Complaints Against Ad:ದಾರಿ ತಪ್ಪಿಸೋ ಜಾಹೀರಾತುಗಳಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ವಾಟ್ಸಪ್ ಮೂಲಕ ASCIಗೆ ದೂರು ನೀಡಿ

By Suvarna News  |  First Published Dec 24, 2021, 4:17 PM IST

*ಡಿ.24ರಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನದ ಅಂಗವಾಗಿ ಈ ಘೋಷಣೆ
*ಪ್ರತಿ ವರ್ಷ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ ಆಚರಿಸಲಾಗುತ್ತದೆ
*ASCI ಜಾಹೀರಾತು ನಿಯಂತ್ರಕ ಸಂಸ್ಥೆಯಾಗಿದೆ
* 7710012345 ಸಂಖ್ಯೆಗೆ ವಾಟ್ಸಪ್  ಮೂಲಕ ಜಾಹೀರಾತು ವಿರುದ್ಧ ದೂರು ನೀಡಬಹುದು.


ನವದೆಹಲಿ (ಡಿ.24): ಇನ್ನು ಮುಂದೆ ದಾರಿ ತಪ್ಪಿಸೋ ಅಥವಾ ತಪ್ಪು ಮಾಹಿತಿ ನೀಡೋ ಜಾಹೀರಾತುಗಳ (misleading advertisements) ವಿರುದ್ಧ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಗೆ (ASCI) ವಾಟ್ಸಪ್ (WhatsApp) ಮೂಲಕ ದೂರು (complaint) ನೀಡಬಹುದು. ತಪ್ಪು ಮಾಹಿತಿ ನೀಡೋ ಜಾಹೀರಾತುಗಳ ವಿರುದ್ಧ ದೂರು ನೀಡಲು ಬಯಸೋ ಗ್ರಾಹಕರನ್ನು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ವಾಟ್ಸಪ್ ಮೂಲಕ ಸಂಪರ್ಕಿಸಲಿದೆ.  ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ ( National Consumer Rights Day) ಅಥವಾ ರಾಷ್ಟ್ರೀಯ ಗ್ರಾಹಕರ ದಿನದ(National Consumer Day) ಅಂಗವಾಗಿ ಮಂಡಳಿ ಶುಕ್ರವಾರ (ಡಿ.24) ಈ ಘೋಷಣೆ ಮಾಡಿದೆ. ASCI ಜಾಹೀರಾತು ನಿಯಂತ್ರಕ ಸಂಸ್ಥೆಯಾಗಿದೆ. 

'ನಿಮ್ಮನ್ನು ದಾರಿತಪ್ಪಿಸುತ್ತಿರೋ ಜಾಹೀರಾತುಗಳಿಂದ ಬೇಸತ್ತಿದ್ದೀರಾ? ಡಿಸೆಂಬರ್ 24ರಂದು  ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನ ಅಥವಾ ರಾಷ್ಟ್ರೀಯ ಗ್ರಾಹಕರ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ ನಿಮಗೆ ಯಾವುದಾದ್ರೂ ಜಾಹೀರಾತಿನ ಮೇಲೆ ಅಸಮಾಧಾನವಿದ್ರೆ +91 77100 12345 ಸಂಖ್ಯೆಗೆ ವಾಟ್ಸಪ್(WhatsApp) ಮಾಡಿ. ನಿಮ್ಮ ದೂರನ್ನು ಆಲಿಸಲಾಗೋದು ಹಾಗೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಾಗೋದು' ಎಂದು ASCI ಟ್ವೀಟ್(Tweet) ಮೂಲಕ ತಿಳಿಸಿದೆ.

Latest Videos

undefined

Tokenization Deadline: ಆನ್ಲೈನ್ ವರ್ತಕರಿಗೆ ಕೊಂಚ ನೆಮ್ಮದಿ, ಟೋಕನೈಸೇಷನ್ ಗಡುವು ಜೂನ್ 30ಕ್ಕೆ ವಿಸ್ತರಣೆ

ಕೋವಿಡ್ -19(COVID-19) ಪೆಂಡಾಮಿಕ್ ಸಂದರ್ಭದಲ್ಲಿ ಗ್ರಾಹಕರನ್ನು(Consumer) ದಾರಿ ತಪ್ಪಿಸೋ ಜಾಹೀರಾತುಗಳಿಗೆ (advertisements) ಕಡಿವಾಣ ಹಾಕಲು ವಾಟ್ಸಪ್ ಸಾಧನ ಬಳಕೆಗೆ ASCI ಒತ್ತು ನೀಡಿದೆ. 2020 ಅಕ್ಟೋಬರ್ ನಲ್ಲಿ ASCI ಹೊರಡಿಸಿರೋ ಕೋವಿಡ್ ಸಲಹೆಯಲ್ಲಿ ಜಾಹೀರಾತುದಾರರು ಕೋವಿಡ್  ಹಾಗೂ ತಮ್ಮ ಉತ್ಪನ್ನಗಳಿಗೆ ಸಂಬಂಧ ಕಲ್ಪಿಸಿ ಜಾಹೀರಾತುಗಳ ಮೂಲಕ ನೀಡುತ್ತಿರೋ ಮಾಹಿತಿಗಳನ್ನು ರುಜುವಾತುಪಡಿಸುವಂತೆ ತಿಳಿಸಿತ್ತು.

