4,000 ರೂಗೆ ಹಳೇ ಕುರ್ಚಿ ಖರೀದಿಸಿ 82 ಲಕ್ಷ ರೂಪಾಯಿಗೆ ಮಾರಾಟ, ಒಂದೇ ದಿನದಲ್ಲಿ ಶ್ರೀಮಂತ!

Published : Jun 10, 2023, 01:24 PM IST
4,000 ರೂಗೆ ಹಳೇ ಕುರ್ಚಿ ಖರೀದಿಸಿ 82 ಲಕ್ಷ ರೂಪಾಯಿಗೆ ಮಾರಾಟ, ಒಂದೇ ದಿನದಲ್ಲಿ ಶ್ರೀಮಂತ!

ಸಾರಾಂಶ

ಆನ್‌ಲೈನ್ ಮೂಲಕ ಶಾಪಿಂಗ್ ಜೊತೆ ಹಳೇ ವಸ್ತುಗಳನ್ನು ಖರೀದಿ ಮಾರಾಟ ಮಾಡುವುದು ಬಲು ಜೋರಾಗಿದೆ. ಹೀಗೆ 4,000 ರೂಪಾಯಿಗೆ ಹಳೇ ಕುರ್ಚಿ ಖರೀದಿಸಿದ ವ್ಯಕ್ತಿ ಬರೋಬ್ಬರಿ 82 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಕುಳಿತಲ್ಲೇ ಲಕ್ಷ ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದಾನೆ.  

ಲಾಸ್ ಎಂಜಲ್ಸ್(ಜೂ.10): ಹಳೇ ವಸ್ತುಗಳನ್ನು ಮಾರಾಟ ಮಾಡುವುದು ಖರೀದಿಸುವುದು ಇದೀಗ ಸುಲಭ. ಕುಳಿತಲ್ಲೇ ಆನ್‌ಲೈನ್ ಮೂಲಕ ಬಳಕೆ ಮಾಡಿದ, ಹಳೇ ವಸ್ತುಗಳನ್ನು ಮಾರಾಟ ಮಾಡಬಹುದು. ಹೀಗೆ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಏನೋ ಹುಡುಕಾಡುತ್ತಿರುವಾಗ ಹಳೇ ಕುರ್ಚಿಯೊಂದು ಕಣ್ಣಿಗೆ ಬಿದ್ದಿದೆ.  ವಿಶೇಷವಾಗಿ ಕಂಡ ಈ ಕುರ್ಚಿಯ ಬೆಲೆ 4,000 ರೂಪಾಯಿ ಎಂದು ಉಲ್ಲೇಖಿಸಲಾಗಿತ್ತು. ಹಿಂದೂ ಮುಂದೂ ನೋಡದೆ ಈ ಕುರ್ಚಿ ಖರೀಸಿದ. ಬಳಿಕ ಕುರ್ಚಿಯನ್ನು ಹಾಗೇ ಮಾರಾಟ ಮಾಡಿದ್ದಾರೆ.ಅದು ಬರೋಬ್ಬರಿ 82 ಲಕ್ಷ ರೂಪಾಯಿಗೆ. 

ಲಾಸ್ ಎಂಜಲ್ಸ್‌ನ ಜಸ್ಟಿನ್ ಮಿಲ್ಲರ್ ಅನ್ನೋ ವ್ಯಕ್ತಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಏನೋ ಹುಡುಕುತ್ತಿರುವಾಗ ಹಳೇ ಕುರ್ಚಿ ಕಣ್ಣಿಗೆ ಬಿದ್ದಿದೆ. ಲೆಥರ್ ಚೇರ್ ಮಿಲ್ಲರ್‌ಗೆ ಆಕರ್ಷಕವಾಗಿ ಕಂಡಿತ್ತು. ತಕ್ಷಣವೇ ಈ ಕುರ್ಚಿ ಖರೀದಿಸಲು ಮುಂದಾಗಿದ್ದಾನೆ. ಇದರ ಬೆಲೆ ಕೇವಲ 4,000 ರೂಪಾಯಿ ಎಂದು ನಮೂದಿಸಲಾಗಿತ್ತು. ಹೆಚ್ಚು ಯೋಚನೆ ಮಾಡದೇ ಈ ಕುರ್ಚಿ ಖರೀದಿಸಿದ್ದಾನೆ.

 

ಐಪಿಎಲ್‌ ಪಂದ್ಯದಿಂದ 2 ಕೋಟಿ ರೂ ಜಾಕ್‌ಪಾಟ್, ರಾತ್ರೋರಾತ್ರಿ ಕೋಟ್ಯಾಧೀಶನಾದ ಕೂಲಿ ಕಾರ್ಮಿಕ!

