ವಿಶ್ವದ ಅತಿಬಡ ರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನದಲ್ಲಿಯೂ ಶ್ರೀಮಂತ ಉದ್ಯಮಿಗಳಿದ್ದು, ವ್ಯಾಪಾರ ಮತ್ತು ರಾಜಕೀಯದ ಮೂಲಕ ಅಪಾರ ಸಂಪತ್ತನ್ನು ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಟಾಪ್ 10 ಶ್ರೀಮಂತರ ಬಗ್ಗೆ ಮಾಹಿತಿ ಇದೆ.
ನವದೆಹಲಿ: ವಿಶ್ವದ ಅತಿಬಡ ರಾಷ್ಟ್ರಗಳಲ್ಲಿ ಪಾಕಿಸ್ತಾನ ಸಹ ಒಂದಾಗಿದೆ. ಹಣದುಬ್ಬರದಲ್ಲಿ ಸಿಲುಕಿರುವ ಪಾಕಿಸ್ತಾನದಲ್ಲಿಯೂ ಶ್ರೀಮಂತ ಉದ್ದಿಮೆದಾರರಿದ್ದಾರೆ. ವ್ಯಾಪಾರ ಮತ್ತು ರಾಜಕೀಯ ಜೀವನದ ಮೂಲಕ ಅಪಾರ ಸಂಪತ್ತನ್ನು ಸಂಪಾದಿಸಿದ್ದಾರೆ. ಪಾಕಿಸ್ತಾನದ ಟಾಪ್ 10 ಶ್ರೀಮಂತರ ಯಾರು ಎಂಬುದರ ಮಾಹಿತಿ ಇಲ್ಲಿದೆ.
ಟಾಪ್ 10: ದಿವಾನ್ ಯೂಸುಫ್ ಫಾರೂಕಿ
ಪಾಕಿಸ್ತಾನದ ಟಾಪ್ 10 ಉದ್ಯಮಿಗಳಲ್ಲಿ ದಿವಾನ್ ಯೂಸುಫ್ ಫಾರೂಕಿ ಹತ್ತನೇ ಸ್ಥಾನದಲ್ಲಿದ್ದಾರೆ. ಉದ್ಯಮಿಯೂ ಆಗಿರುವ ದಿವಾನ್ ಯೂಸುಫ್ ಫಾರೂಕಿ ಮಾಜಿ ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 1999 ರಿಂದ 2004 ರವರೆಗೆ ಸ್ಥಳೀಯ ಸರ್ಕಾರ, ಕೈಗಾರಿಕೆಗಳು, ಕಾರ್ಮಿಕ, ಸಾರಿಗೆ, ಗಣಿ ಮತ್ತು ಖನಿಜಗಳ ಸಿಂಧ್ ಪ್ರಾಂತೀಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಟಾಪ್ 9: ತಾರಿಕ್ ಸಯೀದ್ ಸೈಗೋಲ್
ತಾರಿಕ್ ಸಯೀದ್ ಸೈಗೋಲ್ ಕೊಹಿನೂರ್ ಮ್ಯಾಪಲ್ ಲೀಫ್ ಗ್ರೂಪ್‌ನ ಅಧ್ಯಕ್ಷರಾಗಿದ್ದು, ಪಾಕಿಸ್ತಾನದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಶ್ರೀಮಂತ ಸೈಗೋಲ್ ಕುಟುಂಬಕ್ಕೆ ಸೇರಿರುವ ತಾರಿಕ್ ಸಯೀದ್ ಹಲವು ಕೈಗಾರಿಕೆಗಳ ಮಾಲೀಕರಾಗಿದ್ದಾರೆ. ಪಾಕಿಸ್ತಾನ ರಚನೆಯ ಬಳಿಕ ದೇಶದ ಶ್ರೀಮಂತ ಕುಟುಂಬದಲ್ಲಿ ಸೈಗೋಲ್ ಒಂದಾಗಿದೆ.
ಟಾಪ್ 8: ಮಲಿಕ್ ರಿಯಾಜ್ ಹುಸೇನ್
ಪಾಕಿಸ್ತಾನದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮಲಿಕ್ ರಿಯಾಜ್ ಹುಸೇನ್, ಏಷ್ಯಾದ ಅತಿದೊಡ್ಡ ಮತ್ತು ಅತ್ಯುತ್ತಮ ರಿಯಲ್ ಎಸ್ಟೇಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ಮಲಿಕ್ ರಿಯಾಜ್ ಹುಸೇನ್ ಭಾರತ ಸೇರಿದಂತೆ ವಿದೇಶಗಳಲ್ಲಿಯೂ ರಿಯಲ್ ಎಸ್ಟೇಟ್ ಉದ್ದಿಮೆಯಾಗಿ ಗುರುತಿಸಿಕೊಂಡಿದ್ದಾರೆ.
