ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಜು.12ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆಯಲಿದೆ. ಅಂದಹಾಗೇ ಅದ್ದೂರಿ ಮದುವೆ ನಡೆಯೋ ಈ ಐಷಾರಾಮಿ ಹಾಲ್ ದಿನದ ಬಾಡಿಗೆ ಎಷ್ಟು ಗೊತ್ತಾ?
ಮುಂಬೈ (ಜೂ.1): ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಎರಡನೇ ವಿವಾಹಪೂರ್ವ ಕಾರ್ಯಕ್ರಮ ಇಟಲಿಯ ಐಷಾರಾಮಿ ಕ್ರೂಸ್ ನಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಈ ಸಂಭ್ರಮದಲ್ಲಿ ಬಾಲಿವುಡ್ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದಾರೆ. ಮೇ 29ರಿಂದ ಜೂನ್ 1ರ ತನಕ ಒಟ್ಟು ನಾಲ್ಕು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಅಂದ್ರೆ ಮಾರ್ಚ್ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್-ರಾಧಿಕಾ ಅವರ ಮೊದಲನೇ ವಿವಾಹಪೂರ್ವ ಕಾರ್ಯಕ್ರಮ ನಡೆದಿತ್ತು. ವಿವಾಹಕ್ಕೂ ಮುನ್ನವೇ ಇಷ್ಟೊಂದು ಅದ್ದೂರಿ ಪಾರ್ಟಿಗಳು, ಸಂಭ್ರಮಾಚರಣೆಗಳು ನಡೆಯುತ್ತಿವೆ. ಹೀಗಿರುವಾಗ ವಿವಾಹ ಕಾರ್ಯಕ್ರಮ ಇನ್ನೆಷ್ಟು ಅದ್ದೂರಿಯಾಗಿ ನಡೆಯಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅಂದಹಾಗೇ ಈಗಾಗಲೇ ಅನಂತ್-ರಾಧಿಕಾ ಮದುವೆಯ ಆಮಂತ್ರಣ ಪತ್ರಿಕೆ ಹೊರಬಿದ್ದಿದೆ. ಅದರಂತೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇವರಿಬ್ಬರ ಮದುವೆ ಜುಲೈ 12ರಂದು ನಡೆಯಲಿದೆ. ಅಂಬಾನಿ ಮಗನ ಮದುವೆ ಅಂದ್ರೆ ಅಲ್ಲಿ ಅದ್ದೂರಿತನಕ್ಕೆ ಯಾವುದೇ ಕೊರತೆ ಇರೋದಿಲ್ಲ. ಹೀಗಿರುವಾಗ ಅಂಬಾನಿ ಮಗನ ಮದುವೆ ನಡೆಯೋ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ದಿನದ ಬಾಡಿಗೆ ಎಷ್ಟಿದೆ? ಇಲ್ಲಿ ಇತರರು ಮದುವೆ ಕಾರ್ಯಕ್ರಮ ಆಯೋಜಿಸಲು ದಿನಕ್ಕೆ ಎಷ್ಟು ಬಾಡಿಗೆ ನೀಡಬೇಕು? ಇಲ್ಲಿದೆ ಮಾಹಿತಿ.
ಜಿಯೋ ವರ್ಲ್ಡ್ ಸೆಂಟರ್ ಹೇಗಿದೆ?
ಜಿಯೋ ವರ್ಲ್ಡ್ ಸೆಂಟರ್ ಮಾಲೀಕ ಮತ್ತ್ಯಾರೂ ಅಲ್ಲ. ಮುಖೇಶ್ ಅಂಬಾನಿ ಅವರೇ. ಈ ಹಿಂದೆ ಅನಂತ್ -ರಾಧಿಕಾ ಮದುವೆ ನಡೆಯೋ ಸ್ಥಳದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇವರ ವಿವಾಹ ವಿದೇಶದಲ್ಲಿ ನಡೆಯಲಿದೆ ಎಂದು ಕೂಡ ಸುದ್ದಿಯಾಗಿತ್ತು. ಆದರೆ, ಮುಖೇಶ್ ಅಂಬಾನಿ ಮಾತ್ರ ತಮ್ಮ ಒಡೆತನದ ಐಷಾರಾಮಿ ಹಾಲ್ ನಲ್ಲಿ ಮಗನ ಮದುವೆ ಮಾಡೋ ನಿರ್ಧಾರ ಕೈಗೊಳ್ಳುವ ಮೂಲಕ ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು. ಅಂದ ಹಾಗೇ ಜಿಯೋ ವಲ್ಡ್ ಸೆಂಟರ್ ಬರೋಬ್ಬರಿ 18.5 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇದರಲ್ಲಿ ಪರ್ಫಾಮಿಗ್ ಆರ್ಟ್ಸ್ ಥಿಯೇಟರ್, ರೂಪ್ ಟಾಪ್ ಡ್ರೈವ್ ಇನ್ ಥಿಯೇಟರ್, ಹೋಟೆಲ್ ಗಳು, ಎರಡು ಮಾಲ್ ಗಳು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಅನೇಕ ಕಟ್ಟಡಗಳಿವೆ. ಇನ್ನು ಅನಂತ್ -ರಾಧಿಕಾ ವಿವಾಹ ಕಾರ್ಯಕ್ರಮಗಳು ಇಲ್ಲಿನ ಜಿಯೋ ವರ್ಲ್ಡ್ ಗಾರ್ಡನ್ ನಲ್ಲಿ ನಡೆಯಲಿದೆ. ಇದು 5 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಪಶ್ಚಿಮ ಮುಂಬೈನ ಅತ್ಯಂತ ದೊಡ್ಡ ತೆರೆದ ಸ್ಥಳವಾಗಿದೆ.
