ಅಂಬಾನಿಯ ₹15,000 ಕೋಟಿ ಮೌಲ್ಯದ ಆ್ಯಂಟಿಲಿಯಾ ಮನೆಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಹೇಗಿರುತ್ತೆ?

Published : Feb 23, 2025, 04:25 PM ISTUpdated : Feb 23, 2025, 06:43 PM IST
ಅಂಬಾನಿಯ ₹15,000 ಕೋಟಿ ಮೌಲ್ಯದ ಆ್ಯಂಟಿಲಿಯಾ ಮನೆಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ಹೇಗಿರುತ್ತೆ?

ಸಾರಾಂಶ

ಮುಕೇಶ್ ಅಂಬಾನಿ ಮನೆಯ ಸಿಬ್ಬಂದಿಗಳ ವೇತನ ಖಾಸಗಿ ಕಂಪನಿನಗಳ ಸಿಇಒಗಿಂತ ಹೆಚ್ಚಿದೆ. ಸೆಕ್ಯೂರಿಟಿ, ಸಹಾಯಕರು, ಅಡುಗೆ, ಡ್ರೈವರ್ ಸೇರಿದಂತೆ ಆ್ಯಂಟಿಲಿಯಾ ಮನೆಗೆ ಸಿಬ್ಬಂದಿಗಳ ನೇಮಕ ಹೇಗೆ ಮಾಡಲಾಗುತ್ತ? ನೇಮಕಾತಿ ಪ್ರಕ್ರಿಯೆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ.  

ಮುಂಬೈ(ಫೆ.23) ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಬರೋಬ್ಬರಿ 15,000 ಕೋಟಿ ರೂಪಾಯಿ ಮೌಲ್ಯದ ಆ್ಯಂಟಿಲಿಯಾದಲ್ಲಿ ನೆಲೆಸಿದ್ದಾರೆ. ವಿಶ್ವದ ಅತೀ ದುಬಾರಿ ಮನೆಗಳಲ್ಲಿ ಅಂಬಾನಿಯ ಆ್ಯಂಟಿಲಿಯಾ ಮನೆ ಕೂಡ ಒಂದು. 27 ಅಡಿಗಳ ಈ ಮನೆಯಲ್ಲಿ ಎಲ್ಲಾ ಸೌಲಭ್ಯ, ಐಷಾರಾಮಿತನವಿದೆ. ಗೇಟ್ ಕೀಪರ್, ಭದ್ರತಾ ಸಿಬ್ಬಂದಿ, ಸಹಾಯಕರು, ಅಡುಗೆ ಸಿಬ್ಬಂಧಿ, ಸಿಸಿಟಿವಿ ಪರೀಶೀಲಿಸಲು ಸಿಬ್ಬಂದಿ, ಚಾಲಕರು, ಟೆಕ್ ಟೀಮ್ ಸೇರಿದಂತೆ ಆ್ಯಂಟಿಲಿಯಾದಲ್ಲಿ ಬರೋಬ್ಬರಿ 600 ರಿಂದ 700 ಮಂದಿ ಸಿಬ್ಬಂದಿಗಳಿದ್ದಾರೆ. ಇವರ ವೇತನ ಹಲವು ಸಿಇಒಗಳಿಗಿಂತ ಹೆಚ್ಚಿದೆ. ಆದರೆ ಈ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಹೇಗಿರುತ್ತೆ?

ಮುಕೇಶ್ ಅಂಬಾನಿಯ ಆ್ಯಂಟಿಲಿಯಾದಲ್ಲಿನ ಸಿಬ್ಬಂದಿಗಳಿಗೆ ಕೈತುಂಬ ವೇತನ ನೀಡಲಾಗುತ್ತದೆ. ಹಲವು ವರದಿಗಳ ಪ್ರಕಾರ ಮುಕೇಶ್ ಅಂಬಾನಿ ಕಾರು ಚಾಲಕನ ವಾರ್ಷಿಕ ವೇತನ 24 ಲಕ್ಷ ರೂಪಾಯಿ. ಅಂದರೆ ಪ್ರತಿ ತಿಂಗಳ ವೇತನ 2 ಲಕ್ಷ ರೂಪಾಯಿ. ಮೂಲಗಳ ಪ್ರಕಾರ ಆ್ಯಂಟಿಲಿಯಾ ಮನೆ ಗುಡಿಸಿ ಒರೆಸುವ ಸಿಬ್ಬಂದಿಗಳು ಸೇರಿದಂತ ಒಂದೆರೆಡು ಗಂಟೆ ಕೆಲಸ ಮಾಡುವ ಸಣ್ಣ ಕೆಲಸಗಳ ಸಹಾಯಕ ಸಿಬ್ಬಂದಿಗಳ ವೇತನ 14,536 ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಅನುಭವ, ಕೆಲಸದ ಪರಿಣಿತಿಗಳ ಅನುಸಾರ ಈ ವೇತನ 55,869 ರೂಪಾಯಿ ತನಕ ನೀಡಲಾಗುತ್ತದೆ.

15 ಸಾವಿರ ಕೋಟಿ ರೂ ಆ್ಯಂಟಿಲಿಯಾ ಮನೆಯ ಯಾವ ಮಹಡಿಯಲ್ಲಿ ಮುಕೇಶ್-ನೀತಾ ವಾಸ?

