ಕೆಲವು ಮಹಿಳೆಯರು ಪತಿ ಹಾಗೂ ಕುಟುಂಬದವರ ಬಳಿ ಅದೆಷ್ಟೇ ಸಂಪತ್ತು ಇದ್ದರೂ ಸ್ವ ದುಡಿಮೆಯಿಂದ ಏನಾದರೂ ಸಾಧಿಸಬೇಕು ಎಂಬ ಛಲ ಹೊಂದಿರುತ್ತಾರೆ. ಅ ಮೂಲಕ ಅನೇಕರಿಗೆ ಮಾದರಿ ಕೂಡ ಆಗುತ್ತಾರೆ. ಅಂಥ ಸಾಧಕ ಮಹಿಳೆಯರಲ್ಲಿ ಆಯೇಷಾ ಥಾಪರ್ ಕೂಡ ಒಬ್ಬರು. ಅಮೆರಿಕದಲ್ಲಿ ರೆಸ್ಟೋರೆಂಟ್ ಸ್ಥಾಪಿಸುವ ಮೂಲಕ ಅದರಲ್ಲಿ ಯಶಸ್ಸು ಕಂಡಿರುವ ಈಕೆ ಭಾರತದ ಜನಪ್ರಿಯ ಉದ್ಯಮ ಕುಟುಂಬ ಥಾಪರ್ ವಂಶದ ಕುಡಿ. ಈಕೆ ಪತಿ ನಿಕೇಶ್ ಆರೋರಾ 8,500 ಕೋಟಿ ರೂ. ಮೌಲ್ಯದ ಸೈಬರ್ ಸೆಕ್ಯುರಿಟಿ ಸಂಸ್ಥೆ ಪಲೊ ಅಲ್ಟೊ ನೆಟ್ ವರ್ಕ್ಸ್ ಸಿಇಒ.
Business Desk:ದೇಶದ ಜನಪ್ರಿಯ ಉದ್ಯಮ ಕುಟುಂಬ ಥಾಪರ್ ವಂಶದ ಕುಡಿ ಆಯೇಷಾ ಥಾಪರ್ ಈಗ ಅಮೆರಿಕದ ಯಶಸ್ವಿ ಹೋಟೆಲ್ ಉದ್ಯಮಿ. ಉದ್ಯಮ ಕುಟುಂಬದಿಂದ ಬಂದಿರುವ ಆಯೇಷಾಗೆ ಮೊದಲಿನಿಂದಲೂ ಉದ್ಯಮಿ ಆಗಬೇಕು ಎಂಬ ಕನಸಿತಂತೆ. ಈಕೆ ಮನಸ್ಸು ಮಾಡಿದ್ದರೆ ಕುಟುಂಬದ ಉದ್ಯಮವನ್ನೇ ಮುಂದುವರಿಸಿಕೊಂಡು ಹೀಗಬಹುದಿತ್ತು. ಆದರೆ, ಆಯೇಷಾ ಹಾಗೇ ಮಾಡಲಿಲ್ಲ. ತಾನೇ ಒಂದು ಉದ್ಯಮವನ್ನು ಕಟ್ಟಿ ನಿಲ್ಲಿಸುವ ಪ್ರಯತ್ನ ಮಾಡಿದರು. ಅಮೆರಿಕದಲ್ಲಿ ರೆಸ್ಟೋರೆಂಟ್ ಸ್ಥಾಪಿಸುವ ಮೂಲಕ ಈಗ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ ಕೂಡ. ಆಯೇಷಾ ಥಾಪರ್ ಅವರ ಪತಿ ನಿಕೇಶ್ ಆರೋರಾ ಮಲ್ಟಿ ಬಿಲಿಯನ್ ಡಾಲರ್ ಸೈಬರ್ ಸೆಕ್ಯುರಿಟಿ ಸಂಸ್ಥೆ ಪಲೊ ಅಲ್ಟೊ ನೆಟ್ ವರ್ಕ್ಸ್ ಸಿಇಒ. 8,500 ಕೋಟಿ ರೂ. ನಿವ್ವಳ ಸಂಪತ್ತು ಹೊಂದಿರುವ ನಿಕೇಶ್, ಜಗತ್ತಿನ ಅತೀ ಶ್ರೀಮಂತ ಭಾರತೀಯ ಸಿಇಒಗಳಲ್ಲಿ ಒಬ್ಬರು. ಪತಿ ಹಾಗೂ ಕುಟುಂಬ ಬಹುಕೋಟಿ ಆದಾಯ ಹೊಂದಿದ್ದರೂ ಸ್ವಂತದ್ದೇನಾದರೂ ಸಾಧಿಸಬೇಕು ಎಂಬ ಛಲ ಇಂದು ಆಯೇಷಾ ಅವರನ್ನು ಅಮೆರಿಕದ ಜನಪ್ರಿಯ ಹೋಟೆಲ್ ಉದ್ಯಮಿಯನ್ನಾಗಿಸಿದೆ.
