ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಬೆಂಗಳೂರು ಮೂಲದ ಸುಹಾಸ್ ಗೋಪಿನಾಥ್ ಉತ್ತಮ ನಿದರ್ಶನ. 14ನೇ ವಯಸ್ಸಿಗೆ ಸ್ವಂತ ಕಂಪನಿ ಸ್ಥಾಪಿಸಿ 17ಕ್ಕೆ ಸಿಇಒ ಆದ ಈ ಹುಡುಗ ಇಂದು ಕೋಟಿಗಟ್ಟಲೆ ಸಂಪತ್ತಿನ ಒಡೆಯ.
Business Desk: ಶಾಲೆಗೆ ಹೋಗುವ ವಯಸ್ಸಿನಲ್ಲಿ ಮಕ್ಕಳು ಪರೀಕ್ಷೆ, ಮಾರ್ಕ್ಸ್ ಬಗ್ಗೆ ತಲೆಕೆಡಿಸಿಕೊಳ್ಳೋದು ಸಾಮಾನ್ಯ. ಆದರೆ, ಸುಹಾಸ್ ಗೋಪಿನಾಥ್ ಎಂಬ ಬಾಲಕ ಮಾತ್ರ ಸ್ವಂತ ಉದ್ಯಮ ಸ್ಥಾಪಿಸಿ ಅದನ್ನು ಬೆಳೆಸುವ ಯೋಚನೆಯಲ್ಲಿ ತೊಡಗಿದ್ದ. 14ನೇ ವಯಸ್ಸಿನಲ್ಲಿ ಗ್ಲೋಬಲ್ ಇಂಕ್ ಎಂಬ ಸ್ವಂತ ಕಂಪನಿ ಸ್ಥಾಪಿಸಿದ್ದ ಈತ 17ನೇ ವಯಸ್ಸಿನಲ್ಲಿ ಜಗತ್ತಿನ ಅತ್ಯಂತ ಕಿರಿಯ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ. ಯಾವುದೇ ವ್ಯಕ್ತಿ ತನ್ನ ಆಸಕ್ತಿಯನ್ನು ತುಂಬು ಹೃದಯದಿಂದ ಅನುಸರಿಸಿದ್ರೆ ಯಶಸ್ಸು ಸಿಕ್ಕೇಸಿಗುತ್ತದೆ ಎಂಬ ನಂಬಿಕೆಗೆ ಸುಹಾಸ್ ಕಥೆ ಪ್ರೇರಣೆಯಾಗಿದೆ. ಬೆಂಗಳೂರು ಮೂಲದ ಈ ಹುಡುಗನನ್ನು ಒಂದು ಕಾಲದಲ್ಲಿ ಇಡೀ ಜಗತ್ತೇ ಬೆರಗುಗಣ್ಣಿನಿಂದ ನೋಡಿತ್ತು. ಕಂಪ್ಯೂಟರ್ ಯುಗ ಆಗಷ್ಟೇ ಪ್ರಾರಂಭವಾಗಿದ್ದ ಸಮಯದಲ್ಲಿ ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನ ಈ ಹುಡುಗ ಸಾಫ್ಟವೇರ್ ತಂತ್ರಜ್ಞಾನದಲ್ಲಿ ಪರಿಣತಿ ಪಡೆದಿದ್ದ. ಅಷ್ಟೇ ಅಲ್ಲ, ಆ ಕ್ಷೇತ್ರದಲ್ಲಿ ಸ್ವಂತ ಉದ್ಯಮ ಸ್ಥಾಪಿಸುವ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದ.
