ಬಜೆಟ್ ಸಮೀಪಿಸುತ್ತಿದ್ದಂತೆ ಶಾಕ್ ಕೊಟ್ಟ ಷೇರುಮಾರುಕಟ್ಟೆ, 9 ಲಕ್ಷ ಕೋಟಿ ನಷ್ಟ

Published : Jan 27, 2025, 12:39 PM IST
ಬಜೆಟ್ ಸಮೀಪಿಸುತ್ತಿದ್ದಂತೆ ಶಾಕ್ ಕೊಟ್ಟ ಷೇರುಮಾರುಕಟ್ಟೆ, 9 ಲಕ್ಷ ಕೋಟಿ ನಷ್ಟ

ಸಾರಾಂಶ

ಕೇಂದ್ರ ಬಜೆಟ್ ಮಂಡಣನೆಗೆ ಕೆಲ ದಿನ ಮಾತ್ರ ಬಾಕಿ. ಇದರ ಬೆನ್ನಲ್ಲೇ ಸ್ಟಾಕ್ ಮಾರ್ಕೆಟ್ ಭಾರಿ ಕುಸಿತ ಕಂಡಿದೆ. ಸೆನ್‌ಸೆಕ್ಸ್ 800 ಅಂಕ ಕುಸಿತ ಕಂಡಿದೆ. ಇದರ ಪರಿಣಾಮ 9 ಲಕ್ಷ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.

ಮುಂಬೈ(ಜ.27) ಕೇಂದ್ರ ಬಜೆಟ್ ಮಂಡನೆಗೆ ಕೌಂಟ್‌ಡೌನ್ ಶುರುವಾಗಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಾಗಿದ್ದಾರೆ. ತೆರಿಗೆ ವಿನಾಯಿತಿ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಉತ್ತೇಜನ  ನೀಡುವ ಸಾಧ್ಯತೆಗಳ ಕುರಿತು ಚರ್ಚೆಯಾಗುತ್ತಿದೆ. ಇದರ ನಡುವೆ ಷೇರುಮಾರುಕಟ್ಟೆ ಶಾಕ್ ನೀಡಿದೆ. ಸೋಮವಾರ(ಜ.27)  ಸ್ಟಾಕ್ ಮಾರ್ಕೆಟ್ ಆರಂಭಗೊಳ್ಳುತ್ತಿದ್ದಂತೆ  ತೀವ್ರ ಕುಸಿತ ಕಂಡು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.ಸೆನ್‌ಸೆಕ್ಸ್ ಬರೋಬ್ಬರಿ 800 ಅಂಕ ಕುಸಿತ ಕಂಡಿದೆ. ಇತ್ತ ನಿಫ್ಟಿ 50 ಅಂಕ ಕುಸಿತ ಕಂಡಿದೆ.  ಮಿಡ್‌ಕ್ಯಾಪ್ ಹಾಗೂ ಸ್ಮಾಲ್‌ಕ್ಯಾಪ್ ಶೇಕಡಾ 3 ಹಾಗೂ ಶೇಕಡಾ 4ರಷ್ಟು ಕುಸಿತ ಕಂಡಿದೆ.

ಬಜೆಟ್ ಪರಿಣಾಮ
ಷೇರು ಮಾರುಕಟ್ಟೆ ವಹಿವಾಟು ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ 9 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರುವ ತಲ್ಲಣಗಳೇ ಈ ಕುಸಿತಕ್ಕೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಪ್ರಮುಖವಾಗಿ ಬಜೆಟ್‌ನಿಂದ ಸ್ಟಾಕ್ ಮಾರ್ಕೆಟ್‌ನಲ್ಲಿ ತಲ್ಲಣ ಸೃಷ್ಟಿಯಾಗಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ವಿಶೇಷವಾಗಿ ಜನಪ್ರಿಯ ಬಜೆಟ್ ವಿತ್ತೀಯ ಕೊರತೆಯನ್ನು ತಗ್ಗಿಸುವ ಸಾಧ್ಯತೆ ಇದೆ. ಇದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುವ ಸಾಧ್ಯತೆ ಇದೆ.  ಈ ಒಟ್ಟಾರೆ ಬೆಳವಣಿಗೆ ಆರ್ಥಿಕ ಪ್ರಗತಿ ವೇಗಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ. 