ಆಯೇಷಾ ಥಾಪರ್ ದೆಹಲಿ ಮಾಡರ್ನ್ ಸ್ಕೂಲ್ ನಿಂದ ಶಾಲಾ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಆ ಬಳಿಕ ವೆಲ್ಲೆಸ್ಲೆ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಆಕೆ ರಿಯಲ್ ಎಸ್ಟೇಟ್ ಕ್ಷೇತ್ರದ ಬಹುದೊಡ್ಡ ಸಂಸ್ಥೆ ಇಂಡಿಯನ್ ಸಿಟಿ ಪ್ರಾಪರ್ಟಿಸ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕಿ ಕೂಡ ಆಗಿದ್ದಾರೆ. ಆಯೇಷಾ ಥಾಪರ್ ತಾತ ಭಾರತದ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರಾದ ಕರಂ ಚಂದ್ ಥಾಪರ್.
ಅಂದು ಕೃಷಿಗಾಗಿ ಬ್ಯಾಂಕ್ ಉದ್ಯೋಗ ತೊರೆದ ಸಹೋದರರು,ಇಂದು 12 ಕೋಟಿ ರೂ. ವಹಿವಾಟು ನಡೆಸೋ ಸಂಸ್ಥೆಯ ಒಡೆಯರು!
ಥಾಪರ್ ಕುಟುಂಬ ಭಾರತದಲ್ಲಿ ಬಹುದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಹೊಂದಿದೆ. ಕಲ್ಲಿದ್ದಲು ವಹಿವಾಟಿನಿಂದ ಹಿಡಿದು ಜವಳಿ, ರಿಯಲ್ ಎಸ್ಟೇಟ್, ಶಿಕ್ಷಣ ಹಾಗೂ ಟ್ರೇಡಿಂಗ್ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಮೂಲಕ ದೊಡ್ಡ ಪ್ರಮಾಣದಲ್ಲಿ ಸಂಪತ್ತನ್ನು ಗಳಿಸಿದೆ. ಹಾಗೆಯೇ ಒಂದು ಸಮಯದಲ್ಲಿ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಕೂಡ ಈ ಸಂಸ್ಥೆಯ ಹಿಡಿತದಲ್ಲಿತ್ತು. ಕೆಸಿಟಿ ಗ್ರೂಪ್ ಪ್ರಸ್ತುತ ಆಯೇಷಾ ಅವರ ತಂದೆ ವಿಕ್ರಂ ಥಾಪರ್ ಹಾಗೂ ಸಹೋದರ ವರುಣ್ ಥಾಪರ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಆಯೇಷಾ ಬರೀ ಉದ್ಯಮ ಕುಟುಂದ ಕುಡಿ ಮಾತ್ರವಲ್ಲ, ಯಶಸ್ವಿ ಮಹಿಳಾ ಉದ್ಯಮಿ ಕೂಡ ಎಂಬುದನ್ನು ಸಾಬೀತುಪಡಿಸಿದ್ದಾರೆ. 