 2021 ಜುಲೈನಲ್ಲಿ ASCI ನೀಡಿದ ಮಾಹಿತಿ ಪ್ರಕಾರ ಪೆಂಡಾಮಿಕ್ ಸಮಯದಲ್ಲಿ ಪ್ರಸಾರವಾದ ಕೋವಿಡ್ ಗೆ(COVID) ಸಂಬಂಧಿಸಿದ 332  ಜಾಹೀರಾತುಗಳಲ್ಲಿ(advertisements) ಬರೀ 12 ಮಾತ್ರ ವೈಜ್ಞಾನಿಕವಾಗಿ ಸಮರ್ಪಕವಾಗಿತ್ತು. ಜಾಹೀರಾತು ನಿಯಂತ್ರಕರು 237  ಆಕ್ಷೇಪಾರ್ಹ ಜಾಹೀರಾತುಗಳನ್ನು ಗುರುತಿಸಿದ್ದರು. ಅದ್ರಲ್ಲಿ  164 ಜಾಹೀರಾತುಗಳು ಬೇರೆ ಕಡೆಯಿಂದ ಸಂಗ್ರಹಿಸಿ  ಮಾರ್ಪಡು ಮಾಡಿದ ಅಂಶಗಳನ್ನು ಒಳಗೊಂಡಿವೆ. ಇನ್ನು 73 ಕೋವಿಡ್ ಸಂಬಂಧಿ ಜಾಹೀರಾತುಗಳ ಬಗ್ಗೆ ಇನ್ನಷ್ಟು ತನಿಖೆ ಹಾಗೂ ಕ್ರಮದ ಅಗತ್ಯವಿದೆ ಎಂದು  ASCI ತಿಳಿಸಿತ್ತು. 

ಕೋವಿಡ್ ಗೆ ಸಂಬಂಧಿಸಿದ ದೂರುಗಳನ್ನು(Complaints) ಹೊರತುಪಡಿಸಿ  ASCI ಗ್ರಾಹಕರ ದೂರು ಮಂಡಳಿ (CCC) ಶಿಕ್ಷಣ ವಲಯಕ್ಕೆ ಸಂಬಂಧಿಸಿ 1,406 ದೂರುಗಳು, ಆಹಾರ (Food)ಮತ್ತು ತಂಪು ಪಾನೀಯಗಳ (Beverages) ಜಾಹೀರಾತುಗಳಿಗೆ ಸಂಬಂಧಿಸಿ 285 ದೂರುಗಳು ಹಾಗೂ ವೈಯಕ್ತಿಕ ಕಾಳಜಿಗೆ ಸಂಬಂಧಿಸಿ  147 ದೂರುಗಳನ್ನು ಬಗೆಹರಿಸಿದೆ. 2021ನೇ ಆರ್ಥಿಕ ಸಾಲಿನಲ್ಲಿ ಜಾಹೀರಾತು ನಿಯಂತ್ರಕರು(Advertisement Regulator) ಒಟ್ಟು 6, 149 ದೂರುಗಳನ್ನು (Complaints) ಇತ್ಯರ್ಥಗೊಳಿಸಿದ್ದಾರೆ. ASCI ಸ್ವತಂತ್ರ ಗ್ರಾಹಕರ ದೂರುಗಳ ಮಂಡಳಿ (CCC) ಆಗಿದ್ದು, ವರ್ಷದಲ್ಲಿ 37 ಬಾರಿ ಸಭೆ ಸೇರಿದ್ದು, ಇದರ ಶಿಫಾರಸ್ಸುಗಳನ್ನು ಜಾಹೀರಾತುದಾರರು(Advertiser) ಶೇ.97ರಷ್ಟು ಅನುಸರಣೆ ಮಾಡಿದ್ದಾರೆ ಎಂದು ತಿಳಿಸಿದೆ. 

EPFO Rules: ಎಚ್ಚರ! ಈ ತಪ್ಪಿನಿಂದಾಗಿ ಕಷ್ಟಪಟ್ಟು ಕೂಡಿಟ್ಟ ಹಣ ಕೈತಪ್ಪಿ ಹೋಗ್ಬಹುದು!

ಗ್ರಾಹಕರ ದಿನದ ಹಿನ್ನೆಲೆ
ಭಾರತದಲ್ಲಿ(India)  ಪ್ರತಿ ವರ್ಷ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನು( National Consumer Rights Day)  ಆಚರಿಸಲಾಗುತ್ತದೆ.  1986ರ ಡಿಸೆಂಬರ್ 24ರಂದು ಗ್ರಾಹಕರ ಸಂರಕ್ಷಣಾ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಬಿದ್ದ ಹಿನ್ನೆಲೆಯಲ್ಲಿ ಈ ದಿನವನ್ನು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವೆಂದು ಘೋಷಿಸಲಾಗಿದೆ. ಗ್ರಾಹಕರಿಗೆ ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸೋದು ಈ ದಿನದ ಮುಖ್ಯ ಉದ್ದೇಶ. 

click me!