ರಿಂಕು ಸಿಂಗ್ ಅವರ ಪರಿಶ್ರಮಕ್ಕೆ ಆರಂಭದಲ್ಲೇ ಯಶಸ್ಸಿನ ಸಿಹಿ ರುಚಿ ನೋಡಲು ಸಿಕ್ಕಿತು. ಕಳೆದ ವರ್ಷ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಿಂಕು ಸಿಂಗ್, ತಮ್ಮ ತಂದೆ ಈ ಮೊದಲು ಕುಟುಂಬಕ್ಕೆ ಆಸರೆಯಾಗಿದ್ದ ಸಿಲಿಂಡರ್ ಡೆಲಿವರಿ ಕೆಲಸವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದರು.
ಕೋಲ್ಕತ: ಕಳೆದ ವರ್ಷ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ರಿಂಕು ಸಿಂಗ್, ಆ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ತನ್ನ ಹೆಜ್ಜೆಗುರುತು ದಾಖಲಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ 14 ಪಂದ್ಯಗಳನ್ನಾಡಿ 474 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಆಯ್ಕೆ ಸಮಿತಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
26 ವರ್ಷದ ರಿಂಕು ಸಿಂಗ್ ಅವರ ಟೀಂ ಇಂಡಿಯಾವರೆಗಿನ ಜರ್ನಿ ಅಷ್ಟೇನೂ ಸುಲಭವಾಗಿರಲಿಲ್ಲ. ಸಾಕಷ್ಟು ಪರಿಶ್ರಮ ಹಾಗೂ ಕಠಿಣ ಪರಿಶ್ರಮದ ಮೂಲಕ ಈ ಹಂತ ತಲುಪಿದ್ದಾರೆ. ಉತ್ತರಪ್ರದೇಶದ ಆಲಿಘರ್‌ನಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಿಂಕು ಸಿಂಗ್, ತಮ್ಮ ಬಿಡುವಿನ ಸಮಯದಲ್ಲಿ ತಂದೆ ಖಂಚಂದ್ರ ಸಿಂಗ್ ಸಹೋದರ ಜೀತ್ ಸಿಂಗ್ ಜತೆ ಮನೆ ಮನೆಗೆ LPG ಸಿಲಿಂಡರ್ ಡಿಲೆವರಿ ಮಾಡುತ್ತಿದ್ದರು.
ರಿಂಕು ಸಿಂಗ್ ಅವರ ಪರಿಶ್ರಮಕ್ಕೆ ಆರಂಭದಲ್ಲೇ ಯಶಸ್ಸಿನ ಸಿಹಿ ರುಚಿ ನೋಡಲು ಸಿಕ್ಕಿತು. ಕಳೆದ ವರ್ಷ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಿಂಕು ಸಿಂಗ್, ತಮ್ಮ ತಂದೆ ಈ ಮೊದಲು ಕುಟುಂಬಕ್ಕೆ ಆಸರೆಯಾಗಿದ್ದ ಸಿಲಿಂಡರ್ ಡೆಲಿವರಿ ಕೆಲಸವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದರು.
"ನಾನು ನನ್ನ ತಂದೆಗೆ ಇನ್ನಾದರೂ ನೀವು ರಿಲ್ಯಾಕ್ಸ್ ಮಾಡಿ. ನೀವು ಇಷ್ಟು ವರ್ಷ ಸಿಲಿಂಡರ್ ಡೆಲಿವರಿ ಮಾಡಿದ್ದು ಸಾಕು ಎಂದು ಹೇಳಿದ್ದೆ. ಆದರೆ ನನ್ನ ಅಪ್ಪ ಈಗಲೂ ತಾವು ಮಾಡುತ್ತಿರುವ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದಾರೆ. ನಾನು ಅವರ ಅಭಿಪ್ರಾಯವನ್ನು ಗೌರವಿಸುತ್ತೇನೆ. ಯಾಕೆಂದರೆ ಸುಮ್ಮನೇ ಮನೆಯಲ್ಲಿ ಕೂತು ಅವರಿಗೂ ಬೋರ್ ಆಗಬಹುದು. ಜೀವನಪೂರ್ತಿ ದುಡಿಮೆಯಲ್ಲೇ ಕಾಲ ಕಳೆಯುವವರು ದಿಢೀರ್ ಎನ್ನುವಂತೆ ಸುಮ್ಮನೆ ಮನೆಯಲ್ಲಿ ಕೂರುವುದು ಕಷ್ಟವಾಗಬಹುದು" ಎಂದು ರಿಂಕು ಹೇಳಿದ್ದರು.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆ ವಿಡಿಯೋದಲ್ಲಿ ರಿಂಕು ಸಿಂಗ್ ತಂದೆ LPL ಸಿಲಿಂಡರ್ ಡೆಲಿವರಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ತವರಿನಲ್ಲಿ ರಿಂಕು ಸಿಂಗ್ ತಂದೆ ಸಿಲಿಂಡರ್ ಡೆಲಿವರಿ ಮಾಡುತ್ತಿದ್ದಾರೆ ಎನ್ನುವ ವಿಡಿಯೋವೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ರಿಂಕು ಸಿಂಗ್ ಆರ್ಭಟದ ಹಿಂದೆ ಧೋನಿ ಮಾಸ್ಟರ್ ಮೈಂಡ್..!
ಹೀಗಿದೆ ನೋಡಿ ಆ ವಿಡಿಯೋ:
ರಿಂಕು ಸಿಂಗ್ ಅವರ ತಂದೆಯ ಸರಳ ಹಾಗೂ ತಾವು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಉದ್ಯೋಗದ ಮೇಲಿನ ಪ್ರೀತಿಯ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಸ್ಥಾನ ಪಡೆಯುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಿಂಕು ಸಿಂಗ್ ತಮ್ಮ ಅದ್ಭುತ ಮ್ಯಾಚ್ ಫಿನಿಶಿಂಗ್ ಮಾಡುತ್ತಾ ಗಮನ ಸೆಳೆದರು.
