ಹೊಸ ವರ್ಷದ ಪಾರ್ಟಿ ಜೋರಾ? ಮನೆಯಲ್ಲೆಷ್ಟು ಮದ್ಯ ಇಟ್ಟುಕೊಳ್ಳಬಹುದು?

By Suvarna News  |  First Published Dec 14, 2023, 11:48 AM IST

ಪಾರ್ಟಿ ಅಂದ್ಮೇಲೆ ಮದ್ಯ ಇರ್ಬೇಕು. ಅದರಲ್ಲೂ ಹೊಸ ವರ್ಷದ ಪಾರ್ಟಿ ಮತ್ತೇರಿದಾಗ್ಲೇ ಮಜ ಎನ್ನುವವರು ಅನೇಕರು. ಅಂಥವರು ಮನೆಯಲ್ಲಿ ಬಾಟಲಿ ಸಂಗ್ರಹಿಸುವ ಮುನ್ನ ಇದನ್ನು ಓದಿ. ಇಲ್ಲ ಅಂದ್ರೆ ಶಿಕ್ಷೆ ಅನುಭವಿಸಬೇಕಾಗುತ್ತೆ.
 


ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದೆ. 2023ಕ್ಕೆ ಗುಡ್ ಬೈ ಹೇಳಿ  2024ನ್ನು ಸ್ವಾಗತಿಸಲು ಜನರು ತಯಾರಿ ನಡೆಸುತ್ತಿದ್ದಾರೆ. ಹೊಸ ವರ್ಷದಲ್ಲಿ ಆ ಕೆಲಸ ಮಾಡ್ಬೇಕು, ಈ ಕೆಲಸ ಶುರು ಮಾಡ್ಬೇಕು ಎನ್ನುವ ಪಟ್ಟಿ ಬೆಳೆಯುತ್ತಿದೆ. ಇತ್ತ ಹೊಸ ವರ್ಷದ ಪಾರ್ಟಿಗಳಿಗೆ ಹೊಟೇಲ್, ರೆಸ್ಟೋರೆಂಟ್ ಸೇರಿ ಹಾಲ್ ಗಳಲ್ಲಿ ತಯಾರಿ ಆಗ್ತಿದೆ. ಹೊಸ ವರ್ಷದ ಪಾರ್ಟಿ ಅಂದ್ಮೇಲೆ ಆಲ್ಕೋಹಾಲ್ ಇಲ್ಲದೆ ಇದ್ರೆ ಹೇಗೆ? ಈಗಿನ ದಿನಗಳಲ್ಲಿ ದೀಪಾವಳಿ, ಗಣೇಶ ಚತುರ್ಥಿಯಂತಹ ಹಬ್ಬದ ಪಾರ್ಟಿಯಲ್ಲೇ ಮದ್ಯ ಇಡ್ತಾರೆ. ಇನ್ನು ಹೊಸ ವರ್ಷದ ಪಾರ್ಟಿ  ಆಲ್ಕೋಹಾಲ್ ಇಲ್ಲದೆ ಆಗಲು ಸಾಧ್ಯವೇ ಇಲ್ಲ. 

ಆಲ್ಕೋಹಾಲ್ (Alcohol) ಸೇವನೆ ಆರೋಗ್ಯ (Health)ಕ್ಕೆ ಹಾನಿಕರ. ಹೊಸ ವರ್ಷ (New Year ) ದ ಮೊದಲ ದಿನವನ್ನು ಮದ್ಯ ಸೇವನೆ ಮಾಡಿ ಆರಂಭಿಸೋದು ಎಷ್ಟು ಚೆಂದ ಅಂತ ಸಂಪ್ರದಾಯಸ್ಥರು ಕೇಳ್ತಾರೆ. ಆದ್ರೆ ಮದ್ಯ ಪ್ರೇಮಿಗಳಿಗೆ ಇದ್ರ ಬಗ್ಗೆ ನೋ ಟೆನ್ಷನ್. ಮದ್ಯ ಇದ್ರೆ ಪಾರ್ಟಿಗೆ ಬರ್ತೇವೆ ಎನ್ನುವ ಜನರಿಗೆ ಆಲ್ಕೋಹಾಲ್ ನೀಡ್ಲೇಬೇಕು.