70 ಗಂಟೆ ಕೆಲಸ ಚರ್ಚೆ ನಡುವೆ 1800 ಕೋಟಿ ರೂ ಕಳೆದುಕೊಂಡ ನಾರಾಯಣ ಮೂರ್ತಿ

Q3 ಅವಧಿಯಲ್ಲಿ ಆದಾಯ ಕುಂಠಿತ 
ಡಿಸೆಂಬರ 2024ರ ಕ್ವಾರ್ಟರ್ ಆದಾಯ ನಿರೀಕ್ಷಿತ ಮಟ್ಟ ತಲುಪಿಲ್ಲ. ಹಲವು ಕ್ಷೇತ್ರಗಳು ಕುಸಿತ ಕಂಡಿದೆ. ಆಟೋಮೊಬೈಲ್, ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳು ಹಿನ್ನಡೆ ಕಂಡಿದೆ. ನಿರೀಕ್ಷಿತ ಆದಾಯ ಮಟ್ಟ ತಲುಪಿಲ್ಲ. ಇದು ಕೂಡ ಷೇರುಮಾರುಕಟ್ಟೆ ಮೇಲಿನ ಹೊಡೆತಕ್ಕೆ ಕಾರಣವಾಗಿದೆ.

ವಿದೇಶಿ ಬಂಡವಾಳ ಆತಂಕ
ಅಕ್ಟೋಬರ್ 2024ರಿಂದ ಭಾರತದಲ್ಲಿರುವ ವಿದೇಶಿ ಬಂಡವಾಳ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ. ಹಲವು ಹೂಡಿಕೆದಾರರು ಭಾರತೀಯ ಈಕ್ಟಿವಿಟಿಯಲ್ಲಿ ಹೂಡಿಕೆ ಮಾಡಿದ ಬಂಡವಾಳ ಹಿಂತೆಗೆಯುತ್ತಿದ್ದಾರೆ. ಕಚ್ಚಾ ತೈಲ ಬೆಲೆ ಏರಿಕೆ ಸೇರಿದಂತೆ ಇತರ ಕೆಲ ಕಾರಣಗಳು ಭಾರತದ ಷೇರು ಮಾರುಕಟ್ಟೆಯ ತಲ್ಲಣಕ್ಕೆ ಕಾರಣವಾಗಿದೆ.

ಜನವರಿ 28 ಹಾಗೂ 29ಕ್ಕೆ ಅಮೆರಿಕ ಫೆಡರಲ್ ರಿಸರ್ವ್ ಸಭೆ ನಡೆಯಲಿದೆ. 2024ರಲ್ಲಿ ಫೆಡವರ್ ರಿಸರ್ವ್ ಬಡ್ಡಿದರವನ್ನು ಶೇಕಡಾ 1ರಷ್ಟು ಕಡಿತಗೊಳಿಸಿತ್ತು. ಇದರ ಪರಿಣಾಮ ಅಂತಾರಾಷ್ಟ್ರೀಯ ಷೇರುಮರುಕಟ್ಟೆಯಲ್ಲಿ ಆಗಿದೆ. ಇದು ಭಾರತದ ಸ್ಟಾರ್ ಮಾರ್ಕೆಟ್ ಮೇಲೂ ಪರಿಣಾಮ ಬೀರಿದೆ ಅನ್ನೋ ಅಭಿಪ್ರಾಯವ್ಯಕ್ತವಾಗಿದೆ.

9 ಕಂಪನಿಗಳ ಷೇರು ವಹಿವಾಟಿಗೆ ನಿಷೇಧ

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