* ಮುಂದಿನ ಆರ್ಥಿಕ ವರ್ಷದಲ್ಲಿ ಹೊಸ ಕಾರ್ಮಿಕ ನೀತಿ ಸಂಹಿತೆ ಜಾರಿ ಸಾಧ್ಯತೆ
*ಈಗಾಗಲೇ ಕರಡು ನೀತಿ ರೂಪಿಸಿರೋ ಕೇಂದ್ರ ಹಾಗೂ 13 ರಾಜ್ಯ ಸರ್ಕಾರಗಳು
* ಟೇಕ್ ಹೋಮ್ ವೇತನದಲ್ಲಿ ಕಡಿತ, ಪಿಎಫ್ ಲೆಕ್ಕಾಚಾರದಲ್ಲಿ ಬದಲಾವಣೆ
ನವದೆಹಲಿ (ಡಿ.21): ಮುಂದಿನ ಆರ್ಥಿಕ ವರ್ಷದಿಂದ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕೇ ದಿನ ಕೆಲಸ ಸೇರಿದಂತೆ ವೇತನ(Salary), ಕೆಲಸದ ಅವಧಿ (Working hours) ಹಾಗೂ ಪಿಎಫ್ ಗೆ(PF)ಸಂಬಂಧಿಸಿ ಮಹತ್ವದ ಬದಲಾವಣೆಗಳಾಗೋ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳನ್ನು(labour codes ) ಅನುಷ್ಠಾನಗೊಳಿಸೋ ಸಾಧ್ಯತೆಯಿದೆ. ವೇತನ(Salary), ಸಾಮಾಜಿಕ ಭದ್ರತೆ(Social security), ಕೈಗಾರಿಕಾ ಸಂಬಂಧ (industrial relations) ಹಾಗೂ ವೃತ್ತಿ ಸುರಕ್ಷತೆ(occupation safety), ಆರೋಗ್ಯ ಹಾಗೂ ಕಾರ್ಯನಿರ್ವಹಣೆ ಪರಿಸ್ಥಿತಿಗಳಿಗೆ (health and working conditions )ಸಂಬಂಧಿಸಿ ನಾಲ್ಕು ಹೊಸ ಕಾರ್ಮಿಕ ನೀತಿ ಸಂಹಿತೆಗಳನ್ನು(labour codes) ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪಿಟಿಐ ವರದಿ ಮಾಡಿದೆ.
ಕೇಂದ್ರ ಸರ್ಕಾರ 2021ರ ಏಪ್ರಿಲ್ ನಿಂದಲೇ ಹೊಸ ಕಾರ್ಮಿಕ ನೀತಿ ಸಂಹಿತೆಯನ್ನು (labour codes) ಅನುಷ್ಠಾನಗೊಳಿಸೋ ಉದ್ದೇಶ ಹೊಂದಿತ್ತು. ಆದ್ರೆ ಕಾರ್ಮಿಕರು ಸಹವರ್ತಿ ಪಟ್ಟಿಯಲ್ಲಿ ಬರೋ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈ ನಾಲ್ಕು ನೀತಿ ಸಂಹಿತೆಗಳ ಅಡಿಯಲ್ಲಿ ರೂಪಿಸಿರೋ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಬೇಕಿತ್ತು.ಅನೇಕ ರಾಜ್ಯಗಳು ಹೊಸ ಕಾರ್ಮಿಕ ನೀತಿ ಸಂಹಿತೆಯಡಿಯಲ್ಲಿ ನಯಮಗಳನ್ನು ಅಂತಿಮಗೊಳಿಸದ ಕಾರಣ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮುಂದೂಡಿತ್ತು.
undefined
Card Stuck in ATM : ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಕ್ಕಿಬಿದ್ರೆ ಚಿಂತೆ ಬೇಡ,ಹೀಗೆ ಮಾಡಿ!
'ಮುಂದಿನ ಆರ್ಥಿಕ ಸಾಲಿನಲ್ಲಿ ಅಂದ್ರೆ 2022-23ರಲ್ಲಿ ನಾಲ್ಕು ಹೊಸ ಕಾರ್ಮಿಕ ನೀತಿ ಸಂಹಿತೆಗಳನ್ನು ಅನುಷ್ಠಾನಗೊಳಿಸಲಾಗೋದು. ಅನೇಕ ರಾಜ್ಯಗಳು ಇದಕ್ಕೆ ಸಂಬಂಧಿಸಿ ಈಗಾಗಲೇ ಕರಡು ನಿಯಮಗಳನ್ನು ರೂಪಿಸಿ ಅಂತಿಮಗೊಳಿಸಿವೆ' ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. 'ಕೇಂದ್ರ ಸರ್ಕಾರವು ನೂತನ ಕಾರ್ಮಿಕ ನೀತಿ ಸಂಹಿತೆಗಳಿಗೆ ಸಂಬಂಧಿಸಿ 2021 ಫೆಬ್ರುವರಿಯಲ್ಲೇ ಕರಡು ನಿಯಮಗಳನ್ನು ಅಂತಿಮಗೊಳಿಸೋ ಪ್ರಕ್ರಿಯೆಯನ್ನು ಫುರ್ಣಗೊಳಿಸಿದೆ. ಆದ್ರೆ, ಕಾರ್ಮಿಕರು ಸಹವರ್ತಿ ಪಟ್ಟಿಯಲ್ಲಿ ಬರೋ ಕಾರಣ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಜೊತೆಗೂಡಿ ಈ ನೀತಿ ಸಂಹಿತೆಗಳನ್ನು ಜಾರಿಗೊಳಿಸಲು ಬಯಸಿದೆ' ಎಂದು ಅವರು ತಿಳಿಸಿದ್ದಾರೆ.
