
ಪ್ರತಿಯೊಬ್ಬರಿಗೂ ಜೀವನದಲ್ಲಿ ಯಾವಾಗಲೋ ಒಮ್ಮೆ ಹಣದ ಅವಶ್ಯಕತೆ ಬರುತ್ತೆ. ಅದಕ್ಕಾಗಿ ಕೆಲವರು ವ್ಯಕ್ತಿಗಳ ಹತ್ತಿರ, ಇನ್ನು ಕೆಲವರು ಬ್ಯಾಂಕುಗಳಲ್ಲಿ ಸಾಲ ತಗೊಳ್ತಾರೆ. ಬ್ಯಾಂಕ್ ಲೋನ್‌ಗಳು ಹಲವು ವಿಧಗಳಲ್ಲಿ ಇರುತ್ತವೆ. ಅವು ಪರ್ಸನಲ್ ಲೋನ್, ಹೌಸಿಂಗ್ ಲೋನ್, ಕಾರ್ ಲೋನ್, ಎಜುಕೇಶನಲ್ ಲೋನ್ ಇತ್ಯಾದಿ.
ಬ್ಯಾಂಕ್ ಯಾರಿಗಾದರೂ ಲೋನ್ ಕೊಡುವ ಮುನ್ನ ಅವರ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸುತ್ತೆ. ಆ ವ್ಯಕ್ತಿ ಸಾಲ ತೀರಿಸುವ ಸ್ಥಿತಿಯಲ್ಲಿ ಇದ್ದಾರೋ ಇಲ್ವೋ ಅಂತ ಚೆಕ್ ಮಾಡುತ್ತೆ. ಎಲ್ಲವನ್ನೂ ದೃಢಪಡಿಸಿದ ನಂತರವೇ ಆ ವ್ಯಕ್ತಿಯ ಖಾತೆಗೆ ಲೋನ್ ಮೊತ್ತ ವರ್ಗಾಯಿಸುತ್ತೆ. ಆದರೆ, ಲೋನ್ ತಗೊಂಡ ವ್ಯಕ್ತಿ ಸಾಲ ಮರುಪಾವತಿ ಮಾಡಲು ಮರೆತರೆ ಬ್ಯಾಂಕ್ ಏನು ಮಾಡುತ್ತೆ? ಹಣ ಹೇಗೆ ವಸೂಲಿ ಮಾಡುತ್ತೆ?
ಬ್ಯಾಂಕಿನಿಂದ ಲೋನ್ ತಗೊಂಡ ವ್ಯಕ್ತಿ ಅಕಸ್ಮಾತ್ ಮರಣ ಹೊಂದಿದರೆ, ಬ್ಯಾಂಕ್ ನಾಲ್ಕು ಜನರಿಂದ ಹಣ ವಸೂಲಿ ಮಾಡಬಹುದು.
ಸಾಲಗಾರರಿಗೆ ಕಿರುಕುಳ ಕೊಟ್ಟರೆ ಕ್ರಿಮಿನಲ್ ಕೇಸ್: ಮೈಕ್ರೋಫೈನಾನ್ಸ್‌ಗಳ ವಿರುದ್ಧ ಸುಗ್ರೀವಾಜ್ಞೆ ಅಸ್ತ್ರ
ಜೊತೆ ಅರ್ಜಿದಾರರು
ಲೋನ್ ತಗೊಂಡ ವ್ಯಕ್ತಿ ಮರಣ ಹೊಂದಿದ ನಂತರ ಬ್ಯಾಂಕ್ ಮೊದಲು ಜೊತೆ ಅರ್ಜಿದಾರರನ್ನು ನಾಮಿನಿ ಆದವರನ್ನ ಸಂಪರ್ಕಿಸುತ್ತೆ.
ಗ್ಯಾರಂಟರ್: ಸಾಲ ಪಡೆದವರು ಲೋನ್ ಕಟ್ಟದಿದ್ದರೆ, ಬ್ಯಾಂಕ್ ಗ್ಯಾರಂಟರ್‌ನನ್ನು ಹಿಡಿಯುತ್ತೆ. ಅವರಿಂದ ಬಾಕಿ ವಸೂಲಿ ಮಾಡಲು ಪ್ರಯತ್ನಿಸುತ್ತೆ.
ಕಾನೂನುಬದ್ಧ ಉತ್ತರಾಧಿಕಾರಿ: ಹಲವು ಸಂದರ್ಭಗಳಲ್ಲಿ ಗ್ಯಾರಂಟರ್ ಕೂಡ ಲೋನ್ ಕಟ್ಟೋಕೆ ಆಗಲ್ಲ. ಆಗ ಬ್ಯಾಂಕ್ ಮೃತರ ಕುಟುಂಬದ ಸದಸ್ಯ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಯನ್ನು ಸಂಪರ್ಕಿಸುತ್ತೆ.
ಮೃತರ ಆಸ್ತಿ: ಯಾರೂ ಸಾಲ ತೀರಿಸದಿದ್ದರೆ, ಕೊನೆಯದಾಗಿ ಬ್ಯಾಂಕ್ ಮೃತರ ಆಸ್ತಿಯನ್ನು ವಶಪಡಿಸಿಕೊಂಡು, ಅದನ್ನು ಹರಾಜು ಮೂಲಕ ಮಾರಾಟ ಮಾಡಿ ಲೋನ್ ಮೊತ್ತ ವಸೂಲಿ ಮಾಡುತ್ತೆ.
