
ನಾಗ್ಪುರ (ಜ.22): ಕಳೆದ ಒಂದು ವರ್ಷದಲ್ಲಿ ಮಹಾರಾಷ್ಟ್ರವು ಕರ್ನಾಟಕದ ಬೆಂಗಳೂರನ್ನು ಸ್ಟಾರ್ಟ್‌ಅಪ್‌ಗಳ ವಿಚಾರದಲ್ಲಿ ಹಿಂದಿಕ್ಕಿದೆ. ಈಗ ದೇಶದ ಗರಿಷ್ಠ ಸಂಖ್ಯೆಯ ಸ್ಟಾರ್ಟ್‌ಅಪ್‌ಗಳಿರುವ ರಾಜ್ಯ ಎನ್ನುವ ಶ್ರೇಯ ಮಹಾರಾಷ್ಟ್ರಕ್ಕೆ ಸೇರಿದೆ. ಸಂಖ್ಯೆ ಹಾಗೂ ಮೌಲ್ಯ ಎರಡರಲ್ಲೂ ಮಹಾರಾಷ್ಟ್ರ ದೇಶದ ಸ್ಟಾರ್ಟ್ಅಪ್ ರಾಜಧಾನಿಯಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇತ್ತೀಚೆಗೆ ಹೇಳಿದ್ದಾರೆ.
ಕಳೆದ ಶುಕ್ರವಾರ COMP-EX 2025 ರ ಟೆಕ್ ಪ್ರದರ್ಶನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ (AI) ಗೆ ಹೊಂದಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ತಮ್ಮ ಸರ್ಕಾರವು ಈ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್‌ಗಳನ್ನು ಉತ್ತೇಜಿಸುತ್ತಿದೆ ಎಂದು ತಿಳಿಸಿದ್ದಾರೆ.
"ಮಹಾರಾಷ್ಟ್ರವು ಕಳೆದ ಒಂದು ವರ್ಷದಲ್ಲಿ ಬೆಂಗಳೂರನ್ನು ಸ್ಟಾರ್ಟ್‌ಅಪ್‌ಗಳ ವಿಚಾರದಲ್ಲಿ ಮೀರಿಸಿದ್ದು ಮತ್ತು ಸಂಖ್ಯೆ ಮತ್ತು ಮೌಲ್ಯ ಎರಡರಲ್ಲೂ ದೇಶದ ಸ್ಟಾರ್ಟ್ಅಪ್ ರಾಜಧಾನಿಯಾಗಿದೆ. ರಾಜ್ಯವು ಗರಿಷ್ಠ ಸಂಖ್ಯೆಯ ಸ್ಟಾರ್ಟ್ಅಪ್‌ಗಳನ್ನು ಹೊಂದಿದೆ. ಮಹಾರಾಷ್ಟ್ರ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ ಮತ್ತು ಹೆಚ್ಚಿನ ಯುನಿಕಾರ್ನ್‌ಗಳು ರಾಜ್ಯಕ್ಕೆ ಬರುತ್ತವೆ" ಎಂದು ಹೇಳಿದ್ದಾರೆ. ಹಾರಾಷ್ಟ್ರವನ್ನು ನಾವೀನ್ಯತೆ ಕ್ಷೇತ್ರದಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು, ಸರ್ಕಾರವು 'ಇನ್ನೋವೇಷನ್ ಸಿಟಿ'ಯನ್ನು ಸ್ಥಾಪಿಸುತ್ತಿದೆ ಎಂದು ಫಡ್ನವೀಸ್ ಹೇಳಿದರು. ಮಹಾರಾಷ್ಟ್ರವು ದೇಶದ ಫಿನ್‌ಟೆಕ್ ರಾಜಧಾನಿಯೂ ಆಗಿದೆ ಎಂದು ತಿಳಿಸಿದ್ದಾರೆ.
ದಾವೋಸ್‌ಗೂ ಇಲ್ಲ ರಾಜ್ಯದ ಪ್ರತಿನಿಧಿ: ಇನ್ನೊಂದೆಡೆ ಸ್ವಿಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕಾನಾಮಿಕ್ ಫೋರಮ್ (ಡಬ್ಲ್ಯುಇಎಫ್) ಶೃಂಗಸಭೆಗೆ ಬಹುತೇಕ ದೇಶದ ಎಲ್ಲಾ ಪ್ರಮುಖ ರಾಜ್ಯಗಳು ತನ್ನ ಪ್ರತಿನಿಧಿಗಳನ್ನು ಕಳಿಸಿವೆ. ಮಹಾರಾಷ್ಟ್ರ ಹಾಗೂ ತೆಲಂಗಾಣದ ಸಿಎಂಗಳೇ ಇದರಲ್ಲಿ ಭಾಗವಹಿಸಿದ್ದಾರೆ. ಅದರಲ್ಲೂ ತೆಲಂಗಾಣದ ಸಿಎಂ ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳಲ್ಲಿ ಹೂಡಿಕೆ ಮಾಡುವಂತೆ ವಿಶ್ವದ ಪ್ರಮುಖ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ರಾಜ್ಯದ ಯಾವೊಬ್ಬ ಪ್ರತಿನಿಧಿ ಕೂಡ ದಾವೋಸ್‌ಗೆ ಹೋಗಿಲ್ಲ. ಮುಖ್ಯಮಂತ್ರಿಯಾಗಲಿ, ಕ್ಯಾಬಿನೆಟ್ ಸಚಿವರಾಗಲಿ ಯಾರೋಬ್ಬರೂ ದಾವೋಸ್‌ಗೆ ತೆರಳಿ ರಾಜ್ಯಕ್ಕೆ ಹೂಡಿಕೆ ಬಗ್ಗೆ ಪ್ರಯತ್ನ ಮಾಡಿಲ್ಲ.
ಕಾಂಗ್ರೆಸ್ ನಾಯಕಿ ಕೊಟ್ಟಿದ್ದು ₹45 ಸಾವಿರ, ವಸೂಲಿ ಮಾಡಿದ್ದು ₹3.45 ಲಕ್ಷ; ಇನ್ನೂ ಸಾಲ ತೀರಿಲ್ವಂತೆ!
ಜನವರಿ 21 ರಂದು ಪ್ರಾರಂಭವಾದ ದಾವೋಸ್ 2025 ಕಾರ್ಯಕ್ರಮದಲ್ಲಿ, ಭಾರತದ 'ಟೀಮ್ ಭಾರತ್' 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ತನ್ನ ದೃಷ್ಟಿಕೋನವನ್ನು ಪ್ರದರ್ಶಿಸಿತು, ಸಮಗ್ರ ಬೆಳವಣಿಗೆ, ಸುಸ್ಥಿರತೆ ಮತ್ತು ತಾಂತ್ರಿಕ ನಾವೀನ್ಯತೆಗಳಿಗೆ ಒತ್ತು ನೀಡಿತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಇತರ ಗಣ್ಯರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸೆಕ್ಯುರಿಟಿ ಸಿಬ್ಬಂದಿಯನ್ನ ಹೊಟ್ಟೆಯಿಂದ ದೂಡಿ ಅವಾಜ್ ಹಾಕಿದ ಲಾಯರ್; ಈ ಜಗ್ಗಂದು ಯಾಕೋ ಅತಿ ಆಯಿತು ಎಂದ ನೆಟ್ಟಿಗರು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.