ಸುಹಾಸ್ ಗೋಪಿನಾಥ್ ಬೆಂಗಳೂರು ಮೂಲದವರಾಗಿದ್ದು, ಅವರ ತಂದೆ ಎಂ.ಆರ್.ಗೋಪಿನಾಥ್ ಭಾರತೀಯ ಸೇನೆಯಲ್ಲಿ ರಕ್ಷಣಾ ವಿಜ್ಞಾನಿಯಾಗಿದ್ದರು. ಇನ್ನು ಅವರ ತಾಯಿ ಕಲಾ ಗೋಪಿನಾಥ್ ಗೃಹಿಣಿಯಾಗಿದ್ದರು. ಬೆಂಗಳೂರಿನ ವಾಯು ಸೇನೆ ಶಾಲೆಯಲ್ಲಿ ಸುಹಾಸ್ ಶಿಕ್ಷಣ ಪಡೆಯುತ್ತಿದ್ದರು. ಆ ಸಮಯದಲ್ಲಿ ಕಂಪ್ಯೂಟರ್ ಪ್ರವರ್ಧಮಾನಕ್ಕೆ ಬರಲು ಪ್ರಾರಂಭಿಸಿತ್ತು. ಎಲ್ಲರಂತೆ ಸುಹಾಸ್ ಗೋಪಿನಾಥ್ ಕೂಡ ಈ ಹೊಸ ತಂತ್ರಜ್ಞಾನದತ್ತ ಆಕರ್ಷಿತರಾದರು. ಆದರೆ, ಈ ಸಮಯದಲ್ಲಿ ಅವರ ಬಳಿ ಕಂಪ್ಯೂಟರ್ ಇರಲಿಲ್ಲ. ಹೀಗಾಗಿ ಇಂಟರ್ನೆಟ್ ಕೆಫೆಗೆ ಹೋಗಲು ಪ್ರಾರಂಭಿಸಿದ್ದರು.
ಬೆಂಗಳೂರು: ಬಡತನಕ್ಕೆ ಡೋಂಟ್ ಕೇರ್.. ಇಡ್ಲಿ- ದೋಸೆಯಿಂದ್ಲೇ ಶ್ರೀಮಂತನಾದ ವ್ಯಕ್ತಿ!
12ನೇ ವಯಸ್ಸಿನಲ್ಲಿ ಕೆಫೆಯಲ್ಲಿ ಕೆಲಸ
ಮನೆ ಸಮೀಪದ ಇಂಟರ್ನೆಟ್ ಕೆಫೆಗೆ ಹೋಗಲು ಪ್ರಾರಂಭಿಸಿದ ಸುಹಾಸ್ ಅಲ್ಲಿ ಕಂಪ್ಯೂಟರ್ ಬಗ್ಗೆ ಹೆಚ್ಚಿನ ಜ್ಞಾನ ಪಡೆದರು. ಆದರೆ, ಇಂಟರ್ನೆಟ್ ಕೆಫೆಗೆ ಬಾಡಿಗೆ ನೀಡಲು ಅವರ ಬಳಿ ಹೆಚ್ಚು ಹಣವಿರಲಿಲ್ಲ. ಹೀಗಾಗಿ ಕೆಫೆ ಮಾಲೀಕರ ಜೊತೆಗೆ ಮಾತನಾಡಿ ಮಧ್ಯಾಹ್ನ 1ರಿಂದ 4ರ ತನಕ ಕೆಫೆ ಉಸ್ತುವಾರಿ ನೋಡಿಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಅವರ ಮೊದಲ ಉದ್ಯೋಗವಾಗಿತ್ತು. ಈ ಸಮಯದಲ್ಲಿ ಸುಹಾಸ್ ಅವರ ವಯಸ್ಸು ಕೇವಲ 12.
ವೆಬ್ ಸೈಟ್ ನಿರ್ಮಾಣದಲ್ಲಿ ಪರಿಣತಿ ಪಡೆದ ಸುಹಾಸ್
ಇಂಟರ್ನೆಟ್ ಕೆಫೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸುಹಾಸ್ ವೆಬ್ ಸೈಟ್ ನಿರ್ಮಾಣದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಕ್ರಮೇಣ ಇದರಲ್ಲಿ ಪರಿಣತಿ ಸಂಪಾದಿಸುತ್ತಾರೆ. ಪ್ರಾರಂಭದಲ್ಲಿ ಫ್ರೀಲ್ಯಾನ್ಸ್ ವೆಬ್ ಡಿಸೈನರ್ ಆಗಿ ಸುಹಾಸ್ ನೋಂದಣಿ ಮಾಡಿಸಿಕೊಳ್ಳುತ್ತಾರೆ. ಆ ಬಳಿಕ ಅವರಿಗೆ ಗ್ರಾಹಕರು ಸಿಗಲು ಪ್ರಾರಂಭಿಸುತ್ತಾರೆ. ಆ ನಂತರ ತಮ್ಮ ಗಳಿಕೆಯ ಹಣವನ್ನು ಒಟ್ಟುಗೂಡಿಸಿ ಸುಹಾಸ್ ಕಂಪ್ಯೂಟರ್ ಖರೀದಿಸುತ್ತಾರೆ. ಅದಕ್ಕೆ ಇಂಟರ್ನೆಟ್ ಸಂಪರ್ಕ ಕೂಡ ಪಡೆಯುತ್ತಾರೆ. ಸುಹಾಸ್ ಅವರ “coolhindustan.com” ಎಂಬ ಪ್ರಾಜೆಕ್ಟ್ ಅವರನ್ನು ವಿಶ್ವದ ಕಿರಿಯ ಸರ್ಟಿಫೈಡ್ ಪ್ರೊಫೆಷನಲ್ ವೆನ್ ಡೆವಲಪರ್ ಎಂದು ಗುರುತಿಸಿಕೊಳ್ಳಲು ನೆರವು ನೀಡುತ್ತದೆ. ಈ ಸಮಯದಲ್ಲಿ ಸುಹಾಸ್ ವಯಸ್ಸು ಕೇವಲ 4 ವರ್ಷ.