ಹೋಂ ಲೋನ್ - ಕಾರ್ ಲೋನ್: ಒಬ್ಬ ವ್ಯಕ್ತಿ ಹೋಂ ಲೋನ್ ಅಥವಾ ಕಾರ್ ಲೋನ್ ತಗೊಂಡು ಪಾವತಿಸುವುದು ಮರೆತರೆ, ಬ್ಯಾಂಕ್ ಆ ಮನೆ ಅಥವಾ ಕಾರನ್ನು ವಶಪಡಿಸಿಕೊಳ್ಳುತ್ತೆ. ನಂತರ ಅವುಗಳನ್ನು ಹರಾಜು ಹಾಕಿ ಹಣ ವಸೂಲಿ ಮಾಡುತ್ತೆ.
ಸುರಕ್ಷಿತ, ವಿಮೆ ಮಾಡಿದ ಲೋನ್: ಬ್ಯಾಂಕ್ ಸುರಕ್ಷಿತ ಲೋನ್ ಕೊಟ್ಟಿದ್ರೆ, ಆಸ್ತಿ ಅಥವಾ ಯಾವುದೇ ವಸ್ತುವನ್ನು ವಶಪಡಿಸಿಕೊಳ್ಳುವ ಹಕ್ಕು ಬ್ಯಾಂಕಿಗೆ ಇರುತ್ತೆ. ಲೋನ್‌ಗೆ ವಿಮೆ ಇದ್ದರೆ, ಬ್ಯಾಂಕ್ ನಾಮಿನಿ ಸಹಿ ತಗೊಂಡು ವಿಮಾ ಕಂಪನಿಯಿಂದ ಹಣ ವಸೂಲಿ ಮಾಡುತ್ತೆ.
ಅಸುರಕ್ಷಿತ ಸಾಲ: ಅನ್‌ಸೆಕ್ಯೂರ್ಡ್ ಲೋನ್‌ಗೆ ಯಾರೂ ಹೊಣೆ ಹೊರುವುದಿಲ್ಲ. ಆದರೆ ಬ್ಯಾಂಕುಗಳು ಇನ್ನೂ ಮೃತರ ಸಂಬಂಧಿಕರಿಂದ ಸಾಧ್ಯವಾದಷ್ಟು ಹಣ ವಸೂಲಿ ಮಾಡಲು ಪ್ರಯತ್ನಿಸುತ್ತವೆ. ಪರ್ಸನಲ್ ಲೋನ್ ಕೂಡ ಒಂದು ರೀತಿಯ ಅನ್‌ಸೆಕ್ಯೂರ್ಡ್ ಲೋನ್. ಇದರಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ಹಣ ಕೊಡ್ತಾರೆ. ಸಾಲಗಾರ ಹಣ ಪಾವತಿಸದಿದ್ದರೆ ಬ್ಯಾಂಕುಗಳಿಗೆ ಲೋನ್ ವಸೂಲಿ ಮಾಡಲು ಯಾವುದೇ ಮಾರ್ಗ ಇರಲ್ಲ.
ಸಾಲ ವಸೂಲಿ ಹಾವಳಿ ತಡೆಗೆ ಬಲಿಷ್ಠ ಕಾನೂನಿಗೆ ಸಿಎಂ ಚಿಂತನೆ: ಸಚಿವ ಎಂ.ಬಿ.ಪಾಟೀಲ್
ಒಂದಕ್ಕಿಂತ ಹೆಚ್ಚು ಜನ ಸೇರಿ ಪರ್ಸನಲ್ ಲೋನ್ ತಗೊಂಡ್ರೆ, ಅವರಲ್ಲಿ ಸಾಲ ಮರುಪಾವತಿ ಮಾಡದಿದ್ರೆ, ಜೊತೆ ಅರ್ಜಿದಾರರು ಬಾಕಿ ಮೊತ್ತಕ್ಕೆ ಹೊಣೆ ಹೊರುತ್ತಾರೆ. ಆದರೆ ಇಬ್ಬರು ಅರ್ಜಿದಾರರು ಒಟ್ಟಿಗೆ ಅಪಘಾತದಲ್ಲಿ ಮೃತರಾದರೆ, ಲೋನ್ ವಸೂಲಿ ಮಾಡಲು ಬ್ಯಾಂಕಿಗೆ ಯಾವುದೇ ಮಾರ್ಗ ಇರಲ್ಲ.
ಟರ್ಮ್ ಇನ್ಸೂರೆನ್ಸ್ ಯಾಕೆ ಮುಖ್ಯ? ಸಾಮಾನ್ಯವಾಗಿ ಬ್ಯಾಂಕುಗಳು ಲೋನ್ ತಗೊಂಡ ವ್ಯಕ್ತಿಗೆ ಸಂಬಂಧಿಸಿದ ಆಸ್ತಿಯನ್ನು ವಶಪಡಿಸಿಕೊಂಡು ಮಾರಾಟ ಮಾಡಬಹುದು. ಅಂತಹ ಸ್ಥಿತಿಯಲ್ಲಿ ಅವರ ಕುಟುಂಬ ತುಂಬಾ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತೆ. ಅದನ್ನು ತಪ್ಪಿಸಲು ಟರ್ಮ್ ಇನ್ಸೂರೆನ್ಸ್ ತಗೋಬೇಕು. ಹೀಗೆ ಮಾಡುವುದರಿಂದ ಮರಣ ಸಂಭವಿಸಿದಾಗ ಟರ್ಮ್ ಇನ್ಸೂರೆನ್ಸ್‌ನಿಂದ ಬರುವ ಹಣದಿಂದ ಲೋನ್ ತೀರಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.