Cumin Coriander Price High: ಕಡಿಮೆ ಉತ್ಪಾದನೆ, ಅಧಿಕ ಬೇಡಿಕೆ; ಕೊತ್ತಂಬರಿ, ಜೀರಿಗೆ ಬೆಲೆ ಇನ್ನಷ್ಟು ಏರಿಕೆಯಾಗೋ ಸಾಧ್ಯತೆ

By Suvarna News  |  First Published Dec 24, 2021, 6:42 PM IST

*ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಜೀರಿಗೆ ಬಿತ್ತನೆ ಕಡಿಮೆ
*ವಿದೇಶಿ ಮಾರುಕಟ್ಟೆಯಲ್ಲಿ ಜೀರಿಗೆಗೆ ಹೆಚ್ಚಿದ ಬೇಡಿಕೆ
*ಕೊತ್ತಂಬರಿ ಉತ್ಪಾದನೆಯಲ್ಲೂ ಇಳಿಕೆ
*ದೇಶೀಯ ಮಾರುಕಟ್ಟೆಯಲ್ಲಿ ಕೊತ್ತಂಬರಿಗೆ ಅಧಿಕ ಬೇಡಿಕೆ
*ಸಾಸಿವೆ ಬೆಲೆಯೇರಿಕೆಯಿಂದ ಜೀರಿಗೆ ಬೆಳೆಯಲು ರೈತರ ಹಿಂದೇಟು


Business Desk: ಕಡಿಮೆ ಉತ್ಪಾದನೆ ಹಾಗೂ ಅಧಿಕ ಬೇಡಿಕೆ ಕಾರಣಕ್ಕೆ ಜೀರಿಗೆ(Cumin) ಹಾಗೂ ಕೊತ್ತಂಬರಿ (Corriander) ಬೆಲೆಗಳು ಅಲ್ಪಾವಧಿ ಹಾಗೂ ಮಧ್ಯಮ ಅವಧಿಯಲ್ಲಿ ಏರಿಕೆ ಮಟ್ಟದಲ್ಲೇ ಇರಲಿವೆ. ಜೀರಿಗೆ(Cumin) ಭಾರತದಿಂದ ವಿದೇಶಗಳಿಗೆ ರಫ್ತಾಗೋ(EXport) ಎರಡನೇ ಅತೀ ದೊಡ್ಡ ಪ್ರಮಾಣದ ಮಸಾಲ ಪದಾರ್ಥವಾಗಿದೆ(Spices).ಇದು ಮಸಾಲ ಪದಾರ್ಥಗಳ ಒಟ್ಟು ರಫ್ತಿನಲ್ಲಿ ಶೇ.15ರಷ್ಟು ಪಾಲು ಹೊಂದಿದೆ. ಇನ್ನು ಕೊತ್ತಂಬರಿಗೆ ದೇಶೀಯ ಮಾರುಕಟ್ಟೆಯಲ್ಲೇ ಹೆಚ್ಚಿನ ಬೇಡಿಕೆಯಿದ್ದು, ಸಂಬಾರು ಮಸಾಲಾ ತಯಾರಿಕಾ ಸಂಸ್ಥೆಗಳು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತವೆ.  

ಬೆಲೆಯೇರಿಕೆಗೆ ಕಾರಣವೇನು?
ಎರಡು ಪ್ರಮುಖ ಮಸಾಲ ಪದಾರ್ಥಗಳಾದ ಜೀರಿಗೆ ಹಾಗೂ ಕೊತ್ತಂಬರಿ ಬೆಲೆಯೇರಿಕೆಗೆ ಅನೇಕ ಅಂಶಗಳು ಕಾರಣವಾಗಿವೆ.