ಟಾಪ್ 7: ನಾಸಿರ್ ಶಾನ್
ಶಾನ್ ಗ್ರೂಪ್‌ನ ಸಿಇಒ ಆಗಿರುವ ನಾಸಿರ್ ಶಾನ್, ಬ್ಯಾಂಕ್ ಮತ್ತು ಟೆಕ್ಸ್‌ಟೈಲ್ಸ್ ಉದ್ದಿಮೆಯಲ್ಲಿ ಗುರುತಿಸಿಕೊಂಡಿದ್ದಾರೆ. ಶಾನ್ ಬ್ಯಾಂಕ್ ಮತ್ತು ಶಾನ್ ಟೆಕ್ಸ್‌ಟೈಲ್ಸ್ ಉತ್ಪನ್ನಗಳು ಪಾಕಿಸ್ತಾನದಲ್ಲಿ ಉತ್ತಮ ಮಾರುಕಟ್ಟೆ ಹೊಂದಿವೆ. ನಾಸಿರ್ ಶಾನ್ ಪಾಕಿಸ್ತಾನದಲ್ಲಿ ರೋಲ್ಸ್ ರಾಯ್ಸ್ ಖರೀದಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.
ಟಾಪ್ 6: ಸದ್ರುದ್ದೀನ್ ಹಶ್ವಾನಿ
ಹಶು ಗ್ರೂಪ್‌ನ ಅಧ್ಯಕ್ಷರಾಗಿರುವ ಸದ್ರುದ್ದೀನ್ ಹಶ್ವಾನಿ, ಮ್ಯಾರಿಯಟ್ ಹೋಟೆಲ್ ಫ್ರಾಂಚೈಸ್ ಮಾಲೀಕರಾಗಿದ್ದಾರೆ ಹಶು ಗ್ರೂಪ್ ಪಾಕಿಸ್ತಾನದಲ್ಲಿ ಹೋಟೆಲ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು, ಇವರ ಪ್ರಾಂಚೈಸಿಯಲ್ಲಿ ಮ್ಯಾರಿಯಟ್ ಮತ್ತು ಪರ್ಲ್ ಕಾಂಟಿನೆಂಟಲ್ ಸೇರಿವೆ. ಸದ್ರುದ್ದೀನ್ ಹಶ್ವಾನಿ ದೇಶದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಟಾಪ್ 5: ನವಾಜ್ ಷರೀಫ್ (ಸಂಪತ್ತು - $1.4 ಬಿಲಿಯನ್)
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ನಾಯಕ ನವಾಜ್ ಷರೀಫ್ ಸಹ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಯಶಸ್ವಿ ರಾಜಕಾರಣಿಯೂ ಆಗಿರುವ ನವಾಜ್ ಷರೀಫ್, ದೇಶದ ಅತಿದೊಡ್ಡ ಕೈಗಾರಿಕೋದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಯುನಿಟ್ ಗ್ರೂಪ್, ಷರೀಫ್ ಗ್ರೂಪ್ ಮತ್ತು ಇತೆಫಾಕ್ ಗ್ರೂಪ್ ನವಾಜ್ ಷರೀಫ್ ಮಾಲೀಕತ್ವದಲ್ಲಿವೆ.
ಟಾಪ್ 4: ಸರ್ ಅನ್ವರ್ ಪರ್ವೇಜ್ (ಸಂಪತ್ತು - $1.5 ಬಿಲಿಯನ್)
ಪಾಕಿಸ್ತಾನದ ಎರಡನೇ ಅತಿದೊಡ್ಡ ಸಿಮೆಂಟ್ ಉತ್ಪಾದಕರಾದ ಬೆಸ್ಟ್‌ವೇ ಗ್ರೂಪ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಸರ್ ಅನ್ವರ್ ಪರ್ವೇಜ್ ಅವರು ಶ್ರೀಮಂತರ ಪಟ್ಟಿಯಲ್ಲ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಂಡಿದ್ದಾರೆ. ಸರ್ ಅನ್ವರ್ ಯುನೈಟೆಡ್ ಬ್ಯಾಂಕ್ ಲಿಮಿಟೆಡ್ ಪಾಕಿಸ್ತಾನದ ಉಪಾಧ್ಯಕ್ಷ ಮತ್ತು ಪಾಕಿಸ್ತಾನದ ಅತಿದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ.