Tap to resize

Latest Videos

ದೇಶದ ಅತ್ಯಂತ ಅಸುರಕ್ಷಿತ ನಗರಗಳಿವು… ಹೋಗೋ ಮುನ್ನ ಎಚ್ಚರಿಕೆ ಇರಲಿ

ಹೊಸ ವರ್ಷದ ಪಾರ್ಟಿಯನ್ನು ಬರೀ ಹೊಟೇಲ್, ಪಬ್, ರೆಸ್ಟೋರೆಂಟ್ ಗಳಲ್ಲಿ ಮಾಡೋದಿಲ್ಲ. ಮನೆಯಲ್ಲೂ ಪಾರ್ಟಿಗಳನ್ನು ಏರ್ಪಡಿಸ್ತಾರೆ. ಆಗ ಮದ್ಯದ ಬಾಟಲಿ ಖರೀದಿ ಮಾಡ್ಬೇಕಾಗುತ್ತದೆ. ಹೊಸ ವರ್ಷದ ಪಾರ್ಟಿಗೆ ಮೊದಲು ಮದ್ಯದ ಬಾಟಲಿ ಖರೀದಿ ಮಾಡಿ ಮನೆಯಲ್ಲಿಟ್ಟುಕೊಳ್ಳುವ ಜನರು ಅದರ ನಿಯಮದ ಬಗ್ಗೆ ತಿಳಿದಿರಬೇಕು. ಪ್ರತಿ ರಾಜ್ಯವೂ ಮದ್ಯಕ್ಕೆ ಸಂಬಂಧಿಸಿದಂತೆ ತನ್ನದೆ ನಿಯಮ ಹೊಂದಿದೆ. ಮನೆಯಲ್ಲಿ ಎಷ್ಟು ಆಲ್ಕೋಹಾಲ್ ಬಾಟಲಿ ಇಟ್ಟುಕೊಳ್ಳಬೇಕು ಎನ್ನುವ ನಿಯಮ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ.  ಕರ್ನಾಟಕದ ಸ್ಥಳೀಯ ಕಾನೂನು ಒಂಬತ್ತು ಬಾಟಲಿಗಳ ವಿಸ್ಕಿಯನ್ನು  ಸಂಗ್ರಹಿಸಲು ಅನುಮತಿ ನೀಡುತ್ತದೆ. 

ದೆಹಲಿಯಲ್ಲಿ ಮನೆಯಲ್ಲಿ ಎಷ್ಟು ಮದ್ಯವನ್ನು ಸಂಗ್ರಹಿಸಲು ಅನುಮತಿಸಲಾಗಿದೆ. ದೆಹಲಿ ಹೈಕೋರ್ಟ್‌ನ ನಿಯಮಗಳ ಪ್ರಕಾರ , 25 ವರ್ಷ ಮೇಲ್ಪಟ್ಟ ಜನರು ತಮ್ಮ ಮನೆಯಲ್ಲಿ  ಒಂಬತ್ತು ಲೀಟರ್ ವಿಸ್ಕಿ, ರಮ್ ಅಥವಾ ವೋಡ್ಕಾವನ್ನು ಸಂಗ್ರಹಿಸಬಹುದು. ಇದಲ್ಲದೆ  ದೆಹಲಿಯ ಜನರು ತಮ್ಮ ಮನೆಗಳಲ್ಲಿ 18 ಲೀಟರ್ ಬಿಯರ್ ಅಥವಾ ವೈನ್ ಅನ್ನು ಸಂಗ್ರಹಿಸಬಹುದು.  

ಗೋವಾದಲ್ಲಿ ಯಾವ ನಿಯಮವಿದೆ? : ಅದ್ಧೂರಿ ಪಾರ್ಟಿಗಳಿಗೆ ಹೆಸರಾಗಿರುವ ಗೋವಾದಲ್ಲಿ ಮಾರು ಮಾರಿಗೆ ಒಂದೊಂದು ಮದ್ಯದಂಗಡಿ ಇದೆ. ಆದ್ರೆ ಮನೆಯಲ್ಲಿ ಮದ್ಯದ ಬಾಟಲಿ ಸಂಗ್ರಹಕ್ಕೆ ಸಂಬಂಧಿಸಿದಂತೆ ನಿಯಮಗಳಿವೆ. ಗೋವಾದಂತಹ ರಾಜ್ಯದಲ್ಲಿ ಮನೆಯಲ್ಲಿ 18 ಬಾಟಲಿ ಬಿಯರ್ ಶೇಖರಿಸಿಡಬಹುದು. ಇದಲ್ಲದೇ 24 ಬಾಟಲ್ ದೇಶಿ ಮದ್ಯವನ್ನು ಇಡಬಹುದಾಗಿದೆ. 