ಆ್ಯಂಟಿಲಿಯಾ ಮನೆಯ ಸಿಬ್ಬಂದಿ ನೇಮಕ ಪಕ್ರಿಯೆ
ಅಂಬಾನಿಯ ಮನೆಯಲ್ಲಿನ ಪ್ರತಿಯೊಂದು ಸಿಬ್ಬಂದಿ ನೇಮಕ ಪ್ರಕ್ರಿಯೆಗೂ ಸಂದರ್ಶನ ನಡೆಯುತ್ತದೆ. ಅಭ್ಯರ್ಥಿಗಳ ಇತಿಹಾಸವನ್ನು ನೋಡಲಾಗುತ್ತದೆ. ಅಂಬಾನಿ ಮನೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಕನಿಷ್ಠ ಪದವಿ ಪಡೆದಿರಬೇಕು. ಇನ್ನು ಯಾವ ಕ್ಷೇತ್ರದಲ್ಲಿ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ, ಆಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರಬೇಕು. ಅನುಭವ ಇಲ್ಲದ ಹೊಸಬರು ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಆಯಾ ಕ್ಷೇತ್ರದಲ್ಲಿ ಕನಿಷ್ಠ ಪದವಿ ಪಡೆದಿರಬೇಕು. ಉದಾಹರಣೆಗೆ ಅಡುಗೆ ಚೆಫ್ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ, ಅನುಭವ ಇರಬೇಕು, ಅಥವಾ ಸಹಾಯ ಅಡುಗೆ ಚೆಫ್ ಆಗಿ ನೇಮಕಗೊಳ್ಳಲು ಸೂಕ್ತ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು. ಕಾರು ಚಾಲಕ ಸೇರಿದಂತೆ ಡ್ರೈವರ್ ನೇಮಕ ಪ್ರಕ್ರಿಯೆಗೆ ಅನುಭವ ಕಡ್ಡಾಯವಾಗಿದೆ. 

ಕೆಲ ನೇಮಕಾತಿಗೆ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇತರ ಸಿಬ್ಬಂದಿಗಳ ನೇಮಕಕ್ಕೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅನುಭವದ ಆಧಾರದಲ್ಲಿ ವೇತನ ನಿಗದಿಪಡಿಸಲಾಗುತ್ತದೆ. ಆ್ಯಂಟಿಲಿಯಾ ಮನೆಯಲ್ಲಿ ಕೆಲಸ ಗಿಟ್ಟಿಸಿಕೊಂಡರೆ ವೇತನ ಮಾತ್ರವಲ್ಲ, ಇತರ ಸೌಲಭ್ಯಗಳು ಸಿಗಲಿದೆ. ಕರ್ತವ್ಯದ ವೇಳೆ ಊಟ, ತಿಂಡಿ, ಟಿ,ಕಾಫಿ ಸೇರಿದಂತೆ ಆಹಾರಗಳು ಉಚಿತವಾಗಿ ಸಿಗಲಿದೆ. ಇನ್ನು ಎಲ್ಲಾ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಇರಲಿದೆ.  ಇದರ ಜೊತೆಗೆ ಬೋನಸ್, ಭತ್ಯೆ, ಪಿಎಫ್ ಸೇರಿದಂತೆ ಇತರ ಸೌಲಭ್ಯಗಳು ಸಿಬ್ಬಂದಿಗಳಿಗೆ ಸಿಗಲಿದೆ. ಹೀಗಾಗಿ ಆ್ಯಂಟಿಲಿಯಾದಲ್ಲಿ ಕೆಲಸಕ್ಕಾಗಿ ಹಲವರು ಹಾತೊರೆಯುತ್ತಾರೆ. ಖಾಯಂ ಕೆಲಸ, ರಜೆ ಸೌಲಭ್ಯ, ತಿಂಗಳ ಅಂತ್ಯದಲ್ಲಿ ವೇತನ ಹೀಗೆ ಎಲ್ಲವೂ ಪಕ್ಕ. 

ಮುಕೇಶ್ ಅಂಬಾನಿ ಆ್ಯಂಟಿಲಿಯಾ ಮನೆಗೆ ಪೊಲೀಸ್ ಭದ್ರತೆ ಇದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಮುಕೇಶ್ ಅಂಬಾನಿ ಖರ್ಚು ಮಾಡುತ್ತಾರೆ. ಪೊಲೀಸರ ಜೊತೆಗೆ ಅಂಬಾನಿ ಆ್ಯಂಟಿಲಿಯಾ ಮನೆಯಲ್ಲಿ ಬೌನ್ಸರ್ಸ್ ಸೇರಿದಂತೆ ಭದ್ರತಾ ಸಿಬ್ಬಂದಿಗಳ ತಂಡವಿದೆ. ಅಂಬಾನಿ ಹಾಗೂ ಇಡೀ ಕುಟುಂಬಕ್ಕೆ ಭದ್ರತೆ ಒದಗಿಸುವ ಪೊಲೀಸ್ ಸೇರಿದಂತೆ ಭದ್ರತಾ ಸಿಬ್ಬಂದಿಗಳಿಗೆ ರೇಂಜ್ ರೋವರ್ ಸೇರಿದಂತೆ ಐಷಾರಾಮಿ ಕಾರುಗಳನ್ನು ನೀಡಲಾಗಿದೆ. ಅಂಬಾನಿ ಕಾರಿನ ಸುತ್ತಲೂ ಭಾರಿ ಭದ್ರತೆ ಒದಗಗಿಸುತ್ತಾರೆ.

ಅಂಬಾನಿ ಮನೆಗೆ ಬಂತು ಹೊಸ ಬುಲೆಟ್ ಪ್ರೂಫ್ ಕಾರು, ಇದರ ಬೆಲೆ ಎಷ್ಟು?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