ವಾರದಲ್ಲಿ ನಾಲ್ಕೇ ದಿನ ಕೆಲಸ?
ಪ್ರಸ್ತುತ ಬಹುತೇಕ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸೋ ವ್ಯವಸ್ಥೆ ಜಾರಿಯಲ್ಲಿದೆ. ಹೊಸ ಕಾರ್ಮಿಕ ನೀತಿ ಸಂಹಿತೆ ಅನುಷ್ಠಾನಗೊಂಡ ಬಳಿಕ ವಾರದಲ್ಲಿ ಐದು ದಿನಗಳ ಬದಲಿಗೆ ನಾಲ್ಕು ದಿನ ಕಾರ್ಯನಿರ್ವಹಿಸೋ ವ್ಯವಸ್ಥೆ ಜಾರಿಗೆ ಬರೋ ನಿರೀಕ್ಷೆಯಿದೆ. ಕೆಲವು ಮೂಲಗಳ ಪ್ರಕಾರ ಉದ್ಯೋಗಿಗಳು ವಾರದಲ್ಲಿ 4,5 ಅಥವಾ 6 ದಿನಗಳ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ವಾರದಲ್ಲಿ ಒಟ್ಟು 48 ಗಂಟೆ ಕೆಲಸ ಮಾಡೋದು ಅಗತ್ಯ. ಒಟ್ಟಾರೆ ಇದು ಉದ್ಯೋಗಿಗಳ ಕೆಲಸದ ಒಟ್ಟು ಅವಧಿ, ವೇತನ (take home salary) ಹಾಗೂ ಇತರ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರಲಿದೆ. ಅಲ್ಲದೆ, ಈ ಹೊಸ ಕಾರ್ಮಿಕ ನೀತಿ ಸಂಹಿತೆ ಜಾರಿಯಿಂದ ಮೂಲವೇತನ (basic pay) ಹಾಗೂ ಉದ್ಯೋಗಿಗಳ ಪಿಎಫ್ (PF) ಲೆಕ್ಕಾಚಾರದಲ್ಲೂ ಗಮನಾರ್ಹ ಬದಲಾವಣೆಯಾಗಲಿದೆ. ಉದ್ಯೋಗಿಗಳ ಟೇಕ್ ಹೋಮ್ ವೇತನದಲ್ಲಿ ಕಡಿತವಾಗಲಿದೆ. ಉದ್ಯೋಗಿಗಳು ಹಾಗೂ ಸಂಸ್ಥೆಗಳು ಪಿಎಫ್ ಗೆ ಹೆಚ್ಚಿನ ಹಣ ಪಾವತಿಸಬೇಕಾದ ಕಾರಣ ಕೈಗೆ ಸಿಗೋ ವೇತನದಲ್ಲಿ ಕಡಿಮೆಯಾಗೋ ಸಾಧ್ಯತೆಯಿದೆ.
PM Modi meets top CEOs ಬಜೆಟ್‌ಗೂ ಮುನ್ನ ಪ್ರಮುಖ ಖಾಸಗಿ ಕಂಪನಿ ಸಿಇಒ ಜೊತೆ ಪ್ರಧಾನಿ ಮೋದಿ ಸಂವಾದ!
ಕಳೆದ ವಾರ ಕೇಂದ್ರ ಕಾರ್ಮಿಕ ಸಚಿವ ಭೂಪಿಂದರ್ ಯಾದವ್ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸೋ ಸಂದರ್ಭದಲ್ಲಿ ವೃತ್ತಿ ಸುರಕ್ಷತೆ, ಆರೋಗ್ಯ ಹಾಗೂ ಕಾರ್ಯನಿರ್ವಹಣಾ ಪರಿಸ್ಥಿತಿಗೆ ಸಂಬಂಧಿಸಿ ನೀತಿ ಸಂಹಿತೆಯೊಂದನ್ನು ರೂಪಿಸಲು ಕೇವಲ 13 ರಾಜ್ಯಗಳಷ್ಟೇ ಕರಡು ನೀತಿಗಳನ್ನು ಸಿದ್ಧಪಡಿಸಿವೆ ಎಂಬ ಮಾಹಿತಿ ನೀಡಿದ್ದರು. ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಗಢ, ಒಡಿಶಾ, ಅರುಣಾಚಲ ಪ್ರದೇಶ, ಹರ್ಯಾಣ. ಜಾರ್ಖಂಡ, ಪಂಜಾಬ್, ಮಣಿಪುರ, ಬಿಹಾರ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರಗಳು ಕರಡು ನಿಯಮಗಳನ್ನು ಪ್ರಕಟಿಸಿವೆ.