ಮಹಾರಾಷ್ಟ್ರದ ನಿಯಮ ಏನು? : ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಮನೆಯಲ್ಲಿ 6 ಬಾಟಲಿ ಮದ್ಯವನ್ನು ಸಂಗ್ರಹಿಸಲು ಅನುಮತಿ ನೀಡಲಾಗಿದೆ.

ಗೆಸ್ಟ್ ಬರೋವಾಗಲೇ ಊಟ ತಂದು ಕೊಳ್ತಾರೆ ಈ ದೇಶದಲ್ಲಿ! ಅತಿಥಿಗಳಿಗೆ ಊಟ ಹಾಕೋ ಪದ್ಧತಿಯೇ ಇಲ್ಲ ಇಲ್ಲಿ

ರಾಜಸ್ಥಾನ : ಇನ್ನು ರಾಜಸ್ಥಾನದಂತಹ ರಾಜ್ಯದಲ್ಲಿ ಐಎಂಎಫ್‌ಎಲ್‌ನ 18 ಬಾಟಲಿಗಳನ್ನು ಮನೆಯಲ್ಲಿ ಇಡಲು ಒಪ್ಪಿಗೆ ನೀಡಲಾಗುತ್ತದೆ.

ಪಂಜಾಬ್ – ಹರಿಯಾಣ : ಪಂಜಾಬಿನಲ್ಲೂ ಮದ್ಯದ ಪಾರ್ಟಿಗಳು ಜೋರಾಗಿ ನಡೆಯುತ್ತವೆ. ಪಂಜಾಬ್‌ನಲ್ಲಿ ಹೊಸ ವರ್ಷದ ಪಾರ್ಟಿಯನ್ನು ಆಯೋಜಿಸುತ್ತಿದ್ದರೆ ಎರಡು ಬಾಟಲಿ ದೇಶೀಯ ಅಥವಾ ವಿದೇಶಿ ಮದ್ಯವನ್ನು ಮಾತ್ರ ಸಂಗ್ರಹಿಸಬಹುದು. ಮನೆಯಲ್ಲಿ ಇದಕ್ಕಿಂತ ಹೆಚ್ಚು ಮದ್ಯವನ್ನು ಸಂಗ್ರಹಿಸಿಟ್ಟರೆ ಪ್ರತಿ ವರ್ಷ 1000 ರೂಪಾಯಿ ಶುಲ್ಕ ಪಾವತಿಸಿ ಪರವಾನಗಿ ತೆಗೆದುಕೊಳ್ಳಬೇಕಾಗುತ್ತದೆ.

ಹರಿಯಾಣದಲ್ಲಿ ಆರು ಬಾಟಲಿ ದೇಶೀಯ ಮದ್ಯ ಮತ್ತು 18 ವಿದೇಶಿ ಮದ್ಯದ ಬಾಟಲಿಗಳನ್ನು ಮನೆಯಲ್ಲಿ ಸಂಗ್ರಹಿಸಬಹುದು. ಇದಕ್ಕಿಂತ ಹೆಚ್ಚಿನ ಮದ್ಯವನ್ನು ಸಂಗ್ರಹಿಸಲು  ಬಯಸಿದರೆ ಮಾಸಿಕ 200 ರೂ ಪಾವತಿಸಿ ಪರವಾನಗಿ ಪಡೆಯಬೇಕು.

ಜಮ್ಮು- ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ 750ಎಂಎಲ್ ಬಾಟಲಿಗಳ ಸ್ಥಳಿಯ ವಿಸ್ಕಿ ಸೇರಿದಂತೆ ಐಎಂಎಫ್ ಎಲ್ ನ 12 ಬಾಟಲಿಗಳನ್ನು ಸಂಗ್ರಹಿಸಲು ಅನುಮತಿ ಇದೆ.

ಈ ರಾಜ್ಯದಲ್ಲಿ ಮದ್ಯ ಬ್ಯಾನ್ : ಇನ್ನು ಕೆಲ ರಾಜ್ಯಗಳಲ್ಲಿ ಮದ್ಯ ಸಂಗ್ರಹಕ್ಕೆ ಅನುಮತಿ ಇಲ್ಲ. ಮಿಜೋರಾಂ, ಗುಜರಾತ್, ಬಿಹಾರ, ನಾಗಾಲ್ಯಾಂಡ್ ಮತ್ತು ಲಕ್ಷದ್ವೀಪ ಇದ್ರರಲ್ಲಿ ಸೇರಿದೆ.

click me!