Latest Videos

undefined

ಕಡಿಮೆ ಬಿತ್ತನೆ
ಮುಂದಿನ ತಿಂಗಳಿಂದ ಪ್ರಾರಂಭವಾಗೋ ಈ ಎರಡೂ ಬೆಳೆಗಳ ಬಿತ್ತನೆ ಪ್ರಮಾಣ ಕಳೆದ ಸೀಸನ್ ಗೆ ಹೋಲಿಸಿದ್ರೆ ಕಡಿಮೆ ಇರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಸಹಜವಾಗಿ ಮಾರುಕಟ್ಟೆಯಲ್ಲಿ ಕೊತ್ತಂಬರಿ ಹಾಗೂ ಜೀರಿಗೆ ಪೂರೈಕೆ ಕಡಿಮೆ ಇರುತ್ತದೆ. ವರದಿಗಳ ಪ್ರಕಾರ ಈ ಬಾರಿ ಗುಜರಾತ್ ನಲ್ಲಿ(Gujarat) ಜೀರಿಗೆ ಬಿತ್ತನೆ ಶೇ.30ರಷ್ಟು ತಗ್ಗಿದೆ. ಇನ್ನು ರಾಜಸ್ಥಾನದಲ್ಲಿ(Rajasthan) ಶೇ.25ರಷ್ಟು ಕುಸಿದಿದೆ. ಈ ಎರಡೂ ರಾಜ್ಯಗಳಲ್ಲಿ ಮಸಾಲ ಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಜೀರಿಗೆ (Cumin) ಬಿತ್ತನೆ ಪ್ರಮಾಣದಲ್ಲಿ ಕಡಿಮೆಯಾಗಲು ಸಾಸಿವೆ ಬೆಲೆಯಲ್ಲಿ ಏರಿಕೆಯಾಗಿರೋದೆ ಕಾರಣ ಎಂದು ಹೇಳಲಾಗುತ್ತಿದೆ. ಈ ವರ್ಷ ಸಾಸಿವೆ ಬೆಲೆಯಲ್ಲಿ ಅತ್ಯಧಿಕ ಹೆಚ್ಚಳವಾಗಿದೆ. ಹೀಗಾಗಿ ಬಹುತೇಕ ರೈತರು ಈ ಬಾರಿ ಜೀರಿಗೆ ಬದಲು ಸಾಸಿವೆ ಬಿತ್ತನೆ ಮಾಡಲು ಮುಂದಾಗಿದ್ದಾರೆ. 

Complaints Against Ad:ದಾರಿ ತಪ್ಪಿಸೋ ಜಾಹೀರಾತುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ವಾಟ್ಸಪ್ ಮೂಲಕ ASCIಗೆ ದೂರು ನೀಡಿ

ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ
ಜೀರಿಗೆಗೆ ವಿದೇಶಿ(Foreign) ಮಾರುಕಟ್ಟೆಯಲ್ಲಿ ಮತ್ತೆ ಬೇಡಿಕೆ ಹೆಚ್ಚಿದೆ. ಭಾರತದಿಂದ ಅತೀಹೆಚ್ಚು ಪ್ರಮಾಣದಲ್ಲಿ ಜೀರಿಗೆ ಆಮದು ಮಾಡಿಕೊಳ್ಳುವ ರಾಷ್ಟ್ರ ಚೀನಾ(China).ಆದ್ರೆ  ಜೀರಿಗೆ ಬೆಳೆಗೆ ಹೆಚ್ಚಿನ ಕೀಟನಾಶಕಗಳನ್ನು(Pesticide) ಬಳಸಲಾಗುತ್ತಿದೆ ಎಂದು ಆರೋಪಿಸಿದ ಚೀನಾ ಕೆಲವು ತಿಂಗಳ ಹಿಂದೆ ಆಮದು ಮಾಡಿಕೊಳ್ಳೋದನ್ನು ನಿಲ್ಲಿಸಿತ್ತು. ಎರಡು ತಿಂಗಳ ಹಿಂದೆ ಕೀಟನಾಶಕಮುಕ್ತ  ಜೀರಿಗೆಯನ್ನು ಮಾತ್ರ ಆಮದು ಮಾಡಿಕೊಳ್ಳಲು ನಿರ್ಧರಿಸಿತ್ತು. ಚೀನಾ ವರ್ಷಕ್ಕೆ ಭಾರತದಿಂದ ಸುಮಾರು 70,000 ಟನ್ ಜೀರಿಗೆ ಆಮದು ಮಾಡಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ರಫ್ತುದಾರರು ಮಸಾಲ ಪದಾರ್ಥಗಳ ಮಂಡಳಿಗೆ (Spices Board)ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದಾರೆ. 'ಚೀನಾ ಭಾರತದಿಂದ ಜೀರಿಗೆ ಆಮದು ಮಾಡಿಕೊಳ್ಳಲು ಈಗ ಒಪ್ಪಿಕೊಂಡಿದೆ. ಆದ್ರೆ ಕೀಟನಾಶಕ ಮುಕ್ತ ಎಂಬ ಬಗ್ಗೆ ಮಸಾಲ ಪದಾರ್ಥಗಳ ಮಂಡಳಿಯಿಂದ ಪ್ರಮಾಣಪತ್ರ ಪಡೆದಿರಬೇಕೆಂದು ತಿಳಿಸಿದೆ' ಎಂದು ಏಷಿಯನ್ ಸ್ಪೆಸ್ಸ್ (Asian Spices) ಪಾಲುದಾರ ಯು. ಕಾರ್ತಿಕ್ ತಿಳಿಸಿದ್ದಾರೆ. ಹೀಗಾಗಿ ಜನವರಿಯಿಂದ ಚೀನಾಕ್ಕೆ ಮತ್ತೆ ಜೀರಿಗೆ ರಫ್ತಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಜೀರಿಗೆ ಕೆ.ಜಿ.ಗೆ 160ರೂ. ಇದೆ. ಚೀನಾಕ್ಕೆ ಮತ್ತೆ ರಫ್ತು ಆರಂಭಗೊಂಡ್ರೆ ಈ ಬೆಲೆ 175ರೂ. ತಲುಪೋ ಸಾಧ್ಯತೆಯಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.

