
ಬೆಂಗಳೂರು (ನ.05) ಭಾರತದ ಶಿಕ್ಷಣ ವ್ಯವಸ್ಥೆ, ಮಾರುಕಟ್ಟೆಯಲ್ಲಿನ ಬೇಡಿಕೆ, ಪ್ರತಿಭೆ, ಕೌಶಲ್ಯ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಝೀರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಹಲವು ಬಾರಿ ಮಾತನಾಡಿದ್ದಾರೆ. ಭವಿಷ್ಯದಲ್ಲಿ ಕಾಲೇಜು ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಕುರಿತು ಪ್ರಾಮುಖ್ಯತೆಗಳ ಕುರಿತು ಸ್ಫೋಟಕ ಮಾಹಿತಿಗಳನ್ನು ನಿಖಿಲ್ ಕಾಮತ್ ನೀಡಿದ್ದಾರೆ. ಆದರೆ ಈಬಾರಿ ನಿಖಿಲ್ ಕಾಮತ್ ಹೇಳಿದ ಮಾತು ವಿವಾದಕ್ಕೆ ಕಾರಣವಾಗಿದೆ. 25ನೇ ವಯಸ್ಸಿನ ಎಂಬಿಎ ಓದಲು ಹೋಗುತ್ತಿರುವವರು ಮೂರ್ಖರು ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ಜೀರೋಧ ಸಂಸ್ಥೆಯ 15ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಕಂಪನಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ವಾಟ್ ದಿ ಫೈನಾನ್ಸ್ ಪಾಡ್‌ಕಾಸ್ಟ್‌ನಲ್ಲಿ ನಿಖಿಲ್ ಕಾಮತ್ ಹಾಗೂ ಸಹೋದರ ಸಹ ಸಂಸ್ಥಾಪಕ ನಿತಿನ್ ಕಾಮತ್ ಜೊತೆಯಾಾಗಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಆಸ್ಕ್ ಮಿ ಎನಿಥಿಂಕ್ ಸೆಶನ್‌ನಲ್ಲಿ ನಿಖಿಲ್ ಕಾಮತ್ ಶಿಕ್ಷಣ, ವೃತ್ತಿಪರತೆ ಕುರಿತು ಮಾತನಾಡಿದ್ದಾರೆ. ಭಾರತದಲ್ಲಿ ಭವಿಷ್ಯದ ಶಿಕ್ಷಣ ಕುರಿತ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕಾಮತ್, ಉದ್ಯಮಿಗಳಾಗಲು ಹೆಚ್ಚಿನ ಉತ್ತೇಜನ ನೀಡಬೇಕು ಎಂದಿದ್ದಾರೆ. ಇದೇ ವೇಳೆ ನಿಖಿಲ್ ಕಾಮತ್, ನನ್ನ ಅಭಿಪ್ರಾಯದಲ್ಲಿ ಕಾಲೇಜುಗಳು ಸತ್ತಿವೆ. ಈಗ 25 ವಯಸ್ಸಿನವರು ಎಂಬಿಒ ಓದಲು ಹೋಗುತ್ತಿದ್ದಾರೆ ಎಂದರೆ ಮೂೂರ್ಖರು. ಕಾರಣ ಇಂದಿನಿಂದ 5 ವರ್ಷ ಅಂದರೆ ಅವರು ಎಂಬಿಎ ಮಗಿಸಿ ಬಂದಾಗ ಮಾರುಕಟ್ಟೆಯೇ ಬದಲಾಗಿರುತ್ತದೆ. ಬೇಡಿಕೆ, ಅವಕಾಶ ಬದಲಾಗಿರುತ್ತದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ. ಅವರು ಕಡಿಮೆ ಅವಕಾಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾಗುತ್ತದೆ. ಆದರೆ ಉದ್ಯಮಿಗಳಾಗಲು ಪ್ರಯತ್ನಿಸುತ್ತಿರುವರ ಸಂಖ್ಯೆ ಕಡಿಮೆ. ಸ್ವ ಉದ್ಯೋಗ, ಉದ್ಯಮ ಆರಂಭಿಸಿ ಮಾರುಕಟ್ಟೆ ಬೇಡಿಕೆಗೆ ತಕ್ಕಂತೆ ವೇಗವಾಗಿ ಬೆಳೆಯಲು ಸಾಧ್ಯವಿದೆ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.
ನಿಖಿಲ್ ಕಾಮತ್ ನೀಡಿದ ಹೇಳಿಕೆಗೆ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ಹಲವರು ನಿಖಿಲ್ ಕಾಮತ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ನಿಖಿಲ್ ಕಾತ್ ಹೇಳಿಕೆ ತಪ್ಪು. ಉತ್ತಮ ಆದಾಯ, ಸಂಪತ್ತು ಹೊಂದಿದ ಬಳಿಕ ಶಿಕ್ಷಣ ವ್ಯವಸ್ಥೆಯನ್ನು ನಿಕೃಷ್ಟತೆಯಿಂದ ಕಾಣುವುದು ಸರಿಯಲ್ಲ. ಆಸ್ತಿ ಸಂಪತ್ತು ಇದ್ದವರು ಈ ರೀತಿ ಹೇಳುತ್ತಾರೆ. ಆದರೆ ಮದ್ಯಮವರ್ಗದ ಜನರಿಗೆ ಎಂಬಿಎ ಸೇರಿದಂತೆ ಕೋರ್ಸ್‌ಗಳು ಅವಕಾಶಗಳ ಬಾಗಿಲು ತೆರೆದಂತೆ ಎಂದಿದ್ದಾರೆ.
ಉತ್ತಮ ಕುಟುಂಬದಲ್ಲಿ ಹುಟ್ಟಿ, ಸಂಪತ್ತು, ಶಿಕ್ಷಣ, ಅಂತಸ್ತು ಎಲ್ಲವೂ ಇದ್ದು ಉದ್ಯಮ ಆರಂಭಿಸಿ ಯಶಸ್ವಿಯಾದ ಬಳಿಕ ಈ ರೀತಿ ಹೇಳಬಹುದು. ನನ್ನಂತ ಹಲವರಿಗೆ ಎಂಬಿಎ ಕೇವಲ ಕೋರ್ಸ್ ಅಲ್ಲ, ಇದು ನಮಗೆ ನೀಡಿದ ಅವಕಾಶ. ಪ್ರತಿ ಕೋರ್ಸ್ ಯಾವುದಾದರು ಒಂದು ರೀತಿಯಲ್ಲಿ ಸ್ಥಾನ, ಉದ್ಯೋಗ ನೀಡುತ್ತದೆ ಎಂದು ನಿಖಿಲ್ ಕಾಮತ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.