ಜವಾನ್ ಬೆಡಗಿಗೆ ಸಿಕ್ತು ಹೊಸ ಬಿರುದು; ಲೇಡಿ ಸೂಪರ್ ಸ್ಟಾರ್ ನಯನತಾರಾ ಈಗ ಪ್ರಭಾವಿ ಮಹಿಳಾ ಉದ್ಯಮಿ
ದೊಡ್ಡ ಐಟಿ ಕಂಪನಿಗಳಿಂದ ಉದ್ಯೋಗಾವಕಾಶ
ಸುಹಾಸ್ ಅವರ ಜನಪ್ರಿಯತೆ ದೇಶಾದ್ಯಂತ ಹರಡುತ್ತದೆ. ಪರಿಣಾಮ ಅನೇಕ ದೊಡ್ಡ ಐಟಿ ಕಂಪನಿಗಳು ಅವರಿಗೆ ಉದ್ಯೋಗದ ಆಫರ್ ನೀಡುತ್ತವೆ. ಆದರೆ, ಸುಹಾಸ್ ಅವರಿಗೆ ಬಿಲ್ ಗೇಟ್ಸ್ ಮಾದರಿಯಲ್ಲಿ ದೊಡ್ಡದ್ದನ್ನು ಸಾಧಿಸುವ ಕನಸಿತ್ತು. ಹೀಗಾಗಿ ಉದ್ಯೋಗಾವಕಾಶಗಳನ್ನು ನಿರಾಕರಿಸುತ್ತಾರೆ.
14ನೇ ವಯಸ್ಸಿನಲ್ಲಿ ಸ್ವಂತ ಕಂಪನಿ
2000ನೇ ಇಸವಿಯಲ್ಲಿ ಸುಹಾಸ್ 'ಗ್ಲೋಬಲ್ ಇಂಕ್' ಎಂಬ ಸ್ವಂತ ಉದ್ಯಮ ಪ್ರಾರಂಭಿಸುತ್ತಾರೆ. ಆಗ ಅವರ ವಯಸ್ಸು 14. ಭಾರತದಲ್ಲಿ ವಯಸ್ಸಿನ ಅಡ್ಡಿಯಿಂದ ಕಂಪನಿಯನ್ನು ನೋಂದಣಿ ಮಾಡಿಸಲು ಸಾಧ್ಯವಾಗದ ಕಾರಣ ಅಮೆರಿಕಕ್ಕೆ ತೆರಳಿ ಅಲ್ಲಿ ನೋಂದಣಿ ಮಾಡುತ್ತಾರೆ. 17ನೇ ವಯಸ್ಸಿನಲ್ಲಿ ಅವರು ಈ ಕಂಪನಿ ಸಿಇಒ ಆಗುವ ಮೂಲಕ ವಿಶ್ವದ ಅತ್ಯಂತ ಕಿರಿಯ ಸಿಇಒ ಎಂಬ ಹೆಗ್ಗಳಿಕೆ ಗಳಿಸುತ್ತಾರೆ. ಇಂದು ಈ ಕಂಪನಿ ಅಮೆರಿಕ, ಭಾರತ, ಇಂಗ್ಲೆಂಡ್, ಸ್ಪೇನ್, ಆಸ್ಟ್ರೇಲಿಯಾ ಸೇರಿದಂತೆ 14 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಂಪನಿ ಮೌಲ್ಯ ಇಂದು 100 ಕೋಟಿ ರೂ.