Tokenization Deadline: ಆನ್ಲೈನ್ ವರ್ತಕರಿಗೆ ಕೊಂಚ ನೆಮ್ಮದಿ, ಟೋಕನೈಸೇಷನ್ ಗಡುವು ಜೂನ್ 30ಕ್ಕೆ ವಿಸ್ತರಣೆ

ಮಧ್ಯಪ್ರದೇಶದ ಬೆಳೆ ಆಧರಿಸಿರೋ ಕೊತ್ತಂಬರಿ ಬೆಲೆ
ಮುಂದಿನ ಕೆಲವು ತಿಂಗಳು ದೇಶದಲ್ಲಿನ ಕೊತ್ತಂಬರಿ ಉತ್ಪಾದನೆ ಹಾಗೂ ಬೆಲೆ ಮಧ್ಯಪ್ರದೇಶದಲ್ಲಿನ ಬೆಳೆಯನ್ನು ಅವಲಂಬಿಸಿದೆ. ಕೊತ್ತಂಬರಿ ಬೆಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಈಗಾಗಲೇ 20ರೂ. ಏರಿಕೆಯಾಗಿದೆ. ಕೊತ್ತಂಬರಿ ಕೆ.ಜಿ.ಗೆ 80ರೂ. ಬೆಲೆಯಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಿರೋ ಕಾರಣ ಕೊತ್ತಂಬರಿ ಬೆಲೆಯಲ್ಲಿ ಈಗಾಗಲೇ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಕೊತ್ತಂಬರಿ ಬಿತ್ತನೆಯಲ್ಲಿ ಶೇ.20 ಅಥವಾ ಅದಕ್ಕಿಂತ ಹೆಚ್ಚಿನ ಇಳಿಕೆ ಕಂಡುಬಂದ್ರೆ ಬೆಲೆಯಲ್ಲಿ ಅತ್ಯಧಿಕ ಏರಿಕೆ ಕಂಡುಬರೋ ಸಾಧ್ಯತೆಯಿದೆ. ಇಲ್ಲವಾದ್ರೆ ಇದು ಈಗಿರೋ ಮಟ್ಟದಲ್ಲೇ ಇರಲಿದೆ. ಆದ್ರೆ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಬೆಲೆಯಲ್ಲಿ ಏರಿಕೆಯಾಗಿದೆ ಎನ್ನುತ್ತಾರೆ ವರ್ತಕರು.  

click me!