ಪಾಕ್‌ನಿಂದ ಭಾರತದ ವಿರುದ್ಧ ಗಂಭೀರ ಆರೋಪ; ಇತ್ತ ಅರುಣಾಚಲದ ಪರ್ವತಕ್ಕೆ ಹೆಸರಿಟ್ಟಿದ್ದಕ್ಕೆ ಚೀನಾದಿಂದ ಕ್ಯಾತೆ
ಟಾಪ್ 3: ಆಸಿಫ್ ಅಲಿ ಜರ್ದಾರಿ (ಸಂಪತ್ತು - $1.8 ಬಿಲಿಯನ್)
ಆಸಿಫ್ ಅಲಿ ಜರ್ದಾರಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಹ-ಅಧ್ಯಕ್ಷರಾಗಿದ್ದಾರೆ. ಪಾಕ್ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆಸಿಫ್ ಅಲಿ ಜರ್ದಾರಿ 1987ರಲ್ಲಿ ಬೆನಜೀರ್ ಭುಟ್ಟೊ ಅವರನ್ನು ಮದುವೆಯಾದ ಬಳಿಕ ಮುನ್ನಲೆಗೆ ಬಂದರು. ಪಾಕಿಸ್ತಾನದ ಪ್ರಮಖ ನಾಯಕರಲ್ಲಿ ಆಸಿಫ್ ಅಲಿ ಜರ್ದಾರಿ ಸಹ ಒಬ್ಬರಾಗಿದ್ದಾರೆ.
ಟಾಪ್ 2: ಮಿಯಾನ್ ಮೊಹಮ್ಮದ್ ಮನ್ಶಾ (ಸಂಪತ್ತು - $2.5 ಬಿಲಿಯನ್)
ಮಿಯಾನ್ ಮೊಹಮ್ಮದ್ ಮನ್ಶಾ ಪಾಕಿಸ್ತಾನದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದು, MCB ಲಿಮಿಟೆಡ್, ಆದಂಜೀ ಗ್ರೂಪ್ ಮತ್ತು ನಿಶಾತ್ ಗ್ರೂಪ್‌ನ ಅಧ್ಯಕ್ಷರು ಮತ್ತು CEO ಆಗಿದ್ದಾರೆ. ಮಿಯಾನ್ ಮೊಹಮ್ಮದ್ ಮನ್ಶಾ ಕೈಗಾರಿಕೋದ್ಯಮಿಯಾಗಿದ್ದು, ಇವರ ನಿವ್ವಳ ಆಸ್ತಿ $ 2.5 ಬಿಲಿಯನ್ ಆಗಿದೆ.
ಟಾಪ್ 1: ಶಾಹಿದ್ ಖಾನ್ (ಸಂಪತ್ತು - $13.3 ಬಿಲಿಯನ್)
ಪಾಕಿಸ್ತಾನದ ಶ್ರೀಮಂತರ ಪಟ್ಟಿಯಲ್ಲಿ ಶಾಹಿದ್ ಖಾನ್ ಮೊದಲಿಗರಾಗಿದ್ದಾರೆ. ಪಾಕಿಸ್ತಾನ ಮೂಲದ ಶಾಹಿದ್ ಖಾನ್ಅಮೆರಿಕದ ಬಿಲಿಯನೇರ್ ಆಗಿದ್ದಾರೆ. ಬಿಡಿ ಭಾಗಗಳ ಉತ್ಪಾದನಾ ಕಂಪನಿ ಫ್ಲೆಕ್ಸ್‌ನುಗೇಟ್ ನ ಮಾಲೀಕರಾಗಿದ್ದಾರೆ. ನಿವ್ವಳ ಆಸ್ತಿ $13.3 ಬಿಲಿಯನ್ ಆಗಿದೆ. ಸದ್ಯ ಶಾಹಿದ್ ಖಾನ್ ಅಮೆರಿಕದಲ್ಲಿ ನೆಲೆಸಿದ್ದಾರೆ.
ಸಾಲದ ಸುಳಿಗೆ ಸಿಲುಕಿ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನೇ ಕಡಿತಗೊಳಿಸಿದ ಪಾಕಿಸ್ತಾನ