ವಿಶ್ವ ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತಕ್ಕೆ ಮೊದಲ ಸ್ಥಾನ, 2022ರಲ್ಲಿ 89.5 ಮಿಲಿಯನ್ ಟ್ರಾನ್ಸಾಕ್ಷನ್!

By Suvarna News  |  First Published Jun 10, 2023, 11:44 AM IST

ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೊಳಿಸಿದಾಗ ಇದನ್ನು ಹೀಯಾಳಿಸಿದವರೇ ಹೆಚ್ಚು. ಆದರೆ ಮೋದಿ ಸರ್ಕಾರ ಡಿಜಿಟಲ್ ಇಂಡಿಯಾ ಅಡಿಯಲ್ಲಿ ಹೊಸ ಕ್ರಾಂತಿ ಮಾಡಿತು. ಇದೀಗ ವಿಶ್ವದಲ್ಲೇ ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ಮೊದಲ ಸ್ಥಾನ. 2022ರರ ಸಾಲಿನಲ್ಲಿ ಬರೋಬ್ಬರಿ 89.5 ಮಿಲಿಯನ್ ಟ್ರಾನ್ಸಾಕ್ಷನ್ ಭಾರತ ನಡೆಸಿದೆ.


ನವದೆಹಲಿ(ಜೂ.10)  ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಡಿಜಿಟಲ್ ಪಾವತಿಗೆ ಒತ್ತು ನೀಡಿದಾಗ ಕಾಂಗ್ರೆಸ್ ಸೇರಿದಂತೆ ಹಲವ ವಿಪಕ್ಷಗಳು ಹರಿಹಾಯ್ದಿತ್ತು. ಸಣ್ಣ ಕಿರಾಣಿ ಅಂಗಡಿ, ರಸ್ತೆ ಬದಿಯಲ್ಲಿ ತರಕಾರಿ ಮಾರುರವ ಬಳಿ ಸ್ಕ್ಯಾನಿಂಗ್ ಇದೆಯಾ, ಪಿಒಎಸ್ ಮಶೀನ್ ಇದೆಯಾ ಎಂದು ವ್ಯಂಗ್ಯವಾಡಿತ್ತು. ಆದರೆ ಇದೀಗ ವಿಶ್ವ ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ. ಭಾರತ ಇದೀಗ ನಗದು ರಹಿತ ವ್ಯವಹಾರದಲ್ಲಿ ಇತರ ಎಲ್ಲಾ ರಾಷ್ಟ್ರಗಳನ್ನು ಹಿಂದಿಕ್ಕಿ ಮುನ್ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2022ರ ಸಾಲಿನಲ್ಲಿ ಭಾರತ 89.5 ಮಿಲಿಯನ್ ಟ್ರಾನ್ಸಾಕ್ಷನ್ ಮಾಡುವ ಮೂಲಕ ಗರಿಷ್ಠ ಡಿಜಿಟಲ್ ಪೇಮೆಂಟ್ ದಾಖಲೆ ಮಾಡಿದೆ. ವಿಶೇಷ ಅಂದರೆ ಭಾರತದ ನಂತರದಲ್ಲಿರುವ ನಾಲ್ಕು ಪ್ರಮುಖ ರಾಷ್ಟ್ರಗಳ ಡಿಜಿಟಲ್ ಪೇಮೆಂಟ್ ಒಟ್ಟುಗೂಡಿಸಿದರೂ ಭಾರತಕ್ಕೆ ಸಮನಾಗಿಲ್ಲ.

ಮೈ ಗವರ್ನಮೆಂಟ್ ಇಂಡಿಯಾ ಈ ಕುರಿತು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದೆ. ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ತನ್ನ ಅಧಿಪತ್ಯ ಮುಂದುವರಿಸಿದೆ.  ವಿನೂತ ಪರಿಹಾರ, ಹೊಸ ತಂತ್ರಜ್ಞಾನ, ಕೈಗೆಟುವ ಹಾಗೂ ಸರಳವಾಗಿರುವ ಪಾವತಿ ವ್ಯವಸ್ಥೆ ಮೂಲಕ ಭಾರತ ಅತೀ ದೊಡ್ಡ ನಗದು ರಹಿತ ವ್ಯವಾಹರ ಆರ್ಥಿಕೆಯಾಗಿ ಹೊರಹೊಮ್ಮಿದೆ ಎಂದು MyGovIndia ಹೇಳಿದೆ. 

Tap to resize

Latest Videos

undefined

ಶೇ.50ಕ್ಕಿಂತಲೂ ಹೆಚ್ಚಿನ ಭಾರತೀಯರು ಸಕ್ರಿಯ ಇಂಟರ್ನೆಟ್ ಬಳಕೆದಾರರು; ಡಿಜಿಟಲ್ ಪಾವತಿಯಲ್ಲಿ ಶೇ.13ರಷ್ಟು ಹೆಚ್ಚಳ

ವಿಶ್ವದಲ್ಲಿ ನಡೆಯುತ್ತಿರುವ ರಿಯಲ್ ಟೈಮ್ ಡಿಜಿಟಲ್ ಪೇಮೆಂಟ್‌ನಲ್ಲಿ ಶೇಕಡಾ 46ರಷ್ಟು ಪಾವತಿ ಭಾರತದ ಕೊಡುಗೆಯಾಗಿದೆ. ಈ ಮೂಲಕ ಭಾರತ ತನ್ನ ಅಗ್ರಸ್ಥಾನವನ್ನು ಮುಂದುವರಿಸಿದೆ. ಭಾರತದ ನಂತರದ ಸ್ಥಾನದಲ್ಲಿರುವ ಬ್ರೆಜಿಲ್ 2022ರಲ್ಲಿ ವಾರ್ಷಿಕ ಡಿಜಿಟಲ್ ಪೇಮೆಂಟ್ ಟ್ರಾನ್ಸಾಕ್ಷನ್ 29.2 ಮಿಲಿಯನ್ ಮಾತ್ರ. ಭಾರತ 89.5 ಮಿಲಿಯನ್ ಟ್ರಾನ್ಸಾಕ್ಷನ್ ಮೂಲಕ ಭಾರಿ ಅಂತರ ಕಾಪಾಡಿಕೊಂಡಿದೆ.