undefined
ಅನಂತ್ ರಾಧಿಕಾ ವಿವಾಹ ಆಮಂತ್ರಣ ಪತ್ರಿಕೆ ಔಟ್; ಮದುವೆ ಯಾವಾಗ, ಎಲ್ಲಿ ನಡೆಯುತ್ತೆ ವಿವರ ಇಲ್ಲಿದೆ..
ಈ ಹಾಲ್ ಬಾಡಿಗೆ ಎಷ್ಟು?
ಜಿಯೋ ವರ್ಲ್ಡ್ ಸೆಂಟರ್ ಅಂದ್ರೇನೆ ಅದ್ದೂರಿತನ ಎದ್ದು ಕಾಣುತ್ತದೆ. ಇಲ್ಲಿ ಬರೋಬ್ಬರಿ 5,000 ಕಾರುಗಳು ಹಾಗೂ ಎಸ್ ಯುವಿಗಳನ್ನು ಪಾರ್ಕ್ ಮಾಡಲು ಅವಕಾಶವಿದೆ. ಈ ಮೂಲಕ ಅಂಬಾನಿ ಅವರಂತಹ ಶ್ರೀಮಂತರ ಕಾರ್ಯಕ್ರಮಗಳಿಗೆ ಅಗತ್ಯವಾದಷ್ಟು ಸ್ಥಳವಕಾಶ ಇಲ್ಲಿದೆ. ಈಗಾಗಲೇ ಈ ಸ್ಥಳದಲ್ಲಿ ಜಿಯೋವಂಡರ್ ಲ್ಯಾಂಡ್, ಅರಿಜಿತ್ ಸಿಂಗ್ ಸಂಗೀತ ಕಾರ್ಯಕ್ರಮ, ಲ್ಯಾಕ್ಮಿ ಫ್ಯಾಷನ್ ವೀಕ್ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದಿವೆ. ಯಾವುದೇ ತೆರಿಗೆಯಿಲ್ಲದೆ ಜಿಯೋ ಜಿಯೋ ವರ್ಲ್ಡ್ ಸೆಂಟರ್ ದಿನದ ಬಾಡಿಗೆ 15 ಲಕ್ಷ ರೂ.
ಅಬ್ಬಬ್ಬಾ..ಅನಂತ್-ರಾಧಿಕಾ ಮದ್ವೆಗೆ ಅನಿಲ್ ಅಂಬಾನಿ ಬಂದಿಳಿದ ಕಾರಿನ ಬೆಲೆ ಇಷ್ಟೊಂದಾ?
ಆಮಂತ್ರಣ ಪತ್ರಿಕೆಯಲ್ಲಿ ಏನಿದೆ?
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಆಮಂತ್ರಣ ಪತ್ರಿಕೆಗಳನ್ನು ಈಗಾಗಲೇ ಅತಿಥಿಗಳಿಗೆ ನೀಡಲು ಪ್ರಾರಂಭಿಸಲಾಗಿದೆ. ಮದುವೆ ಕಾರ್ಡ್ ಸಾಂಪ್ರದಾಯಿಕ ಕೆಂಪು ಮತ್ತು ಬಂಗಾರದ ವರ್ಣದಲ್ಲಿದೆ. ಈ ಕಾರ್ಡ್ ನಲ್ಲಿ ವಿವಾಹ ಕಾರ್ಯಕ್ರಮದ ಸಂಪೂರ್ಣ ಮಾಹಿತಿಯಿದೆ. ಜುಲೈ 12ರಂದು ವಿವಾಹ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಎಲ್ಲರೂ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು, 13ರಂದು ಆಶೀರ್ವಾದ ಕಾರ್ಯಕ್ರಮವಿದ್ದು, ಇದಕ್ಕೆ ಭಾರತೀಯ ಫಾರ್ಮಲ್ ಹಾಗೂ 14ರಂದು ಆರತಕ್ಷತೆ ಸಮಾರಂಭವಿದ್ದು, ಇದಕ್ಕೆ ಇಂಡಿಯನ್ ಚಿಕ್ ಥೀಮ್ ಬಟ್ಟೆಗಳನ್ನು ಧರಿಸಿ ಬರಲು ಕೋರಲಾಗಿದೆ.