
ನವದೆಹಲಿ: ಇಂದು ಕಾಂಡೋಮ್ ಬಳಕೆಯ ಕುರಿತು ಜಾಗೃತಿಯಾಗಿದ್ದು, ಗರ್ಭಧಾರಣೆ ನಿಯಂತ್ರಣಕ್ಕಾಗಿ ಇದನ್ನು ಬಳಕೆ ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಕಾಂಡೋಮ್ ಮಾರಾಟದಲ್ಲಿಯೂ ಏರಿಕೆಯಾಗುತ್ತಿರೋದು ಅಂಕಿ-ಅಂಶಗಳಿಂದ ಗೊತ್ತಾಗುತ್ತಿದೆ. ಕಾಂಡೋಮ್ ಬಳಕೆ ಇಂದು ನಿನ್ನೆಯದಲ್ಲ. ಕಾಂಡೋಮ್‌ಗೆ ಅದರದೇ ಆದ ಇತಿಹಾಸವಿದೆ. ಭಾರತದಲ್ಲಿಂದು ಎಲ್ಲಾ ವರ್ಗದ ಜನರು ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ಸಮಯಕ್ಕೆ ತಕ್ಕಂತೆ ಕಾಂಡೋಮ್ ಉತ್ಪನ್ನಗಳ ತಯಾರಿಕೆಯಲ್ಲಿಯೂ ಬದಲಾವಣೆಗಳು ಕಂಡು ಬರುತ್ತಿವೆ. ಹಾಗಾದ್ರೆ ಭಾರತದ ಯಾವ ನಗರದಲ್ಲಿ ಅತ್ಯಧಿಕ ಕಾಂಡೋಮ್ ಉತ್ಪಾದನೆ ಮಾಡಲಾಗುತ್ತೆ ಎಂದು ನೋಡೋಣ ಬನ್ನಿ.
ಇಂದು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಕಾಂಡೋಮ್‌ಗಳು ಲಭ್ಯವಾಗುತ್ತವೆ. ಕೆಲ ಕಂಪನಿಗಳು ತಮ್ಮ ಉತ್ಪನ್ನದ ಮಾರಾಟ ಹೆಚ್ಚಿಸಲು ಜಾಹೀರಾತು ನೀಡುತ್ತವೆ. ಕಾಂಡೋಮ್ ಮಾರುಕಟ್ಟೆ ದೊಡ್ಡದಾಗುತ್ತಿದ್ದಂತೆ ಉತ್ಪಾದಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಕಂಪನಿಗಳ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಡಾಕ್ಟರ್ ಗ್ಯಾಬ್ರಿಯೆಲ್ ಫೆಲೊಪಿಯೋ ಎಂಬವರು ಕಾಂಡೋಮ್ ಪರಿಚಯಿಸಿದ್ದರು. ಇಂದು ವಿದೇಶಗಳಿಗೂ ಭಾರತದಿಂದ ಕಾಂಡೋಮ್‌ಗಳು ರಫ್ತು ಆಗುತ್ತವೆ.
ಭಾರತದ ಯಾವ ನಗರದಲ್ಲಿ ಅತಿಹೆಚ್ಚು ಕಾಂಡೋಮ್ ಉತ್ಪಾದನೆ ಹೆಚ್ಚಾಗುತ್ತೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರ ರಾಜ್ಯದ ನಗರವೊಂದರಲ್ಲಿ ಅತ್ಯಧಿಕವಾಗಿ ಕಾಂಡೋಮ್ ಉತ್ಪಾದನೆ ಮಾಡಲಾಗುತ್ತದೆ. ಈ ನಗರದ ಹೆಸರು ಔರಂಗಾಬಾದ್. ಹಾಗಾಗಿ ಈ ನಗರವನ್ನು ಭಾರತದ ಕಾಂಡೋಮ್ ರಾಜಧಾನಿ ಎಂದು ಗುರುತಿಸಲಾಗುತ್ತದೆ. ಕಾಂಡೋಮ್ ಉತ್ಪಾದನೆಯನ್ನು ಔರಂಗಾಬಾದ್ ಪ್ರಮುಖ ಪಾತ್ರವನ್ನು ಹೊಂದಿದೆ. ಪ್ರತಿವರ್ಷ ಈ ನಗರದಲ್ಲಿಯೇ ಕಾಂಡೋಮ್ ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ ಮತ್ತು ಇಲ್ಲಿಂದಲೇ ದಕ್ಷಿಣ ಏಷ್ಯಾ, ಯುರೋಪ್ ಮತ್ತು ಆಫ್ರಿಕಾ ಖಂಡದ ರಾಷ್ಟ್ರಗಳಿಗೆ ಉತ್ಪಾದನೆ ಮಾಡಲಾಗುತ್ತದೆ.
