ಚುನಾವಣಾ ಫಲಿತಾಂಶಕ್ಕೂ ಮೊದಲೇ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಭಾರೀ ಕಡಿತಗೊಂಡಿದೆ. ಬರೋಬ್ಬರಿ 69.50 ರೂಪಾಯಿ ಕಡಿತ ಮಾಡಲಾಗಿದೆ.
ನವದೆಹಲಿ(ಜೂ.01) ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೆಲ ದಿನಗಳು ಮಾತ್ರ ಬಾಕಿ.ದೇಶದಲ್ಲಿ 7ನೇ ಹಾಗೂ ಕೊನೆಯ ಹಂತದ ಮತದಾನ ನಡೆಯುತ್ತಿದೆ. ಇದರ ನಡುವೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಅನಿಲ ಮಾರ್ಕೆಟಿಂಗ್ ಕಂಪನಿ ಇದೀಗ 19 ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಭಾರಿ ಕಡಿತ ಮಾಡಿದೆ. 19ಕೆಜಿ ವಾಣಿಜ್ಯ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ದರವನ್ನು 69.50 ರೂಪಾಯಿ ಕಡಿತ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ(ಜೂನ್ 01) ಜಾರಿಯಾಗಿದೆ.
ಸದ್ಯ ವಾಣಿಜ್ಯ ಅಡುಗೆ ಅನಿಲ ಸಿಲಿಂಜರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ. ಆದರೆ ಡೊಮೆಸ್ಟಿಕ್ ಎಲ್‌ಪಿಜಿ ಅಡುಗೆ ಅನಿಲ ದರದಲ್ಲಿ ಯಾವುದೇ ವ್ಯತ್ಯಸಾವಾಗಿಲ್ಲ. 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ದರ ಯಥಾವತ್ತಾಗಿ ಮುಂದುವರಿಯಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಆಧರಿಸಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ.
ಮಗ ಟೀಂ ಇಂಡಿಯಾದಲ್ಲಿ ಮಿಂಚುತ್ತಿದ್ದರೂ ಅಪ್ಪ ಈಗಲೂ ಸಿಲಿಂಡರ್ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ..! ವಿಡಿಯೋ ವೈರಲ್
ವಾಣಿಜ್ಯ ಅಡುಗೆ ಅನಿಲ ದರ ಇಳಿಕೆ ಬಳಿ ಬೆಂಗಳೂರಿನಲ್ಲಿ 19 ಕೆಡಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ1755 ರೂಪಾಯಿಗೆ ಇಳಿಕೆಯಾಗಿದೆ. ಇನ್ನು ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅಡುಗೆ ಅನಿಲ ಬೆಲೆ 1676 ರೂಪಾಯಿ. ವಾಣಿಜ್ಯ ನಗರಿ ಮುಂಬೈನಲ್ಲಿ ಸದ್ಯ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 1,629 ರೂಪಾಯಿಗೆ ಇಳಿಕೆ ಆಗಿದೆ. ಚೆನ್ನೈನಲ್ಲಿ 1,841.50 ರೂಪಾಯಿ, ಕೋಲ್ಕತಾದಲ್ಲಿ 1,789.50 ರೂಪಾಯಿಗೆ ಇಳಿಕೆಯಾಗಿದೆ.
ಮೇ01, 2024ರಲ್ಲೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ತಿಂಗಳು 19 ಕೆಜಿ ಸಿಲಿಂಡರ್ ಬೆಲೆ 19 ರೂಪಾಯಿ ಇಳಿಕೆಯಾಗಿತ್ತು. ಇನ್ನು ಎಪ್ರಿಲ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 30.50 ರೂಪಾಯಿ ಇಳಿಕೆಯಾಗಿತ್ತು. ಒಟ್ಟಾರೆ ಈ ಬಾರಿಯ ಪರಿಷ್ಕರಣೆ ಸೇರಿದಂತೆ ಕಳೆದ 3 ತಿಂಗಳ ದರ ಇಳಿಕೆಯಲ್ಲಿ ಒಟ್ಟು 119 ರೂಪಾಯಿ ಇಳಿಕೆಯಾಗಿದೆ.
ಎಪ್ರಿಲ್ ತಿಂಗಳಲ್ಲಿ ಮಾರುಕಟ್ಟೆ ದರದಲ್ಲೇ ಮಾರಾಟ ಮಾಡುವ 5 ಕೆಜಿ ತೂಕದ ಸಣ್ಣ ಎಲ್‌ಪಿಜಿ ದರವನ್ನು 7.50 ರೂಪಾಯಿ ಇಳಿಕೆ ಮಾಡಿ ತೈಲ ಕಂಪನಿಗಳು ನಿರ್ಧಾರ ಕೈಗೊಂಡಿತ್ತು. ಕಳೆದ ಜನವರಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು. ಬಳಿಕ ಸ್ಥಿರವಾಗಿತ್ತು. ಇದೀಗ ಎಪ್ರಿಲ್ ತಿಂಗಳಿನಿಂದ ಸತತವಾಗಿ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆಯಾಗುತ್ತಿದೆ.
ಬೆಂಗ್ಳೂರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ: ಐವರ ಸ್ಥಿತಿ ಗಂಭೀರ