12ನೇ ವಯಸ್ಸಿನಲ್ಲೇ ಉದ್ಯಮಿಯಾಗುವ ಕನಸಿತ್ತು ಎಂದು ಆಯೇಷಾ ತಿಳಿಸಿದ್ದರು. ಇನ್ನು ಆಯೇಷಾ ಈ ಹಿಂದೆ ಮಾಡೆಲ್ ಕೂಡ ಆಗಿದ್ದರು. ಸಂಸಾರ್ ಹಾಗೂ ಜ್ಯುವೆಲ್ಲರಿ ಲೈನ್ ಸೇರಿದಂತೆ ಅನೇಕ ಫ್ಯಾಷನ್ ಉತ್ಪನ್ನಗಳನ್ನು ಕೂಡ ಬಿಡುಗಡೆಗೊಳಿಸಿದ್ದರು. ಹಾಗೆಯೇ ಆ ಮಿಯಾಮಿ ಎಂಬ ಟೆಲಿಕಾಮ್ ಸಂಸ್ಥೆಯನ್ನು ಕೂಡ ಮುನ್ನಡೆಸುತ್ತಿದ್ದಾರೆ. ಹೀಗೆ ಅನೇಕ ಉದ್ಯಮಗಳಲ್ಲಿ ಆಯೇಷಾ ತೊಡಗಿಕೊಂಡಿದ್ದಾರೆ.
ಹೆಣ್ಣುಕೊಟ್ಟಅತ್ತೆ ಕೈಗೇ 800 ಕೋಟಿ ಮೌಲ್ಯದ ಕಂಪನಿ ನೀಡಿದ ಧೋನಿ; ಸಿಇಒ ಶೀಲಾ ಸಿಂಗ್ ಕುರಿತ ಮಾಹಿತಿ ಇಲ್ಲಿದೆ
ಆಯೇಷಾ ನಿಕೇಶ್ ಆರೋರಾ ಅವರನ್ನು ವಿವಾಹವಾಗುವ ಮುನ್ನ ಟರ್ಕಿಸ್ ಬ್ಯುಸಿನೆಸ್ ಟೈಕಾನ್ ಎಂಗಿನ್ ಯೆಸಿಲ್ ಅವರನ್ನು ವಿವಾಹವಾಗಿದ್ದರು. ಇನ್ನು ಆಯೇಷಾ ಕ್ಯಾಲಿಫೋರ್ನಿಯಾದಲ್ಲಿ ಇಟ್ಟನ್ ಹಾಗೂ ಕೊಪ್ರ ಎಂಬ ರೆಸ್ಟೋರೆಂಟ್ ಗಳನ್ನು ಹೊಂದಿದ್ದಾರೆ. ಇವುಗಳನ್ನು ಅವರು ಜನಪ್ರಿಯ ಬಾಣಸಿಗ ಶ್ರೀಜಿತ್ ಗೋಪಿನಾಥನ್ ಅವರ ಜೊತೆಗೆ ಸೇರಿ ಸ್ಥಾಪಿಸಿದ್ದಾರೆ. ಆಯೇಷಾ ಹಾಗೂ ನಿಕೇಶ್ 2014ರಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ಮದುವೆಯಲ್ಲಿ ಹಾಲಿವುಡ್ ಸ್ಟಾರ್ ಗಳಾದ ಅಶ್ಟನ್ ಕುಚರ್ ಹಾಗೂ ಮಿಲಾ ಕುನಿಸ್ ಪಾಲ್ಗೊಂಡಿದ್ದರು. ಒಟ್ಟಾರೆ ಆಯೇಷಾ ಉದ್ಯಮ ರಂಗದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಲಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದಲ್ಲಿ ಯಶಸ್ವಿ ಮಹಿಳಾ ಉದ್ಯಮಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ.