Freelance Jobs: ಫ್ರೀಲ್ಯಾನ್ಸರ್ ಆಗಿ ಹೆಚ್ಚು ಹಣ ಗಳಿಸೋದು ಹೇಗೆ?

Published : Jun 17, 2023, 02:30 PM ISTUpdated : Jun 17, 2023, 02:41 PM IST
Freelance Jobs: ಫ್ರೀಲ್ಯಾನ್ಸರ್ ಆಗಿ ಹೆಚ್ಚು ಹಣ ಗಳಿಸೋದು ಹೇಗೆ?

ಸಾರಾಂಶ

ಈಗ ಹಣಗಳಿಕೆಗೆ ಸಾಕಷ್ಟು ವಿಧಾನವಿದೆ. ಮನೆಯಲ್ಲೇ ಕುಳಿತು ನೀವು ಕೆಲಸ ಮಾಡಿ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬಹುದು. ಅದ್ರಲ್ಲೂ ಫ್ರೀಲ್ಯಾನರ್ ಕೆಲಸಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಹೇಗೆ ಹಣ ಗಳಿಸೋದು ಅಂತಾ ನಾವು ಹೇಳ್ತೇವೆ.  

ಮನೆಯಲ್ಲಿ ಕುಳಿತು ಕೆಲಸ ಮಾಡುವ ಪ್ರವೃತ್ತಿ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಕೊರೊನಾ ನಂತ್ರ ವರ್ಕ್ ಫ್ರಂ ಹೋಂಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಅನೇಕರು ಮನೆಯಲ್ಲೇ ಕುಳಿತು ಆರಾಮವಾಗಿ ಹಣ ಸಂಪಾದನೆ ಮಾಡ್ತಿದ್ದಾರೆ. ಕಚೇರಿಗೆ ಹೋಗುವ ಜಂಜಾಟವಿಲ್ಲದ ಕಾರಣ ಜನರು ಕಚೇರಿಯಲ್ಲಿ ಮಾಡುವ ಕೆಲಸಕ್ಕಿಂತ ಹೆಚ್ಚು ಸಮಯ ಕೆಲಸ ಮಾಡಿ ಹಣ ಸಂಪಾದನೆ ಮಾಡ್ತಿದ್ದಾರೆ. ಜನರು ಫ್ರೀಲ್ಯಾನ್ಸಿಂಗ್ ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಫ್ರೀಲ್ಯಾನ್ಸಿಂಗ್ ಕೆಲಸ ಮಾಡಿಯೇ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ ಸಂಪಾದನೆ ಮಾಡ್ತಿದ್ದಾರೆ.  ಫ್ರೀಲ್ಯಾನ್ಸಿಂಗ್ (Freelancing) ಕೆಲಸ ಮಾಡುವ ಸಮಯದಲ್ಲಿ ನೀವು ಕೆಲ ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ಒಂದು ಕಂಪನಿಗೆ ನಿಮ್ಮ ಪೂರ್ಣ ಸಮಯವನ್ನು ನೀಡಬೇಕಾಗಿಲ್ಲ. ಫ್ರೀಲ್ಯಾನ್ಸಿಂಗ್ ನಲ್ಲಿ ನೀವು ಸಮಯ ಹೊಂದಿಸಿಕೊಂಡು ಅನೇಕ ಕಡೆ ಕೆಲಸ (Work) ಮಾಡಬಹುದು. 

Personal Finance : ಇಎಸ್ಐ ಕಾರ್ಡ್‌ನಿಂದ ಇದೆ ಇಷ್ಟು ಲಾಭ

ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುವವರು ನೀವಾಗಿದ್ದರೆ ಸರಿಯಾದ ಕಂಪನಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಅನೇಕ ಕಂಪನಿಗಳು ನಿಮಗೆ ಮೋಸ (Cheating) ಮಾಡುತ್ತವೆ. ನೀವು ರಿಲಯನ್ಸ್ ಕಂಪನಿಯಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಬಹುದು. ಅಲ್ಲಿ ಕೆಲಸ ಮಾಡುವ ಮೂಲಕ ನೀವು 40 ರಿಂದ 50 ಸಾವಿರಕ್ಕೂ ಹೆಚ್ಚು ಹಣವನ್ನು ಗಳಿಸಬಹುದು. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ರಿಲಯನ್ಸ್ ಕಂಪನಿ 10ನೇ ಮತ್ತು 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳೂ ಕೆಲಸವನ್ನು ನೀಡ್ತಿದೆ. ಯಾವೆಲ್ಲ ಕೆಲಸವಿದೆ ಎಂಬುದನ್ನು ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬಹುದು. ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಅನೇಕ ಪ್ರಸಿದ್ಧ ಕಂಪನಿಗಳು ಕೂಡ ಫ್ರೀಲ್ಯಾನ್ಸರ್ ಕೆಲಸ ನೀಡ್ತಿವೆ. 

ನಿಮ್ಮದೇ ಟೀಂ ರಚಿಸಿ ಕೆಲಸ ಮಾಡಿ : ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡಲು ಅನೇಕ ಆಯ್ಕೆಗಳಿವೆ. ನಿಮ್ಮದೇ ಒಂದು ಟೀಂ ಮಾಡಿಕೊಂಡು ನೀವು ಕೆಲಸ ಮಾಡಬಹುದು. ಸರ್ಕಾರದ ಕೆಲ ಪ್ರಾಜೆಕ್ಟ್ ಗಳನ್ನು ತೆಗೆದುಕೊಂಡು ನೀವು ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು. ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್, ಡೇಟಾ ಎಂಟ್ರಿ, ಪ್ರಾಜೆಕ್ಟ್ ವರ್ಕ್ ಸೇರಿದಂತೆ ಅನೇಕ ಕೆಲಸಗಳು ನಿಮಗೆ ಲಭ್ಯವಿರುತ್ತವೆ. ನಿಮ್ಮದೇ ಒಂದು ಏಜೆನ್ಸಿ ಮಾಡಿಕೊಂಡು ನೀವು ನಾಲ್ಕೈದು ರೀತಿಯ ಕೆಲಸ ಮಾಡಿ ಹೆಚ್ಚಿನ ಹಣ ಸಂಪಾದನೆ ಮಾಡಬಹುದಾಗಿದೆ. ಕೆಲವೊಂದು ಕೆಲಸಕ್ಕೆ ಸಮಯ ನಿಗದಿಯಾಗಿರುತ್ತದೆ. ನೀವು ಆ ಸಮಯಕ್ಕೆ ನಿಮ್ಮ ಪ್ರಾಜೆಕ್ಟ್ ನೀಡಿದ್ರೆ ಸಾಕು. ನೀವು ನಾಲ್ಕೈದು ಜನ ಕೆಲಸ ಮಾಡಿದ್ರೆ ಕೆಲಸ ಬೇಗ ಮುಗಿಯುತ್ತದೆ. ಆಗ ನೀವು ಮತ್ತಷ್ಟು ಕೆಲಸ ಪಡೆಯಬಹುದು. 

Personal Finance: ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡ್ಬಹುದು ಗೊತ್ತಾ?

ಕೌಶಲ್ಯದ ಮೇಲೆ ಕೆಲಸ ಮಾಡಿ: ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ನೀವು ಕೆಲಸ ಮಾಡಬಹುದು. ನೀವೆಷ್ಟು ಉತ್ತಮ ಕೆಲಸ ಮಾಡ್ತೀರೋ ಅಷ್ಟು ನೀವು ಗಳಿಸಬಹುದು. ಕೌಶಲ್ಯದ ಮೇಲೆ ಅನೇಕ ಕಂಪನಿಗಳು ಕೆಲಸ ನೀಡ್ತಿವೆ. ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ ನೀವು ಕೆಲಸಕ್ಕೆ ಅಪ್ಲೈ ಮಾಡೋದಾದ್ರೆ ಅನೇಕ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲ ಕಂಪನಿಗಳು ನಿಮ್ಮಿಂದಲೇ ಹಣ ಕೇಳುತ್ತವೆ. ಇದ್ರಲ್ಲಿ ಮೋಸವಿರುವ ಸಾಧ್ಯತೆಯಿರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಕೆಲಸ ಆಯ್ದುಕೊಳ್ಳಿ.

ಬೆಲೆಯನ್ನು ಫಿಕ್ಸ್ ಮಾಡಿ: ಫ್ರೀಲ್ಯಾನ್ಸಿಂಗ್ ನಲ್ಲಿ ನೀವು ಕೆಲಸ ಆರಂಭಿಸುವ ಮೊದಲು ಕ್ಲೈಂಟ್‌ಗಳಿಂದ ಬೆಲೆ ಫಿಕ್ಸ್ ಮಾಡಲು ಮರೆಯಬೇಡಿ.  ಹಣ ಕಡಿಮೆಯಾದ್ರೆ ನಿಮಗೆ ನಷ್ಟವಾಗುತ್ತದೆ. ಅದೇ ರೀತಿ ಅತಿ ಹೆಚ್ಚು ಬೆಲೆಯನ್ನು ನೀವು ನಿಗದಿ ಮಾಡಿದ್ರೆ ಯೋಜನೆ ಕೈತಪ್ಪಿ ಹೋಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಲಾಭವನ್ನು ಗಮನದಲ್ಲಿಟ್ಟುಕೊಂಡು ನೀವು ಬೆಲೆಯನ್ನು ನಿಗದಿಪಡಿಸಬೇಕು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ
Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?