ಮನೆಗೆ ಪಾರ್ಸೆಲ್ ಮೂಲಕ ಆಗಮಿಸಿದ ಈ ಕುರ್ಚಿಯನ್ನು ತೆರೆದು ನೋಡಿದಾಗ ಮಿಲ್ಲರ್ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕಾರಣ ಇದು ಹಳೇಯ ಕುರ್ಚಿ. ಇದರ ರಫ್ ಲೆದರ್, ಆಕರ್ಷಕ ವಿನ್ಯಾಸ ನೋಡಿದ ಮಿಲ್ಲರ್ ಇದನ್ನು ಹರಾಜಿಗೆ ಇಡಲು ನಿರ್ಧರಿಸಿದ. ಹೀಗಾಗಿ ಹರಾಜಿನ ಪ್ರಖ್ಯಾತ ಸಂಸ್ಥೆ ಸೂಥಿಬೈಸ್‌ಗೆ ಈ ಕುರ್ಚಿಯನ್ನು ಕಳುಹಿಸಿದ. ಬಳಿಕ ಇದನ್ನು ಹರಾಜಿಗಿಡಲು ಹೇಳಿದ್ದಾನೆ.

ಮಿಲ್ಲರ್ ಕಳುಹಿಸಿದ ಕುರ್ಚಿಯನ್ನು ಹರಾಜಿಗಿಡುವ ಮೊದಲೂ ಸೂಥಿಬೈಸ್ ಪರಿಶೀಲನೆ ನಡೆಸಿದೆ. ಹಲವು ತಜ್ಞರು ಈ ಕುರ್ಚಿಯ ವಿಶೇಷತೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದು 1935ರಲ್ಲಿ ಖ್ಯಾತ ಡಿಸೈನರ್ ಫರ್ಟ್ಸ್ ಹೆನ್ನಿಂಗ್ಸನ್ ಡಿಸೈನ್ ಮಾಡಿದ ಕುರ್ಚಿ ಎಂದು ಬಹಿರಂಗವಾಗಿದೆ. ಇದರ ಇತಿಹಾಸ ಎಲ್ಲವನ್ನೂ ಪರಿಶೀಲಿಸಿ ಸೂಥಿಬೈಸ್ ಈ ಕುರ್ಚಿಗೆ 30,000 ರೂಪಾಯಿಯಿಂದ 50,000 ರೂಪಾಯಿ ಅಮೆರಿಕನ್ ಡಾಲರ್ ಬೆಲೆ ನಿಗದಿಪಡಿಸಿ ಹರಾಜಿಗೆ ಇಟ್ಟಿದೆ.

 

Viral News : ಇವ ಎಷ್ಟು ಅದೃಷ್ಟವಂತಾರೀ..! ಒಂದು ವರ್ಷ ಸಿಕ್ಕಿದೆ ರಜಾ

ಈ ಕುರ್ಚಿ ಹರಾಜಿಗಿಟ್ಟ ಬೆನ್ನಲ್ಲೇ ಇದರ ಬೆಲೆ ಏರಿಕೆಯಾಗುತ್ತಲೇ ಹೋಯಿತು 85,000 ಅಮೆರಿಕನ್ ಡಾಲರ್ ಬೆಲೆಗೆ ದಿಡೀರ್ ಏರಿಕೆ ಕಂಡಿತು. ಕೊನೆಗೆ 1,07,950 ಅಮೆರಿಕನ್ ಡಾಲರ್ ಮೊತ್ತಕ್ಕೆ ಅಂದರೆ ಬರೋಬ್ಬರಿ 82 ಲಕ್ಷ ರೂಪಾಯಿಗೆ ಈ ಕುರ್ಚಿ ಹರಾಜಾಗಿದೆ. ಕೇವಲ 4,000 ರೂಪಾಯಿಗೆ ಕುರ್ಚಿ ಖರೀದಿಸಿದ ಮಿಲ್ಲರ್ ಇದೀಗ 82 ಲಕ್ಷ ರೂಪಾಯಿ ಜೇಬಿಗಿಳಿಸಿದ್ದಾರೆ. ಈ ಮೊತ್ತವನ್ನು ಬ್ಯಾಂಕ್‌ನಲ್ಲಿ ಇಡುವುದಾಗಿ ಹೇಳಿದ್ದಾನೆ.

ಹಲವು ಬಾರಿ ಹಳೇ ವಸ್ತುಗಳನ್ನು ಖರೀದಿಸಿದ್ದೇನೆ. ಪ್ರತಿ ವಸ್ತುಗಳನ್ನು ನೋಡಿ ನನ್ನ ಆಪ್ತರು, ಗೆಳೆಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಲವು ವಸ್ತುಗಳನ್ನು ಖರೀದಿಸಿದ ಬೆಲೆಯಲ್ಲೇ ಮತ್ತೆ ಮಾರಾಟ ಮಾಡಿದ್ದೇನೆ. ಆದರೆ ಈ ಬಾರಿ ನನ್ನ ಖರೀದಿ ಇಷ್ಟು ದುಬಾರಿಯಾಗಿತ್ತು ಎಂದು ಊಹಿಸಿರಲಿಲ್ಲ ಎಂದು ಜಸ್ಟಿನ್ ಮಿಲ್ಲರ್ ಹೇಳಿದ್ದಾರೆ. ಮಿಲ್ಲರ್ 82 ಲಕ್ಷ ರೂಪಾಯಿ ಗಳಿಸಿದ ಬೆನ್ನಲ್ಲೇ ಇದೀಗ ಜಸ್ಟಿನ್ ಮಿಲ್ಲರ್ ಗೆಳೆಯರು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಹಳೇ ವಸ್ತುಗಳ ಹುಡುಕಾಟ ಶುರುಮಾಡಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?