ವಿಶ್ವದ ಬಿಲಿಯನೇರ್‌ಗಳ ಪಟ್ಟಿ ಕೆಲವೇ ಗಂಟೆಗಳಲ್ಲಿ ಬದಲಾಗಿದೆ. ವಿಶ್ವದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ನಿವ್ವಳ ಮೌಲ್ಯ ಕುಸಿತ ಕಂಡಿದೆ. ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಬಿಲಿಯನೇರ್‌ಗಳ ಪಟ್ಟಿ ಪ್ರಮುಖ ಬದಲಾವಣೆಯನ್ನು ಕಂಡಿದೆ . ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ. ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದಂತೆ ಅನೇಕ ಬಿಲಿಯನೇರ್‌ಗಳು ತಮ್ಮ ನಿವ್ವಳ ಮೌಲ್ಯದಲ್ಲಿ ಕುಸಿತ ಕಂಡಿದ್ದಾರೆ. ವಿಶ್ವದ ಅಗ್ರ 10 ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಕುಸಿತ ಕಂಡಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಬದಲಿಗೆ ಅವರು ನಂಬರ್ ಒನ್ ಸ್ಥಾನಕ್ಕೆ ತಲುಪಿದ್ದಾರೆ.
ಬೆಜೋಸ್ ನಿವ್ವಳ ಮೌಲ್ಯ USD 205 ಬಿಲಿಯನ್ ಅಂದರೆ ಸುಮಾರು 1707440 ಕೋಟಿ ರೂ. ಹೋಲಿಸಿದರೆ, ಹಿಂದಿನ ನಂ. 1 ಬಿಲಿಯನೇರ್ ಆಗಿರುವ ಅರ್ನಾಲ್ಟ್ ಒಟ್ಟು ಆಸ್ತಿ ಮೌಲ್ಯ USD 203 ಬಿಲಿಯನ್ ಅಂದರೆ 1690370 ಕೋಟಿ ರೂ.
undefined
ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯಲ್ಲಿ ನೆಗೆತ ಕಂಡ ರಿಷಿ ಸುನಕ್ ದಂಪತಿ, ಪತ್ನಿಯ ಆಸ್ತಿಯೇ ಜಾಸ್ತಿ!
ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯ ಕೂಡ USD 1.5 ಶತಕೋಟಿ ಇಳಿಕೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರು USD 110 ಶತಕೋಟಿ ಅಂದರೆ 916220 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ 106 ಬಿಲಿಯನ್ USD ಅಂದರೆ 882900 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಈ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್ USD 202 ಶತಕೋಟಿಯೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ USD 169 ಶತಕೋಟಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ, ಲ್ಯಾರಿ ಪೇಜ್ (USD 156 ಶತಕೋಟಿ) ಐದನೇ ಸ್ಥಾನದಲ್ಲಿದ್ದಾರೆ, ಬಿಲ್ ಗೇಟ್ಸ್ (USD 152 ಶತಕೋಟಿ) ಆರನೇ ಸ್ಥಾನದಲ್ಲಿದ್ದಾರೆ.
ಒಂದೇ ದಿನದಲ್ಲಿ ಬರೋಬ್ಬರಿ 43000 ಕೋಟಿ ಲಾಸ್ ಮಾಡ್ಕೊಂಡ ಮುಕೇಶ್ ಅಂಬಾನಿ, ಕಾರಣವೇನು?
ಸ್ಟೀವ್ ಬಾಲ್ಮರ್ (USD 148 ಶತಕೋಟಿ) ಏಳನೇ ಸ್ಥಾನದಲ್ಲಿದ್ದಾರೆ, ಸೆರ್ಗೆ ಬ್ರಿನ್ (USD) 147 ಶತಕೋಟಿ) ಎಂಟನೇ ಸ್ಥಾನದಲ್ಲಿದೆ, ಲ್ಯಾರಿ ಎಲಿಸನ್ (USD 138 ಶತಕೋಟಿ) ಮತ್ತು ವಾರೆನ್ ಬಫೆಟ್ (USD 133 ಶತಕೋಟಿ) ಕ್ರಮವಾಗಿ 9 ಮತ್ತು 10 ನೇ ಸ್ಥಾನಗಳಲ್ಲಿದ್ದಾರೆ.