ನಿಮಗೂ ಆರೋಗ್ಯ ವಿಮೆ ಇದೆಯಾ ಅಥವಾ ಪಾಲಿಸಿ ತಗೋಳೋಕೆ ಹೋಗ್ತಿದ್ದೀರಾ? ಹಾಗಿದ್ರೆ ಇದರ ಬಗ್ಗೆ ಕೆಲವು ವಿಷಯ ತಿಳಿದಿರಲೇಬೇಕು. ಯಾಕಂದ್ರೆ ಮುಂದೆ ಯಾವಾಗ ತುರ್ತು ಪರಿಸ್ಥಿತಿ ಬರುತ್ತೋ ಗೊತ್ತಿಲ್ಲ. ಆರೋಗ್ಯ ವಿಮೆ (Health Insurance) ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸಾ ವೆಚ್ಚವನ್ನು ಭರಿಸುತ್ತದೆ. ಆದರೆ, ಕೆಲವೊಮ್ಮೆ ಕೆಲವು ತಪ್ಪುಗಳಿಂದಾಗಿ ಕ್ಲೇಮ್ ರಿಜೆಕ್ಟ್ ಆಗುತ್ತದೆ. ಹೀಗಾಗಿ ಪಾಲಿಸಿ ಬಗ್ಗೆ ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಮಾಹಿತಿ ಇರಲೇಬೇಕು.
5 ವರ್ಷಗಳಲ್ಲಿ ₹24 ಲಕ್ಷ ಲಾಭ: ಹಿರಿಯ ನಾಗರಿಕರ ಉಳಿತಾಯ ಯೋಜನೆ ಬಗ್ಗೆ ತಿಳಿಯಲೇಬೇಕು
ಆರೋಗ್ಯ ವಿಮಾ ಕ್ಲೇಮ್ ಯಾಕೆ ರಿಜೆಕ್ಟ್ ಆಗುತ್ತದೆ?
- ಪಾಲಿಸಿಯಲ್ಲಿ ವಯಸ್ಸು, ಆದಾಯ, ವೃತ್ತಿಯ ಬಗ್ಗೆ ತಪ್ಪು ಮಾಹಿತಿ ನೀಡಿದರೆ.
- ನಿಗದಿತ ಸಮಯದೊಳಗೆ ವಿಮೆಗೆ ಕ್ಲೇಮ್ ಮಾಡದಿದ್ದರೆ.
- ಯಾವುದೇ ಹಳೆಯ ಕಾಯಿಲೆ ಇದ್ದರೆ ಅಥವಾ ರೋಗಿಯ ಹಿಂದಿನ ಕಾಯಿಲೆಗಳ ಬಗ್ಗೆ ಮಾಹಿತಿ ಮುಚ್ಚಿಟ್ಟರೆ
- ಮಿತಿಗಿಂತ ಹೆಚ್ಚು ಪಾಲಿಸಿ ಕ್ಲೇಮ್ ಮಾಡಿದರೆ
- ರೋಗಿ, ವೈದ್ಯರ ಬಗ್ಗೆ ತಪ್ಪು ಮಾಹಿತಿ ನೀಡಿದರೆ
- ತಪ್ಪು ವೈದ್ಯಕೀಯ ವರದಿ, ಆಸ್ಪತ್ರೆ ಬಿಲ್ ನೀಡಿದರೆ
- ವಿಮೆಯ ಮೊತ್ತವನ್ನು ಈಗಾಗಲೇ ಬಳೆಸಿದ್ದರೆ
- ವೆದ್ಯಕೀಯ ಪಾಲಿಸಿಯನ್ನು ನವೀಕರಿಸದಿದ್ದರೆ ಅಥವಾ ಅದು ಮುಗಿದಿದ್ದರೆ
- ಪಾಲಿಸಿಯಲ್ಲಿ ಒಳಗೊಳ್ಳದೇ ಇರುವ ವಿಷಯಗಳಿಗೆ ಕ್ಲೇಮ್ ಮಾಡಿದರೆ
- ಪಾಲಿಸಿಯ ಎಲ್ಲಾ ನಿಯಮಗಳನ್ನು ಪಾಲಿಸದಿದ್ದರೆ
ರಶ್ಮಿಕಾ ಸೇರಿದಂತೆ ಬಾಲಿವುಡ್ ದಂಡೇ ಕೇರಳದಲ್ಲಿರುವ ಕಲ್ಯಾಣರಾಮನ್ ಮನೆಯಲ್ಲಿ ಸೇರಲು ಕಾರಣವೇನು?
ಆರೋಗ್ಯ ವಿಮಾ ಕ್ಲೇಮ್ ರಿಜೆಕ್ಟ್ ಆಗದಂತೆ ಏನು ಮಾಡಬೇಕು?
- ಯಾವುದೇ ಕಾಯಿಲೆ ಇದ್ದರೆ ತಕ್ಷಣ ವಿಮೆ ಮಾಡಿಸಿ.
- 1 ರಿಂದ 4 ವರ್ಷಗಳ ಕಾಯುವಿಕೆ ಅವಧಿ ಪೂರ್ಣಗೊಂಡ ನಂತರವೇ ಕಾಯಿಲೆಗೆ ಕ್ಲೇಮ್ ಮಾಡಬಹುದು.
- 8 ವರ್ಷಗಳ ನಂತರ ವಿಮಾ ಕಂಪನಿಯು ಕ್ಲೇಮ್ ಅನ್ನು ನೀಡುವುದಿಲ್ಲ.
- 15-30 ದಿನಗಳ ಆರಂಭಿಕ ಪಾಲಿಸಿ ಅವಧಿಯಲ್ಲಿ ಪಾಲಿಸಿಯನ್ನು ಹಿಂದಿರುಗಿಸುವ ಮೂಲಕ ಮರುಪಾವತಿ ಪಡೆಯಬಹುದು.
ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಏನು ತಪ್ಪು ಮಾಡಬಾರದು?
- ವೈದ್ಯಕೀಯ ವಿಮಾ ಏಜೆಂಟ್‌ಗೆ ಮಧುಮೇಹ, ಆಸ್ತಮಾ, ಥೈರಾಯ್ಡ್‌ನಂತಹ ಹಳೆಯ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿ.
- ಧೂಮಪಾನ-ಮದ್ಯಪಾನದಂತಹ ಅಭ್ಯಾಸಗಳ ಬಗ್ಗೆಯೂ ಮಾಹಿತಿ ನೀಡಿ.
- ವಿಮಾ ಪಾಲಿಸಿಯನ್ನು ಚೆನ್ನಾಗಿ ಓದಿ.
- 30 ದಿನಗಳ ಗ್ರೇಸ್ ಅವಧಿಯೊಳಗೆ ನವೀಕರಿಸಿ.
- ಕ್ಲೇಮ್‌ಗಾಗಿ ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ದಾಖಲಾಗಿರಬೇಕು
- ನಾಮಿನಿಯ ಹೆಸರನ್ನು ಆರೋಗ್ಯ ಪಾಲಿಸಿಯಲ್ಲಿ ಸೇರಿಸಿ
ಆರೋಗ್ಯ ಪಾಲಿಸಿ ಪಡೆಯುವಾಗ ಈ ಪ್ರಶ್ನೆಗಳನ್ನು ಕೇಳಿ
- ವಿಮೆಯಲ್ಲಿ ಏನೆಲ್ಲಾ ಒಳಗೊಂಡಿಲ್ಲ>
- ಯಾವ ಕಾಯಿಲೆಗಳು ನಿರ್ದಿಷ್ಟ ಸಮಯದ ನಂತರವೂ ಒಳಗೊಳ್ಳುತ್ತವೆ ಮತ್ತು ಯಾವುದು ಇಲ್ಲ>
- ವಿಮಾ ಪಾಲಿಸಿಯಲ್ಲಿ ಟಾಪ್-ಅಪ್ ಇದೆಯೇ ಅಥವಾ ಇಲ್ಲವೇ?
- ಪಾಲಿಸಿಯೊಂದಿಗೆ ಕಂಪನಿಯು ಯಾವುದೇ ಹೆಚ್ಚುವರಿ ಕವರ್ ನೀಡುತ್ತದೆಯೇ?
- ಆಸ್ಪತ್ರೆ ನೋಂದಾಯಿಸದಿದ್ದರೆ ಕ್ಲೇಮ್ ಸಿಗುತ್ತದೆಯೇ?
ಆರೋಗ್ಯ ವಿಮೆಯಲ್ಲಿ ಯಾವ ಕಾಯಿಲೆಗಳು ಒಳಗೊಳ್ಳುವುದಿಲ್ಲ?
- ಏಡ್ಸ್
- ಹಲ್ಲುಗಳ ಚಿಕಿತ್ಸೆ
- ಮಾನಸಿಕ ಕಾಯಿಲೆ
- ಲೈಂಗಿಕ ಅಂಗಗಳ ಶಸ್ತ್ರಚಿಕಿತ್ಸೆ
- ಕಾಸ್ಮೆಟಿಕ್ ಸರ್ಜರಿ
- ಸ್ವಯಂ ಹಾನಿ ಅಥವಾ ಆತ್ಮಹತ್ಯೆಗೆ ಯತ್ನ
ಆರೋಗ್ಯ ವಿಮಾ ಕ್ಲೇಮ್ ತಿರಸ್ಕರಿಸಿದರೆ ಏನು ಮಾಡಬೇಕು?
- ಆರೋಗ್ಯ ವಿಮೆ ನೀಡುವ ಕಂಪನಿಗೆ ಮತ್ತೊಮ್ಮೆ ಪರಿಗಣಿಸಲು ಮನವಿ ಮಾಡಬಹುದು.
- ಕ್ಲೇಮ್ ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಿ.
- ಸರಿಯಾದ ಮತ್ತು ಸಾಕಷ್ಟು ದಾಖಲೆಗಳು, ಮಾಹಿತಿ ಮತ್ತು ಪುರಾವೆಗಳನ್ನು ಸಂಗ್ರಹಿಸಿ.
- ಹೆಸರು, ಪಾಲಿಸಿ ಸಂಖ್ಯೆಯನ್ನು ಸರಿಯಾಗಿ ಪರಿಶೀಲಿಸಿ, ತಪ್ಪಿದ್ದರೆ ಬದಲಾಯಿಸಿ.
- ಕ್ಲೇಮ್ ಪರಿಶೀಲನೆಗಾಗಿ ಹೆಚ್ಚಿನ ಮನವಿಗಳನ್ನು ಸಲ್ಲಿಸಬಹುದು.
- ವಿಮಾ ಕಂಪನಿಯು 15 ದಿನಗಳಲ್ಲಿ ದೂರನ್ನು ಬಗೆಹರಿಸದಿದ್ದರೆ IRDAI ನಲ್ಲಿ ದೂರು ದಾಖಲಿಸಿ.
- 30 ದಿನಗಳಲ್ಲಿ ವಿಮಾ ಕಂಪನಿಯಿಂದ ಉತ್ತರ ಬಾರದಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ.
- ಲೋಕಾಯುಕ್ತರಿಂದ ಸೂಕ್ತ ಪರಿಹಾರ ಸಿಗದಿದ್ದರೆ ಗ್ರಾಹಕ ವೇದಿಕೆಗೆ ಹೋಗಿ.