ಕಾಂಡೋಮ್ ರಫ್ತು ಸಹ ಭಾರತದ ಆರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಔರಂಗಾಬಾದ್ ನಗರದಲ್ಲಿ ಪ್ರತಿತಿಂಗಳು 1 ಕೋಟಿಗೂ ಕಾಂಡೋಮ್ ಉತ್ಪಾದನೆ ಮಾಡಲಾಗುತ್ತದೆ. ವರದಿಗಳ ಪ್ರಕಾರ, 36 ದೇಶಗಳಿಗೆ ಇಲ್ಲಿಂದ ಕಾಂಡೋಮ್ ರವಾನೆಯಾಗುತ್ತದೆ. ಕಾಂಡೋಮ್ ರಫ್ತಿನಿಂದ ವಾರ್ಷಿಕ 200 ರಿಂದ 300 ಕೋಟಿ ರೂ ಆದಾಯ ನಿರೀಕ್ಷಿಸಲಾಗುತ್ತದೆ.
ಇದನ್ನೂ ಓದಿ: ಚರಂಡಿ ಬ್ಲಾಕ್ ಮಾಡಿದ ಕಾಂಡೋಮ್‌ಗಳು; ಸ್ಥಳೀಯರಿಂದ ಆಕ್ರೋಶ
ಭಾರತದಲ್ಲಿ 2ನೇ ಅತಿದೊಡ್ಡ ಕಾಂಡೋಮ್ ಬ್ರ್ಯಾಂಡ್
ಔರಂಗಾಬಾದ್ ನಲ್ಲಿ ಸಿದ್ದಪಡಿಸಲಾಗುವ ರೇಮಂಡ್ ಗ್ರೂಪ್‌ನ ಕಾಮಸೂತ್ರ ಕಾಂಡೋಮ್‌ಗಳು ಭಾರತದ ಎರಡನೇ ಅತಿದೊಡ್ಡ ಬ್ರ್ಯಾಂಡ್ ಆಗಿದೆ. 1991ರಲ್ಲಿ ಕಾಮಸೂತ್ರ ಕಾಂಡೋಮ್ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿತು. ಕಂಪನಿಯು ವಾರ್ಷಿಕ 300 ಮಿಲಿಯನ್ ಕಾಂಡೋಮ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ 320 ಮಿಲಿಯನ್‌ಗೆ ಏರಿಕೆಯಾಗಿದೆ. ಚೀನಾ ಸಹ ಅತ್ಯಧಿಕವಾಗಿ ಕಾಮಸೂತ್ರ ಕಾಂಡೋಮ್‌ಗಳನ್ನು ಆಮದು ಮಾಡಿಕೊಳ್ಳುತ್ತದೆ. ರೇಮಂಡ್ ಗ್ರೂಪ್ ಪ್ರತಿ ವರ್ಷ ಸುಮಾರು 36 ಕೋಟಿ ಕಾಂಡೋಮ್‌ಗಳನ್ನು ಚೀನಾಕ್ಕೆ ರಫ್ತು ಮಾಡುತ್ತದೆ ಎಂದು ಕಂಪನಿಯ ವ್ಯವಸ್ಥಾಪಕ ಬಾಬು ಅಯ್ಯರ್ ಹೇಳಿದ್ದಾರೆ.
ಇದನ್ನೂ ಓದಿ: ಚಾಕ್ಲೇಟ್, ಸ್ಟ್ರಾಬೆರಿ, ಪಾನ್, ಭಾರತದ ಒಂದೊಂದು ರಾಜ್ಯದ ಕಾಂಡೋಮ್ ಫ್ಲೇವರ್ ಎಲ್ಲರಿಗಿಂತ ಭಿನ್ನ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.