲೆಕ್ಟ್ರಿಕ್ ತ್ರಿಚಕ್ರ ಅಥವಾ 4 ಚಕ್ರದ ಸರಕು ವಾಹನ ಖರೀದಿಗೆ ಶೇ. 50 ರಷ್ಟು ಗರಿಷ್ಠ 2 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ 100 ಯುವಕರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. 

Tap to resize

Latest Videos

undefined

ಎಸ್‌ಸಿ,ಎಸ್‌ಟಿ ಕಾಮಗಾರಿ ಗುತ್ತಿಗೆ ಮೀಸಲಾತಿ ಮಿತಿ 1 ಕೋಟಿ ರೂ.ಗೆ ಹೆಚ್ಚಳ:  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿದ್ದ ಕಾಮಗಾರಿಗಳ ಮಿತಿಯನ್ನು 1 ಕೋಟಿ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಗುತ್ತಿಗೆ ಕಾಮಗಾರಿಗಳು ಮೀಸಲು ಇಡುವ ವ್ಯವಸ್ಥೆಯಡಿ ಹೆಚ್ಚಿನ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ಅನುಕೂಲ ಆಗಲಿದೆ. 

Women in Karnataka Budget 2023-24 : ಮಹಿಳೆಯರಿಗೆ ಬಂಪರ್‌ ಗಿಫ್ಟ್: ಮಹಿಳೆ- ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್

ಆಟೊ ಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಲಾರಿ ಚಾಲಕರು ಹಾಗೂ ಇ-ಕಾಮರ್ಸ್ ಡೆಲಿವರಿ ಸೇವೆ ನೀಡುತ್ತಿರುವವರಿಗೆ ಮುಖ್ಯಮಂತ್ರಿ ವಿಮಾ ಯೋಜನೆ ಯಡಿ 2 ಲಕ್ಷ ರೂ.ಗಳ ಜೀಮ ವಿಮಾ ಮತ್ತು 2 ಲಕ್ಷ ರೂ.ಗಳ ಅಪಘಾತ ಹಾಗೂ ಮೃತ್ಯು ವಿಮಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಯೋಜನೆಯಿಂದ 16.50 ಲಕ್ಷ ಜನರಿಗೆ ಅನುಕೂಲ ಆಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ  ವಸತಿ ಯೋಜನೆಯಲ್ಲಿನ ಸಹಾಯಧನದ ಘಟಕ ವೆಚ್ಚ 1.75 ಲಕ್ಷ ರೂ. ಗಳಿಂದ 2 ಲಕ್ಷ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. 

ಪೌರ ಕಾರ್ಮಿಕರಿಗೆ ಸ್ವಂತ ಸೂರಿಗಾಗಿ ಪೌರ ಆಸರೆ ಯೋಜನೆ: ಇನ್ನು ರಾಜ್ಯದಲ್ಲಿ ‘ಪೌರ ಆಸರೆʼ ಯೋಜನೆಯಡಿ 300 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಮೂಲಕ ರಾಜ್ಯದ 5,000 ಪೌರನೌಕರರಿಗೆ ಮನೆಗಳ ನಿರ್ಮಾಣ ಮಾಡಿಕೊಡಲಾಗುತ್ತದೆ. ಈ ಮೂಲಕ ಮನೆಗಳಿಲ್ಲದೇ ಬಳಲುತ್ತಿದ್ದ, ಬಾಡಿಗೆ ಮನೆಗಳು ಹಾಗೂ ಗುಡಿಸಲಿನಲ್ಲಿ ವಾಸಿಸುವ ಪೌರ ಕಾರ್ಮಿಕರಿಗೂ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. 

Karnataka Budget 2023-24: ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು; ಭೂ ಸಿರಿ ನೂತನ ಯೋಜನೆ ಘೋಷಣೆ

ಎಸ್.ಸಿ.ಎಸ್‍.ಪಿ/ಟಿ.ಎಸ್‍.ಪಿ :
2023-24 ರಲ್ಲಿ ಒಟ್ಟು 30,215 ಕೋಟಿ ರೂ.ಗಳನ್ನು ಎಸ್‍ಸಿಎಸ್‍ಪಿ/ಟಿಎಸ್‍ಪಿ ಗೆ ಹಂಚಿಕೆ ಮಾಡಲಾಗಿರುತ್ತದೆ. 2022-23ರಲ್ಲಿ ಈ ಹಂಚಿಕೆಯು 28,234 ಕೋಟಿ ರೂ.ಗಳಷ್ಟಿತ್ತು. ಕಳೆದ ಸಾಲಿಗೆ ಹೊಲಿಸಿದರೆ ಒಟ್ಟು 1,981 ಕೋಟಿ ರೂ.ಗಳಷ್ಟು ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಎಸ್‍ಸಿಎಸ್‍ಪಿ/ಟಿಎಸ್‍ಪಿ ಅಧಿನಿಯಮದ (Schedule Caste Sub Plan/ Tribal Sub Plan) ಪ್ರಕಾರ ಒಟ್ಟು ಹಂಚಿಕೆ ಮಾಡಬಹುದಾದ ಆಯವ್ಯಯದಲ್ಲಿ ಶೇ.24.1 ರಷ್ಟನ್ನು ಎಸ್‍ಸಿಎಸ್‍ಪಿ/ ಟಿಎಸ್‍ಪಿ ಗೆ ನೀಡಬೇಕಾಗಿರುತ್ತದೆ.  2023-24ರಲ್ಲಿ ಒಟ್ಟು ಹಂಚಿಕೆ ಮಾಡಬಹುದಾದ ಆಯವ್ಯಯದಲ್ಲಿ ಶೇ.24.53 ರಷ್ಟು ಹಂಚಿಕೆಯನ್ನು ಎಸ್‍ಸಿಎಸ್‍ಪಿ/ಟಿಎಸ್‍ಪಿ ಗೆ ಹಂಚಿಕೆ ಮಾಡಲಾಗಿದೆ. 

click me!