 

📈 India keeps dominating the digital payment landscape! 💸🇮🇳 With innovative solutions and widespread adoption, we're leading the way towards a cashless economy. 💻 pic.twitter.com/cSfsFsq0mW

— MyGovIndia (@mygovindia)

 

ವಿಶ್ವದ ಚಾಪ್ 4 ಡಿಜಿಟಲ್ ಪೇಮೆಂಟ್ ಟ್ರಾನ್ಸಾಕ್ಷನ್ ನಡೆಸಿದ ದೇಶ(2022)
ಭಾರತ : 89.5 ಮಿಲಿಯನ್ ಟ್ರಾನ್ಸಾಕ್ಷನ್
ಬ್ರಿಜಿಲ್ :29.2 ಮಿಲಿಯನ್ ಟ್ರಾನ್ಸಾಕ್ಷನ್
ಚೀನಾ : 17.6 ಮಿಲಿಯನ್ ಟ್ರಾನ್ಸಾಕ್ಷನ್
ಥಾಯ್ಲೆಂಡ್ : 16.5 ಮಿಲಿಯನ್ ಟ್ರಾನ್ಸಾಕ್ಷನ್
ಸೌತ್ ಕೊರಿಯಾ : 8 ಮಿಲಿಯನ್ ಟ್ರಾನ್ಸಾಕ್ಷನ್

ಕೇಂದ್ರದಿಂದ ಮಹತ್ವದ ಹೆಜ್ಜೆ, ಭೀಮ್, ಯುಪಿಐ, ರುಪೇ ಡೆಬಿಟ್ ಕಾರ್ಡ್‌ ವಹಿವಾಟಿಗೆ ಪ್ರೋತ್ಸಾಹ ಧನ!

ಈ ವರ್ಷದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದೇ ಮಾತನ್ನು ಹೇಳಿದ್ದರು. ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ನಂಬರ್ 1. ಭಾರತದ ಗ್ರಾಮೀಣ ವಿಭಾಗದ ಆರ್ಥಿಕತೆ ಮಹತ್ತರ ಪರಿವರ್ತನೆಯಾಗುತ್ತಿದೆ ಎಂದಿದ್ದರು. ಇತರ ಎಲ್ಲಾ ದೇಶಗಳಿಗೆ ಹೋಲಿದರೆ ಭಾರತದಲ್ಲಿ ಮೊಬೈಲ್ ಡೇಟಾ ಅಗ್ಗದ ದರದಲ್ಲಿ ಲಭ್ಯವಿದೆ. ಭಾರತ ಜಿಟಲ್ ಪಾವತಿ ಮೂಲಕ ಹೊಸ ಕ್ರಾಂತಿ ಮಾಡಿದೆ ಎಂದು ಮೋದಿ ಹೇಳಿದ್ದರು.  ಇದೀಗ ಭಾರತದ ಡಿಜಿಟಲ್ ಪೇಮೆಂಟ್ ದಾಖಲೆ ಬಿಡುಗಡೆಯಾಗಿದೆ. 

ಕಳೆದ 9 ವರ್ಷದಲ್ಲಿ ಭಾರತ ಡಿಜಿಟಲ್ ಇಂಡಿಯಾ ಮೂಲಕ ಬಹುದೂರ ಸಾಗಿದ್ದೇವೆ. ಇದೀಗ ಆರ್ಟಿಫೀಶಿಯಲ್ ಇಂಟೆಲಿಜೆನ್ಸಿ(AI) ನಿರ್ವಹಣೆ ಕುರಿತು ಚರ್ಚೆಗಳು ನಡೆಯುತ್ತಿದೆ. ಭಾರತದಲ್ಲಿ AI ನಿರ್ವಹಣೆಯನ್ನು ಡಿಜಿಟಲ್ ನಾಗರೀಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ದೇಶದ 85 ಕೋಟಿ ಇಂಟರ್ನೆಟ್‌ ಬಳಕೆದಾರರನ್ನು ಸೈಬರ್‌ ಅಪರಾಧಗಳಿಂದ ರಕ್ಷಿಸುವ, ಅಂತರ್ಜಾಲವನ್ನು ಮುಕ್ತ ಮತ್ತು ಸುರಕ್ಷಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಮಸೂದೆಯನ್ನು ಸಿದ್ಧಪಡಿಸುತ್ತಿದ್ದು, ಅದನ್ನು ಶೀಘ್ರವೇ ಸಂಸತ್ತಿನಲ್ಲಿ ಮಂಡಿಸಲಾಗುವುದು. ಒಟ್ಟು 11 ರೀತಿಯ ಅಂಶಗಳನ್ನು ಈ ಮಸೂದೆ ಮೂಲಕ ನಿಷೇಧಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

click me!